Girl in a jacket

Author kendhooli_editor

ಗ್ರಾಮೀಣ ಪ್ರದೇಶದಲ್ಲಿನ ನಾಟ್ಯಕಲಾ ಸಂಘಗಳ ಬವಣೆ

ಗ್ರಾಮೀಣ ಪ್ರದೇಶದಲ್ಲಿನ ನಾಟ್ಯಕಲಾ ಸಂಘಗಳ ಬವಣೆ ನಾನು ಹೈಸ್ಕೂಲಿನ ಮೊದಲನೇ ವರ್ಷದಲ್ಲಿದಾಗ ನಮ್ಮೂರಿಗೆ ಆಗಮಿಸಿದ ಉತ್ತರಕರ್ನಾಟಕ ಮೂಲದ ಸಂಗಮೇಶ್ವರ ನಾಟ್ಯ ಕಲಾಸಂಘವು ಬಯಲುಸೀಮೆಯ ಬರಡುಭೂಮಿಗೆ ಕಲಾಗಂಗೆಯನ್ನು ಹರಿಸಿದ ಭಗೀರಥಸ್ವರೂಪದ ಉಜ್ವಲಪ್ರಯತ್ನಕ್ಕೆ ಪ್ರೇರಕರೂಪಿಯಾಗಿತ್ತು. ಆ ಹೊತ್ತು ಕಲೆಯ ವಿಷಯದಲ್ಲಿ ನಮ್ಮೂರು ಬಡತನದಿಂದ ಬಳಲುತ್ತಿತ್ತು ಎಂದೇ ಹೇಳಬೇಕು. ಆರ್ಥಿಕವಾಗಿ ಸಬಲವಲ್ಲದ ಊರೊಂದು ಸಾಂಸ್ಕೃತಿಕವಾಗಿ ಶ್ರೀಮಂತ ಎಂದು ಕರೆಸಿಕೊಳ್ಳುವ ಸಾಧ್ಯತೆಗಳು ತೀರಾ ಕಡಿಮೆ ಎಂದೇ ನಾನು ಭಾವಿಸುತ್ತೇನೆ. ಹೊಟ್ಟೆ ತುಂಬಾ ಉಂಡು, ಮೈತುಂಬಾ ಬಟ್ಟೆ ಹೊದ್ದುಕೊಂಡ ತರುವಾಯವೆ ಮನುಷ್ಯಜೀವ ಕಲೆಯ ನೆಲೆಯೊಂದನ್ನು…

ನಿರುದ್ಯೋಗ ಸಮಸ್ಯೆಗೆ ಮನೋಸ್ಥಿತಿಯೂ ಕಾರಣ!

ಚಿದಂಬರ ಜೋಶಿ,ಚಿಕಾಗೂ. ಚಿದಂಬರ ಜೋಶಿ ಅವರು ಮೂಲತಃ ರಾಯಚೂರು ಜಿಲ್ಲೆಯ, ಗಂಗಾವತಿಯವರು. ಪ್ರಸ್ತುತ ಅನಿವಾಸಿ ಭಾರತೀಯ. ಕಳೆದ ೩ ದಶಕಗಳಿಂದ ಉತ್ತರ ಅಮೆರಿಕಾದ ಚಿಕಾಗೊದಲ್ಲಿ ನೆಲಿಸಿದ್ದಾರೆ. ಅವರ ಕನ್ನಡ ಪ್ರೇಮ ಇವತ್ತಿಗೂ ಮಾಸಿಲ್ಲ. ಅವರ ವಿಶಿಷ್ಟ ಚಿಂತನೆ ಹಾಗೂ ಬರವಣಿಗೆಯ ಶೈಲಿ, ಓದುಗರ, ಕೇಳುಗರ ವಿಚಾರಶಕ್ತಿಯನ್ನು ಪ್ರಚೋದಿಸುತ್ತವೆ, ಸವಾಲು ಒಡ್ಡುತ್ತವೆ.  ಅವರು ನಿರುದ್ಯೋಗ ಸಮಸ್ಯೆ ಕುರಿತು ಬರೆದಿದ್ದಾರೆ ನಿರುದ್ಯೋಗ ಸಮಸ್ಯೆಗೆ ಮನೋಸ್ಥಿತಿಯೂ ಕಾರಣ.! ಈ ದಿನ ನಾನು, ಭಾರತದಲ್ಲಿ ಬೆಳೆಯುತ್ತಿರುವ ಒಂದು ಅಗಾಧ ಸಮಸ್ಯೆ, ಒಂದು…

ಮನೋರಂಜನೆಯ ಜಿಗಿತಗಳ ಹಿಂದೆ..

ಮನೋರಂಜನೆಯ ಜಿಗಿತಗಳ ಹಿಂದೆ.. ಹಿಂದೆ ಬಯಲೆಂಬೋ ಪಾಠಶಾಲೆಯಂತಿದ್ದ ಹಳ್ಳಿಗಳ ಬಯಲಾಟಗಳು ಹಬ್ಬ ಬಂದಾಗ ಊರ ಎದೆಯ ಭಾಗದಲ್ಲಿ ಎಲ್ಲರಿಗೂ ಮೊದಲೆಂಬಂತೆ ಚಾಪೆಹಾಸಿ ಜಾಗ ಗೊತ್ತುಮಾಡಿಕೊಂಡು ಸಂಭ್ರಮ ಹಂಚಿಕೊಳ್ಳುತ್ತಿದ್ದ ನಮಗೆ ಮೆಲ್ಲಗೆ ಜಾತ್ರೆಗಳಲ್ಲಿ ಸಾಮಾಜಿಕ ನಾಟಕಗಳೆಂಬ ಕಂಪನಿ ಟೆಂಟುಗಳು ಮನೋರಂಜನೆಯ ಮೂಲವಾಗತೊಡಗಿದವು.ಅಭಿನಯದ ದೃಷ್ಟಿಯಲ್ಲಿ ಬಯಲಾಟದ ನಟರು ಮಾಡುತಿದ್ದ ಮೋಡಿ ಯಾಕೋ ಏನೋ ಹಳ್ಳಿ ಒಳಗಿನ ಸಾಮಾಜಿಕ ನಾಟಕಗಳ ನಟರು ಮಾಡುತ್ತಿರಲಿಲ್ಲ.ಈ ನಾಟಕಗಳ ನಟರು ಉಡುಪಿಗೆ,ಮೇಕಪ್ಪಿಗೆ,ಸೆಟ್ ಗೆ ಮಹತ್ವ ನೀಡಿದಷ್ಟು ನಟನೆಯ ವೈವಿಧ್ಯಕ್ಕೆ ಮಹತ್ವ ನೀಡುತ್ತಿರಲಿಲ್ಲ.ಕೆಲವು ನಾಟಕಗಳ ನಟರಂತೂ ದೂರದ…

ಜೆಡಿಎಸ್: ಸೋತ ಪ್ರಯೋಗ

ಪಶ್ಚಿಮ ಬಂಗಾಳದಲ್ಲಿ ಪ್ರಾದೇಶಿಕ ಪಕ್ಷ ತೃಣಮೂಲ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿರುವ ಮುಸ್ಲಿಂ ಸಮುದಾಯ ಕರ್ನಾಟಕದಲ್ಲಿ ಜೆಡಿಎಸ್ ಜೊತೆ ನಿಂತೀತೆಂಬ ಮಾಜಿ ಸಿಎಂ ಕುಮಾರಸ್ವಾಮಿಯವರ ಲೆಕ್ಕಾಚಾರ ಸಿಂದಗಿ, ಹಾನಗಲ್ ಉಪ ಚುನಾವಣೆಯಲ್ಲಿ ತಲೆಕೆಳಗಾಗಿದೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ಸಿಗರನ್ನೂ, ಕಮ್ಯೂನಿಸ್ಟರನ್ನೂ ಅಪ್ರಸ್ತುತರನ್ನಾಗಿಸಿರುವ ಮಮತಾ ಬ್ಯಾನರ್ಜಿ, ಬಂಡೆಗಲ್ಲಿನಂತೆ ನಿಶ್ಚಲರಾಗಿದ್ದಾರೆ. ಇಲ್ಲಿ ಆ ಪ್ರಯೋಗ ಅಷ್ಟೆಲ್ಲ ಸುಲಭದ ಕಾರ್ಯವಲ್ಲ. ಜೆಡಿಎಸ್: ಸೋತ ಪ್ರಯೋಗ ಕಲಿಯುವ ಮನಸ್ಸುಳ್ಳವರಿಗೆ ಕಲಿಯಬಹುದಾದ ಪಾಠ, ಸಿಂದಗಿ ಮತ್ತು ಹಾನಗಲ್ ಉಪಚುನಾವಣಾ ಫಲಿತಾಂಶದಲ್ಲಿದೆ. ಈ ಎರಡು ಕ್ಷೇತ್ರದ ಜಯವಾಗಲೀ ಅಪಜಯವಾಗಲೀ ರಾಜ್ಯ…

ಪ್ರಾಚೀನ ಸಂಸ್ಕೃತಿಯ ಬಹುದೊಡ್ಡ ಎಡೆ ಜಟಂಗಿರಾಮೇಶ್ವರ ಬೆಟ್ಟ

ಪ್ರಾಚೀನ ಸಂಸ್ಕೃತಿಯ ಬಹುದೊಡ್ಡ ಎಡೆ ಜಟಂಗಿರಾಮೇಶ್ವರ ಬೆಟ್ಟ ಜಟಂಗಿ ಅಥವಾ ಜಟಂಗಿರಾಮೇಶ್ವರ ಬೆಟ್ಟವು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಅತಿ ಎತ್ತರದ ಶಿಖರ. ಇಲ್ಲಿನ ಬೆಟ್ಟಗಳನ್ನು ಚಿಕ್ಕ ಮತ್ತು ದೊಡ್ಡ ಜಟಂಗಿ ಬೆಟ್ಟಗಳೆಂದು ಕರೆಯುತ್ತಾರೆ. ಚಿಕ್ಕ ಬೆಟ್ಟದ ಮೇಲೆ ಚಾರಿತ್ರಿಕ ಕುರುಹುಗಳಾದ ಅಶೋಕನ ಬಂಡೆಗಲ್ಲು ಶಾಸನ, ಶಿಲಾಶಾಸನ, ವೀರಗಲ್ಲು, ರಾಮೇಶ್ವರ ಮತ್ತಿತರ ಅನೇಕ ಪ್ರಾಚೀನ ದೇವಾಲಯಗಳಿದ್ದರೆ, ದೊಡ್ಡ ಬೆಟ್ಟದ ಮೇಲೆ ಕಾಶೀಪುರಾದಿsಶ್ವರ ದೇಗುಲ, ಜಟಾಯುವಿನ ಸಮಾಧಿ, ವರ್ಣಚಿತ್ರ ಮತ್ತು ಶಾಸನಗಳಿವೆ. ಜಟಂಗಿ ಬೆಟ್ಟಕ್ಕೆ ಅಲ್ಲಿನ ದೇವಾಲಯದ ಹಿನ್ನೆಲೆಯಲ್ಲಿ…

ನ.೧೬ ರಂದು ಬೆಂಗಳೂರಿನಲ್ಲಿ ‘ಪುನೀತ್ ನಮನ’ ಕಾರ್ಯಕ್ರಮ.

ಬೆಂಗಳೂರು,ನ, ೩: ಅಕಾಲಿಕ ಮರಣಕ್ಕೆ ತುತ್ತಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಲು ಕನ್ನಡ ಚಿತ್ರೋದ್ಯಮ ನವೆಂಬರ್ ೧೬ ರಂದು ‘ಪುನೀತ್ ನಮನ’ ಕಾರ್ಯಕ್ರಮವನ್ನು ಆಯೋಜಿಸಿದೆ. ಸ್ಯಾಂಡಲ್ ವುಡ್ ವತಿಯಿಂದ ನವೆಂಬರ್ ೧೬ ರಂದು ೩ ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ್ ನಮನ ಕಾರ್ಯಕ್ರಮ ನಡೆಯಲಿದ್ದು, ಅಂದು ಸ್ಯಾಂಡಲ್ ವುಡ್ ನಟರು, ಕಲಾವಿದರು, ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ನಟ ಅಪ್ಪು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಆದರೆ ಈಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಅವಕಾಶವಿಲ್ಲ ಕೇವಲ…

ಸೋಲು-ಗೆಲುವು ಸಮವಾಗಿ ಸ್ವೀಕರಿಸುವೇ-ಬೊಮ್ಮಾಯಿ

ಬೆಂಗಳೂರು, ನ, ೦೩: “ಯಾವುದೇ ಸಂದರ್ಭದಲ್ಲಿ ಸೋಲು ಮತ್ತು ಗೆಲುವನ್ನು ಸಮವಾಗಿ ಸ್ವೀಕರಿಸುವ ದೃಷ್ಟಿಕೋನ ನಮ್ಮದು,” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ವ್ಯಾಖ್ಯಾನವಾಗುತ್ತಿದೆ ಎನ್ನುವ ಬಗ್ಗೆ ಪ್ರತಿಕ್ರಿಯೆ ನೀಡಿದರು. “ಸಿಂಧಗಿಯಲ್ಲಿ ಗೆಲುವಿಗೆ ಶ್ರಮಿಸಿದ ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ಹಾಗೂ ಮತ ಹಾಕಿದ ಮಹಾಜನತೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ,” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ…

ಏಕತೆಯನ್ನು ಸಾರುವ ವಿಶಿಷ್ಟ ಹಬ್ಬ ದೀಪಾವಳಿ

ಏಕತೆಯನ್ನು ಸಾರುವ ವಿಶಿಷ್ಟ ಹಬ್ಬ ದೀಪಾವಳಿ ಜಿ ಕೆ ಹೆಬ್ಬಾರ್ ಶಿಕಾರಿಪುರ ದೀಪಗಳ ಹಬ್ಬ ದೀಪಾವಳಿ. ಅನೇಕ ಪುರಾಣ ಇತಿಹಾಸಗಳನ್ನು ಒಳಗೊಂಡಿರುವ ಈ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಐದು ದಿನಗಳ ಕಾಲ ಆಚರಿಸುವ ದೊಡ್ಡ ಹಬ್ಬ ಇದು. ವರ್ಷದ ಕೊನೆಯಲ್ಲಿ ಬರುವ ಈ ಹಬ್ಬವನ್ನು ಉತ್ತರ ಭಾರತದಲ್ಲಿ ಹೊಸ ವರ್ಷದ ಹಬ್ಬ ಎನ್ನುವ ರೀತಿಯಲ್ಲೂ ಆಚರಿಸುತ್ತಾರೆ. ಮನೆಯನ್ನು ಹಣತೆಯ ದೀಪದಿಂದ ಅಲಂಕರಿಸಿ, ಸಿಹಿ ಭೋಜನ ಹಾಗೂ ಪಟಾಕಿ ಸಿಡಿಸುವುದರ ಮೂಲಕ ಹಬ್ಬದ ಆಚರಣೆ ಸಂಭ್ರಮ-ಸಡಗರದಿಂದ…

ಶ್ರೇಯಾಂಸಿ ಬಹುವಿಘ್ನಾನಿ

ಸಿದ್ಧಸೂಕ್ತಿ: ಶ್ರೇಯಾಂಸಿ ಬಹುವಿಘ್ನಾನಿ. ಒಳ್ಳೆಯದಕ್ಕೆ ಲೆಕ್ಕವಿಲ್ಲದ ತೊಡಕು. ಬಾರ್ ರೆಸ್ಟೋರೆಂಟ್ ತೆರೆಯಲು ಬಲು ಕಷ್ಟವಿಲ್ಲ, ಅವು ಸೊರಗುವುದೂ ಇಲ್ಲ. ಒಂದರ ನಂತರ ಮತ್ತೊಂದು! ಆಶ್ರಮ ಮಠ ಮಂದಿರ ಕಟ್ಟಿ ನೋಡಿ! ಪ್ರಾಯದಲ್ಲಿ ಪ್ರಾರಂಭಿಸಿದವ ಸತ್ತರೂ ಮುಗಿಯದು! ಕುಂಟುತ್ತ ಸೊರಗುತ್ತ ತೆವಳುವುದು! ಉಚಿತ ಶಾಲೆ ವಿದ್ಯಾರ್ಥಿನಿಲಯಕ್ಕೆ ನೆಲವೇ ಗತಿ! ಭರ್ಜರಿ ಶುಲ್ಕ ಪಡೆವ ಕಟ್ಟಡ ಗಗನಚುಂಬಿ! ಋಷಿ ಯಜ್ಞ ಮಾಡಿದ! ರಾಕ್ಷಸ ರಕ್ತಮಾಂಸ ಸುರಿದ! ವಿಶ್ವಾಮಿತ್ರನ ತಪಸ್ಸಿಗೆ ಮೇನಕೆ ಅಡ್ಡಿ! ಹೇಗಾದರೂ ಮಾಡಿ ಒಳ್ಳೆಯದನ್ನು ಕೆಡಿಸಬೇಕೆಂಬ ಛಲ…

ಕರ್ನಾಟಕದಲ್ಲಿ ಪ್ರತಿಯೊಬ್ಬರು ಕನ್ನಡಲ್ಲೇ ವ್ಯವಹರಿಸಬೇಕು-ಬಿ.ಸಿ.ನಾಗೇಶ್

ಬೆಂಗಳೂರು, ನ. ೦೧: ಪ್ರತಿಯೊಬ್ಬರು ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲಿಯೇ ಮಾತನಾಡಬೇಕು. ಕನ್ನಡದಲ್ಲಿಯೇ ಬರೆಯಬೇಕು. ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುವುದು ಹಾಗೂ ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡವನ್ನು ಕಲಿಸುವ ಮೂಲಕ ನಮ್ಮ ನಾಡು-ನುಡಿ, ಸಂಸ್ಕತಿ ಉಳಿಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅಭಿಪ್ರಾಯಪಟ್ಟರು. ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ೬೬ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ…

ಭಾಷೆ ಸದೃವಾದರೆ ರಾಜ್ಯ ಶಕ್ತಿಶಾಲಿ-ಸಿಎಂ ಬೊಮ್ಮಾಯಿ

ಬೆಂಗಳೂರು,ನ೦೧: ಎಲ್ಲಿ ಭಾಷೆ ಸದೃಢವಾಗಿರುತ್ತದೆಯೋ ಅಲ್ಲಿ ರಾಜ್ಯ ಶಕ್ತಿಶಾಲಿಯಾಗಿರುತ್ತದೆ. ಕನ್ನಡ ಸಾಹಿತ್ಯವನ್ನು ಇಡೀ ದೇಶಕ್ಕೆ ಮುಟ್ಟಿಸಬೇಕು. ಕನ್ನಡ ಭಾಷೆ ತಿಳಿಯದವರಿಗೆ ಕನ್ನಡ ಭಾಷೆ ಕಲಿಸಬೇಕು. ಕನ್ನಡಿಗರಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡಬೇಕು. ಆಗ ಮಾತ್ರ ಕರ್ನಾಟಕ ಮತ್ತು ಕನ್ನಡ ಅಭಿವೃದ್ಧಿಯಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೋಮವಾರ ಹೇಳಿದ್ದಾರೆ. ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ೬೬ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿರುವ ಅವರು, ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಬೇಕು. ಕನ್ನಡಿಗರು ಪ್ರತಿದಿನವೂ…

ಇಂಗ್ಲೀಷ್ ಮಾತನಾಡುವ ಹುಚ್ಚಿಗೆ ಬೆಳಂಬೆಳಗ್ಗೆಯ ಮನೆಗಳಿಗೆ ಭೇಟಿ

ಇಂಗ್ಲೀಷ್ ಮಾತನಾಡುವ ಹುಚ್ಚಿಗೆ ಬೆಳಂಬೆಳಗ್ಗೆಯ ಮನೆಗಳಿಗೆ ಭೇಟಿ ನನ್ನ ಒಂಬತ್ತನೇ ತರಗತಿಯ ಮಧ್ಯವಾರ್ಷಿಕ ಪರೀಕ್ಷೆಯ ನಂತರದಲ್ಲಿ ತಿಪ್ಪೇರುದ್ರಪ್ಪ ಮೇಷ್ಟ್ರು ನಮ್ಮ ಮನೆಗೆ ಬಂದು ಹೋಗುವ ಪರಿಪಾಠ ಶುರುವಾಯಿತು. ಆಸ್ಪತ್ರೆಯ ತನ್ನ ದಿನನಿತ್ಯದ ಭೇಟಿಯ ಹೊರತಾಗಿಯೂ ಊರ ಹಲವು ಉಳ್ಳವರ ಮನೆಗಳಿಗೆ ಬೆಳಗುಬೈಗುಗಳಲ್ಲಿ ನಿಯಮಿತವಾಗಿ ಭೇಟಿಕೊಡುವ ಸಂಪ್ರದಾಯವನ್ನು ಮೇಷ್ಟ್ರು ನಿವೃತ್ತಿಯ ತದನಂತರದಲ್ಲಿ ತಪ್ಪದೇ ಪಾಲಿಸಿಕೊಂಡು ಬಂದವರೇ. ಮೇಷ್ಟ್ರಿಗೆ ನಾಲಗೆ ಇದ್ದ ಕಾರಣಮಾತ್ರದಿಂದಾಗಿ ಈ ಭೇಟಿಗಳು ಅನೂಚಾನವಾಗಿ ನಡೆಯುತ್ತಿದ್ದವು ಎಂದು ಈಗ ನನಗನ್ನಿಸುತ್ತದೆ. ಮೇಷ್ಟ್ರ ನಾಲಗೆಗೆ ಇದ್ದ ಎರಡು…

ಕ್ರಿಯಾ ಕೇವಲಮುತ್ತರಮ್

‌‌‌‌          ಸಿದ್ಧಸೂಕ್ತಿ: ‌‌‌‌          ಕ್ರಿಯಾ ಕೇವಲಮುತ್ತರಮ್. ಕ್ರಿಯೆಯೇ ಉತ್ತರವಾಗಬೇಕು.ಹೇಗಿದ್ದರೂ ಟೀಕೆ ನಿಂದೆ ತಪ್ಪಿದ್ದಲ್ಲ. ಆ ಕುರಿತ ಚಿಂತೆ, ಪ್ರತಿಮಾತುಗಳು ಸ್ವಲ್ಪಮಟ್ಟಿನ ಫಲ ನೀಡಬಹುದು. ಆದರೆ ಸಾಧನೆಯೇ ಅದಕ್ಕೆ ಸರಿಯಾದ ಪ್ರತ್ಯುತ್ತರ. ಅಸಾಧ್ಯವಾದುದನ್ನು ಸಾಧಿಸಿದಾಗ ಟೀಕೆಕಾರರೂ ಹೊಗಳುವವರಾಗುತ್ತಾರೆ. ಮಾತಿಗಿಂತ ಕೃತಿ ಮುಖ್ಯ. ಮಾತು ಕಡಿಮೆ ದುಡಿಮೆ ಹೆಚ್ಚಿರಲಿ. ಮಾತಾಡುವವರಾಗುವುದಕ್ಕಿಂತಲೂ ಹೆಚ್ಚಾಗಿ ಮಾಡುವವರಾಗೋಣ.ಮಾತಿನ ಮಲ್ಲರಾಗದಿರೋಣ. ಉತ್ತರಕುಮಾರನ ಪೌರುಷ ತೋರದಿರೋಣ!! *ನವಾಙ್ ಮಾತ್ರೇಣ ಪೌರುಷ್ಯಂ ಕ್ರಿಯಾ ಕೇವಲಮುತ್ತರಮ್|* *ಬಲಾಬಲೇ…

ಬಡಪಾಯಿ ಎಮ್ಮೆಗಳಿಗೂ ಥ್ಯಾಂಕ್ಸ್ ಹೇಳೋಣ ಬನ್ನಿ

ಬಡಪಾಯಿ ಎಮ್ಮೆಗಳಿಗೂ ಥ್ಯಾಂಕ್ಸ್ ಹೇಳೋಣ ಬನ್ನಿ ದುರ್ಗಾ- ಮಹಿಷ ಕದನ ಮತ್ತು ಮಹಿಷಾಸುರ ಮರ್ದನದ ಪರಿಣಾಮ ಇದ್ದೀತು. ನಮ್ಮ ಎಲ್ಲ ಜಾನುವಾರುಗಳ ಪೈಕಿ ನಿಕೃಷ್ಟವೆಂದು ಕಳಂಕ ಹೊತ್ತ ಪ್ರಾಣಿಯಿದು. ಪರಮ ಕ್ರೌರ್ಯಕ್ಕೆ ಗುರಿಯಾಗುವ ಜೀವಿ. ಮನಸೇಚ್ಛೆ ಬಡಿತ ತಿನ್ನುತ್ತದೆ, ದೇವಿಯ ಮುಂದೆ ಕತ್ತು ಕಡಿಸಿಕೊಂಡು ಬಲಿಯಾಗುತ್ತದೆ. ಮೇವು ನೀರಿಲ್ಲದೆ ನೂರಾರು ಕಿ.ಮೀ. ದೂರ ಹಿಂಸೆಯ ಸಾಗಣೆಗೆ ತುತ್ತಾಗಿ ಕಸಾಯಿ ಖಾನೆಗಳಲ್ಲಿ ಅತ್ಯಂತ ಯಾತನೆಯ ಮರಣಕ್ಕೆ ಗುರಿಯಾಗುತ್ತದೆ. ಕಪ್ಪು ವರ್ಣವನ್ನು ಕೀಳೆಂದೂ, ಗೌರವರ್ಣವನ್ನು ಮೇಲೆಂದೂ ನೂರಾರು ವರ್ಷಗಳಿಂದ ನಿತ್ಯ…

ಅಂಬರ್ ಗ್ರೀಸ್ ಹೆಸರಲ್ಲಿ ತಿಮಿಂಗಿಲಗಳಿಗೂ ಗಂಡಾಂತರ..!!

Writing;ಪರಶಿವ ಧನಗೂರು ಅಂಬರ್ ಗ್ರೀಸ್ ಹೆಸರಲ್ಲಿ ತಿಮಿಂಗಿಲಗಳಿಗೂ ಗಂಡಾಂತರ..!! ಇತ್ತೀಚೆಗೆ ಈ ಸ್ಮಗ್ಲಿಂಗ್ ಜಗತ್ತು ದೋ ನಂಬರ್ ದಂಧೆಕೋರರ ಗುಂಪುಗಳು ಕೋಟ್ಯಂತರ ರೂಪಾಯಿಗಳ ಆಸೆಯಿಂದ ತಿಮಿಂಗಿಲ ವಾಂತಿಯ ಹಿಂದೆ ಬಿದ್ದಿದ್ದಾರೆ! ಈಗ ಎಲ್ಲೆಲ್ಲೂ ತೆಲುವ ಚಿನ್ನ! ಸಮುದ್ರ ನಿಧಿ! ಎಂದು ಕರೆಸಿಕೊಳ್ಳುವ ಅಂಬರ್ ಗ್ರೀಸ್ ಎಂಬ ತಿಮಿಂಗಿಲ ವಾಂತಿಯದ್ದೇ ವಾಸನೇ!! ಮಾಂಸಾಹಾರಿ ಸಸ್ತನಿಯಾದ ಅಳಿವಿನಂಚಿನಲ್ಲಿರುವ ಸ್ಪರ್ಮ್ ವೇಲ್ ಜಾತಿಯ ಈ ತಿಮಿಂಗಿಲ ವಾಂತಿಗೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾರಿ ಬೇಡಿಕೆ! ಈಗ ಸದ್ಯಕ್ಕೆ ಭೂಮಿ ಮೇಲೆ ಅತಿ…

ನಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾಃ

ಸಿದ್ಧಸೂಕ್ತಿ: *ನಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾಃ* ಮಲಗಿರುವ ಸಿಂಹದ ಬಾಯಿಗೆ ಪ್ರಾಣಿ ಬಂದು ಆಹಾರವಾಗುವುದಿಲ್ಲ. ಸಿಂಹ ಹುಲಿ ಆನೆ ಕರಡಿ ಚಿರತೆಯೇ ಆಗಿರಲಿ ಬೇಟೆಯಾಡಿದರೆ ಮಾತ್ರ ಆಹಾರ! ಶ್ರೀಮಂತನೆಂದು ನಿದ್ರಿಸಿದರೆ ? ನಾ ಬಡವ, ನನ್ನ ಹಣೆಬರಹವೇ ಇಷ್ಟೆಂದು ಕುಳಿತರೆ ? ಶ್ರೀಮಂತ ದರಿದ್ರನಾಗುವನು! ಶ್ರೀಮಂತಿಕೆಯ ಮೂಲವನ್ನು ಹುಡುಕಿರಿ! ಅದೇ ಧೈರ್ಯ ಪರಿಶ್ರಮ! ಬಡತನದ ಇತಿಹಾಸವನ್ನು ಕೆಣಕಿರಿ! ಅದೇ ಅಧೈರ್ಯ ಅಜ್ಞಾನ ದಾಸ್ಯ ನಿರ್ಲಕ್ಷ್ಯ ಸೋಮಾರಿತನ! ಮೈ ಕೊಡವಿ ಪುಟಿದೇಳಿ! ಕೀಳರಿಮೆ ತೊರೆಯಿರಿ! ಪ್ರತಿ…

ಪೇಜಾವರರ ಹೇಳಿಕೆ ಹಾಸ್ಯಾಸ್ಪದ :ಡಾ. ಆರೂಢಭಾರತೀ ಸ್ವಾಮೀಜಿ.

ಬೆಂಗಳೂರು,ಅ,26:ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಸರ್ಕಾರವು ಬ್ರಾಹ್ಮಣೇತರರನ್ನು ಅರ್ಚಕರನ್ನಾಗಿ ನೇಮಿಸುತ್ತಿದ್ದು, ಅರ್ಚಕವೃತ್ತಿಯನ್ನು ಬ್ರಾಹ್ಮಣರಿಂದ ಕಿತ್ತುಕೊಳ್ಳುವ ಪ್ರಯತ್ನವಾಗಿದ್ದು, ಸರ್ಕಾರವು ಅರ್ಚಕ ಉದ್ಯೋಗವನ್ನು ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಮೀಸಲಿಡಬೇಕೆಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥರು ಭಾನುವಾರ ಮೈಸೂರಿನ ವಿಪ್ರ ಸಮ್ಮೇಳನದಲ್ಲಿ ಹೇಳಿರುವುದಾಗಿ ವರದಿಯಾಗಿದ್ದು ಅವರ ಈ ಹೇಳಿಕೆ ಹಾಸ್ಯಾಸ್ಪದ ಎಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಖಂಡಿಸಿದ್ದಾರೆ. ಇದು ಶ್ರೇಣೀಕೃತ ವರ್ಣ ವ್ಯವಸ್ಥೆಯನ್ನು ವಿಸ್ತರಿಸುವ, ಪುರೋಹಿತಶಾಹಿತನವನ್ನು ಪುನಃ ಪ್ರತಿಷ್ಠಾಪಿಸುವ ಹುನ್ನಾರ. ಈ ಮೂಲಕ ವೇದಾಧ್ಯಯನವನ್ನು…

ವಾಸಃ ಪ್ರಧಾನಂ ಖಲು ಯೋಗ್ಯತಾಯಾಃ

ಸಿದ್ಧಸೂಕ್ತಿ: ವಾಸಃ ಪ್ರಧಾನಂ ಖಲು ಯೋಗ್ಯತಾಯಾಃ ಯೋಗ್ಯತೆಯನ್ನಳೆಯುವಲ್ಲಿ ಬಟ್ಟೆಯ ಪಾತ್ರ ದೊಡ್ಡದು! ಬಟ್ಟೆಯಲ್ಲೇನು? ಎನ್ನುವಂತಿಲ್ಲ. ಪುಟಾಣಿ ಮುದುಕ ಕುಡುಕ ವಂಚಕ ಚಟಗಾರ ಮೋಸಗಾರ ಹುಚ್ಚ ಅಜ್ಞಾನಿ ಬಡವನಿರಲಿ, ವೇಷಭೂಷಣ ಜೋರಿದ್ದರೆ ಸಾಕು, ತಲೆ ಬಾಗಿ, ಕೈಮುಗಿದು, ಕದತೆರೆದು, ಕರೆದೊಯ್ದು ಕೂಡ್ರಿಸಿ, ಆದರದಿ ಆಗದ ಕೆಲಸವನೂ ಮಾಡುವರು! ಅರ್ಹತೆ ಇದ್ದರೂ ಕಳಪೆಯ ವೇಷದ ಜುಬ್ಬಾ ದೋತರ ಪಂಜೆಯ ವ್ಯಕ್ತಿಗೆ, ತರೆದ ಬಾಗಿಲು ಮುಚ್ಚುವುದು! ಕೈ ತಲೆ ಕಾಲ್ಗಳು ತಡೆಯುವವು! ಕಾಯಿ ಈಗಾಗ ಬಾ ಎಂಬ ಮಾತು! ದಿನ…

1 61 62 63 64 65 122
Girl in a jacket