ಶರೀರಮಾಧ್ಯಂ ಖಲು ಧರ್ಮಸಾಧನಂ
ಸಿದ್ಧಸೂಕ್ತಿ: ಶರೀರಮಾಧ್ಯಂ ಖಲು ಧರ್ಮಸಾಧನಂ. ಶಿವನನ್ನು ಒಲಿಸಿಕೊಳ್ಳಲು ಪರ್ವತರಾಜಕುಮಾರೀ ಪಾರ್ವತೀ ಕಠಿಣ ತಪೋಮಗ್ನಳಾಗಿ ಶರೀರವನ್ನು ದಂಡಿಸಿದ್ದನ್ನು ಕಂಡ ಶಿವನ ಮಾರುವೇಷದ ಬ್ರಹ್ಮಚಾರಿಯು ಪಾರ್ವತಿಗೆ ಹೇಳಿದ ಮಾತಿದು. ಶರೀರವು ಧರ್ಮಸಾಧನೆಗೆ ಮೂಲಾಧಾರ.ಅದನ್ನು ಚೆನ್ನಾಗಿ ಸಂರಕ್ಷಿಸಬೇಕು! ಶರೀರದಲ್ಲಿನ ಕಣ್ಣು ಕಿವಿ ಮೂಗು ಬಾಯಿ ಗುಪ್ತೇಂದ್ರಿಯ ಕೈ ಕಾಲು ಅವುಗಳ ಬೆರಳುಗಳನ್ನು,ಜೀವ ಮೆದುಳು ಹೃದಯ ಶ್ವಾಸಕೋಶ ಅನ್ನನಾಳ ಯಕೃತ್ ದೊಡ್ಡಕರುಳು ಸಣ್ಣಕರುಳು ಮೂತ್ರಕೋಶ ನರಮಂಡಲಗಳನ್ನು ಗಮನಿಸಿ. ಎಂಥ…