Girl in a jacket

Author kendhooli_editor

ಅಸ್ಸಾಂ,ಮಿಜೋರಾಂ ನಡುವೆ ಮತ್ತೆ ಬುಗಿಲೆದ್ದ ಗಡಿ ಸಂಘರ್ಷ

ಗುವಾಹಟಿ,ಜು,೨೭: ಅಸ್ಸಾಂ ಮತ್ತು ಮಿಜೋರಾಂ ನಡುವೆ ಮತ್ತೇ ಗಡಿ ಸಂಘರ್ಷ ಆರಂಭವಾಗಿದೆ.ಈ ಸಂಘರ್ಷಕ್ಕೆ ಐವರು ಪೊಲೀಸರು ಮೃತಪಟ್ಟಿದ್ದು ಐವತ್ತಕ್ಕೂ ಹೆಚ್ಚು ಜನರ ಗಾಯಗೊಂಡಿದ್ದಾರೆ. ಅಸ್ಸಾಂನ ವೈರೆಂಟ್ಗೆ ಪಟ್ಟಣದಲ್ಲಿ ಸೋಮವಾರ ಹಿಂಸಾಚಾರ ತಲೆದೋರಿದೆ. ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಗೃಹ ಸಚಿವ ಅಮಿತ್ ಶಾ ಅವರು ಸಭೆ ನಡೆಸಿದ ಎರಡೇ ದಿನಕ್ಕೆ ಈ ಸಂಘರ್ಷ ನಡೆದಿದೆ. ಲೈಲಾಪುರದಲ್ಲಿ ಮೀಸಲು ಅರಣ್ಯ ಪ್ರದೇಶವನ್ನು ನಾಶಪಡಿಸಿ ರಸ್ತೆ ನಿರ್ಮಿಸಲಾಗುತ್ತಿದೆ ಮತ್ತು ಸೇನಾ ಶಿಬಿರವೊಂದನ್ನು ಸ್ಥಾಪನೆ ಮಾಡಲಾಗುತ್ತಿದೆ ಎಂದು ಮಿಜೋರಾಂ ವಿರುದ್ಧ ಅಸ್ಸಾಂ…

ಹಾಕಿ `ಎ’ ಪಂದ್ಯದಲ್ಲಿ ಭಾರತಕ್ಕೆ ಜಯ

ಟೋಕಿಯೊ,ಜು,೨೭: ಇಲ್ಲಿನ ಒಲಿಂಪಿಕ್ಸ್‌ನಲ್ಲಿ ಭಾರತ ಮುನ್ನಡೆಗಳನ್ನು ಸಾಧಿಸುತ್ತಲೇ ಇದೆ ಎ ಗುಂಪಿನ ಹಾಕಿಯಲ್ಲಿ ಸ್ಪೇನ್ ವಿರುದ್ಧ ಭಾರತ ಜಯಗಳಿಸಿದೆ. ಭಾರತ ೩-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿದೆ. ರೂಪಿಂದರ್ ಪಾಲ್ ಸಿಂಗ್ ಮತ್ತು ಸಿಮ್ರಾಂಜಿತ್ ಸಿಂಗ್ ಅವರ ಅದ್ಭುತ ಪ್ರದರ್ಶನವೇ ಈ ಗೆಲುವಿಗೆ ಕಾರಣವಾಗಿದೆ. ಮಿಡ್ ಫೀಲ್ಡರ್ ಸಿಮ್ರಾಂಜಿತ್ ೧೩ನೇ ನಿಮಿಷದಲ್ಲಿ ಭಾರತದ ಖಾತೆ ತೆರೆದರು. ಬಳಿಕ ೧೫ನೇ ನಿಮಿಷದಲ್ಲಿ ರೂಪಿಂದರ್ ಪಾಲ್ ಸಿಂಗ್ ಪೆನಾಲ್ಟಿ ಸ್ಟ್ರೋಕ್ ಮೂಲಕ ಎರಡನೇ ಗೋಲು ಬಾರಿಸಿದರು. ೫೧ನೇ ನಿಮಿಷದಲ್ಲಿ ಮತ್ತೊಂದು…

ಕದ್ದು ಹೋಳಿಗೆ ಕೊಟ್ಟರೆ, ಬೆಲ್ಲ ಇಲ್ಲಂದ್ರಂತೆ

ಸಿದ್ಧಸೂಕ್ತಿ : ಕದ್ದು ಹೋಳಿಗೆ ಕೊಟ್ಟರೆ, ಬೆಲ್ಲ ಇಲ್ಲಂದ್ರಂತೆ! ಅತ್ತೆಗೆ ಹೆದರಿ ಸೊಸೆ ಗುಟ್ಟಲಿ ಹೋಳಿಗೆ ಮಾಡುತ್ತಿದ್ದಳು.ಬೆಲ್ಲದ ಕೊರತೆ! ಹೊರಗೆ ಮಕ್ಕಳಾಡುತ್ತಿದ್ದವು. ಬಾಯಾರಿ ಬಂದ ಮಗು ಹೋಳಿಗೆ ಕಂಡು ಬೇಡಿತು.ಯಾರಿಗೂ ಹೇಳಬೇಡವೆಂದು ಕೈಗಿತ್ತಳು!ತಿಂದು ಸುಮ್ಮನಿರಬೇಕಿತ್ತು. ಬೆಲ್ಲ ಹಾಕಿಲ್ಲವೆಂದು ಗುಟ್ಟಲಿ ಹೇಳಬಹುದಿತ್ತು.ತಿನ್ನುತ್ತ ಹೊರ ಓಡಿ ಹೋಳಿಗೆಗೆ ಬೆಲ್ಲ ಇಲ್ಲವೆಂದು ಕಿರುಚಿತು! ಗುಟ್ಟು ರಟ್ಟಾಯಿತು! ಗುಟ್ಟು ರಟ್ಟಾಗದೇ ಉಳಿಯುವುದು ಕಷ್ಟ.ಕೆಲವು ಗುಟ್ಟು ರಟ್ಟಾಗಬಾರದು. ಗುಟ್ಟು ತಿಳಿದವನು ಹೊಣೆಗೇಡಿಯಾಗಬಾರದು. ಕಂಡವರಿಗೆಲ್ಲ ಯಾರಿಗೂ ಹೇಳಬೇಡವೆನುತ ಗುಟ್ಟು ತಿಳಿಸಬಾರದು. ಖಾಸಗಿತನ ಸಾರ್ವಜನಿಕವಾಗಬಾರದು. ಗುಟ್ಟು…

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿ ಸದಾಶಿವ ಶೆಣೈ ಅಧಿಕಾರ ಸ್ವೀಕಾರ

ಬೆಂಗಳೂರು,ಜು,26:ಸರ್ಕಾರ ನೇಮಕ ಮಾಡಿರುವ ಕರ್ನಾಟಕ ಮಾಧ್ಯಮ ಅಕಾಡಮಿಗೆ ಅಧ್ಯಕ್ಷ ಸದಾಶಿವ ಶೆಣೈ ಅವರು ಅಧಿಕಾರ ಸ್ವೀಕರಿಸಿದರು. ಈ ವೇಳೆ ಸದಸ್ಯರಾದ ಕೆ.ಕೆ.ಮೂರ್ತಿ,ಕೆಯುಡಬ್ಲೂಜೆ ಅಧ್ಯಕ್ಷ ಶಿವಾನಂದ ತಗಡೂರು,ಶಿವಕುಮಾರ್ ಬೆಳ್ಳಿ ತಟ್ಟೆ ಹಾಜರಿದ್ದರು. ಇದೇ ವೇಳೆ ಹಾಜರಿದ್ದ ಅಕಾಡೆಮಿ ಮಾಜಿ ಅಧ್ಯಕ್ಷ ಪೊನ್ನಪ್ಪ ಅವರು, ಮುಂದಿನ ಸವಾಲುಗಳು ಹಾಗೂ ಮಾಡಬೇಕಾದ ಕಾರ್ಯಗಳ ಕುರಿತು ಸಲಹೆ ನೀಡಿದರು.

ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಬಿಎಸ್ವೈ ಘೋಷಣೆ

ಬೆಂಗಳೂರು, ಜು,26:ನಿರೀಕ್ಷೆಯಂತೆ ಯಡಿಯೂರಪ್ಪ ಅವರು ಹೈಕಮಾಂಡ್ ಗೆ ಕೊಟ್ಟ ಮಾತಿನಂತೆ ಇಂದು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ 2 ವವರ್ಷದ ಬಿಜೆಪಿ ಸಾಧಾನ ಸಮಾವೇಶದಲ್ಲೇ ಮುಖ್ಯಮಂತ್ರಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಕಾರ್ಯಕ್ರಮದ ಮುಕ್ತಾಯದ ಬಳಿಕ, ಊಟದ ನಂತ್ರ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುವುದಾಗಿ ಪಕ್ಷದ ಕಾರ್ಯಕ್ರಮದಲ್ಲೇ ಘೋಷಣೆ ಮಾಡಿದರು. ಶಿಕಾರಿಪುರದಲ್ಲಿ ಸಂಘದ ಕಾರ್ಯಕರ್ತನಾಗಿ ಜೀವನ ಆರಂಭಿಸಿದೆ. ಆರ್ ಎಸ್ ಎಸ್ ಪ್ರಚಾರಕನಾಗಿ ಕಾರ್ಯ ಆರಂಭವಾಯಿತು. ಕ್ರಮೇಣ ಶಿಕಾರಿಪುರಸಭೆಗೆ ನಿಂತು, ಗೆದ್ದಿದ್ದೇನೆ.…

ಇನ್ನೂ ಬದುಕಿನಿಂದ ಮಿಸ್ ಆದ ಜಯಂತಿ

ಬೆಂಗಳೂರು, ಜು,26: ಕನ್ನಡ ಚಿತ್ರರಂಗದ ಖ್ಯಾತ ನಟಿ ಅಭಿನವ ಶಾರದೆ ಜಯಂತಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 76 ವರ್ಷವಾಗಿತ್ತು. ಬಳ್ಳಾರಿ ಯಲ್ಲಿ ಜನಸಿದ್ದ ಅವರು ಜಗದೇಕ ವೀರ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದ ಅವರು ಜೇನುಗೂಡು ಚಿತ್ರದಲ್ಲಿ ನಾಯಕಿ ಪಾತ್ರಮಾಡುವ ಮೂಲಕ ಅದ್ಬುತ ನಟನೆಗೆ ಹಲವಾರು ಜನ ಮನಸೋತಿದ್ದರು.500 ಚಿತ್ರಗಳಲ್ಲಿ ನಟಿಸಿದ ಅವರು ಬಹುಭಾಷೆ ನಟಿ ಕೂಡ. ಜಯಂತಿ ಅವರು ಇಡೀ ದಕ್ಷಿಣ ಭಾರತದಲ್ಲೇ ಮೇರುನಟಿ ಎನಿಸಿಕೊಂಡಾಕೆ. ಜಯಂತಿ ಎಂದ ಕೂಡಲೇ…

ಎಡಬಿಡದೆ ಮಳೆಯಿಂದ ಡ್ಯಾಂಗಳಿಂದ ಹರಿಬಿಟ್ಟ ನೀರು,ಪ್ರವಾಹದ ಭೀತಿಯಲ್ಲಿ ಜನ

ಬೆಂಗಳೂರು,ಜು,26:ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಕಾರಣ ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಭಾರೀ ಮಳೆಗೆ ರಾಜ್ಯದಲ್ಲಿ ನದಿಗಳು ಪ್ರವಾಹ ಮಟ್ಟದಲ್ಲಿ ಹರಿಯುತ್ತಿದ್ದು, ಜನರಿಗೆ ಆತಂಕ ಮೂಡಿಸಿದೆ. ಬಹುತೇಕ ಡ್ಯಾಂಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ. ಇದರಿಂದ ನದಿಪಾತ್ರದ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಹಲವೆಡೆ ಮನೆಗಳು ಕುಸಿದಿವೆ. ಇನ್ನೂ ಕೆಲವೆಡೆ ಸೇತುವೆಗಳು ಮುಳುಗಡೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಬೆಳೆಗಳು ನಾಶವಾಗಿವೆ. ಭಾರೀ…

ಎಲ್ಲ ಬರಿ ಗೊಣಗಾಟ

‌‌‌‌                     ಸಿದ್ಧಸೂಕ್ತಿ : ಎಲ್ಲ ಬರಿ ಗೊಣಗಾಟ. ಬಾಳು ದುಸ್ತರ ಕಠಿಣ. ಹೊರಗೆ ಝಗ ಝಗ, ಒಳಗೆ ಚಿಂತೆಯ ತಳಮಳ! ಆನೆಯ ಭಾರ ಆನೆಗೆ. ಇರುವೆಯ ಭಾರ ಇರುವೆಗೆ! ಎಂತಾದರೂ ಚಿಂತೆ ಬಿಡದು. ನಿಶ್ಚಿಂತರಾದವರ ನಾನೊಬ್ಬರನು ಕಾಣೆ. ಜೀವನದುದ್ದಕ್ಕೂ ಅದಿಲ್ಲ, ಇದಿಲ್ಲವೆಂಬ ಗೊಣಗಾಟ! ಅದನ್ನು ಮಾಡಬೇಕು ಆಗುತ್ತಿಲ್ಲ, ಇದನ್ನು ಮಾಡಬೇಕು ಆಗುತ್ತಿಲ್ಲ, ಮಗ ಐಎಎಸ್ ಅಧಿಕಾರಿ ಆಗಬೇಕೆಂಬಾಶೆ, ಮಗನಿಗೆ ಒಲವಿಲ್ಲ! ಮಗಳನ್ನು ಡಾಕ್ಟರ್…

ಮುಂದೂಡಿದ್ದ ಐಪಿಎಲ್ ಪಂದ್ಯದ ಪಟ್ಟಿ ಪ್ರಕಟ

ನವದೆಹಲಿ,ಜು,25: ಕೋವಿಡ್ 19 ಕಾರಣದಿಂದ ಮುಂದೂಡಲ್ಪಟ್ಟಿರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ ಸೆಪ್ಟೆಂಬರ್​ 19ರಿಂದ ಚೆನ್ನೈ ಸೂಪರ್​ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್​ ನಡುವೆ ಪುನರಾರಂಭಗೊಳ್ಳಲಿದೆ.​ ಯುನೈಟೆಡ್ ಅರಬ್​ ಎಮಿರೇಟ್ಸ್​ನಲ್ಲಿ ಐಪಿಎಲ್​ನ ದ್ವಿತಿಯಾರ್ಧದ ಪಂದ್ಯಗಳನ್ನು ನಡೆಸಲು ಬಿಸಿಸಿಐ ಅವಿರತವಾಗಿ ಶ್ರಮಿಸುತ್ತಿದೆ. ಸೆಪ್ಟೆಂಬರ್​ 19ರಿಂದ ಪುನಾರಂಭಗೊಂಡರೆ ಅಕ್ಟೋಬರ್​ 10ರಂದು ಎಲಿಮಿನೇಟರ್​ ನಡೆಯುತ್ತೆ. ಕ್ವಾಲಿಫೈಯರ್ 1 ಮತ್ತು 2 ಕ್ರಮವಾಗಿ ಅಕ್ಟೋಬರ್​ 11 ಮತ್ತು 12ರಂದು ನಿಗದಿಯಾಗಿದೆ. ಅಕ್ಟೋಬರ್​ 15ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಕುರಿತು ಎಎನ್​ಐ…

ಬಾಕಿ ಪರಿಹಾರ ಬಿಡುಗಡೆಗೆ ಬಿ.ಎಸ್.ವೈ ಸೂಚನೆ

ಬೆಳಗಾವಿ, ಜು.25: ರಾಜ್ಯದಲ್ಲಿ ಕೋವಿಡ್ ಸಂಕಷ್ಟದ ಮಧ್ಯೆಯೂ ಪ್ರವಾಹ ಸ್ಥಿತಿ ಉದ್ಭವಿಸಿದೆ.‌ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತಗಳು ಸಂವೇದನಾಶೀಲತೆಯಿಂದ ಕೆಲಸ ಮಾಡಬೇಕು. ಹಣಕಾಸು ಸೇರಿದಂತೆ ಯಾವುದೇ ತೊಂದರೆ ಇದ್ದರೂ ತಕ್ಷಣವೇ ಸಂಬಂಧಿಸಿದವರ ಗಮನಕ್ಕೆ ತಂದು ಸರಿಪಡಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಸೂಚನೆ ನೀಡಿದರು. ನಗರದ ಪ್ರವಾಸಿಮಂದಿರದಲ್ಲಿ ನಡೆದ ಅತಿವೃಷ್ಟಿ,ಪ್ರವಾಹ ಕುರಿತ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ವಾರದಿಂದ ದಾಖಲೆ ಪ್ರಮಾಣದ ಮಳೆಯಾಗಿದೆ. ರಾಜ್ಯದ ಅಧಿಕಾರಿಗಳು ಮಹಾರಾಷ್ಟ್ರದ ಜತೆ…

ನಿಂತ ನೀರಲ್ಲಿ ಗೀತೆಗಳ ಗುನು ಗುನು ಸದ್ದು

ಡಾ.ಶಿವಕುಮಾರ್ ಕಂಪ್ಲಿ ಪ್ರಾಧ್ಯಾಪಕರು. ದಾವಣಗೆರೆ ವಿಶ್ವವಿದ್ಯಾಲಯ ನಿಂತ ನೀರಲ್ಲಿ ಗೀತೆಗಳ ಗುನು ಗುನು ಸದ್ದು ಕವಿ ಕಥನಗಳು ಅಂತರಂಗ ಮತ್ತು ಬಹಿರಂಗದ ಕಾಲ,ಸಮಾಜ,ಧರ್ಮ ಮತ್ತು ರಾಜಕಾರಣಗಳ ನಾನಾ ಮುಖಗಳನ್ನ ತಮ್ಮ ತಮ್ಮ ಆವರಣಗಳಿಂದ ಬಿಡಿಸಿ ಹೇಳುತ್ತವೆ. ಭಿನ್ನ ಭಾಷೆಯ ಕವಿ ಕಥನಗಳು ನಮ್ಮ ಪರಿಸರಕ್ಕಿಂತಲೂ ಭಿನ್ನ ಅನುಭವಲೋಕವನ್ನ ,ಸನ್ನಿವೇಶ, ಸಮುದಾಯಗಳ ಸಾಂಸ್ಕೃತಿಕ ನಡೆಗಳನ್ನ ಒಡೆದು ತೋರುತ್ತವೆ.ಈ ನೆಲೆಯಲ್ಲಿ ಭಿನ್ನ ಭಾಷಿಕ ಬರಹಗಳು ಜಡತ್ವವನ್ನ ನೀಗಿಸಬಲ್ಲವು.ನಮ್ಮ ಬರಹಗಳಿಗೆ ಬಹುಮುಖಿ ರೂಪಗಳನ್ನ ಕಾಣಿಸಬಲ್ಲವು. ತಮ್ಮ ತಾಜಾಸೊಗಡಿನಿಂದ ವಿಸ್ಮಯ ಮತ್ತು ಕುತೂಹಲ…

ನಾನು ಸಂತೃಪ್ತಿಯಿಂದಿದ್ದೇನೆ;ಹೈಕಮಾಂಡ್ ನಿರ್ಧಾರಕ್ಕೂ ಬದ್ಧ-ಬಿಎಸ್‌ವೈ

ಬೆಳಗಾವಿ,ಜು,೨೫: ನನಗೆ ಯಾರಿಗೂ ಸಿಗದ ಸ್ತಾನ-ಮಾನ ಸಿಕ್ಕಿದೆ,ಹೀಗಾಗಿ ನಾನು ಸಂತೃಪ್ತಿಯಿಂದ ಸಮಾಧಾನದಿಂದ ಇದ್ದೇನೆ ಹೈಕಮಾಂಡ್ ಯಾವುದೇನಿರ್ಧಾರ ಕೈಗೊಂಡರು ಅದನ್ನು ಗೌರವಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಪಕ್ಷದಲ್ಲಿ ನಾವು ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ಸಿದ್ದರಾಮಯ್ಯರಂತಹ ನೂರು ಮಂದಿ ಬಂದರೂ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು ನಾಯಕ ಸಿ.ಟಿ.ರವಿ ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯವಾದದ್ದು. ನಾನು ಹೈಕಮಾಂಡ್ ಹೇಳಿದ ಗೆರೆಯನ್ನೂ ದಾಟುವುದಿಲ್ಲ ಎಂದು ಸಹ ಅವರು ಸ್ಪಷ್ಟಪಡಿಸಿದರು.…

‘ಅದೊಂದಿತ್ತು ಕಾಲ’ದಲ್ಲಿ ನಿರ್ದೇಶಕನಾದ ವಿನಯ್

‘ಅದೊಂದಿತ್ತು ಕಾಲ ಚಿತ್ರದಲ್ಲಿ ವಿನಯ್‌ರಾಜ್‌ಕುಮಾರ್ ನಿರ್ದೇಶಕನ ಪಾತ್ರ ಮಾಡಲಿದ್ದಾರೆ. ನಿರ್ದೇಶಕ ಕತೆ ಹೊಂದಿರುವ ಈ ಚಿತ್ರ ಅವರ ಕಷ್ಟ-ನಷ್ಟಗಳ ಕುರಿತ ಎಳೆ ಈ ಚಿತ್ರದಲ್ಲಿದೆ. ಕೊವಿಡ್ ಕಾರಣದಿಂದ ಶೂಟಿಂಗ್ ನಿಂತಿದ್ದವು. ಈಗ ಮತ್ತೆ ಚಿತ್ರೀಕರಣ ಆರಂಭವಾಗಿದೆ. ಈ ಚಿತ್ರದಲ್ಲಿ ಅವರು ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಓರ್ವ ನಿರ್ದೇಶಕನ ಜೀವನವನ್ನು ಈ ಸಿನಿಮಾ ಹೇಳಲಿದೆ. ಈ ಸಿನಿಮಾ ಬಗ್ಗೆ ವಿನಯ್ ರಾಜ್‌ಕುಮಾರ್ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಕೊವಿಡ್ ಕಾರಣದಿಂದ ಈ ಸಿನಿಮಾ ಕೆಲಸಗಳು ನಿಂತಿದ್ದವು. ಈಗ ಮತ್ತೆ ಶೂಟಿಂಗ್…

ಪ್ರಿ-ಕ್ವಾರ್ಟರ್‌ಗೆ ಮೇರಿ ಕೋಮ್

ಟೋಕಿಯೊ,ಜು,೨೫:ಮೇರಿ ಕೋಮ್ಸ್ ಇಲ್ಲಿನ ಒಲಿಂಪಿಕ್ಸ್ ಮಹಿಳಾ ಬಾಕ್ಸಿಂಗ್‌ನಲ್ಲಿ ಪ್ರೀ-ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಮೇರಿ ಕೋಮ್ ಆರು ಬಾರಿ ವಿಶ್ವ ಚಾಂಪಿಯನ್ ಆಗಿದ್ದು ಈ ಬಾರಿ ಫೈನಲ್‌ನಲ್ಲಿ ಗೆದ್ದರೆ ಆರನೇ ಬಾರಿ ಫೈನಲ್ಲನಲ್ಲಿ ಗೆಲುವು ಸಾಧಿಸುವ ಮೂಲಕ ದಾಖಲೆ ಬರೆಯುವ ಸಾಧ್ಯತೆಗಳಿವೆ. ಭಾನುವಾರ ನಡೆದ ಮಹಿಳೆಯರ ೫೧ ಕೆ.ಜಿ ವಿಭಾಗದಲ್ಲಿ ನಡೆದ ರೌಂಡ್ ೩೨ರ ಹಂತದ ಪಂದ್ಯದಲ್ಲಿ ಮೇರಿ ಕೋಮ್ ಅವರು ಡೊಮಿನಿಕಾದ ಮಿಗುಲಿನಾ ಹೆರ್ನಾಂಡೆಜ್ ವಿರುದ್ಧ ಗೆಲುವು ದಾಖಲಿಸಿ ಮಿಂಚಿದರು ೨೦೧೨ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ…

ಯಾರಿಗೆ‘ ಲಗಾಮ್ ಹಾಕಲಿದ್ದಾರೆ ಉಪೇಂದ್ರ

ಹಲವು ಯಶಸ್ವಿ ಚಿತ್ರ ನೀಡಿರುವ ನಿರ್ದೇಶಕ ಮಾದೇಶ್,ಇದೇ ಮೊದಲ ಬಾರಿಗೆ ನಟ ಉಪೇಂದ್ರ ಅವರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಂದ ಹಾಗೆ ‘ಲಗಾಮ್ ಎನ್ನುವ ಸಾಮಾಜಿಕ ಕಳಕಳಿಯ ಕಥಾ ಹಂದರವಿರುವ ಈ ಚಿತ್ರ . ಚಿತ್ರದಲ್ಲಿ ನಾಯಕ ಯಾರಿಗೆ,ಯಾವ ಕಾರಣಕ್ಕೆ ಲಗಾಮ್ ಹಾಕುತ್ತಾನೆ ಎನ್ನುವುದು ಒಂದು ಎಳೆಯ ಕಥಾಹಂದರವಿದೆ. ಚಿತ್ರದಲ್ಲಿ ಉಪೇಂದ್ರ ಅವರ ಜೋಡಿಯಾಗಿ ನಟಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಬ್ಬರ ಅಭಿಮಾನಿಗಳು ಚಿತ್ರ ವೀಕ್ಷಣೆಗೆ ಕುತೂಹಲ ಹೆಚ್ಚುವಂತೆ…

ಈಗ ಡೆಡ್ಲಿ ಭಾಗ ೩

ರವಿ ಶ್ರೀವಾತ್ಸವ ನೇತೃತ್ವದಲ್ಲಿ ತೆರೆಗೆ ಬಂದಿದ್ದ ಡೆಡ್ಲಿ ಸೋಮ,ಮತ್ತು ಡೆಡ್ಲಿ-೨ ಚಿತ್ರದ ಬಳಿಕ ಈಗ “ಡೆಡ್ಲಿ-೩ ” ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ಸಾಗಿದೆ. ಡೆಡ್ಲಿ-೩ ಚಿತ್ರಕ್ಕೆ ಹೊಸ ನಿರ್ಮಾಪಕರು ಮತ್ತು ನಾಯಕ ನಟನ ಪ್ರವೇಶವಾಗಿದೆ. ಉಳಿದಂತೆ ಹಿಂದಿನ ಚಿತ್ರಗಳಲ್ಲಿ ಇದ್ದ ಕೆಲ ಕಲಾವಿದರು ” ಡೆಡ್ಲಿ-೩ “ಚಿತ್ರದಲ್ಲಿ ಮುಂದುವರೆಯಲಿದ್ದಾರೆ. ನಿರ್ಮಾಪಕ ಶೋಭಾ ರಾಜಣ್ಣ ಬಂಡವಾಳ ಹಾಕಿ ಪುತ್ರ ದೀಕ್ಷಿತ್ ನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವ “ಎಂ.ಆರ್ ” ಚಿತ್ರ ಕೈಗೆತ್ತಿಕೊಂಡಿದ್ದ ನಿರ್ದೇಶಕ ರವಿ ಶ್ರೀವಾಸ್ತವ ಅದನ್ನು ಅಲ್ಲಿಗೆ ಬಿಟ್ಟು…

ಸಿಎಂ ಬಿಎಸ್‌ವೈ ಬದಲಾಯಿಸದಂತೆ ಸ್ವಾಮೀಜಿಗಳ ನಿರ್ಣಯ

ಬೆಂಗಳೂರು,ಜು.೨೫ :ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಿಸಬಾರದು ಅವರನ್ನೇ ಮುಂದುವರೆಸಬೇಕು ಎಂಬ ಒಕ್ಕೊರಲಿನ ನಿರ್ಣಯವನ್ನು ಇಂದು ರಾಜ್ಯ ವಿವಿಧ ಮಠಾಧೀಶರು ಏರ್ಪಡಿಸಿದ್ದ ಮಹಾ ಸಮಾವೇಶದಲ್ಲಿ ತಗೆದುಕೊಂಡರು. ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಿಸಬಾರದು ಒಂದು ವೇಳೆ ಅವರನ್ನು ಬದಲಿಸಿದರೆ ಮುಂದೆ ದೊಡ್ಡ ಅನಾಹುತವೇ ಬಿಜೆಪಿಗೆ ಕಾದಿದೆ ಎನ್ನುವ ಸಂದೇಶವನ್ನು ಹೈಕಮಾಂಡ್‌ಗೆ ಸ್ವಾಮೀಜಿಗಳು ರವಾನಿಸಿದರು. ಈ ಸಮಾವೇಶ ಬಾಲೆಹೊಸೂರಿನ ಮಠದ ದಿಂಗಾಲೇಶ್ವರ ಸ್ವಾಮೀಜಿ ಮತ್ತು ಷಡಾಕ್ಷರಿ ಮಠದ ರುದ್ರಮುನಿ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದಿದ್ದು,…

ನಿರಾಣಿ ದಿಡೀರ್ ದೆಹಲಿ ಬೇಟಿಗೆ ಹುಟ್ಟಿದ ಕುತೂಹಲ

ಬೆಂಗಳೂರು,ಜು,೨೫: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇನ್ನೇನು ಅಧಿಕಾರ ಪದತ್ಯಾಗ ಮಾಡುತ್ತಾರೆ ಎನ್ನುವ ಮಾತುಗಳು ಕೇಳುತ್ತಿರುವ ಬೆನ್ನಲ್ಲೆ ದಿಡೀರ್ ಸಚಿವ ಮುರುಗೇಶ್ ನಿರಾಣಿ ದೆಹಲಿಗೆ ಪ್ರಯಾಣ ಮಾಡಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಮೂಲಕ ಬಿ.ಎಸ್ ಯಡಿಯೂರಪ್ಪ ನಿರ್ಗಮನದ ಬೆನ್ನಲ್ಲೇ ದೆಹಲಿ ಭೇಟಿ ತೀವ್ರ ಕುತೂಹಲ ಹುಟ್ಟಿಸಿದೆ. ಅಲ್ಲದೆ ಇನ್ನೊಂದೆಡೆ ಹೈಕಮಾಂಡ್ ಬುಲಾವ್ ಕೊಟ್ಟಿದೆಯಾ? ಅಥವಾ ಸ್ವಯಂ ದೆಹಲಿಗೆ ಹೊರಟ್ರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇತ್ತ ಇಂದು ದೆಹಲಿಗೆ ಬಂದರೂ ರಾಷ್ಟ್ರೀಯ ನಾಯಕರ ಭೇಟಿ ಅನುಮಾನವಿದೆ. ಯಾಕಂದರೆ ರಾಷ್ಟ್ರೀಯ…

ವಿಶ್ವ ಕುಸ್ತಿಯಲ್ಲಿ ಚಿನ್ನದ ಪದಕ ಪಡೆದ‌‌.ಪ್ರಿಯಾ ಮಲಿಕ್

ಹಂಗೇರಿ,ಜು,25: ಟೋಕಿಯೋ ದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನನಲ್ಲಿ,ಭಾರತದ ಕುಸ್ತಿ ಪಟು ಪ್ರಿಯಾ ಮಲಿಕ್ ಅವರು ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಹಂಗೇರಿಯ ಬುಡಾಪೆಸ್ಟ್ ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನ 73 ಕೆಜಿ ವಿಭಾಗದಲ್ಲಿ ಪ್ರಿಯಾ ಮಲಿಕ್ ಬೆಲಾರಸ್ ನ ಕುಸ್ತಿಪಟುವನ್ನು 5-0 ಅಂತರದಲ್ಲಿ ಸೋಲಿಸುವ ಮೂಲಕ ಈ ಸಾಧನೆ ಮಾಡಿದ್ದು ಪ್ರಿಯಾ ಮಲ್ಲಿಕ್ ಅವರ ಈ ಸಾಧನೆಗೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ಇನ್ನು ಟೋಕಿಯೋ ಒಲಿಂಪಿಕ್ಸ್ ನಲ್ಲಿ…

ಸಂಜೆ ಸಂದೇಶ ಬರಲಿದೆ,ಮೋದಿ,ಶಾ,ನಡ್ಡಾ ಮೇಲೆ ವಿಶ್ವಾಸವಿದೆ-ಸಿಎಂ

ಬೆಳಗಾವಿ,ಜು,೨೫: ಹೈಕಮಾಂಡ್‌ನಿಂದ ಸಂಜೆಯ ವೇಳೆಗೆ ಸಂದೇಶ ಬರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ಹೆಚ್ಚು ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿದ ಸಿಎಂ, ಮಾಧ್ಯಮದವರೊಂದಿಗೆ ಮಾತನಾಡಿ, ಸಂಜೆಯ ವೇಳೆಗೆ ಹೈಕಮಾಂಡ್ ಅವರ ನಿರ್ಧಾರವನ್ನು ಕಳುಹಿಸುತ್ತಾರೆ. ಯಾರು ಮುಂದಿನ ಮುಖ್ಯಮಂತ್ರಿ ಎನ್ನುವುದು ಆಗ ತಿಳಿಯಲಿದೆ. ಯವುದೇ ಸ್ವಾಮಿಜಿಗಳು ಸಭೆ, ಸಮಾವೇಶ ಮಾಡುವ ಅಗತ್ಯವಿಲ್ಲ. ನನಗೆ ಮೋದಿ, ಅಮಿತ್ ಶಾ ಅವರ ಕುರಿತಾಗಿ ವಿಶ್ವಾಸವಿದೆ ಎಂದಿದ್ದಾರೆ. ಎರಡು ವರ್ಷಗಳ ಕೆಲಸ ತೃಪ್ತಿ ತಂದಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ,…

1 86 87 88 89 90 122
Girl in a jacket