ನನ್ನ ಮೊದಲ ಕನಸೊಂದು ಸಾಕಾರಗೊಂಡಿದೆ;ರಂಜನಿ ರಾಘವನ್
ಬೆಂಗಳೂರು,ಸೆ,29: ಪುಸ್ತಕ ಬರೆಯುವ ಕನಸೊಂದು ನನ್ನ ಮನಸಿನ ಮೂಲೆಯಲ್ಲಿ ಕುಳಿತಿತ್ತು. ಕತೆ ಡಬ್ಬಿ ಮೂಲಕ ಇದು ಸಾಕಾರಗೊಂಡಿದೆ. ಮೊದಲ ಪುಸ್ತಕವಾಗಿದ್ದರಿಂದ ತುಂಬಾ ಸಂಭ್ರಮದಲ್ಲಿರುವೆ ಎಂದು ʻಕನ್ನಡತಿʼ ಖ್ಯಾತಿಯ ನಟಿ ರಂಜನಿ ರಾಘವನ್ ತಿಳಿಸಿದರು. ಬಹುರೂಪಿ ಹಮ್ಮಿಕೊಂಡಿದ್ದ ರಂಜನಿ ರಾಘವನ್ ಅವರ ಕಥಾ ಸಂಕಲನ ʻಕತೆ ಡಬ್ಬಿʼ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ʻಅವಧಿʼ ವೆಬ್ ಪತ್ರಿಕೆಯಲ್ಲಿ ವಾರಕ್ಕೊಮ್ಮೆ ಕತೆಗಳನ್ನು ಬರೆದೆ. ಅದಕ್ಕೆ ಬಂದ ಪ್ರತಿಕ್ರಿಯೆಗಳು ನನಗೆ ಉತ್ಸಾಹ ತುಂಬಿತು ಅದೇ ಕಾರಣವಾಗಿ ಕತೆ ಡಬ್ಬಿ ರೂಪುಗೊಂಡಿತು. ಮುಂದೆ ಕಾದಂಬರಿಯನ್ನು…