ಎಲ್ಲೆಲ್ಲೂ ಗ್ಯಾಸ್ ತಿಪ್ಪೇರುದ್ರಪ್ಪಮೇಷ್ಟು ಮತ್ತು ಅವರ ಮಾತು
ಎಲ್ಲೆಲ್ಲೂ ಗ್ಯಾಸ್ ತಿಪ್ಪೇರುದ್ರಪ್ಪಮೇಷ್ಟು ಮತ್ತು ಅವರ ಮಾತು “ಡಾಕ್ಟ್ರೇ, ಈ ಜನ ಬಾಯಿ ಕಟ್ಟುವುದಿಲ್ಲ ಸಿಕ್ಕಸಿಕ್ಕಿದ್ದು ತಿಂದು, ಔಷಧಿಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳದೆ ತಮ್ಮ ಆರೋಗ್ಯವನ್ನು ಹಾಳುಮಾಡಿಕೊಂಡು ಪರಿಸ್ಥಿತಿ ತೀರಾ ಬಿಗಡಾಯಿಸಿದಾಗ ಮಾತ್ರ ಆಸ್ಪತ್ರೆಗೆ ಓಡಿ ಬರುತ್ತಾರೆ. ಇಂತಹವರಿಗೆ ಎಂತಹ ಚಿಕಿತ್ಸೆ ಮಾಡಿದರೂ ಪ್ರಯೋಜನವಿಲ್ಲ” ಎಂದು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾಕ್ಟರ್ ಶಿವಶಂಕರ ಮೋಟೆಬೆನ್ನೂರ ಅವರ ಟೇಬಲ್ ಎದುರಿಗಿದ್ದ ಮರದ ಕುರ್ಚಿಯೊಂದರಲ್ಲಿ ಪೂರ್ತಿ ಹಿಂದಕ್ಕೆ ಒರಗಿದಂತೆ ಕುಳಿತು ಕಾಲುಗಳನ್ನು ನೀಳವಾಗಿ ಚಾಚಿ, ಮೂಗಿನ ತುದಿಗೆ…