ಸಾದಕರಿಗೆ ಗೊರೂಚ ದತ್ತಿ ನಿದಿ ಪ್ರಶಸ್ತಿ ಪ್ರದಾನ
ಮೈಸೂರು,ಆ,04: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಕೊಡ ಮಾಡುವ ‘ಗೊರುಚ ದತ್ತಿನಿಧಿ’ ಪ್ರಶಸ್ತಿಯನ್ನು ಎಂಟು ಸಾಧಕರಿಗೆ, ನಗರದ ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. 2019 ಹಾಗೂ 2020ನೇ ಸಾಲಿನ ‘ಗೊರುಚ ಶರಣ ಪ್ರಶಸ್ತಿ’ಯನ್ನು ಕ್ರಮವಾಗಿ ಡಾ.ಸಿ.ವೀರಣ್ಣ, ಡಾ.ಬಸವರಾಜ ಸಾದರ, ‘ಗೊರುಚ ಜಾನಪದ ಪ್ರಶಸ್ತಿ’ಯನ್ನು ಡಾ.ಬಿ.ಎಸ್.ಸ್ವಾಮಿ, ಡಾ.ಎಚ್.ಟಿ.ಪೋತೆ, ‘ಗೊರುಚ ಶರಣ ಸಾಹಿತ್ಯ ಗ್ರಂಥ ಪ್ರಶಸ್ತಿ’ಯನ್ನು ಪ್ರೊ.ಬಿ.ಆರ್.ಪೊಲೀಸ ಪಾಟೀಲ, ಡಾ.ಬಸವರಾಜ ಸಬರದ, ‘ಗೊರುಚ ಜಾನಪದ ಸಾಹಿತ್ಯ ಗ್ರಂಥ ಪ್ರಶಸ್ತಿ’ಯನ್ನು…