ಮಣೆಗಾರ-ಜಾತಿಯ ಹಂಗು ದಾಟಿದ ಶೋಷಕ ಜಗತ್ತು
ಮಣೆಗಾರ-ಜಾತಿಯ ಹಂಗು ದಾಟಿದ ಶೋಷಕ ಜಗತ್ತು ಇತರ ಪ್ರಕಾರಗಳಲ್ಲಿ ಹೊಸ ಬೆಳೆಗಳು ಕಾಣಿಸಿಕೊಂಡಂತೆ ಆತ್ಮಕಥೆಗಳ ವಿಚಾರಕ್ಕೆ ಬಂದರೂ ಹೊಸತುಗಳ ಪರ್ವ ಶುರುವಾಗಿದ್ದು( ಘಟನೆ,ಭಾಷೆ ಹಾಗೂ ತಾಂತ್ರಿಕ ವಿಧಾನಗಳು) ದಲಿತ ಆತ್ಮಕಥನಗಳಲ್ಲಿ ಎನ್ನಬಹುದು. ಬೆಳಕಿನ ಲೋಕ ಕಾಣದ ಅನುಭವವನ್ನು ದಲಿತರ ಕತ್ತಲ ಲೋಕ ಕನ್ನಡಕ್ಕೆ ತಂದು ಕೊಟ್ಟಿದೆ.ಆದರೆ ಉಳಿದ ಪ್ರಕಾರಗಳಿಗೆ ಸಿಕ್ಕಂತೆ ದಲಿತ ಆತ್ಮಕಥನಗಳಿಗೆ ಸಿಕ್ಕ ಮಾನ್ಯತೆಗಳು ಕಡಿಮೆಯೇ ಎನ್ನಬೇಕು. “ ಕನ್ನಡದ ದಲಿತ ಆತ್ಮಕಥನಗಳು ಮರಾಠಿಯಷ್ಟು ದಟ್ಟ ಅನುಭವಗಳನ್ನು ಹೊಂದಿಲ್ಲ” ಎಂಬ ವಿಮರ್ಶಕರ ಮೂಗು ಮುರಿಯುವಿಕೆಯನ್ನ ಮೀರಿ…