ಕಾರ್ಮಿಕರ ಸಮಸ್ಯೆಗಳನ್ನು ಕಾರ್ಖಾನೆಯ ಮಟ್ಟದಲ್ಲೇ ಪರಿಹರಿಸಿ- ಸಂತೋಷ್ ಲಾಡ್
ಬೆಂಗಳೂರು, ಮೇ 7- ಕಲಬುರಗಿ ಜಿಲ್ಲೆಯ ಮುಳಖೇಡದಲ್ಲಿರುವ ರಾಜಶ್ರೀ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ವಿಕಾಸಸೌಧದಲ್ಲಿ ಇಂದು ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಸಚಿವರು, ಕಾರ್ಖಾನೆಯ ನೌಕರರ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಬೇಕು. ಬೆಂಗಳೂರಿನವರೆಗೂ ಸಮಸ್ಯೆಗಳನ್ನು ತರಬಾರದು. ಒಂದೇ ಕಡೆ ಕೆಲಸ ಮಾಡುವವರು ಒಂದು ಕುಟುಂಬದಂತೆ ಇರಬೇಕು ಎಂದು ಸಲಹೆ ನೀಡಿದರು. ಮ್ಯಾನೇಜ್‌ಮೆಂಟ್ ಕಾರ್ಮಿಕರ ಸಮಸ್ಯೆಗಳ ಬಗ್ಗೆ ತಿಳಿಯದೇ ಇದ್ದರೆ ಕೇಳದೇ ಇದ್ದರೆ ಅವುಗಳು ಹೆಚ್ಚಾಗುತ್ತವೆ. ಸಮಸ್ಯೆಗಳನ್ನು…