Girl in a jacket

Author kendhooli_editor

‘ಮುತ್ತಿನ ಹುಡುಗಿ’ಗೆ ಕಂಚು..! ನೂತನ ದಾಖಲೆ ಬರೆದ ಸಿಂಧು

Posted by H.D.savitha ಟೋಕಿಯೋ,ಆ,01: ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಲಿಭಿಸಿದೆ.  ಭಾರತದ ಭರವಸೆಯ ಬಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಕಂಚಿನ ಪದಕ ವಿಜೇತರಾಗಿದ್ದಾರೆ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಚೀನಾದ ಹೀ ಬಿಂಗ್ ಜಿಯವೋ ರನ್ನು  ಮಣಿಸಿದ್ರು.  ಸಿಂಧು 2 ಗೇಮ್ ನಲ್ಲಿ ಪ್ರಾಬಲ್ಯ ಮೆರೆದು 21-13, 21-15 ರ ಮೂಲಕ ಕಂಚಿನ ಪದಕಕ್ಕೆ ಮುತ್ತಿಟ್ಟರು. ಇದರೊಂದಿಗೆ ಒಲಿಪಿಕ್ಸ್ ನಲ್ಲಿ ಬಾಡ್ಮಿಂಟನ್ ನಲ್ಲಿ ಭಾರತಕ್ಕಾಗಿ 2ಪದಕ ಗೆದ್ದುಕೊಟ್ಟು ದಾಖಲೆಯನ್ನು ಸಿಂಧು ಬರೆದರು.…

ಸಾಧಕರಿಗೆ ಸನ್ಮಾನ

ಬೆಂಗಳೂರು,ಆ,01:ಸಿನಿಮಾಪತ್ರಿಕಾಛಾಯಾಗ್ರಾಹಕರು ಕರೋನಾ ವಾರಿಯರ‍್ಸ್ ಕಳೆದ ಹದಿನೆಂಟು ತಿಂಗಳುಗಳಿಂದ ವಿಶ್ವಕ್ಕೆ ವ್ಯಾಪಿಸಿರುವ ಕರೋನ ಎಂಬಮಹಾಮಾರಿಯಿಂದ ಜನರುಹೈರಣಾಗಿದ್ದಾರೆ.ಸರ್ಕಾರವುಲಾಕ್‌ಡೌನ್‌ಏರಿದಕಾರಣ ಚಟುವಟಿಕೆಗಳುಸ್ತಬ್ದಗೊಂಡಿದ್ದವು.ಈ ಸಂದರ್ಭದಲ್ಲಿಜೀವದ ಹಂಗನ್ನುತೊರೆದುಸಾಮಾಜಿಕ ಸೇವೆಯಲ್ಲಿತೊಡಗಿಕೊಂಡಿದ್ದ ವಿವಿಧ ಕ್ಷೇತ್ರಗಳ ಸಾಧಕರನ್ನು ಎಸ್.ಎಸ್.ಕಲಾ ಸಂಗಮವು ಗುರುತಿಸಿ ಅವರನ್ನುಗೌರವಿಸುವ ಕಾರ್ಯಕ್ರಮನ್ನುಏರ್ಪಡಿಸಿತ್ತು. ಈ ಪೈಕಿ ಕಳೆದಮೂರು ದಶಕಗಳಿಂದ ಸಿನಿಮಾ ಪತ್ರಿಕೆಗಳಿಗೆ ಫೋಟೋಗಳನ್ನು ಒದಗಿಸುತ್ತಿರುವ ಹಿರಿಯಛಾಯಾಗ್ರಾಹಕರುಗಳಾದಕೆ.ಎನ್.ನಾಗೇಶ್‌ಕುಮಾರ್, ಮನೋಹರ್‌ಅಲಿಯಾಸ್ ಮನು ಮತ್ತು ಕೆ.ಎಸ್.ಮೋಕ್ಷೇಂದ್ರ ಇವರುಗಳನ್ನು ಸಂಸ್ಥೆಯು ಹಾರ, ಶಾಲು, ಪೇಟ ಮತ್ತುಪ್ರಮಾಣಪತ್ರ ವಿತರಿಸಿ ಸನ್ಮಾನಿಸಲಾಯಿತು. ನಜ್ಮಾ ಫಾರುಖ್, ಅಸಿಸ್ಟೆಂಟ್ ಕಮಿಷನರ್‌ಆಫ್ ಪೋಲೀಸ್, ಖ್ಯಾತಗಾಯಕ ಶಶಿಧರ್‌ಕೋಟೆ, ಸಮಾಜ ಸೇವಕ ಮಂಜುನಾಥ್‌ಬನಶಂಕರಿ, ನಿವೃತ್ತ…

ದೇವೇಗೌಡರನ್ನು ಭೇಟಿಮಾಡಿ ಆರ್ಶೀವಾದ ಪಡೆದ ಸಿಎಂ ಬೊಮ್ಮಾಯಿ

ಬೆಂಗಳೂರು,ಆ,01:ಮಾಜಿ ಪ್ರಧಾನಿ ರಾಜ್ಯದ ಹಿರಿಯ ರಾಜಕಾರಣಿ ಎಚ್.ಡಿ.ದೇವೇಗೌಡ ಅವರನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು. ಅವರ ನಿವಾಸಕ್ಕೆ ತೆರಳಿ ದೇವೇಗೌಡರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಮಾಜಿ ಸಚಿವರುಗಳಾದ ಸೋವಣ್ಣ, ರೇವಣ್ಣ ಅವರು ಮುಖ್ಯಮಂತ್ರಿ ಜೊತೆಗಿದ್ದರು.ಭೇಟಿ ಬಳಿಕ ಮಾತನಾಡಿದ ಸಿಎಂ, ನನ್ನ ತಂದೆ ಎಸ್.ಆರ್.ಬೊಮ್ಮಾಯಿ ಜೊತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಒಡನಾಟ ಹೊಂದಿದ್ದರು. ನಾನು ಅವರಿಂದ ಇಂದು ಆಶೀರ್ವಾದ, ಮಾರ್ಗದರ್ಶನ ಪಡೆದಿದ್ದೇನೆ. ದೇವೇಗೌಡರು ಅನೇಕ ಸಂಗತಿಗಳನ್ನು ಮೆಲುಕು ಹಾಕಿದ್ದಾರೆ ಎಂದು ತಿಳಿಸಿದರು. ದೇವೇಗೌಡರು ಸಾಕಷ್ಟು…

ಮಠಾಧೀಶರ ಬೆದರಿಕೆಗೆ ಬಿಜೆಪಿ ಬಗ್ಗೊಲ್ಲ; ಈಶ್ವರಪ್ಪ

ಬೆಂಗಳೂರು, ಆ,01: ಬಿಜೆಪಿ ಪಕ್ಷ ಯಾವುದೇ ಕಾರಣಕ್ಕೂ ಮಠಾಧೀಶರ ಬೆದರಿಕೆಗೆ ಬೆದರುವುದಿಲ್ಲ ಎಂದು ಮಾಜಿ ಸಚಿವ ಈಶ್ವರಪ್ಪ ಎಚ್ಚರಿಸಿದ್ದಾರೆ. ವಿಜಯಪುರದಲ್ಲಿ ಭಾನುವಾರ ಮಾತನಾಡಿದ‌ ಅವರು, ತಮ್ಮ‌ ತಮ್ಮ ಸಮಾಜದ ಶಾಸಕರನ್ನು ಮಂತ್ರಿ ಮಾಡಿ ಎಂದು ಮಠಾಧೀಶರು ಹೇಳುವುದು ತಪ್ಪಲ್ಲ. ಆದರೆ ಶಾಸಕರು ಹೇಳುವುದು ತಪ್ಪು. ಇನ್ನೊಂದೆಡೆ ನಮ್ಮ‌ ಸಮಾಜದ ವ್ಯಕ್ತಿಗೆ‌ ಮಂತ್ರಿ‌ ಮಾಡದಿದ್ದರೆ ಬಿಜೆಪಿ ಸರ್ವನಾಶ ಅಂತಾ ಹೇಳುವುದು‌ ತಪ್ಪು ಎಂದು ಮಠಾಧೀಶರಿಗೆ ಸಲಹೆ ಮಾಡಿದರು. ಧರ್ಮ ವಿಚಾರದಲ್ಲಿ ನಾವೂ ಇದ್ದೇವೆ. ಆದರೆ ಮಠಾಧೀಶರು ಶಾಪ ಹಾಕುವ…

‘ಏಳು’ ಪದಕಗಳ ಒಡತಿ: ವಿಶ್ವ ದಾಖಲೆ ನಿರ್ಮಿಸಿದ ಆಸ್ಟ್ರೇಲಿಯಾ ಎಮ್ಮಾ ಮೇಕಿಯನ್

ಟೋಕಿಯೋ: ಟೋಕಿಯೋ ಒಲಂಪಿಕ್ಸ್ ನಲ್ಲಿ ಒಂದಲ್ಲ ಎರಡಲ್ಲ ಬರೊಬ್ಬರಿ 7 ಪದಕಗಳನ್ನು ಪಡೆದು ವಿಶ್ವ ದಾಖಲೆ ಬರೆದಿದದ್ದಾಳೆ ಆಸ್ಟ್ರೇಲಿಯಾದ ಈಜುಗಾರ್ತಿ ಎಮ್ಮಾ ಮೆಕಿಯನ್. ಅಷ್ಟೇ ಅಲ್ಲ ಒಲಂಪಿಕ್ಸ್ ಕೂಟದಲ್ಲೂ  ಅತೀ ಹೆಚ್ಚು ಪದಕಗಳನ್ನು ಪಡೆದ ಹೆಗ್ಗಳಿಕೆ ಕೂಡಾ ಇವಳದ್ದು. ಭಾನುವಾರ ನಡೆದ 4*100 ಫ್ರೀ ಸ್ಟೈಲ್ ರೀಲೆಯಲ್ಲಿ ಚಿನ್ನದ ಪದಕ ತನ್ನದಾಗಿಸಿಕೊಳ್ಳುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾಳೆ. 1952ರಲ್ಲಿ ಸೋವಿಯತ್ ಒಕ್ಕೂಟದ ಜಿಮ್ನಾಸ್ಟಿಕ್ ಪಟು ಮರಿಯಾ ಗೊರೋವೋವಿಸ್ಕ 7ಪದಕ ಜಯಿಸಿದ್ದರು. ಇದಾದ ಬಳಿಕ ಈಗ ಎಮ್ಮಾ ಮೇಕಿಯನ್…

ನೆರೆ ಸಂತ್ರಸ್ತರಿಗೆ ಬಿಎಸ್ ವೈ ಸರ್ಕಾರ ಮಾದರಿಯಲ್ಲೇ ಪರಿಹಾರ; ಬೊಮ್ಮಾಯಿ

ಬೆಂಗಳೂರು,ಆ,01:ನೆರೆ ಸಂತ್ರಸ್ತರಾದವರಿಗೆ ಯಡಿಯೂರಪ್ಪ ನೇತೃತ್ವದ ಸರ್ಕಾರದ ಅವಧಿಯಲ್ಲಿ ನೀಡುತ್ತಿದ್ದ ಮಾದರಿಯಲ್ಲಿಯೇ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಕುರಿತು ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆ ಗೃಹ ಕಚೇರಿ ಕೃಷ್ಣಾದಲ್ಲಿ ಭಾನುವಾರ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ‘ನೆರೆ ಹಾನಿ ಸಮೀಕ್ಷೆಗೆ ರಾಜ್ಯಕ್ಕೆ ಕೇಂದ್ರ ತಂಡವನ್ನು ಕಳುಹಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದೇನೆ’ ಎಂದು ಹೇಳಿದರು. ‌ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅಧಿಕಾರಿ…

ಖಾಸಗಿ ಶಾಲೆಗಳ ಆರಂಭ ಸದ್ಯಕ್ಕಿಲ್ಲ; ಸಿಎಂ

ಬೆಂಗಳೂರು ,ಆ,೦೧: ರಾಜ್ಯದಲ್ಲಿ ಖಾಸಗಿ ಶಾಲೆಗಳ ಆರಂಭ ಕುರಿತು ಎಲ್ಲ ಆಯಾಮದಲ್ಲಿಯೂ ಚರ್ಚಿಸಿ ಖಾಸಗಿ ಶಾಲಾ ಸಂಘಟನೆಗಳ ಒಕ್ಕೂಟದ ಜೊತೆಯಲ್ಲಿ ಸೌಹಾರ್ದಯುತವಾಗಿ ಚರ್ಚಿಸಿ ನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆಯಿಂದ ಶಾಲೆಗಳ ಆರಂಭಕ್ಕೆ ಮುಂದಾಗಿದ್ದ ಖಾಸಗಿ ಶಾಲಾ ಸಂಘಟನೆಗಳ ಒಕ್ಕೂಟಕ್ಕೆ ಸೂಚನೆ ನೀಡಿ, ಸದ್ಯಕ್ಕೆ ಶಾಲೆ ಆರಂಭ ಬೇಡ ಎಂದು ತಿಳಿಸಲಾಗಿದೆ. ಈ ಸಂಬಂಧ ಮುಂದುವರೆದು ಖಾಸಗಿ ಶಾಲೆಗಳ ಅಸೋಸಿಯೇಷನ್ ಜೊತೆ ಮಾತುಕತೆ…

ಬೆರಗು ಗೊಳಿಸಿದ ಡಕಾಯಿತನ ನಡೆ..!

ಬೆರಗು ಗೊಳಿಸಿದ ಡಕಾಯಿತನ ನಡೆ…! ನಾನು ಪ್ರಯಾಣಿಸುತ್ತಿದ್ದ ಲಕ್ಷುರಿ ಬಸ್ ಇಂದೋರ್ ನ ಹೊರವಲಯವನ್ನು ಪ್ರವೇಶಿಸಿದ ಸುಳಿವನ್ನು ಮುಚ್ಚಿದ ಕಿಟಿಕಿಯ ಪರದೆಗಳನ್ನೂ ಸೀಳಿ ಒಳತೂರುತ್ತಿದ್ದ ಹೆದ್ದಾರಿಯ ದಾರಿ ದೀಪಗಳ ಬೆಳಕಿನಿಂದ ಊಹಿಸಿದೆ. ಉರಿಯುವ ಕಣ್ಣುಗಳನ್ನು ಕಷ್ಟಪಟ್ಟು ತೆರೆದು ಕೈ ಗಡಿಯಾರವನ್ನು ನೋಡಿಕೊಂಡವನಿಗೆ ಸಮಯ ಮುಂಜಾನೆಯ ನಾಲ್ಕೂವರೆ ಎಂದು ಗೊತ್ತಾಯಿತು. ರಾತ್ರಿ ಹತ್ತರ ಸುಮಾರಿಗೆ ಅಹಮದಾಬಾದ್ ನ ಪಾಲಡಿಯ ಪವನ್ ಟ್ರಾವೆಲ್ಸ್ ಬಸ್ ನಲ್ಲಿ ಆಫೀಸ್ ನ ಕೆಲಸದ ನಿಮಿತ್ತ ಮಧ್ಯಪ್ರದೇಶದ ಇಂದೋರ್ ನಗರಕ್ಕೆ ಹೊರಟಿದ್ದ ನನಗೆ ರಾತ್ರಿಯಿಡೀ…

ಬುಧವಾರ ಸಚಿವ ಸಂಪುಟ ವಿಸ್ತರಣೆ; ನಾಳೆ ಸಿಎಂ ದೆಹಲಿಗೆ?

ಬೆಂಗಳೂರು, ಆ. 01: ಸಚಿವ ಸಂಪುಟ ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್‌ ಕೊಟ್ಟಿರುವ ಕಾರಣ ನಾಳೆ ಪಟ್ಟಿಯೊಂದಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದೆಹಲಿಗೆ ತೆರಳಲಿದ್ದಾರೆ . ಈ ಹಿನ್ನೆಲೆಯಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸಕ್ಕೆ ತೆರಳಿ ಸಚಿವ ಸಂಪುಟ ಕುರಿತಂತೆ ಚರ್ಚಿಸಿದ್ದು ಯಾರೆಲ್ಲ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎನ್ನುವ ಬಗ್ಗೆ ಸಮಾಲೋಚನೆ ನಡೆಸಿದರು. ಒಂದೆಡೆ ರಾಜ್ಯದಲ್ಲಿ ಪ್ರವಾಹ ಪರಿಹಾರ ಕಾರ್ಯಗಳು ಆಗಬೇಕಾಗಿದೆ. ಮತ್ತೊಂದೆಡೆ ಕೊರೊನಾ ಮೂರನೇ ಅಲೆ ಅಪ್ಪಳಿಸುವ ಆತಂಕ ಕೂಡ ಎದುರಾಗಿದೆ. ಹೀಗಾಗಿ…

ತಬ್ಬಿಕೊಳೊ ವಿಶ್ವವನೆ ಮಂಕುತಿಮ್ಮ

ಸಿದ್ಧಸೂಕ್ತಿ : ತಬ್ಬಿಕೊಳೊ ವಿಶ್ವವನೆ ಮಂಕುತಿಮ್ಮ. ಜಂಜಾಟ ಬೇಡೆಂದು ಒಂಟಿತನ ಬಯಸುವರು. ಸಂನ್ಯಾಸ ಬದುಕಿಗೆ ಇದು ಆಗಬಹುದು. ಸಂಸಾರ ಜೀವನಕ್ಕೆ ಇದು ಎಂದಿಗೂ ಹೊಂದದು. ಒಂದೇ ತಾ ಸುಖಿಸಲಾರೆ ಎಂದಿತಂತೆ ಅದ್ವಿತೀಯ ಪರಬ್ರಹ್ಮ! ಸಂಗಾತಿಯನ್ನು ಬಯಸಿತಂತೆ! ಇದ್ದ ತಾನೊಂದೇ ಗಂಡ ಹೆಂಡತಿಯಾಯಿತಂತೆ! ಏಕಾಕೀ ನ ರಮತೇ. ಸ ದ್ವಿತೀಯಮೈಚ್ಛತ್. ಪತಿಶ್ಚ ಪತ್ನೀಶ್ಚಾಭವತ್ – ಎನ್ನುವುದು ಬೃಹದಾರಣ್ಯಕ ಉಪನಿಷತ್. ಬಹುಸ್ಯಾಂ ಪ್ರಜಾಯೇಯೇತಿ ಎನ್ನುವುದು ತೈತ್ತಿರೀಯ ಉಪನಿಷತ್. ಜಾಮೂನ್ ಮಿಕ್ಸ್ಗೆ ಸಕ್ಕರೆ, ಚಪಾತಿಗೆ ಪಲ್ಯ, ಅನ್ನಕ್ಕೆ ಸಾಂಬಾರು……

ಯಾರೇ ಅಡ್ಡಿಪಡಿಸಿದರೂ ಮೇಕೆದಾಟು ಯೋಜನೆ ನಿಲ್ಲುವುದಿಲ್ಲ; ಸಿಎಂ

ಬೆಂಗಳೂರು, ಜು,31: ಮೇಕೆ ದಾಟು ಯೋಜನೆಗೆ ಯಾರೆ ಅಡ್ಡಬಂದರೂ ನಿಲ್ಲುವುದಿಲ್ಲ ಯೋಜನೆಯನ್ನು ಮಾಡೀಯೇ ತೀರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಕರ್ನಾಟಕದ ಕಾವೇರಿ ನದಿಗೆ ಮೇಕೆದಾಟು ಬಳಿ ಡ್ಯಾಂ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕೆ ತಮಿಳುನಾಡು ಸರ್ಕಾರ ವಿರೋಧಿಸುತ್ತಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ತಮಿಳುನಾಡು ಬಿಜೆಪಿ ಘಟಕ ಸರ್ಕಾರದ ಪರ ನಿಲ್ಲುತ್ತೇನೆ ಎಂದು ಈ ಹಿಂದೆಯೇ ತಿಳಿಸಿದ್ದರು. ಆದರೆ ಈಗ ಮೇಕೆದಾಟು ಯೋಜನೆ ವಿರೋಧಿಸಿ ಕೆ.ಅಣ್ಣಾಮಲೈ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಅಣ್ಣಾಮಲೈ ವಿಚಾರ…

ಸಂಶೋಧನಾತ್ಮಕ ಸುದ್ದಿಗಳ ಕೊರತೆ; ಶಾಸಕ ಶಿವಾನಂದ ಪಾಟೀಲ್ ವಿಷಾದ

ಆಲಮಟ್ಟಿ,ಜು,31:ಅವಸರದ ಸುದ್ದಿಗೆ ಮಹತ್ವ ನೀಡಿ, ಘಟನೆಯ ವಿವರಾತ್ಮಕ ಬರಹಗಳತ್ತ ಪತ್ರಕರ್ತರು ಗಮನಹರಿಸುತ್ತಿಲ್ಲ ಹೀಗಾಗಿ ಸಂಶೋಧನಾತ್ಮಕ ಸುದ್ದಿಗಳ ಕೊರತೆ ಎದ್ದು ಕಾಣುತ್ತಿದೆ ಎಂದು ಶಾಸಕ ಶಿವಾನಂದ ಪಾಟೀಲ ವಿಷಾದಿಸಿದರು. ಇಲ್ಲಿಯ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಿಡಗುಂದಿ ತಾಲ್ಲೂಕು ಘಟಕ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ಹಾಗೂ ಸಮಾಜದ ಏರು ಪೇರುಗಳನ್ನು ಪತ್ರಕರ್ತರು, ವ್ಯಂಗ್ಯ ಚಿತ್ರಕಾರರು, ಸಾಹಿತಿಗಳು ಸ್ಥಿರವಾಗಿ ನಿರೂಪಿಸುತ್ತಾ ಬಂದಿದ್ದಾರೆ, ಸಾಮಾಜಿಕ ಜಾಲ ತಾಣಗಳ ಮಧ್ಯೆಯೂ ಪತ್ರಿಕೆಗಳನ್ನು…

ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಜಿ.ಪಂ ಸಿಇಓ ಭೇಟಿ

ಆಲಮಟ್ಟಿ,ಜು,31:ಆಲಮಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಡಕಲಗುಂಡಪ್ಪ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಶನಿವಾರ ಜಿಲ್ಲಾ ಪಂಚಾಯ್ತಿ ಸಿಇಓ ಗೋವಿಂದ ರೆಡ್ಡಿ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಆಲಮಟ್ಟಿ ಗ್ರಾಮ ಪಂಚಾಯ್ತಿಯಿಂದ ಇಲ್ಲಿಯವರೆಗೆ ನರೇಗಾ ಯೋಜನೆಯಡಿ ಕೂಲಿಕರ‍್ಮಿಕರಿಗೆ ಕೆಲಸವೇ ನೀಡಿರಲಿಲ್ಲ. ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಹಿರೇಮಠ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರ ಪ್ರಯತ್ನದ ಫಲವಾಗಿ ಮೊದಲ ಹಂತದಲ್ಲಿ ೧೫೦ ಮಹಿಳೆಯರಿಗೆ ಜಾಬ್ ಕರ್ಡ್ ಮಾಡಿಸಿ ಕೂಲಿ ಕೆಲಸ ನೀಡಲಾಗಿದೆ. ಸಿಇಓ ಗೋವಿಂದರೆಡ್ಡಿ ಮಾತನಾಡಿ,…

ವಿವಿಧ ಲೇಖಕರ ಕೃತಿಗಳಿಗೆ ಸಾಹಿತ್ಯಪರಿಷತ್ ದತ್ತಿ ಪ್ರಶಸ್ತಿ ಪ್ರಕಟ

ಬೆಂಗಳೂರು, ಜು,31: ಕನ್ನಡ ಸಾಹಿತ್ಯ ಪರಿಷತ್ತು 2020 ನೇ ಸಾಲಿಗೆ ವಿವಿಧ ಲೇಖಕರ ಒಟ್ಟು 48 ಕೃತಿಗಳಿಗೆ ದತ್ತಿ ಪ್ರಶಸ್ತಿಯನ್ನು ಪ್ರಕಟಿಸಿದೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಅವರು ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಿದ್ದಾರೆ. ‘ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿ’ಗೆ ಎಸ್.ಪಿ. ಯೋಗಣ್ಣ ಅವರ ‘ಆರೋಗ್ಯ ಎಂದರೇನು?’ ಕೃತಿ ಆಯ್ಕೆಯಾಗಿದೆ. ‘ವಿ. ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿ’ಗೆ ವಾಸುದೇವ ಬಡಿಗೇರ ಅವರ ‘ದೇವರ ದಾಸಿಮಯ್ಯ-ಮರುಚಿಂತನೆ’ ಕೃತಿ, ‘ಭಾರತಿ ಮೋಹನ ಕೋಟಿ…

ಗುರುಶೋಧನೆ

‌‌‌‌‌‌        ಗುರುಶೋಧನೆ. ಆಕಾಶವು ಹೇಗೆ ನಾಶವಾಗುವುದು? ಸಿದ್ಧಬಾಲಕನ ಈ ಪ್ರಶ್ನೆಗೆ ವೀರಭದ್ರ ಸ್ವಾಮಿಗಳು ಹೇಳಿದ್ದು:”ಯೋಗ್ಯ ಗುರುವಿಗೆ ಈ ಪ್ರಶ್ನೆಯನ್ನು ಕೇಳತಕ್ಕದ್ದು” ಎಂದು. ಯೋಗ್ಯ ಗುರುವನ್ನು ಹುಡುಕಬೇಕೆಂದು ಸಿದ್ಧನು ಅಂದೇ ಮನಸ್ಸಿನಲ್ಲಿ ನಿರ್ಧರಿಸಿದನು. ಮರುದಿನ ಬೆಳಿಗ್ಗೆ ಎದ್ದು, ಯಾರಿಗೂ ಹೇಳದೇ ಮನೆ ಬಿಟ್ಟು ಹೊರಟನು. ದಾರಿಯಲ್ಲಿ ಮಿತ್ರರಾದ ಸೋಮ ಭೀಮರು ಕಣ್ಣಿಗೆ ಬಿದ್ದರು. ಸಿದ್ಧನನ್ನು ಕಂಡೊಡನೆಯೇ “ಸಿದ್ಧ ಎಲ್ಲಿಗೆ ಹೊರಟಿರುವಿ? ” ಎಂದು ಕೇಳಿದರು. ಆಗ ಸಿದ್ಧ ಹೀಗೆ ಉತ್ತರಿಸಿದ : “ಈ ಪ್ರಪಂಚವೆಲ್ಲವೂ…

ಜಿಎಸ್ ಟಿ ಪರಿಹಾರ ಬಿಡುಗಡೆಗೆ ಕೇಂದ್ರಕ್ಕೆ ಸಿಎಂ ಮನವಿ

ನವದೆಹಲಿ, ಜು,31:ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಕಳೆದ ವರ್ಷ ಕೇಂದ್ರ ಸರ್ಕಾರವು 12 ಸಾವಿರ ಕೋಟಿ ರೂ. ಜಿ.ಎಸ್.ಟಿ ಪರಿಹಾರ ನೀಡಿದ್ದು, ಇನ್ನು 11 ಸಾವಿರ ಕೋಟಿ ರೂ. ಗಳಷ್ಟು ಪರಿಹಾರ ಬಿಡುಗಡೆಯಾಗಬೇಕಿದೆ. ಈ ಪರಿಹಾರದ ಬಿಡುಗಡೆ ಕುರಿತು ಚರ್ಚಿಸಿದರು. ಈ ವರ್ಷ ಸುಮಾರು 18 ಸಾವಿರ ಕೋಟಿ ಪರಿಹಾರವನ್ನು ಸಾಲ ರೂಪದಲ್ಲಿ ಬಿಡುಗಡೆ ಮಾಡುವುದಾಗಿ ಕೇಂದ್ರ…

ರಾಜ್ಯದ ಆರೋಗ್ಯ ಮೂಲಸೌಕರ್ಯ ಅಭಿವೃದ್ದಿಗೆ ಕೇಂದ್ರದಿಂದ ನೆರವು : ಸಿಎಂ ಬೊಮ್ಮಾಯಿ

ನವದೆಹಲಿ,ಜು31 : ಕೋವಿಡ್ 3 ನೇ ಅಲೆ ತಡೆಗಟ್ಟಲು ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ, ಐಸಿಯು, ಆಕ್ಸಿಜನ್, ಔಷಧಿ ಖರೀದಿಗೆ ರಾಜ್ಯಕ್ಕೆ 800 ಕೋಟಿ ರೂ. ಮಂಜೂರು ಮಾಡಲು ಳ ಮನ್ ಸುಖ್ ಮಾಂಡವೀಯ, ಕೇಂದ್ರ ಆರೋಗ್ಯ ಸಚಿವರು ಸಮ್ಮತಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ ಸುಖ್ ಮಾಂಡವೀಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.…

ತಂದೆ ಹುಟ್ಟೂರು ಗಾಜನೂರಿಗೆ ಭೇಟಿ ನೀಡಿದ ಶಿವಣ್ಣ,ಪುನೀತ್

ಚಾಮರಾಜನಗರ,ಜು,೩೧: ತಮ್ಮ ತಂದೆ ವರನಟ ಡಾ.ರಾಜ್‌ಕುಮಾರ್ ಹುಟ್ಟೂರಾದ ಗಾಜನೂರಿಗೆ ಭೇಟಿ ನೀಡಿದ ಖ್ಯಾತ ನಟರಾದ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್,ಸೋದರತ್ತೆ ನಾಗಮ್ಮ ಅವರ ಕುಟುಂಬದೊಂದಿಗೆ ಸಮಯ ಕಳೆದರು. ನಾಗಮ್ಮ ಅವರ ಆರೋಗ್ಯ ವಿಚಾರಿಸಲು ತಮ್ಮ ಕುಟುಂಬದೊಂದಿಗೆ ಬಂದಿದ್ದ ಶಿವಣ್ಣ ಹಾಗೂ ಅಪ್ಪು ಅವರು, ಗಾಜನೂರಿನಲ್ಲಿ ಡಾ.ರಾಜ್‌ಕುಮಾರ್ ಅವರು ಧ್ಯಾನ ಮಾಡುತ್ತಿದ್ದ ಸ್ಥಳ, ತೋಟದಲ್ಲಿ ಸುತ್ತಾಡಿದರು. ಎಲ್ಲರೂ ಜೊತೆಯಾಗಿ ಮಧ್ಯಾಹ್ನದ ಭೋಜನ ಸವಿದರು. ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕೆ ಮನೆಯವರಿಗೂ ತಿಳಿಸಿದೆ ಅವರು ನೇರವಾಗಿ ಗಾಜನೂರಿಗೆ ಬಂದಿದ್ದರು.…

ಆಲಮಟ್ಟಿ ಡ್ಯಾಂಗೆ ಹೆಚ್ಚಿದ ನೀರು ಜಮೀನುಗಳು ಜಲಾವೃತ

ಆಲಮಟ್ಟಿ,ಜು,೩೧: ಆಲಮಟ್ಟಿ ಜಲಾಶಯದ ಹೊರಹರಿವನ್ನು ಗುರುವಾರ ಮಧ್ಯರಾತ್ರಿಯಿಂದ ಹೆಚ್ಚಿಸಲಾಗಿದ್ದು, ೪.೨೦ ಲಕ್ಷ ಕ್ಯುಸೆಕ್ ನೀರನ್ನು ಜಲಾಶಯದ ಮೂಲಕ ಬಿಡಲಾಗುತ್ತಿದೆ. ಇದರಿಂದ ಪ್ರವಾಹದ ಆತಂಕ ಇನ್ನಷ್ಟು ಹೆಚ್ಚಿದ್ದು, ಜಲಾಶಯದ ಒಳಹರಿವು ಕೂಡಾ ೪.೨೦ ಲಕ್ಷ ಕ್ಯುಸೆಕ್ ಇದೆ. ಸದ್ಯ ೫೧೯.೬೦ ಮೀ. ಗರಿಷ್ಠ ಎತ್ತರದ ಜಲಾಶಯದಲ್ಲಿ ೫೧೭.೧೭ ಮೀ.ವರೆಗೆ ನೀರಿದ್ದು, ೮೬.೫೯ ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಆಲಮಟ್ಟಿಯಿಂದ ಹೊರಹರಿವು ಹೆಚ್ಚಿದ್ದರಿಂದ ನಿಡಗುಂದಿ ತಾಲ್ಲೂಕಿನ ಕೃಷ್ಣಾ ತೀರದ ಗ್ರಾಮಗಳಾದ ಅರಳದಿನ್ನಿ, ಕಾಶೀನಕುಂಟಿ, ಯಲ್ಲಮ್ಮನೂದಿಹಾಳ, ಯಲಗೂರ, ಮಸೂತಿ ಗ್ರಾಮzಲ್ಲಿ ಇಲ್ಲಿಯವರೆಗೆ…

ನಿಡಗುಂದಿ: ಪೊಲೀಸರು ಜನಸ್ನೇಹಿಯಾಗಿ ಕೆಲಸ ನಿರ್ವಹಿಸಲು ಸಲಹೆ

ನಿಡಗುಂದಿ,ಜು,೩೧:ಜನಸಾಮಾನ್ಯರ ಕಷ್ಟ ಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಬೇಕು ಮತ್ತದು ನನ್ನ ಪ್ರಥಮ ಆದ್ಯತೆಯೂ ಹೌದು, ಆ ದಿಸೆಯಲ್ಲಿ ಜಿಲ್ಲೆಯ ಎಲ್ಲಾ ಪೊಲೀಸರಿಗೂ ನಿರ್ದೇಶನ ನೀಡಿದ್ದೇನೆ ಎಂದು ವಿಜಯಪುರ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ ಎಚ್.ಡಿ. ಹೇಳಿದರು. ಕೊಲ್ಹಾರ, ನಿಡಗುಂದಿ, ಆಲಮಟ್ಟಿ, ಕೂಡಗಿ, ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿ ಒಳಗೊಂಡ ನಿಡಗುಂದಿ ಆರಕ್ಷಕ ವೃತ್ತ ನಿರೀಕ್ಷಕರ (ಸಿಪಿಐ) ಕಚೇರಿ ಉದ್ಘಾಟಿಸಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಾಮಾನ್ಯ ಜನರು ನೆಮ್ಮದಿಯ ಜೀವನ ನಡೆಸುವುದಕ್ಕೆ…

1 84 85 86 87 88 122
Girl in a jacket