ಬೋಲ್ಡ ಅಂಡ್ ಬ್ಯೂಟಿಪುಲ್ ರೇಖಾ
ಡಾ.ಶಿವಕುಮಾರ್ ಕಂಪ್ಲಿ ಸಹಾಯಕ ಪ್ರಾಧ್ಯಾಪಕರು ದಾವಣಗೆರೆ ವಿಶ್ವವಿದ್ಯಾಲಯ ಬೋಲ್ಡ ಅಂಡ್ ಬ್ಯೂಟಿಪುಲ್ ರೇಖಾ ಸಮಾಜ ತನಗೆ ಒಪ್ಪಿತವಾದ ಹಲವು ಬಗೆಯ ಬದುಕುಗಳನ್ನ ಮೌಲ್ಯ ಎಂದು ಕರೆಯುತ್ತದೆ. ಆದರ್ಶ ಎಂದು ಪಾಲಿಸುತ್ತದೆ.ಅದು ಕುಟುಂಬದ ವಿಷಯದಲ್ಲಿ ಒಂದು ಗಂಡಿಗೆ ಒಂದೇ ಹೆಣ್ಣು ಎಂದು ಮದುವೆಯ ನಿಯಮವನ್ನ ವಿಧಿಸಿ ಹಾಗೆ ಬದುಕುವುದು ಸಾಮಾಜಿಕ ಗೌರವದ ಸಂಕೇತ ವೆಂದುಹೇಳುವ ನಿಯಮವನ್ನ ಪಾಸುಮಾಡುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಸಮುದಾಯಗಳು ರಾಮ ಲಕ್ಷ್ಮಣರ ಆದರ್ಶವನ್ನ ಸೂಚಿಸುತ್ತವೆ. ಸಮಾಜದಲ್ಲಿ ದುಡಿವ ಶ್ರಮಿಕವರ್ಗ ಮತ್ತು ನೌಕರಿಯ ಮಧ್ಯಮವರ್ಗ…