Girl in a jacket

Author kendhooli_editor

ಗಿರಿಶ್ ಕರ್ನಾಡ್ ಎಂಬ ಅಗಾಧ ಪ್ರತಿಭೆಯ ನೆನದು..

ಅವರು ಅತ್ಯಂತ ಕ್ರಿಯಾಶೀಲಾ ಮತ್ತು ಪ್ರಗತಿಪರ ಚಿಂತಕರು ಸೈದ್ದಾಂತಿಕನಿಲುವುಗಳ ಬದ್ಧತೆಯಲ್ಲೇ ಬದುಕಿದ ಮಹಾನ್ ಪ್ರತಿಭೆ ರಂಗಭೂಮಿ ತಜ್ಞರು,ನಟರು ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಟ್ಟದ್ದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತಮ್ಮದೇ ಆದ ಹೆಸರನ್ನು ಪಡೆದುಕೊಂಡ ಗಿರೀಶ್ ಕಾರ್ನಾಡ್ ಅವರ ಜನ್ಮ ದಿನ ಇಂದು ಆ ನಿಮಿತ್ತವಾಗಿ ಅವರ ಕುರಿತ ಒಂದು ಲೇಖನ. ಪುರಾಣ,ಇತಿಹಾಸ,ಜಾನಪದ ಸೊಗಡುಗಳ ಅಂಶಗಳನ್ನಿಟ್ಟುಕೊಂಡು ಬರೆದ ಅವರ ನಾಟಕಗಳು ಪಡೆದ ಯಶಸ್ಸು ಅವರನ್ನು ಉತ್ತಂಗಕ್ಕೇರಿಸಿತು ಸಾಹಿತ್ಯದ ವಲಯದಲ್ಲಿ ಹೆಚ್ಚು ಗುರುತಿಸಿಕೊಂಡರು ಸದಾ ಒಂದಲ್ಲೊಂದು ಚಿಂತನೆಯಲ್ಲಿಯೇ ತೊಡಗಿರುತ್ತಿದ್ದ…

ದೇಶದ ಸಂಕಷ್ಟ ಸ್ಥಿತಿಯಲ್ಲೂ ಕೈ-ಕಮಲದ ರಾಜಕೀಯ ಕೆರಚಾಟ

ಬೆಂಗಳೂರು,ಮೇ೧೯: ಈ ದೇಶದಲ್ಲಿ ಬಂದೊದಗಿದ ಕೊರೊನಾ ಮಹಾಮಾರಿಗೆ ದಿನನಿತ್ಯ ಸಾವಿರಾರು ಮಂದಿ ಬಲಿಯಾಗುತ್ತಿದ್ದಾರೆ ಬದುಕೆ ದುಸ್ತರವಾದ ಈ ಹೊತ್ತಿನಲ್ಲಿ ರಜಕೀಯ ಪಕ್ಷಗಳ ಕೆರಚಾಟ ಅಗತ್ಯವಿದೆಯೇ. ರಾಜಕೀಯ ಪಕ್ಷಗಳ ನಾಯಕರಿಗೆ ಈ ದೇಶದ ಭವಿಷ್ಯ ಈ ದೇಶದ ಜನರ ಸಂಕಷ್ಟಗಳು ಅರಿವು ಇದ್ದಿದ್ದರೆ ಈ ಸಮಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು ಪರಸ್ಪರ ವಾದ ಪ್ರತಿವಾದಗಳಲ್ಲಿ ತೊಡಗುತ್ತಿರಲಿಲ್ಲ ರಾಜಕಾರಕ್ಕೆ ಇಳಿಯುತ್ತಿರಲಿಲ್ಲ. ದೇಶದ ಜನರ ಚಿತ್ತ ಬೇರೆಡೆಗೆ ಎಳೆಯಲು ರಾಜಕಾರಣಿಗಳು ಈ ಹೊತ್ತಿನಲ್ಲಿ ಇಂತ ವಾಕ್ಸಮರಕ್ಕೇ ಇಳಿದಿದ್ದಾರೆಯೇ ಎನ್ನುವ ಅನುಮಾನಗಳು…

ಕಿರಿಕ್ ಪಾರ್ಟಿ ಹಿಂದಿ ರಮೇಕ್‌ನಲ್ಲಿ ನಟಿಸಲ್ಲ ಎಂದ ರಶ್ಮಿಕಾ

ಕಿರಿಕ್ ಪಾರ್ಟಿ ಸಿನಿಮಾ ಕನ್ನಡದಲ್ಲಿ ಅತ್ಯಂತ ಯಶಸ್ಸು ಕಂಡ ಚಿತ್ರ ಈ ಚಿತ್ರದ ಮೂಲಕ ರಶ್ಮಿಕ ಮಂದಣ್ಣ ಪರಿಚಯವಾಗಿದ್ದು ಈ ಮೂಲಕ ಈಗ ಬಾಲಿವುಡ್‌ವರೆಗೂ ಸಿನಿಪ್ರಯಾಣ ಬೆಳಸಿದ್ದಾರೆ. ಆದರೆ ಈಗ ಅದೇ ಕಿರಿಕ್ ಪಾರ್ಟಿ ಹಿಂದಿ ರಿಮೇಕ್‌ನಲ್ಲಿ ನಟಿಸುವುದಿಲ್ಲ ಎಂದು ಖಡಕ್ಕಾಗಿಯೇ ಹೇಳಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಸಕ್ಸಸ್ ನಂತರ ಟಾಲಿವುಡ್, ಕಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಏನಾದರೂ ಹಿಂದಿಯಲ್ಲಿ ರಿಮೇಕ್ ಆದರೆ ನೀವು ನಟಿಸುತ್ತೀರಾ ಎಂಬ…

ಪ್ರೇಮ ಸಂದೇಶದ ಆಲ್ಬಂ ಹಾಡು ಬಿಡುಗಡೆ ಮಾಡಿದ ಉಪೇಂದ್ರ

ಚಿತ್ರಪ್ರೇಮಿಗಳು ಸೇರಿಕೊಂಡು ಪ್ರೇಮಗೀತೆಗಳ ಆಲ್ಬಂ ಚಿತ್ರೀಕರಿಸಿದ್ದು ಅದನ್ನು ನಟ ಉಪೇಂದ್ರ ಬಿಡುಗಡೆ ಮಾಡಿ ಆ ತಂಡಕ್ಕೆ ಶುಭಕೋರಿದ್ದಾರೆ. ‘ಇವಳು ಸುಜಾತ’ ಧಾರಾವಾಹಿ, ಕೃಷ್ಣ ತುಳಸಿ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ನಟಿ ಮೇಘಶ್ರೀ ಇದೇ ಮೊದಲ ಬಾರಿಗೆ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೇಮ ಕತೆಯುಳ್ಳ ಈ ’ನಾನು ನಾನು ಪ್ರೀತಿಸುತ್ತಿರುವೆ’ ಆಲ್ಬಂ ಹಾಡಿನಲ್ಲಿ ಮೇಘಶ್ರೀ ಜೊತೆಗೆ ಹೊಸ ಪ್ರತಿಭೆ ಅರುಣ್ ಚಂದ್ರಪ್ಪ ನಾಯಕರಾಗಿ ನಟಿಸಿದ್ದಾರೆ. ಹಾಡು ಬಿಡುಗಡೆ ಆದ ೨೪ ಗಂಟೆಗಳಲ್ಲಿ ೧.೫ ಲಕ್ಷಕ್ಕೂ ಅಧಿಕ ವ್ಯೂವ್ಸ್ ಪಡೆದುಕೊಂಡಿರುವುದು…

ತೌತೆ ಚಂಡಮಾರುತಕ್ಕೆ ಮಹಾರಾಷ್ಟ್ರ,ಗುಜರಾತ್‌ನಲ್ಲಿ ೩೩ ಸಾವು

ನವದೆಹಲಿ,ಮೇ,೧೯: ಕಳೆದ ಎರಡು ದಿನಗಳಿಂದ ತೌತೆ ಚಂಡ ಮಾರುತದ ಅಬ್ಬರ ಹೆಚ್ಚಾಗಿದ್ದು ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಭಾರಿ ಅನಾಹುತ ಸೃಷ್ಟಿಸಿದ್ದು ಎರಡು ರಾಜ್ಯಗಳಲ್ಲಿ ಒಟು ೩೩ ಮಂದಿ ಸಾವನ್ನಪ್ಪಿದ್ದಾರೆ ೧೦೦ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ, ಸೋಮವಾರ ಬೆಳಗಿನಿಂದಲೂ ಆರಂಭವಾಗಿದ್ದು ಈ ಚಂಡಮಾರುತದ ತೀವ್ರತೆ ಈ ಎರಡು ರಾಜ್ಯಗಳ ಕಡಲ ತೀರದಲ್ಲಿ ದೈತ್ಯ ಅಲೆಗಳಿಗೆ ಕೆಲವು ಐತಿಹಾಸಿಕ ಸ್ಮಾರಕಗಳು ಹಾನಿಗೊಳಗಾಗಿವೆ. ಮಂಗಳವಾರ, ಮಹಾರಾಷ್ಟ್ರ ಕರಾವಳಿಯಲ್ಲಿ ಚಂಡಮಾರುತದ ಪರಿಣಾಮ ಗಾಳಿಗೆ ಎದ್ದ ಸಮುದ್ರದ ದೈತ್ಯ ಅಲೆಗಳು ಗೇಟ್‌ವೇ ಆಫ್ ಇಂಡಿಯಾ,…

ಥ್ರಿಲರ್ ನಿರ್ದೇಶನದತ್ತ ದಿಯಾ ಅಶೋಕ್

ಲಾಕ್ ಡೌನ್‌ನಿಂದಾಗ ಮಂಗಳೂರಿನಲ್ಲಿ ಇರುವ ದಿಯಾ ಚಿತ್ರ ನಿರ್ದೇಶಕ ಕೆ.ಎಸ್.ಅಶೋಕ್ ಈಗ ಥ್ರಿಲರ್ ಚಿತ್ರ ನಿರ್ದೇಶಿಲಿದ್ದಾರೆ. ಮಂಗಳೂರಿನಲ್ಲಿರುವ ಅವರು ಕಥೆಯೊಂದನ್ನು ಬರೆಯುತ್ತಿದ್ದರೆ ,ಹೊಸದಾಗಿ ಮೂಡಿರುವ ಕಥೆ ಈಗ ಅವರು ಒಂದು ವಾರದಿಂದ ಬರೆಯುತ್ತಿದ್ದಾರೆ ಸ್ಕ್ರಿಪ್ಟ್ ಮುಗಿದ ನಂತರಪಾತ್ರದಾರಿಗಳಿಗಾಗಿ ಹುಡುಕಾಟ ನಡೆಸುತ್ತೇನೆ ಎಂದೂ ಅವರು ಹೇಳಿದ್ದಾರೆ ಅಶೋಕ ಪ್ರಸ್ತುತ ಥ್ರಿಲ್ಲರ್ ಕಥೆಯೊಂದನ್ನು ಬರೆಯುತ್ತಿದ್ದಾರೆ. ಅದು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಸರಿಹೊಂದುತ್ತದೆ. “ಪ್ರತಿಯೊಂದು ಚಿತ್ರವನ್ನೂ ದೊಡ್ಡ ಪರದೆಯಲ್ಲಿ ನೋಡಬೇಕೆಂದು ನಾವು ಭಾವಿಸುತ್ತೇವೆ. ಆದರೆ ಈ ಸಮಯದಲ್ಲಿ, ಒಟಿಟಿ ಮೊರೆ ಹೋಗಬೇಕಾಗಿದೆ. ನನಗೆ…

ನಾಳೆ ಲಾಕ್‌ಡೌನ್ ವಿಸ್ತರಣೆ,ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ

ಬೆಂಗಳೂರು,ಮೇ: ಮುಖ್ಯಮಂತ್ರಿ ಬಿ.ಎಸ್.ಯಿಡಯೂರಪ್ಪ ನಾಳೆ ಕರೆದಿರುವ ಸುದ್ದಿಗೋಷ್ಠಿ ಮಹತ್ವ ಪಡೆದುಕೊಂಡಿದೆ.ಈ ವೇಳೆ ಲಾಕ್ ಡೌನ್ ವಿಸ್ತರಣೆ ಹಾಗೂ ವಿಶೇಷ ಪ್ಯಾಕೇಜ್ ಬಗ್ಗೆ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ನಾಳೆ ೧೧.೩೦ಕ್ಕೆ ಸುದ್ದಿಗೋಷ್ಠಿ ನಡೆಯಲಿದೆ ಇದಕ್ಕೂ ಮುನ್ನ ಕೋವಿಡ್ ಉಸ್ತುವಾರಿ ಸಚಿವರ ಸಭೆ ನಡೆಸಲಿದ್ದು ಈ ಸಭೆಯಲ್ಲಿ ಲಾಕ್‌ಡೌನ್ ವಿಸ್ತರಣೆ ಹಾಗೂ ವಿಶೇಷ ಪ್ಯಾಕೇಜ್ ಕುರಿತಂತೆ ಚರ್ಚಿಸಲಿದ್ದಾರೆ ಎನ್ನಲಾಗುತ್ತಿದೆ. ಈ ವಿಶೇಷ ಪ್ಯಾಕೇಜ್‌ನಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಹಣದ ನೆರವು.ಮಡಿವಾಳ, ಸವಿತಾ ಸಮುದಾಯಕ್ಕೆ ನೆರವು ,ಟ್ಟಡ ಕಾರ್ಮಿಕರಿಗೆ ಮನಿ…

ಕೇರಳ ಸಚಿವ ಸಂಪುಟದಲ್ಲಿ ಹೊಸಬರಿಗೆ ಅವಕಾಶ, ಶೈಲಜಾಗೆ ಕೊಕ್

ತಿರುವನಂತಪುರಂ,ಮೇ,೧೮: ಕೋವಿಡ್ ಹರಿಡಿದ್ದ ಸಂದರ್ಭದಲ್ಲಿ ಕೇರಳದಲ್ಲಿ ಅದನ್ನು ಸಮರ್ಥವಾಗಿ ನಿಭಾಯಿಸಿ ಎಲ್ಲರ ಪ್ರಶಂಸೆಗೆ ಒಳಗಾಗಿದ್ದ ಆಗಿನ ಆರೋಗ್ಯ ಸಚಿವರಾಗಿದ್ದ ಕೆ.ಕೆ.ಶೈಲಜಾ ಅವರನ್ನು ಪಿಣಿರಾಯ್ ಅವರ ಸಚಿವ ಸಂಪುಟದಿಂದ ಹೊರಗುಳಿದಿದ್ದಾರೆ. ಬಹುತೇಕ ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡುವ ಮೂಲಕ ಸಿಪಿಐ(ಎಂ)ನ ರಾಜ್ಯ ಸಮಿತಿಯ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಎಂ.ಬಿ.ರಾಜೇಶ್ ಕೇರಳ ಸರಕಾರದ ನೂತನ ಸ್ಪೀಕರ್ ಆಗಿದ್ದು, ಕೆ.ಕೆ.ಶೈಲಜಾ ಅವರು ಪಕ್ಷದ ಪ್ರಮುಖ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಸಿಪಿಐಎಂ ಪ್ರಕಟಣೆಯಲ್ಲಿ ತಿಳಿಸಿದೆ. ಮುಖ್ಯಮಂತ್ರಿ ಪಿಣರಾಯಿ…

ದೊಡ್ಡ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಹೆಚ್ಚಿಸಲು ಮೋದಿ ಸಲಹೆ

ನವದೆಹಲಿ,೧೮:sಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ಹೊಸ ವಿಧಾನ ಅನುಸರಿಸುವಮೂಲಕ ದೊಡ್ಡಪ್ರಮಾಣದಲ್ಲಿ ಲಸಿಕೆ ಪೂರೈಕೆಯನ್ನು ಹೆಚ್ಚಿಸಲು ನಿರಂತರ ಪ್ರಯತ್ನ ಪಡಬೇಕುಎಂದು ಪ್ರಧಾನ ಮೋದಿ ಅವರು ಎಲ್ಲ ರಾಜ್ಯಗಳ ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ೯ ರಾಜ್ಯಗಳ ೪೬ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಪ್ರಧಾನಿ ಮೋದಿ, ಕೋವಿಡ್-೧೯ ವಿರುದ್ಧದ ಹೋರಾಟದಲ್ಲಿ ರಾಜ್ಯ ಮತ್ತು ಜಿಲ್ಲೆ ಮಟ್ಟದ ಅಧಿಕಾರಿಗಳನ್ನು ’ಫೀಲ್ಡ್ ಕಮಾಂಡರ್ಸ್’ ಎಂದು ಮಂಗಳವಾರ ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಸ್ಥಳೀಯ ಕಂಟೈನ್ ಮೆಂಟ್ ವಲಯಗಳು, ತ್ವರಿತಗತಿಯಲ್ಲಿ ಪರೀಕ್ಷೆ ಮತ್ತು ಜನರೊಂದಿಗೆ…

ಎರಡನೇ ಹಂತದ ಲಾಕ್‌ಡೌನ್ ನಂತರ ಪ್ಯಾಕೇಜ್ ಘೋಷಣೆ-ಅಶೋಕ್

ಕಾರವಾರ,ಮೇ,೧೮: ಲಾಕ್‌ಡೌನ್ ಮುಂದುವರೆಸಬೇಕೆ ಬೇಡವೇ ಕುರಿತು ಮುಖ್ಯಮಂತ್ರಿಗಳು ನಿರ್ಧರಿsಲಿದ್ದು ಎರಡನೇ ಹಂತದ ಲಾಕ್‌ಡೌನ್ ಘೋಷಣೆ ನಂತರ ಪ್ಯಾಕೇಜ್‌ಘೋಷಣೆಯೂ ಮಾಡುತ್ತಾರೆ ಎನ್ನುವ ಸುಳುವಿನ್ನು ಕಂದಾಯ ಸಚಿವ ಆರ್.ಅಶೋಕ್ ನೀಡಿದ್ದಾರೆ. ಭಟ್ಕಳದಲ್ಲಿ ಚಂಡಮಾರುದಿಂದ ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪರಿಸ್ಥಿತಿಯನ್ನು ಅವಲೋಕಿಸಿ ಲಾಕ್‌ಡೌನ್ ವಿಸ್ತರಣೆ ಮಾಡಬೇಕೆ ಬೇಡವೇ ಎನ್ನುವ ಕುರಿತು ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ ಈ ವೇಳೆ ಎರಡನೇ ಹಂತದ ಘೋಷಣೆ ಮಾಡಿದಾಗ ಪ್ಯಾಕೇಜ್ ಕೂಡ ಘೋಷಣೆ ಮಾಡುತ್ತಾರೆ ಎಂದು ಅವರು ಹೇಳಿದರು ಹಳ್ಳಿಗಳಲ್ಲಿ…

ಕೊರಾನಾ ರೋಗಕ್ಕೆ ಕಚ್ಚಾ ಮಾವಿನ ಹಣ್ಣು ಮದ್ದು

ಕಚ್ಚಾ ಮಾವು ದೇಹದಲ್ಲಿ ನೀರಿನ ಸರಬರಾಜು ಮಾಡಲು ಸಹಾಯ ಮಾಡುತ್ತದೆ, ಇದು ನಮ್ಮ ಜೀರ್ಣಕ್ರಿಯೆಗೆ ತುಂಬಾ ಸಹಾಯಕವಾಗಿದೆ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದೆಯಾ? ಹಾಗಿದ್ರೆ ನೀವು ಕಚ್ಚಾ ಮಾವನ್ನು ಸೇವಿಸಬೇಕು, ಏಕೆಂದರೆ ಅದರಲ್ಲಿ ಕಂಡುಬರುವ ಅಂಶಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ವಿಶೇಷವೆಂದರೆ ಬೇಸಿಗೆಯಲ್ಲಿ ಕಚ್ಚಾ ಮಾವಿನಹಣ್ಣನ್ನು ತಿನ್ನುವುದು ನಿಮ್ಮನ್ನು ಆರೋಗ್ಯವಾಗಿರಿಸುವುದಲ್ಲದೆ ಅನೇಕ ಗಂಭೀರ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಕಚ್ಚಾ ಮಾವು ದೇಹದಲ್ಲಿ ನೀರಿನ ಸರಬರಾಜು ಮಾಡಲು ಸಹಾಯ ಮಾಡುತ್ತದೆ,…

ಎರಡನೇ ಅಲೆಗೆ ೨೬೯ ವೈದ್ಯರು ಬಲಿ!

ನವದೆಹಲಿ, ಮೇ ೧೮:ಕೊರೊನಾ ಮಹಾಮಾರಿ ಬಂದಾಗಿನಿಂದಲೂ ವೈದ್ಯರು ನಿರಂತರವಾಗಿ ಚಿಕಿತ್ಸೆ ನೀಡುತ್ತಿದ್ದಾರೆ,ತಮ್ಮ ಬದುಕನ್ನು ಲೆಕ್ಕಿಸದೆ ಸೇವೆಯಲ್ಲಿಯೇ ನಿರತರಾಗಿದ್ದಾರೆ ಆದರೆ .ಇದರಿಂದ ಸಾವಿರಾರು ವೈದ್ಯರು ಬಲಿಯಾಗಿದ್ದಾರೆ ಎರಡನೇ ಅಲೆಯಲ್ಲಿ೨೬೯ ವೈದ್ಯರು ಸಾವನ್ನಪ್ಪಿದ್ದಾರೆ. ಭಾರತೀಯ ವೈದ್ಯಕೀಯ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಮೊದಲ ಅಲೆ ಗೆ ೭೪೮ ಮಂದಿ ವೈದ್ಯರು ಸಾವನ್ನಪ್ಪಿದ್ದೆ ಎರಡನೇ ಅಲೆಗೆ ೨೬೯ ವೈದ್ಯರು ಸಾವನ್ನಪ್ಪಿದ್ದಾರೆ. ಎರಡನೇ ಅಲೆ ಎರಡು ತಿಂಗಳಲ್ಲೇ ೨೬೯ ಮಂದಿ ತುತ್ತಾಗಿದ್ದಾರೆ. ಅದರಲ್ಲಿ ಬಿಹಾರ್, ಉತ್ತರ ಪ್ರದೇಶ, ದೆಹಲಿ ರಾಜ್ಯಗಳಲ್ಲಿ ವೈದ್ಯರು…

ಕೊರೊನಾ ಚಿಕಿತ್ಸೆಗೆ ಬಿಬಿಎಂಪಿ ಹೊಸ ಮಾರ್ಗಸೂಚಿ ಬಿಡುಗಡೆ

ಬೆಂಗಳೂರಿನಲ್ಲಿ ದಿನೇ ದಿನೇ ಕೊರೊನಾ ಸೋಂಕಿತ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಬಿಬಿಎಂಪಿ ಹೊಸ ಹೊಸ ಮಾರ್ಗಸೂಚಿಗಳನ್ನು ಅನುಸರಿಸುತ್ತಿದೆ ಒಂದು ರೀತಿ ಜ್ಞಾನೋದಯವಾದಂತೆ ಈಗ ಚಿಕಿತ್ಸೆಗೆ ಮೂರು ಹಂತದ ವ್ಯವಸ್ಥೆಯನ್ನು ಮಾಡಲು ಈಗ ನಿರ್ಧರಿಸಿದೆ. ಈ ಕುರಿತಂತೆ ಈ ಮೂರು ಹಂತದ ವ್ಯವಸ್ತೆ ಹೇಗಿರಬೇಕು ಸೋಂಕಿತರಿಗೆ ಚಿಕಿತ್ಸೆ ಬಗ್ಗೆ ತಗೆದುಕೊಳ್ಳಬಹುದಾದ ಜಾಗೃತಿ ಕುರಿತಂತೆ ಮಾರ್ಗಸೂಚಿಯನ್ನು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಬಿಡುಗಡೆ ಮಾಡಿದ್ದಾರೆ ಒಟ್ಟು ಮೂರು ಹಂತಗಳಲ್ಲಿ ಚಿಕಿತ್ಸಾ ನಿರ್ಧಾರ ಕೇಂದ್ರಗಳನ್ನು (ಪಿಟಿಸಿ) ಆರಂಭಿಸುವಂತೆ ಸೂಚಿಸಿದ್ದಾರೆ. ಸೋಂಕಿತರ ದೇಹಸ್ಥಿತಿ ಅವಲೋಕಿಸಿ…

ಕೊರೊನಾಗೆ ಬಲಿಯಾದ ಅಂಗನವಾಡಿಕಾರ್ಯಕರ್ತೆಯರಿಗೆ ೩೦ ಲಕ್ಷ ಪರಿಹಾರ-ಜೊಲ್ಲೆ

ಬೆಂಗಳೂರು,ಮೇ,೧೮:ಕೋವಿಡ್-೧೯ ಕ್ಕೆ ಬಲಿಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ ೩೦ ಲಕ್ಷ ರೂ ಪರಿಹಾರ ಧನ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೊರೊನಾದಿಂದ ತಂದೆ ಅಥವಾ ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಪ್ರತ್ಯೇಕ ಕೊವಿಡ್ ಕೇರ್ ಸೆಂಟರ್ ಸ್ಥಾಪನೆ ಮಾಡಲಾಗುವುದು. ಕೊರೊನಾ ಎರಡನೇ ಅಲೆ ತೀವ್ರವಾಗಿದೆ. ಎರಡನೇ ಅಲೆಯಲ್ಲಿ ಪೋಷಕರು ತೀರಿ ಹೋಗಿ ಮಕ್ಕಳು ಅನಾಥರಾಗಿರುವ ಪ್ರಕರಣಗಳಿವೆ. ಹೀಗಾಗಿ ಅನಾಥ ಮಕ್ಕಳಿಗೆ ಸಹಾಯ…

ದೇವಗೌಡರ ೮೮ ನೇ ಜನ್ಮದಿನಕ್ಕೆ ಶುಭಕೋರಿದ ಗಣ್ಯರು

ಬೆಂಗಳೂರು,ಮೇ೧೮:ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಇಂದು ೮೮ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.ಜನ್ಮದಿನದ ಅಂಗವಾಗಿ ಪದ್ಮನಾಭನಗರದಲ್ಲಿರುವ ಅವರ ನಿವಾಸದಲ್ಲಿ ಅವರ ಕುಟುಂಬ ವರ್ಗ ಸರಳವಾಗಿ ಜನ್ಮದಿನವನ್ನು ಆಚರಿಸಿದರು. ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಿಗ್ಗೆಯೇ ದೂರವಾಣಿ ಕರೆ ಮಾಡಿ ಜನ್ಮದಿನದ ಶುಭ ಹಾರೈಸಿದ್ದಾರೆ. ಇನ್ನೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ,ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಹಾಗೂ ಅವರ ಪುತ್ರ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಪ್ರಹ್ಲಾದ್ ಜೋಶಿ, ಸಂಸದ ಬಿ.ವೈ.ರಾಘವೇಂದ್ರ, ಪ್ರತಾಪ ಸಿಂಹ, ಸಂಸದೆ…

ನಕಲಿ ಪತ್ರಕರ್ತನ ಬಂಧಿಸಿದ ಪೊಲೀಸರು

ಹುಬ್ಬಳ್ಳಿ,ಮೇ,೧೮: ನಕಲಿ ಪತ್ರಕರ್ತರ ಹಾವಳಿ ರಾಜ್ಯಾದ್ಯಂತ ಹೆಚ್ಚಾಗುತ್ತಿದೆ ಯಾರೆ ಕೇಳಿದರು ಕೆಲವರು ಪತ್ರಕರ್ತ ಎಂದು ನಕಲಿ ಐಡಿ ಕಾರ್ಡ್‌ಗಳನ್ನು ತೋರಿಸಿ ಸಂಚರಿಸುವವರ ಸಂಖ್ಯೆ ಹೆಚ್ಚಾಗಿದೆ ಇದರ ಪರಿಣಾಮ ಹುಬ್ಬಳಿಯಲ್ಲಿ ಪೊಲೀಸರು ನಕಲಿ ಪತ್ರಕರ್ತನನ್ನು ವಶಕ್ಕೆ ಪಡೆದು ಬೈಕ್ ಸೀಜ್ ಮಾಡಿದ್ದಾರೆ. ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್ ಬಳಿ ಡಿಸಿಪಿ ರಾಮರಾಜನ್ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಇಂದು ಮುಂಜಾನೆ ಅನಗತ್ಯವಾಗಿ ಓಡಾಟ ಮಾಡುತ್ತಿದ್ದ ನಕಲಿ ಪತ್ರಕರ್ತನನ್ನು ಹಿಡಿದು ಬೈಕ್ ಸೀಜ್ ಮಾಡಿ ಪ್ರಕರಣ ದಾಖಲಿಸಿದ್ದಾರೆ. ಜಾನ್ ನಿಕೋಲಸ್ ಹಲವು…

ಭಾರೀ ಏರಿಕೆ ಕಂಡ ಚಿನ್ನದ ಬೆಲೆ

ಮುಂಬ್ಯೆ,ಮೇ,೧೮: ಭಾರತದಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆಯಾಗಿದೆ. ಎರಡು ದಿನಗಳ ಹಿಂದೆ ೧೦ ಗ್ರಾಂಗೆ ೨೨ ಕ್ಯಾರೆಟ್ ಚಿನ್ನದ ಬೆಲೆ ೪೫,೦೬೦ ರೂ ಇತ್ತು ಇಂದು೪೬,೩೪೦ ರೂಗೆ ಏರಿಕೆಯಾಗಿದೆ. ಅದರೆ ದೇಶದ ಬೇರೆ ಬೇರೆ ನಗರಗಳಲ್ಲಿ ಬೆಲೆಯಲ್ಲಿ ಒಂದಿಷ್ಟು ವ್ಯತ್ಯೆಯಗಳಾಗಿವೆ ಎಲ್ಲಿ ಯಾವ ನಗರದಲ್ಲಿ ಎಷ್ಟಿದೆ ಎನ್ನುವ ಮಾಹಿತಿ ಇಲ್ಲಿದೆ: ಬೆಂಗಳೂರಿನಲ್ಲಿ ೨೪ ಕ್ಯಾರೆಟ್ ೧೦ ಗ್ರಾಂ ಚಿನ್ನದ ಬೆಲೆ ೨ ದಿನಗಳ ಹಿಂದೆ ೪೮,೯೮೦ ರೂ. ಇದ್ದುದು ಇಂದು ೪೯,೨೭೦ ರೂ.ಗೆ ಏರಿಕೆಯಾಗಿದೆ. ೨೨ ಕ್ಯಾರೆಟ್‌ನ…

ಭಾರತದಲ್ಲಿ ಇಳಿಕೆ ಕಂಡ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ,ಮೇ,೧೮: ಕೋವಿಡ್-೧೯ ಸೋಂಕಿಗೆ ಭಾರತ ಸಮರೋಪಾದಿಯಲ್ಲಿ ಸೌಕರ್ಯ ಮತ್ತು ಜಾಗೃತಿ ವಹಿಸುತ್ತಿರುವ ಕಾರಣ ಮಂಗಳವಾರ ಇಂದು ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಬೆಳಿಗ್ಗೆ ೯ ಗಂಟೆಗೆ ಮುಕ್ತಾಯವಾದ ೨೪ ಗಂಟೆಗಳ ಅವಧಿಯಲ್ಲಿ ಒಟ್ಟು೨,೬೩,೫೩೩ ಮಂದಿಯಲ್ಲಿ ಸೋಂಕು ದೃಡಪಟ್ಟಿದ್ದು ಇದು ಕಳೆದ ೨೮ ಗಂಟೆಯಲ್ಲಿ ಕನಿಷ್ಠ ಪ್ರಮಾಣವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಹಲವು ದಿನಗಳಿಂದ ೪ ಲಕ್ಷದ ಆಸುಪಾಸಿನಲ್ಲಿ ದಾಖಲಾಗುತ್ತಿದ್ದ ಹೊಸ ಸೋಂಕಿತರ ಸಂಖ್ಯೆ ಇದೀಗ ೩ ಲಕ್ಷಕ್ಕಿಂತ ಕೆಳಗೆ ಇಳಿದಿರುವುದು, ೨ನೇ ಅಲೆಯ ಇಳಿಕೆಯ ಸುಳಿವಾಗಿರಬಹುದು…

ಮಹಿಳಾ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ಶಿವ್ ಸುಂದರ್ ದಾಸ್

ನವದೆಹಲಿ,ಮೇ,೧೮:ಭಾರತೀಐ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮೆನ್ ಶಿವಸುಂದರ್ ದಾಸ್ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ.ಹೀಗಾಗಿ ಇಂಗ್ಲೆಂಡ್ ಪ್ರವಾಸದ ವೇಳೆ ದಾಸ್ ಮಹಿಳಾ ಕ್ರಿಕೆಟ್‌ಗರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಶಿವ್ ಸುಂದರ್ ದಾಸ್ ಭಾರತ ತಂಡದ ಪರ ೨೦೦೦-೦೨ರ ವರೆಗೆ ೨೩ ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ೨೩ ಟೆಸ್ಟ್ ಪಂದ್ಯಗಳಲ್ಲಿ ೩೪.೮೯ರ ಸರಾಸರಿಯಂತೆ ೧೩೨೬ ರನ್ ಗಳಿಸಿದ್ದಾರೆ. ಇದರಲ್ಲಿ ೨ ಶತಕಗಳು ಮತ್ತು ೯ ಅರ್ಧ ಶತಕಗಳು ಸೇರಿವೆ. ’ಇದೊಂದು ಒಳ್ಳೆಯ ಅನುಭವವಾಗಲಿದೆ. ನಾನು ಇದಕ್ಕಾಗಿ…

ಗೋರೂರು ಕೃತಿ ‘ನಮ್ಮ ಊರಿನ ರಸಿಕರು’ ತೆರೆಯ ಮೇಲೆ

‘ಗೊರೂರು’ ಎಂದೇ ಚಿರಪರಿಚಿತರಾಗಿರುವ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪ್ರಸಿದ್ಧ ‘ನಮ್ಮ ಊರಿನ ರಸಿಕರು’ ಕೃತಿಗೆ ತೆರೆಗೆ ಬರುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ, ಬ್ರಿಟಿಷ್ ರಾಜ್ ಮತ್ತು ಕ್ವಿಟ್ ಇಂಡಿಯಾ ಚಳವಳಿಯ ಮಧ್ಯೆದ ಈ ಕಥೆ ತನ್ನದೇ ಆದ ಕಥಾಹಂದರವನ್ನು ಹೊಂದಿದೆ. ಈ ಕಥೆಯು ಸಂತೋಷ, ದುಃಖ, ನವಿರಾದ ಹಾಸ್ಯ, ನಾಟಕ, ಶೋಷಣೆ, ರಾಜಕೀಯ, ನಿರೀಕ್ಷೆಗಳು, ನಿರ್ಧಾರಗಳು, ಸಂಕೀರ್ಣತೆಗಳು, ಜಾತಿವಾದ, ಅಭಿಪ್ರಾಯಗಳು, ಸ್ನೇಹ, ಸಂಬಂಧಗಳು ಮತ್ತು ಇನ್ನೂ ಅನೇಕ ಮಸಾಲಾಗಳಿಂದ ಕೂಡಿದೆ. ಪ್ರೀತಿಯಿಂದ ಶಾಮಣ್ಣ ಎಂದು ಕರೆಯಲ್ಪಡುವ ಶಾಮ…

1 94 95 96 97 98 101
Girl in a jacket