ವಿಪತ್ತು ಸ್ಪಂದನಾ ಪಡೆ ಬಲ ಹೆಚ್ಚಳಕ್ಕೆ ಆದ್ಯತೆ;ಬೊಮ್ಮಾಯಿ
ಬೆಂಗಳೂರು,ಮೇ,16:ಕರ್ನಾಟಕ ರಾಜ್ಯ ವಿಪತ್ತು ಸ್ಪಂದನಾ ಪಡೆ ಪಡೆಯ ಬಲವನ್ನು ಹೆಚ್ಚಿಸಲಾಗುವುದು. ಅದರಜೊತೆಗೆ ಪ್ರಸಕ್ತ ವರ್ಷದಲ್ಲಿ 15 ಕೋಟಿ ರೂಪಾಯಿ ವೆಚ್ಚದಲ್ಲಿ ಅಗತ್ಯ ವಾಹನ, ಅತ್ಯಾಧುನಿಕ ಉಪಕರಣ ಖರೀದಿಯ ಜೊತೆಗೆ ರಾಜ್ಯದ ಎರಡು ಕಡೆ ಎಸ್ ಡಿ ಆರ್ ಎಫ್ ತಂಡದ ಕಚೇರಿಯನ್ನು ಸ್ಥಾಪಿಸುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ರಾಜ್ಯ ಅಗ್ನಿಶಾಮಕ ತುರ್ತು ಸೇವೆ ಗೃಹರಕ್ಷಕ ಪೌರರಕ್ಷಣೆ SDRF ನಿರ್ದೇಶನಾಲಯ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 20 ಕೋಟಿ ರೂಪಾಯಿ ವೆಚ್ಚದಲ್ಲಿ…