Girl in a jacket

Author kendhooli_editor

ಟಿ-೨೦ ನಾಯಕತ್ವ ತ್ಯಜಿಸಿದ ವಿರಾಟ್, ರೋಹಿತ್ ಆಗ್ತಾರಾ ನೂತನ ಸಾರಥಿ..?

Reported By: H.D. Savita ಭಾರತೀಯ ಕ್ರಿಕೆಟ್​ನಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಕ್ರಿಕೆಟ್ ನ ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ತಂಡದ ನಾಯಕತ್ವ ವಹಿಸಿದ್ದ ವಿರಾಟ್ ಕೊಹ್ಲಿ , ಈಗ ಟಿ-20 ಮಾದರಿಯಲ್ಲಿ ತಂಡದ ನಾಯಕತ್ವದಿಂದ ಹಿಂದೆ ಸರಿಯುವುದಾಗಿ ನಿರ್ಧರಿಸಿದ್ದಾರೆ. ಮುಂದಿನ ತಿಂಗಳಿನಿಂದ ಯುಎಇಯಲ್ಲಿ ಆರಂಭವಾಗಲಿರುವ ಟಿ 20 ವಿಶ್ವಕಪ್ ನಂತರ ಕೊಹ್ಲಿ ಈ ರೂಪದಲ್ಲಿ ಈ ಜವಾಬ್ದಾರಿಯನ್ನು ತ್ಯಜಿಸಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಸಂಜೆ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ‘ನಾಯಕನಾಗಿ ಮತ್ತು ಆಟಗಾರನಾಗಿ ತಂಡಕ್ಕೆ ನನ್ನೆಲ್ಲ ಸಾಮರ್ಥ್ಯವನ್ನು ಧಾರೆಯೆರೆದಿದ್ದೇನೆ.…

ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಖಾಲಿ ಇರುವ ಹುದ್ದೆಗಳ ಭತಿ೯ಗೆ ಕ್ರಮ: ಶಶಿಕಲಾ ಜೊಲ್ಲೆ

ಬೆಂಗಳೂರು,ಸೆ,16: ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಖಾಲಿ ಇರುವ ಅಚ೯ಕ, ಸಹಾಯಕ ಅಚ೯ಕ, ಸ್ಥಾನಿಕ, ಪಾಚಕ, ಪರಿಚಾರಕ, ವೇದ ಪಾರಾಯಣ, ಪ್ರಬಂಧ ಪಾರಾಯಣ ಮಾಡುವವರ ಮುತಾಂದ ಹುದ್ದೆಗಳನ್ನು ಆದಷ್ಟು ಶೀಘ್ರದಲ್ಲಿ ಭತಿ೯ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ, ವಕ್ಪ್ ಮತ್ತು ಹಜ್‍ ಸಚಿವರಾದ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಬುಧವಾರ ಚಾಮರಾಜಪೇಟೆಯ ಹಿಂದೂ ದೇವಾಲಯಗಳ ಅಖಿಲ ಕನಾ೯ಟಕ ಅಚ೯ಕ, ಆಗಮಿಕ, ಉಪಾದೀವಂತರ ಒಕ್ಕೂಟದ ಸದಸ್ಯರು ವಿಕಾಸಸೌಧದಲ್ಲಿ ಉನ್ನತ ಶಿಕ್ಷಣ ಹಾಗೂ ಐಟಿ ಬಿಟಿ ಸಚಿವರಾದ ಡಾ. ಅಶ್ವತ್ಥ್ ನಾರಾಯಣ…

ತಾಲಿಬಾನ್ ನ ಉದಯದೊಂದಿಗೆ,ಆಫ್ಘಾನಿಸ್ತಾನದ ಪತನ

ಅಫ್ಘಾನಿಸ್ತಾನದಲ್ಲಿ ಮಹಿಳೆಯರು ತಾಲಿಬಾನ್‌ ಆಳ್ವಿಕೆಯಲ್ಲಿಇದ್ದ ಪರಿಸ್ಥಿತಿಯ ಕುರಿತಂತೆ ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಉದಯ ಮತ್ತು ಪತನ ಕುರಿತಂತೆ ಮಾನಸ ಅವರು ಇಲ್ಲಿ ಆಫ್ಘಾನಿಸ್ತಾನದ ಬೆಳವಣಿಗೆ ಕುರಿತಂತೆ ವಿಶ್ಲೇಷಿಸಿದ್ದಾರೆ. ಮಾನಸ,ಬೆಂಗಳೂರು ತಾಲಿಬಾನ್ ನ ಉದಯದೊಂದಿಗೆ,ಆಫ್ಘಾನಿಸ್ತಾನದ ಪತನ ಆಫ್ಘಾನಿಸ್ತಾನದ ಯುವತಿಯೊಬ್ಬಳು (ನಟಿ), ತನ್ನ ೨೦ ರ ಆಸುಪಾಸಿನಲ್ಲಿ ಆಫ್ಘಾನಿಸ್ತಾನದ ಮಹಿಳೆಯರು ಯಾವಾಗಲೂ ತಾಲಿಬಾನ್ ಆಳ್ವಿಕೆಯ ಭಾರವನ್ನು ಹೊಂದಿದ್ದರು ಎಂದು ಹೇಳಿದ್ದಾರೆ. ಅವರು ಇಸ್ಲಾಮಿಕ್ ನಿಯಮಗಳ ತಾಲೀಬಾನೀಕೃತ ಆವೃತ್ತಿಗೆ ಒಳಪಟ್ಟರು( ಇಸ್ಲಾಮಿಕ್ ಭೋಧನೆಗಳಿಗೆ ವಿರುದ್ಧವಾದ),ಇದು ಅವರಿಗೆ ಮೂಲಭೂತ ಹಕ್ಕುಗಳಾದ,ಚಳವಳಿಯ ಸ್ವಾತಂತ್ರ್ಯ ಶಿಕ್ಷಣಕ್ಕೆ…

ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ವಿಮಾನನಿಲ್ದಾಣ ಹಾಗೂ ಹ್ಯಾಲಿಪ್ಯಾಡ್ ನಿರ್ಮಾಣ

ಬೆಂಗಳೂರು, ಸೆ, 15-:ಸುಲಲಿತ ವ್ಯಾಪಾರೋದ್ಯಮಕ್ಕೆ ನೆರವಾಗುವಂತೆ ರಾಜ್ಯದ ಆಯ್ದ ಜಿಲ್ಲಾ ಕೇಂದ್ರಗಳಲ್ಲಿ ವಿಮಾನ ನಿಲ್ದಾಣಗಳನ್ನು ಪ್ರಾರಂಭಿಸುವ ಚಿಂತನೆ ಮಾಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಮುರುಗೇಶ್ ನಿರಾಣಿ ತಿಳಿಸಿದರು. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‍ಕೆಸಿಸಿಐ) ಆಯೋಜಿಸಿದ್ದ ಸಮಾರಂಭದಲ್ಲಿ ನಾನಾ ಪ್ರತಿಷ್ಠಿತ ಉದ್ಯಮದಾರರಿಗೆ `ರಫ್ತು ಶ್ರೇಷ್ಠತಾ ಪ್ರಶಸ್ತಿ’ ಪ್ರದಾನ ಮಾಡಿ ಮಂಗಳವಾರ ಅವರು ಮಾತನಾಡಿದರು. ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವ ಸಂಬಂಧ ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸಿ, ಇದಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರದಲ್ಲೇ ನಡೆಸಲು…

ಆಲಮಟ್ಟಿ: ಎಲ್ಲಾ ೨೬ ಗೇಟ್ ಗಳ ಮೂಲಕ ನೀರು ಹೊರಕ್ಕೆ

ಆಲಮಟ್ಟಿ,ಸೆ,15:ಆಲಮಟ್ಟಿ ಜಲಾಶಯದ ಹರಿದು ಬರುವ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಮುಂಜಾಗ್ರತೆಯ ಕ್ರಮವಾಗಿ ಜಲಾಶಯದ ಎಲ್ಲಾ ೨೬ ಗೇಟ್ ಗಳ ಮೂಲಕ ನೀರನ್ನು ನದಿ ತಳಪಾತ್ರಕ್ಕೆ ಹರಿಸಲಾಗುತ್ತಿದೆ. ಗೇಟ್ ಗಳ ಮೂಲಕ ೮೦,೦೦೦ ಕ್ಯುಸೆಕ್ ಹಾಗೂ ಕೆಪಿಸಿಎಲ್ ಮೂಲಕ ೪೦,೦೦೦ ಕ್ಯುಸೆಕ್ ಸೇರಿ ಒಟ್ಟಾರೇ ೧,೨೦,೦೦೦ ಕ್ಯುಸೆಕ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. ಏಕಾಏಕಿ ಈ ಪ್ರವಾಹ ಉಂಟಾಗಿದ್ದು, ತಾತ್ಕಾಲಿಕವಾಗಿ ಒಂದೆರಡು ದಿನಗಳಲ್ಲಿ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿವೆ. ಸದ್ಯ ಜಲಾಶಯದ ಒಳಹರಿವು ೮೯,೦೦೦ ಕ್ಯುಸೆಕ್ ಇದ್ದು, ಜಲಾಶಯದ ಮಟ್ಟ…

ಅಡುಗೆ ಅನಿಲ ಸ್ಪೋಟ; ಸುಟ್ಟು ಕರಕಲಾದ ಸಾಮಗ್ರಿಗಳು

ಆಲಮಟ್ಟಿ,ಸೆ,15: ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕ್ ಬೇನಾಳ NH ಗ್ರಾಮದಲ್ಲಿ ಅಡುಗೆ ಅನಿಲ ಸ್ಪೋಟಗೊಂಡು ಎರಡು ಲಕ್ಷ ರೂ ಮೌಲ್ಯದ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಇಂದು ಬೆಳಗ್ಗೆ ಬುಡ್ಡಸಾಬ್ ಮಲ್ಲಿಕಸಾಬ್ ಗಂಜಿಹಾಳ್ ಅವರ ಮನೆಯಲ್ಲಿ ಈ ಅವಘಡ ಸಂಭವಿಸಿದ್ದು  ಸ್ಪೋಟಕ್ಕೆ ಮನೆಗೆ ಬೆಂಕಿ ತಗುಲಿದ್ದು ಮನೆ ಹತ್ತಿಉರಿದಿದೆ. ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿ ನಂದಿಸಿ ಆಗುವ ಮತ್ತಷ್ಟು ಅನಾಹುತವನ್ನು ತಡೆದಿದೆ.15 ಚೀಲ ಜೋಳ ಗೋಧಿ ಮತ್ತಿತರ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ತಸಿಲ್ದಾರ್ ಸತೀಶ್…

ಎನ್.ಇ.ಪಿ ಬಗ್ಗೆ ಮುಕ್ತ ಚರ್ಚೆಗೆ ಸರ್ಕಾರ ಸಿದ್ಧ- ಬಸವರಾಜ ಬೊಮ್ಮಾಯಿ

ಬೆಂಗಳೂರು, ಸೆ,15: ಎನ್.ಇ.ಪಿ ( ನ್ಯೂ ಎಜುಕೇಶನ್ ಪಾಲಿಸಿ) ಬಗ್ಗೆ ಮುಕ್ತವಾಗಿ ಚರ್ಚಿಸಲು ಸರ್ಕಾರ ಸಿದ್ಧವಿದ್ದು, ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬಿ.ಬಿ.ಎಂ.ಪಿ ಆಯೋಜಿಸಿದ್ದ ಭಾರತದ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ 161 ನೇ ಜಯಂತಿ ಅಂಗವಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ನೆರವೇರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಇಂದಿನ ಕಾಲಕ್ಕೆ ತಕ್ಕ ಹಾಗೆ ಪ್ರಸ್ತುತವಾಗುವಂತೆ, ಯುವಕರಿಗೆ ಉತ್ತಮ ಭವಿಷ್ಯ ನೀಡುವಂತೆ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಸದುದ್ದೇಶವಿದೆ.…

ಆಡಳಿತಕ್ಕೆ ಮೇಜರ್ ಸರ್ಜರಿ:ತೀವ್ರ ಒತ್ತಡದಲ್ಲಿ ಸಿಎಂ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಆಡಳಿತಕ್ಕೆ ಮತ್ತಷ್ಟು ಚುರುಕು ತರು ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಕಾರ್ಯಗಳ ತೀವ್ರತೆ ತರಲು ಹೇಗೆ ಎನ್ನುವ ಕುರಿತು ಹಿರಿಯ ಪತ್ರಕರ್ತರಾದ ಸಿ.ರುದ್ರಪ್ಪ ಇಲ್ಲಿ ವಿಶ್ಲೇಷಿಸಿದ್ದಾರೆ. ಸಿ.ರುದ್ರಪ್ಪ,ಹಿರಿಯ ಪತ್ರಕರ್ತರು ಆಡಳಿತಕ್ಕೆ ಮೇಜರ್ ಸರ್ಜರಿ:ತೀವ್ರ ಒತ್ತಡದಲ್ಲಿ ಸಿಎಂ  ಆಡಳಿತಕ್ಕೆ ಮೇಜರ್ ಸರ್ಜರಿ ಸಂಬಂಧಿಸಿದಂತೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಒತ್ತಡದಲ್ಲಿ ಸಿಲುಕಿದ್ದಾರೆ. ಯಾವುದೇ ನೂತನ ಮುಖ್ಯಮಂತ್ರಿ ತಮ್ಮ ವೇಗ ಮತ್ತು ದೃಷ್ಟಿಕೋನಕ್ಕೆ ತಕ್ಕಂತೆ ಕೆಲಸ ಮಾಡುವ ಅಧಿಕಾರಿಗಳನ್ನು ಪ್ರಮುಖ…

ಆರ್ ಎಸ್ ನೋಡಿದರೆ ಸರ್ ಎಂ.ವಿ  ಮರೆಯದ ಹೆಸರು

ಜಿ.ಕೆ.ಹೆಬ್ಬಾರ್, ಶಿಕಾರಿಪುರ ಆರ್ ಎಸ್ ನೋಡಿದರೆ ಸರ್ ಎಂ.ವಿ  ಮರೆಯದ ಹೆಸರು ಇತ್ತೀಚಿನ ದಿನಗಳಲ್ಲಿ  ಸೇತುವೆ ನಿಮಿಸಿದವರು ಅವರು ಬದುಕಿದ್ದಾಗಲೇ ಕಟ್ಟಿದ ಸೇತುವೆಗಳು ಬಿದ್ದು ಹೋಗುತ್ತಿವೆ ಆದರೆ ಹಿಂದಿನ ಡ್ಯಾಂ ಸೇತುವೆಗಳು ಕಟ್ಟಿದ ವ್ಯಕ್ತಿ ನಿಧನ ರಾದರು ಅವರು ಕಟ್ಟಿದ ಸೇತುವೆಗಳು ಅಮಾರವಾಗಿವೆ ಅದಕ್ಕೆ ಸ ರ್ ಎಂ ವಿ.ನಿರ್ಮಿಸಿದ  ಕೆ ಆರ್ ಎಸ್ ಸಾಕ್ಷಿಯಾಗಿದೆ.  ಮೋಕ್ಷಗುಂಡಂ ವಿಶ್ವೇಶ್ವರಯ್ಯ ರವರು, ಭಾರತದ ಗಣ್ಯ ಅಭಿಯಂತರರಲ್ಲಿ ಒಬ್ಬರು. ಇವರು ೧೯೧೨ ರಿಂದ ೧೯೧೮ರವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿದ್ದವರು. ಇವರ…

ನಾ ನಿನಗಾದರೆ,ನೀ ನನಗೆ

ಸಿದ್ಧಸೂಕ್ತಿ :                   ನಾ ನಿನಗಾದರೆ, ನೀ ನನಗೆ. ನೀ=ನೀ, ಪರ, ಸಮಾಜ. ಪರಸ್ಪರ ಸಹಕಾರ ಜಗದ ಅಗತ್ಯ.ಕಿವಿ ಕೇಳುವುದು, ಕಣ್ಣು ನೋಡುವುದು, ಬಾಯಿ ಮಾತನಾಡುವುದು, ಕಾಲು ಹೋಗುವುದು,ಕೈ ತೆಗೆದುಕೊಳ್ಳುವುದು. ಪರಸ್ಪರ ಸಹಕಾರ ಇಲ್ಲದಿರೆ ಇವು ನಡೆಯವು. ಕಿವಿ ಅಹಂಕಾರಿಯಾದರೆ, ಕಣ್ಣೆತ್ತಿ ನೋಡದು, ಕಾಲು ಹೊರಡದು! ಬೆರಳುಗಳು ಹೇಳುತ್ತವೆ “ಹಿರಿ ಕಿರಿದಾದರೂ ಹೊಂದಿ ಒಂದಾದರೆ, ಅದ್ಭುತದ ಸಾಧನೆ”. ನನಗಿರುವುದು ನಿನಗಿಲ್ಲ, ನಿನಗಿರುವುದು ನನಗಿಲ್ಲ. ನಿನ್ನದು ನನಗೆ…

ಸೆ. 17 ರಂದು ಬೃಹತ್ ಕೋವಿಡ್ ಲಸಿಕೆ ಅಭಿಯಾನ: 30 ಲಕ್ಷ ಲಸಿಕೆ ನೀಡುವ ಗುರಿ

ಬೆಂಗಳೂರು, ಸೆ, 14:ಸೆಪ್ಟೆಂಬರ್ 17 ರಂದು ಬೃಹತ್ ಕೋವಿಡ್ ಲಸಿಕೆ ಅಭಿಯಾನ ಆಯೋಜಿಸಿದ್ದು, ಈ ಕಾರ್ಯಕ್ರಮದಡಿ 30 ಲಕ್ಷ ಲಸಿಕೆ ಹಾಕಬೇಕು ಎಂದು ನಿರ್ಧರಿಸಲಾಗಿದೆ. ಅದಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಅವರು ಇಂದು ಬೃಹತ್ ಲಸಿಕೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ರಾಜ್ಯದಲ್ಲಿ ಲಸಿಕೆ ಕಾರ್ಯಕ್ರಮ ಚುರುಕಾಗಿ ಸಾಗಿದ್ದು, ಉತ್ತರ ಪ್ರದೇಶದ ನಂತರ ಅತಿ ಹೆಚ್ಚು ಲಸಿಕೆ ನೀಡಿದ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.…

ಹಾಸ್ಯ ನಟ ರಾಜು ತಾಳಿಕೋಟೆ ವಿರುದ್ಧ ಹಲ್ಲೆ ಆರೋಪ

ವಿಜಯಪುರ,ಸೆ,೧೪: ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ ವಿರುದ್ಧ ಸೋದರಳಿಯನ ಪತ್ನಿ ಮೇಲೆ ಹಲ್ಲೆ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಕೌಟುಂಬಿಕ ಕಲಹದಿಂದಾಗಿ, ಅಕ್ಕನ ಪುತ್ರ ಫಯಾಜ್ ಕರಜಗಿ ಪರವಾಗಿ ನಿಂತು ರಾಜು ಅವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಫಯಾಜ್ ಅವರ ಪತ್ನಿಯ ಮೇಲೆ ಹಲ್ಲೆ ನಡೆಸಿ, ಬಲವಂತಾಗಿ ವಿಷ ಕುಡಿಸಿರುವ ಆರೋಪ ಮಾಡಲಾಗಿದ್ದು, ಪ್ರಸ್ತುತ ಸನಾ ಕರಜಗಿ(ಫಯಾಜ್ ಪತ್ನಿ) ವಿಜಯಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸನಾ ಕರಜಗಿ ಅವರ ತಾಯಿ ಫಾತಿಮಾ…

ಹೀಗಿರಲಿ ವಿದ್ಯೆ ಸೇವೆಗೆ ಮನ್ನಣೆ!

ಸಿದ್ಧಸೂಕ್ತಿ :              ಹೀಗಿರಲಿ ವಿದ್ಯೆ ಸೇವೆಗೆ ಮನ್ನಣೆ! ಬಹುತೇಕರು ನಾವು ಹೆಚ್ಚು ಬೆಲೆ ಕೊಡುವುದು ಹಣ ಆಸ್ತಿಗೆ. ಸುಳ್ಳು ಮೋಸ ಅಕ್ರಮದಿಂದ ಗಳಿಸುವೆವು! ಆದರ್ಶ ಮೌಲ್ಯ ಸಂಸ್ಕೃತಿ ಭಾವಗಳ ಕಡೆಗಣಿಸುವೆವು! ಸರಿದಾರಿಯಲಿ ಇಲ್ಲದಿದ್ದರೂ ಹಣ ಆಸ್ತಿಗರನು ಗೌರವಿಸುವೆವು,ಹಿಂಬಾಲಿಸುವೆವು! ಆದರ್ಶ ವಿದ್ಯೆ ಸಂಸ್ಕಾರವುಳ್ಳವರನು ನಿರ್ಲಕ್ಷ್ಯಿಸುವೆವು, ಅವಮಾನಿಸುವೆವು, ಗೌರವಿಸೆವು, ಪ್ರೋತ್ಸಾಹಿಸೆವು! ಪರಿಣಾಮ ಸಮಾಜದ ಮೇಲೆ ಕರಿ ನೆರಳು! ಮನೆ ಮನೆಯಲಿ ಹಣ ಆಸ್ತಿ ಲೆಕ್ಕಾಧಾರದ ಸಂಬಂಧ! ಕೆಟ್ಟ ಮೇಲೆ ಬುದ್ಧಿ!…

ವಿಚ್ಚೇದಿ ಪುತ್ರಿಗೆ ಅನುಕಂಪದದಾರಿತ ಉದ್ಯೋಗ ಇಲ್ಲ

ನವದೆಹಲಿ,ಸೆ,೧೪: ಸರ್ಕಾರಿ ನೌಕರರು ಮರಣ ಹೊಂದಿದ ಬಳಿಕ ಅವರ ಪುತ್ರಿ ವಿವಾಹ ವಿಚ್ಛೇದನ ಪಡೆದರೆ ಅಂಥ ಸಂದರ್ಭದಲ್ಲಿ ಅವರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ನೀಡಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆಕರ್ನಾಟಕಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ವೇಳೆ ಸರ್ವೋಚ್ಛ ನ್ಯಾಯಾಲಯ ಈ ಅಂಶವನ್ನು ಸ್ಪಷ್ಟಪಡಿಸಿದೆ. ಮಂಡ್ಯ ಜಿಲ್ಲಾ ಖಜಾನೆಯಲ್ಲಿ ಸೆಕೆಂಡ್ ಡಿವಿಷನ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದಿ. ಪಿ. ಭಾಗ್ಯಮ್ಮ ಅವರ ಪುತ್ರಿ ವಿ. ಸೌಮ್ಯಶ್ರೀ ಅವರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಂತೆ ಕರ್ನಾಟಕ ಹೈಕೋರ್ಟ್ ನಿರ್ದೇಶನ…

ವಿಶೇಷತೆಗಳ ಗುಚ್ಚ `ತ್ರಿವೇದಂ’

ಹೊಸಬರ ತ್ರಿವೇದಂ ಚಿತ್ರದಲ್ಲಿ ಹಲವು ವಿನೂತನಗಳು ಇರುವುದು ವಿಶೇಷ. ಸಾಮಾನ್ಯವಾಗಿ ನೈಜ ಕತೆಯನ್ನು ಆದರಿಸಿದ ಚಿತ್ರಗಳು ಬಂದಿವೆ, ಬರುತ್ತಲೆ ಇದೆ. ಆದರೆ ಇದರಲ್ಲಿ ಮೂರು ಸತ್ಯ ಘಟನೆಗಳು ಬೇರೆ ಬೇರೆ ಸ್ಥಳಗಳಲ್ಲಿ ನಡೆದಿದೆ. ೨೦೧೨ರಲ್ಲಿ ಬೆಂಗಳೂರಿನ ಕುರುಬರಹಳ್ಳಿ, ಆರು ವರ್ಷದ ಕೆಳಗೆ ಮಂಡ್ಯಾ ಮತ್ತು ಹನ್ನರೆಡು ವರ್ಷದ ಹಿಂದೆ ಮೈಸೂರು ಆಸುಪಾಸುದಲ್ಲಿ ಜರುಗಿದೆ. ಅಂದರೆ ತ್ರಿವಳಿ ಕತೆಗಳನ್ನು ಒಗ್ಗೂಡಿಸಿ ಒಂದು ಸಿನಿಮಾ ಮಾಡಲು ಹೊರಟಿದ್ದಾರೆ. ಹಾಗಂತ ಒಂದಕ್ಕೊಂದು ಸಂಬಂದವಿರುವುದಿಲ್ಲ ಹಾಗೂ ಸಮಾನಾಂತರವಾಗಿ ಸಾಗುತ್ತದೆ. ಎಲ್ಲವು ಪ್ರೀತಿ ಕುರಿತಾಗಿದ್ದು…

ಕಾಂಗ್ರೆಸ್‌ ಹಿರಿಯ ನಾಯಕ ಆಸ್ಕರ್‌ ಫರ್ನಾಂಡಿಸ್‌ ನಿಧನ

ಮಂಗಳೂರು,ಸೆ,೧೩: ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್‌ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ೮೦ ವರ್ಷ ವಯಸ್ಸಾಗಿತ್ತು. ಕಳೆದ ಭಾನುವಾರ ಮನೆಯಲ್ಲಿ ಜಾರಿ ಬಿದ್ದು ಗಾಯಗೊಂಡ ಕಾರಣ ಆಸ್ಕರ್ ಫರ್ನಾಂಡಿಸ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ. ಅವರು ಈ ಮೊದಲು ಮನೆಯಲ್ಲಿ ನಿಯಂತ್ರಣ ತಪ್ಪಿ ಜಾರಿ ಬಿದ್ದಿದ್ದರಿಂದ ತಲೆಗೆ ಏಟಾಗಿತ್ತು. ದೊಡ್ಡ…

ಗುಜರಾತ್‌ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್‌ ಪ್ರಮಾಣವಚನ ಸ್ವೀಕಾರ

ಅಹಮದಾಬಾದ್,ಸೆ,೧೩: ಗುಜರಾತ್‌ನ ೧೭ನೇ ಮುಖ್ಯಮಂತ್ರಿಯಾಗಿ ನಿನ್ನೆ ಆಯ್ಕೆಯಾದ ಭೂಪೇಂದ್ರ ಪಟೇಲ್ (೫೯) ಇಂದು ಪ್ರಮಾಣ ವಚನ ಸ್ವೀಕರಿಸಿದರು. ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಅಹಮದಾಬಾದ್‌ನ ರಾಜಭವನದಲ್ಲಿ ಆಯೋಜಿಸಲಾಗಿತ್ತು. ರಾಜ್ಯಪಾಲ ಆಚಾರ್ಯ ದೇವವೃತ ಪ್ರತಿಜ್ಞಾ ವಿಧಿ ಬೋಧಿಸಿದರು. ಗೃಹ ಸಚಿವ ಅಮಿತ್ ಶಾ ಸೇರಿ ಹಲವು ಕೇಂದ್ರ ಸಚಿವರು, ಉಪಮುಖ್ಯಮಂತ್ರಿ ನಿತಿನ್ ಪಟೇಲ್, ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟg, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಗೋವಾ ಸಿಎಂ ಪ್ರಮೋದ್ ಸಾವಂತ್ ಮತ್ತಿತರ ಗಣ್ಯರು ಸಮಾರಂಭದಲ್ಲಿ…

ತೈಲ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಎತ್ತಿನ ಬಂಡಿ ಚಲೋ

ಬೆಂಗಳೂರು,ಸೆ,೧೩: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಚೊಚ್ಚಲ ಅಧಿವೇಶನಕ್ಕೆ ಪ್ರತಿಭನೆ,ಧರಣಿ ಎದುರಿಸುವಂತಾಗಿದೆ. ಉಭಯ ಸದನ ಆರಂಭವಾಗುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತೈಲ ಬೆಲೆ ಏರಿಕೆ,ಗ್ಯಾಸ್ ಬೆಲೆ ಏರಿಕೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆಯನ್ನು ನಡೆಸಿದೆ. ಅಲ್ಲದೆ ಎತ್ತಿನ ಗಾಡಿ ಚಲೋ ಪ್ರತಿಭಟನೆ ನಡೆಸಿದ್ದಾರೆ. ಆ ಮೂಲಕ ವಿಧಾನಸೌಧಕ್ಕೆ ಆಗಮಿಸಲು ಯತ್ನಿಸಿದಾಗ ಅವರನ್ನು ತಡೆಯಲಾಯಿತು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್ ಮೊದಲಾದವರು ಎತ್ತಿನ ಬಂಡಿ ಚಲೋದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾಧ್ಯಮದೊಂದಿಗೆ…

ಮೈಸೂರು ದಸರಾ ಉತ್ಸವ; ಗಜ ಪಯಣಕ್ಕೆ ಚಾಲನೆ

ಮೈಸೂರು ಪ್ರತಿನಿಧಿ: ಬಾಲು .ಡಿ. ಮೈಸೂರು, ಸೆ, ೧೩:ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಮೊದಲ ಕಾರ್ಯಕ್ರಮವಾದ ಗಜಪಯಣಕ್ಕೆ ಇಂದು ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನ ಹೊಸಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಸರೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಕಾಡಿನಿಂದ ನಾಡಿಗೆ ಹೊರಟ ಗಜಪಡೆ ಸಾರಥಿ ಅಭಿಮನ್ಯು ನೇತೃತ್ವದ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು. ನಾಗರಹೊಳೆ ವ್ಯಾಪ್ತಿಯ ಹುಣಸೂರಿನ ವೀರನಹೊಸಹಳ್ಳಿ ಅರಣ್ಯ ಪ್ರದೇಶದಲ್ಲಿ ದಸರಾ ಆನೆಗಳಿಗೆ ಸ್ವಾಗತ ನೀಡಿದ ಅರಣ್ಯಾಧಿಕಾರಿಗಳು, ದಸರಾಗೆ…

ರೆಕ್ಕೆ ಪೋದಂತಲೆದು ಸಿಕ್ಕಿದುದನುಣ್ಣುವುದು

ಸಿದ್ಧಸೂಕ್ತಿ : ರೆಕ್ಕೆ ಪೋದಂತಲೆದು ಸಿಕ್ಕಿದುದನುಣ್ಣುವುದು. ನಾವು ಆಳವಾಗಿ ಯೋಚಿಸುತ್ತೇವೆ, ಯೋಜಿಸುತ್ತೇವೆ! ಸಾಧಕ ಬಾಧಕಗಳ ಅಳೆದು ತೂಗಿ ನಿರ್ಣಯಿಸುತ್ತೇವೆ. ಗೌರವಿಸುವ ಬದಲು ಅನುಮಾನಿಸುತ್ತೇವೆ. ಕಳ್ಳ ಸುಳ್ಳ ನಕಲಿ ಇರಬಹುದೇ? ಎಂದು ಪರೀಕ್ಷಿಸುತ್ತೇವೆ! ಆದರೂ ಬಹುತೇಕ ನಕಲಿ ಪಾಸ್! ಅದು ಮೆರೆಯುವುದು, ಹಲ್ಲು ಕಿರಿಯುವುದು. ಅಸಲಿ ಸೋತು ಸೊರಗುವುದು, ಮೂಲೆ ಸೇರುವುದು! ನೋಡಿಕೊಂಡವರ ಕಾರ್ಯವೆಸಗಲು, ನಿಯಮ ಬಾಹಿರ ಕಾಣದು! ಕಂಡರೂ ಅಡ್ಡಿಯಾಗದು! ದೂರ ಸರಿಯುವುದು! ನೋಡಿಕೊಳ್ಳದವರ ಕಾರ್ಯವೆಸಗಲು, ಇರುವ ಪೂರಕ ನಿಯಮವೂ ಅಡ್ಡಿಯಂತೆ ಕಾಮಣಿ! ಸಾಗುವ ಬಾಳುವ…

1 51 52 53 54 55 101
Girl in a jacket