ಅಣ್ಣಿಗೇರಿಯ ಆಕಸ್ಮಿಕ ತಲೆಬುರುಡೆಗಳತ್ತ . . . . .
ಅಣ್ಣಿಗೇರಿಯ ಆಕಸ್ಮಿಕ ತಲೆಬುರುಡೆಗಳತ್ತ . . . . ಅಣ್ಣಿಗೇರಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಪ್ರಾಚೀನ ಗ್ರಾಮ. ಇದು ಪ್ರಸಿದ್ಧವಾಗಿರುವುದು ಹೊಯ್ಸಳ ಕಾಲದ ಅಮೃತೇಶ್ವರ ದೇವಾಲಯದಿಂದ. ಕ್ರಿ.ಶ.೧೦೫೦ರಲ್ಲಿ ನಿರ್ಮಾಣವಾದ ಈ ದೇವಾಲಯವಲ್ಲದೆ, ಈ ಗ್ರಾಮವು ಬೆಳವೊಲ-೩೦೦ ನಾಡಿನ ಪ್ರಸಿದ್ಧ ರಾಜಧಾನಿಯಾಗಿದ್ದುದು ಗಮನಾರ್ಹ. ಇಲ್ಲಿ ಹನ್ನೆರಡಕ್ಕೂ ಹೆಚ್ಚು ಪ್ರಾಚೀನ ದೇವಾಲಯ ಮತ್ತು ಜಿನಾಲಯಗಳು ಹಾಗೂ ಇಪ್ಪತ್ತೆಂಟಕ್ಕೂ ಹೆಚ್ಚು ಶಾಸನಗಳನ್ನು ಕಾಣಬಹುದು. ಅವುಗಳಲ್ಲಿ ರಾಮಲಿಂಗೇಶ್ವರ, ಬನಶಂಕರಿ, ಕಲ್ಮಠ(ತ್ರಿಕೂಟ), ಪುರದ ವೀರಭದ್ರೇಶ್ವರ, ಪಾರ್ಶ್ವನಾಥ ಬಸದಿ ಮುಖ್ಯವಾಗಿವೆ. ಇವು ಅಣ್ಣಿಗೇರಿಯ ಪ್ರಾಚೀನ…