Girl in a jacket

Author kendhooli_editor

ಫೆ 26 ರಿಂದ 3 ದಿನ ಬೆಂಗಳೂರಿನಲ್ಲಿ ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ

ಫೆ 26 ರಿಂದ 3 ದಿನ ಬೆಂಗಳೂರಿನಲ್ಲಿ ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ by ಕೆಂಧೂಳಿ ಬೆಂಗಳೂರು, ಫೆ,01- ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ (KITE)ರ ಎರಡನೇ ಆವೃತ್ತಿಯ ಸಮಾವೇಶಕ್ಕೆ ರಾಜ್ಯವು ಪ್ರವಾಸೋದ್ಯಮ ಇಲಾಖೆಯ ಮೂಲಕ ಸಜ್ಜಾಗಿದ್ದು,ಫೆಬ್ರವರಿ 26 ರಿಂದ 28 ರಂದು 3 ದಿನಗಳ ಕಾಲ ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ (KITE) BIEC, ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಅವರು ತಿಳಿಸಿದರು. ವಿಧಾನಸೌಧದ…

ಆಧಾಯ ತೆರಿಗೆದಾರರಿಗೆ ನಿರಾಳ, 12 ಲಕ್ಷದವರೆಗೆ ತೆರಿಗೆ ಇಲ್ಲ.

ಆಧಾಯ ತೆರಿಗೆದಾರರಿಗೆ ನಿರಾಳ 12 ಲಕ್ಷದವರೆಗೆ ತೆರಿಗೆ ಇಲ್ಲ. by ಕೆಂಧೂಳಿ ನವದೆಹಲಿ, ಫೆ,01- ಎಲ್ಲರ ನಿರೀಕ್ಷಯಂತೆ ಆಧಾಯ ತೆರಿಗೆದಾರರರಿಗೆ ಒಂದಿಷ್ಟು ವಿನಾಯಿತಿ ನೀಡಿದ್ದು 12 ಲಕ್ಷದವರೆಗೆ ತೆರಿಗೆ ಇಲ್ಲ ಎನ್ನುವುದನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ಸರ್ಕಾರ ತನ್ನ 2 ನೇ ಪೂರ್ಣ ಬಜೆಟ್ ಮಂಡನೆಯಾಗುತ್ತಿದ್ದು, ಹಣಕಾಸು ನಿರ್ಮಲಾ ಸೀತಾರಾಮನ್ ಅವರು ಸತತ 8 ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ನಿರ್ಮಲಾ…

ಶ್ರೀರಾಮುಲುಗೂ ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು

ಶ್ರೀರಾಮುಲುಗೂ ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು by ಕೆಂಧೂಳಿ ಚಿತ್ರದುರ್ಗ, ಫೆ,01-ರಾಜ್ಯ ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಈಗ ಮಾಜಿ ಸಚಿವ ಶ್ರೀರಾಮುಲು ಸೇರ್ಪಡೆಗೊಂಡಿದ್ದಾರೆ. ಚಿತ್ರದುರ್ಗದಲ್ಲಿ ಸುದ್ದಿಮಾಧ್ಯಮಗಳ ಜೊತೆ ಮಾತನಾಡಿದ ಅವರು ದೆಹಲಿ ಚುನಾವಣೆ ನಂತರ ಹೈಕಮಾಂಡ್ ಬೇಟಿಯಾಗಿ ಮಾತುಕತೆ ನಡೆಸಲಿದ್ದೇನೆ ಎಂದಿದ್ದಾರೆ. ಸಮಯ ನೋಡಿಕೊಂಡು ಹೋಗಿ ಎಲ್ಲಾ ವಿಚಾರಗಳನ್ನು ತಿಳಿಸುತ್ತೇನೆ. ಬಿಜೆಪಿಯಲ್ಲಿ ನಾನು ತುಂಬಾ ವರ್ಷ ಸೀನಿಯರ್‌ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ರಾಜಕಾರಣದಲ್ಲಿ ನಾನು ಬಿಜೆಪಿಯಲ್ಲಿ ಇದ್ದೇನೆ. ಒಬ್ಬರಿಗೆ…

ನಕ್ಸಲೇಟ್ ಕೋಟೆ ಹೊಂಡ ರವಿ ಶರಣಾಗತಿ

ನಕ್ಸಲೇಟ್  ಕೋಟೆ ಹೊಂಡ ರವಿ ಶರಣಾಗತಿ by-ಕೆಂಧೂಳಿ ‌ಬೆಂಗಳೂರು,ಫೆ,011-ಕೊನೆಗೂ ಭೂಗತ ನಕ್ಸಲ್ ಕೋಟೆ ಹೊಂಡ ರವಿ ಪೊಲೀಸರಿಗೆ ಶರಣಾಗಿದ್ದಾನೆ. ಚಿಕ್ಕಮಗಳೂರು ಸಮೀಪ ನೆಮ್ಮೂರು ಪಾರೆಸ್ಟ್ ಐಬಿಯಲ್ಲಿ ಶರಣಾಗಿದ್ದಾನೆ ಎಂದಿರುವ ಪೊಲೀರು ಶರಣಾಗಿರುವ ರವಿಯನ್ನು ಚಿಕ್ಕಮಗಳೂರಿಗೆ ಕರೆತಂದುಎಸ್ ಪಿ ಮುಂದೆ ನಾಳೆ ಮಧ್ಯಾಹ್ನ 12 ಗಂಟೆಗೆ ಶರಣಾಗತಿ ಪ್ರಕ್ರಿಯೆ ಮಾಡುವುದಾಗಿ ತಿಳಿಸಿದ್ದಾರೆ. ಕಳೆದ ತಿಂಗಳು ಆರು ಮಂದಿ ನಕ್ಸಲೀಯರು ಶರಣಾಗಿದ್ದರು ,ಆದರೆ ರವೀ ನಾಪತ್ತೆಯಾಗಿದ್ದರು,ಕೊನೆಘಳಿಗೆಯಲ್ಲಿ ಶರಣಾಗತಿ ತಂಡದಿಂದ ನಾಪತ್ತೆಯಾಗಿದ್ದರು.ಅಂದಿನಿಂದ ಪೊಲೀಸರು ಈತನ ಪತ್ತೆಗಾಗಿ ಶೋಧಿಸುತ್ತಿದ್ದರು,ನಿನ್ನೆ ರವೀ ಪೊಲೀಸರಗೆ ಶರಣಾಗಿದ್ದಾನೆ.…

ಎಎಪಿಗೆ ಗುಡ್ ಬೈ ಹೇಳಿದ ಏಳು ಹಾಲಿ ಶಾಸಕರು,ಪಕ್ಷಕ್ಕೆ ಹಿನ್ನಡೆ

ಎಎಪಿಗೆ ಗುಡ್ ಬೈ ಹೇಳಿದ ಏಳು ಹಾಲಿ ಶಾಸಕರು ,ಪಕ್ಷಕ್ಕೆ ಹಿನ್ನಡೆ     by-ಕೆಂಧೂಳಿ ನವದೆಹಲಿ,ಫೆ,೦೧- ಎಎಪಿಗೆ ಬಿಗ್ ಶಾಕ್..ಚುನಾವಣೆ ಹೊತ್ತಿನಲ್ಲಿಯೇ ಪಕ್ಷದ ಏಳು ಮಂದಿ ಹಾಸಿ ಶಾಸಕರು ರಾಜೀನಾಮೆ ನೀಡುವ ಮೂಲಕ ತೀವ್ರ ಆತಂಕ ಮೂಡಿಸಿದ್ದಾರೆ. ಎಎಪಿಯ ಕೆಲವು ನೆಡೆಗಳು ಪಕ್ಷದಿಂದ ನಿರ್ಗಮಿಸಲು ಕಾರಣ ಎನ್ನುವುದೂ ಸೇರಿದಂತೆ ಇತ್ತೀಚೆನ ಕೇಜ್ರಿವಾಲ್ ನಡೆಗಳು ಕೂಡ ಅನುಮಾನ ತಂದಿದ್ದವು ಆಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ ಇನ್ನು ಒಂದು ವಾರ ಚುನಾವಣೆ ಇರುವಾಗಲೆ ಈ ಏಳು ಜನರ ರಾಜೀನಾಮೆ…

ವಿಜಯೇಂದ್ರ ಬದಲಾಯಿಸಲು ಹೈಕಮಾಂಡ್‌ಗೆ ಭಿನ್ನರ ಒತ್ತಾಯ

ವಿಜಯೇಂದ್ರ ಬದಲಾಯಿಸಲು ಹೈಕಮಾಂಡ್‌ಗೆ ಭಿನ್ನರ ಒತ್ತಾಯ by-ಕೆಂಧೂಳಿ ನವದೆಹಲಿ,ಫೆ,೦೧- ಬಿಜೆಪಿ ಬಿನ್ನರ ಬಣ ಹೈಕಮಾಂಡ್ ಬೇಟಿಯಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರನ್ನು ಬದಲಾವಣೆ ಮಾಡದೆ ಹೋದರೆ ಅಧ್ಯಕ್ಷರ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ನಮ್ಮ ಬಣದಿಂದ ಕಣಕ್ಕಿಳಿಸುತ್ತೇವೆ ಎಂದು ತಿಳಿಸಿದ್ದಾರೆ ಶುಕ್ರವಾರ ಬಿನ್ನರ ಬಣ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ನಡ್ಡ ಅವರನ್ನು ಭೇಟಿಯಾಗಿ ಕರ್ನಾಟಕ ರಾಜ್ಯಘಟಕದ ಅಧ್ಯಕ್ಷ ವಿಜಯೇಂದ್ರ ಅವರ ದೋರಣೆ ಕುರಿತು ವಿವರಿಸಿದರು ಎನ್ನಲಾಗಿದೆ. ಭಿನ್ನರ ಬಣದ ನಾಯಕ ಅರವಿಂದ ಲಿಂಬಾವಳಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ…

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಜಯ

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಜಯ by ಕೆಂಧೂಳಿ ಪುಣೆ,ಜ,೩೧-ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕನೇ ೧ಇ-೨೦ ಪಂದ್ಯದಲ್ಲಿ ಬಾರತ ಜಯಸಾಧಿಸಿತು. ಪುಣೆಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡವು ೯ ವಿಕೆಟ್‌ಗಳ ನಷ್ಟಕ್ಕೆ ೧೮೧ ರನ್ ಕಲೆ ಹಾಕಿತ್ತು. ಇದನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ ೨೦ ಓವರ್‌ಗಳಲ್ಲಿ ೧೬೬ ರನ್ ಗಳಿಸುವ ಮೂಲಕ ೧೫ ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿದೆ. .ಬ್ಯಾಟಿಂಗ್‌ಗೆ ಬಂದ ಭಾರತ ತಂಡಕ್ಕೆ ಆರಂಭದಲ್ಲೇ ಆಘಾತ ಕಾದಿತ್ತು. ಈ…

ಭಾರತವನ್ನು ಜಾಗತಿಕ ನಾವೀನ್ಯಶಕ್ತಿಯನ್ನಾಗಿ ಮಾಡುವುದೇ ಗುರಿ-ರಾಷ್ಟ್ರಪತಿ

ಭಾರತವನ್ನು ಜಾಗತಿಕ ನಾವೀನ್ಯಶಕ್ತಿಯನ್ನಾಗಿ ಮಾಡುವುದೇ ಗುರಿ-ರಾಷ್ಟ್ರಪತಿ byಕೆಂಧೂಳಿ ನವದೆಹಲಿ,ಜ,೩೧-ಭಾರತವನ್ನು ಜಾಗತಿಕ ನಾವೀನ್ಯತೆ ಶಕ್ತಿ ಕೇಂದ್ರವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿ, ಭಾರತ ಂI ಮಿಷನ್ ನ್ನು ಪ್ರಾರಂಭಿಸಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮಾ ಹೇಳಿದರು ಇಂದು ಶುಕ್ರವಾರ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಭಯ ಸದನಗಳ ಜಂಟಿ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. ಅದರಲ್ಲಿ ಹಲವು ವಿಷಯಗಳನ್ನು ಅವರು ಪ್ರಸ್ತಾಪಿಸಿದ್ದಾರೆ. ಕೇಂದ್ರ ಸರ್ಕಾರದ ಮೂರನೇ ಅವಧಿಯು ಹಿಂದಿನ ಆಡಳಿತಗಳಿಗಿಂತ ಮೂರು…

ಬಿಜೆಪಿ ರೆಬಲ್ ಪಡೆಯಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಸರು ಫೈನಲ್

ಬಿಜೆಪಿ ರೆಬಲ್ ಪಡೆಯಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಸರು ಫೈನಲ್ by ಕೆಂಧೂಳಿ ಬೆಂಗಳೂರು,ಜ,೩೧- ಬಿಜೆಪಿ ಬಣ ಬಡಿದಾಟ ದಿನಕ್ಕೊಂದು ರೂಪ ಪಡೆಯುತ್ತಿದ್ದರೆ, ಈಗ ಬಿಜೆಪಿ ರಾಜ್ಯಧ್ಯಾಕ್ಷ ಚುನಾವಣೆಯತ್ತ ಎಲ್ಲರ ಕಣ್ಣು ನೆಟ್ಟಿದೆ. ಈ ಹಿನ್ನೆಲೆಯಲ್ಲಿ ರೆಬಲ್ ಬಣ ಬಿ.ವೈ.ವಿಜಯೇಂದ್ರ ವಿರುದ್ಧ ಯಾರನ್ನು ಕಣಕ್ಕಿಳಿಸಬೇಕು ಎನ್ನುವ ಕುರಿತು ಫೈನಲ್ ಮಾಡಿದೆಯಂತೆ. ಈ ಬಗ್ಗೆ ಇಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲಿ ಸಭೆ ಸೇರಿದ್ದ ರೆಬಲ್ ಕಮಲ ಪಡೆ ಯಾರನ್ನು ಇಳಿಸಿದರೆ ಗೆಲುವು ಸಾಧಿಸಬಹುದು ಎನ್ನುವ ಕುರಿತು…

ರಾಜ್ಯದ ಹಲವೆಡೆ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತರ  ದಾಳಿ 

ರಾಜ್ಯದ ಹಲವೆಡೆ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತರ  ದಾಳಿ      by ಕೆಂಧೂಳಿ ಬೆಂಗಳೂರು, ಜ,31- ರಾಜ್ಯದ ಹಲವೆಡೆ ಲೋಕಾಯುಕ್ತರು ಬೆಳ್ಳಂಬೆಳಿಗ್ಗೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಸಾರಿದ್ದಾರೆ. ರಾಯಚೂರು ,ಬೆಳಗಾವಿ ಮತ್ತು ಬಾಗಲಕೋಟೆಯ ಅಧಿಕಾರಿಗಳ ಮನೆ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಬಾಗಲಕೋಟೆಯಲ್ಲಿ ಪಿಡಿಒ ಎಸ್.ಪಿ. ಹಿರೇಮಠ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.ಬಾಗಲಕೋಟೆಯ ವಿದ್ಯಾಗಿರಿಯಲ್ಲಿರುವ ಹೊಲಗೇರಿ ಗ್ರಾಮ ಪಂಚಾಯಿತಿ ಪಿಡಿಒ ಹಿರೇಮಠ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಲೋಕಾಯುಕ್ತ…

ಸತ್ಯೋತ್ತರ ಯುಗದಲ್ಲಿ ʼ ಗಾಂಧಿ ʼ ಎಂಬ ರೂಪಕ

ಸತ್ಯೋತ್ತರ ಯುಗದಲ್ಲಿ ʼ ಗಾಂಧಿ ʼ ಎಂಬ ರೂಪಕ —-ನಾ ದಿವಾಕರ,ಚಿಂತಕರು,ಲೇಖಕರು 21ನೇ ಶತಮಾನದ ಡಿಜಿಟಲ್‌ ಜಗತ್ತು ಜಾಗತಿಕ ಬೌದ್ಧಿಕ ಸಂಕಥನಗಳಲ್ಲಿ ಸತ್ಯೋತ್ತರ ಯುಗ ಎಂದೇ ಗುರುತಿಸಲ್ಪಟ್ಟಿದೆ. ಅಂದರೆ ಸತ್ಯದ ಯುಗವನ್ನು ದಾಟಿದ್ದೇವೆ ಎಂದೇನೂ ಅರ್ಥೈಸಬೇಕಿಲ್ಲ. 20ನೇ ಶತಮಾನವನ್ನು ದಾಟುವವರೆಗೂ ಜಗತ್ತಿನ, ವಿಶೇಷವಾಗಿ ಭಾರತದ ಸಾಮಾಜಿಕ ಚರ್ಚೆಗಳಲ್ಲಿ, ಬೌದ್ಧಿಕ ಸಂವಾದ ಮತ್ತು ಸಂಕಥನಗಳಲ್ಲಿ ಸ್ವಲ್ಪಮಟ್ಟಿಗಾದರೂ ಕಾಣಬಹುದಾಗಿದ್ದ ಸತ್ಯದ ಸುಳಿಗಳು ಕಳೆದ ಎರಡು ದಶಕಗಳಲ್ಲಿ ಮರೆಯಾಗಿ ಹೋಗಿವೆ. ಈಗ ಭಾರತ ಸುಳ್ಳುಗಳ ನಡುವೆ ಬದುಕುತ್ತಿದೆ. ಪೌರಾಣಿಕ ಮಿಥ್ಯೆಗಳನ್ನು ಸತ್ಯ…

ದಾವಣಗೆರೆಯಲ್ಲಿ ಫೆ 7 ರಿಂದ 9 ವರೆಗೆ ರಾಷ್ಟ್ರೀಯ ಅಕ್ಷರ ಹಬ್ಬ

ದಾವಣಗೆರೆಯಲ್ಲಿ ಫೆ 7 ರಿಂದ 9 ವರೆಗೆ ರಾಷ್ಟ್ರೀಯ ಅಕ್ಷರ ಹಬ್ಬ by ಕೆಂಧೂಳಿ ದಾವಣಗೆರೆ,ಜ,30: ಸೃಜನಶೀಲ ಸಾಹಿತ್ಯವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ‘ದಾವಣಗೆರೆ ರಾಷ್ಟ್ರೀಯ ಅಕ್ಷರ ಹಬ್ಬ’ವನ್ನು ಫೆ.7ರಿಂದ 9ರವರೆಗೆ ಹಮ್ಮಿಕೊಳ್ಳಲಾಗಿದೆ ‘ಬೆಂಗಳೂರು, ಮೈಸೂರು, ಧಾರವಾಡದಲ್ಲಿ ನಡೆಯುತ್ತಿದ್ದ ಸಾಹಿತ್ಯ ಹಬ್ಬವನ್ನು ಅರಸಿ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಮಧ್ಯ ಕರ್ನಾಟಕದಲ್ಲಿ ಆಯೋಜಿಸಲಾಗಿದೆ. ಸಾಹಿತ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಪ್ರಯತ್ನದ ಭಾಗವಾಗಿ ಈ ಹಬ್ಬ ರೂಪುತಳೆದಿದೆ. ಕಥೆ, ಕಾವ್ಯ, ಕಾದಂಬರಿ ಮತ್ತು ರಂಗಭೂಮಿ ಕೇಂದ್ರೀಕರಿಸಿ ಉತ್ಸವ…

ಸಂಸದ ಸುಧಾಕರ್ ವಿರುದ್ದ ಕಿಡಿಕಾರಿದ ವಿಜಯೇಂದ್ರ

ಸಂಸದ ಸುಧಾಕರ್ ವಿರುದ್ದ ಕಿಡಿಕಾರಿದ ವಿಜಯೇಂದ್ರ by ಕೆಂಧೂಳಿ ಬೆಂಗಳೂರು, ಜ,30- ಚಿಕ್ಕಬಳ್ಳಾಪುರ ವಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ ಕುರಿತಂತೆ ಸಂಸದ ಡಾ.ಕೆ.ಸುಧಾಕರ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ನಡೆಸಿದ್ದ ವಾಗ್ದಾಳಿಗೆ ವಿಜಯೇಂದ್ರ ಕಡಕ್ ಉತ್ತರ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ನನ್ನ ಹಸ್ತಕ್ಷೇಪವಿಲ್ಲ. ಪಕ್ಷ ನನ್ನ ಸ್ವತ್ತೂ ಅಲ್ಲ. ಅವರ ಸ್ವತ್ತೂ ಅಲ್ಲ, ಮುಂದಿನ ಬಾರಿ ಸಿಎಂ ಆಗಲು ನಾನು ಸಂಘಟನೆ ಮಾಡುತ್ತಿಲ್ಲ ಹಗುರವಾಗಿ ಮಾತನಾಡುವುದು…

ಮಹಾತ್ಮಾಗಾಂಧೀಜಿಯವರ ಹೋರಾಟದ ಬದುಕು ಪ್ರೇರಣಾದಾಯಕ- ಸಿಎಂ

ಮಹಾತ್ಮಾಗಾಂಧೀಜಿಯವರ ಹೋರಾಟದ ಬದುಕು ಪ್ರೇರಣಾದಾಯಕ- ಸಿಎಂ by ಕೆಂಧೂಳಿ ಬೆಂಗಳೂರು, ಜ, 30- ಗಾಂಧೀಜಿಯವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ. ತನ್ನ ಜೀವನವೇ ಒಂದು ಸಂದೇಶ ಎಂದು ನುಡಿದಿದ್ದ ಮಹಾತ್ಮಾ ಗಾಂಧೀಜಿಯವರ ಹೋರಾಟದ ಬದುಕು ಪ್ರೇರಣಾದಾಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಧಾನಸೌಧದಲ್ಲಿ ಮಹಾತ್ಮಾಗಾಂಧಿಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮಾಧ್ಯಮದವರೊಂದಿಗೆ ಮಾತನಾಡಿದರು. ಜನವರಿ 30 , 1948 ರಂದು ಮತಾಂಧನಾಗಿದ್ದ ನಾಥುರಾಮ್ ಗೋಡ್ಸೆ ಮಹಾತ್ಮಾ ಗಾಂಧೀಜಿಯವರನ್ನು ಹತ್ಯೆ ಮಾಡಿದ ದಿನ. ಗಾಂಧೀಜಿಯವರು ಇಹಲೋಕವನ್ನು ತ್ಯಜಿಸಿದ್ದರೂ, ಅವರ…

ಹಿಂದಿವಾಲಾಗಳ ಬುಲ್ಡೋಜರ್ ಬಾಬಾ ಯೋಜನೆಯನ್ನು ಕನ್ನಡ ನಾಡಿನಲ್ಲಿ ಹೇರಿದ ಸುಪ್ರೀಂ ಕೋರ್ಟ್

ಹಿಂದಿವಾಲಾಗಳ ಬುಲ್ಡೋಜರ್ ಬಾಬಾ ಯೋಜನೆಯನ್ನು ಕನ್ನಡ ನಾಡಿನಲ್ಲಿ ಹೇರಿದ ಸುಪ್ರೀಂ ಕೋರ್ಟ್ ಡಾ ಬಸವರಾಜ್ ಇಟ್ನಾಳ,ಹಿರಿಯ ಪತ್ರಕರ್ತರು ಸನ್ಮಾನ್ಯ ಸಿದ್ದರಾಮಯ್ಯ ಮತ್ತು ಸನ್ಮಾನ್ಯ ಡಿಕೆ ಶಿವಕುಮಾರ್ ಅವರೇ, ಬುಲ್ಡೋಜರ್ ಬಾಬಾ ಯೋಜನೆ ಕರ್ನಾಟಕದಲ್ಲಿ ಆತ್ಮ ಹತ್ಯೆಗಳ ಹೊಸ ಸರಣಿ ಆರಂಭಿಸುವ ರೂಪು ರೇಷೆ ತಮ್ಮ ಅಧಿಕಾರಿಗಳು ಸಿದ್ಧ ಪಡಿಸಿದ ಪರಿ ನೋಡಿ. ಉತ್ತರ ಪ್ರದೇಶ ಈ ದೇಶದ ಅತ್ಯಂತ ಹಿಂದುಳಿದ ಮತ್ತು ಕಾನೂನುರಹಿತ ಪ್ರದೇಶ. ಎಲ್ಲೆಂದರಲ್ಲಿ ಕೊಲೆ ಸುಲಿಗೆ ರೇಪ್ ಇತ್ಯಾದಿಗಳು ಬಿಡಿ, ಕಿಡ್ನ್ಯಾಪ್ ಮಾಡಿ ಬ್ಲಾಕ್…

ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಆಗ್ರಹ

ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಆಗ್ರಹ     by ಕೆಂಧೂಳಿ ಬೆಂಗಳೂರು, ಜ,30-ರಾಜ್ಯದಲ್ಲಿ ನೆನಗುದಿಗೆ ಬಿದ್ದಿರುವ ಜಿಲ್ಲಾ ಪಂಚಾಯತ್,ತಾಲ್ಲೂಕು ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಕೂಡಲೇ ನಡೆಸಬೇಕು’ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್, ‘ಗ್ರಾಮ ಸ್ವರಾಜ್ಯದ ಪರಿಕಲ್ಪನೆಯ ಮೂಲಕ ಭಾರತದಲ್ಲಿ ಸ್ವಾವಲಂಬಿ ಗ್ರಾಮಗಳ ಸ್ಥಾಪನೆ ಗಾಂಧೀಜಿ ಅವರ ಕನಸಾಗಿತ್ತು. ಅದಕ್ಕಾಗಿ ಅವರು ಪ್ರತಿ ಗಾಮದಲ್ಲೂ ಪಂಚಾಯಿತಿಗಳ ಸ್ಥಾಪನೆಗೆ…

ವಿಜಯೇದ್ರ ವಿರುದ್ಧ  ಯುದ್ಧಕ್ಕಿಳಿದ ಸುಧಾಕರ್

ವಿಜಯೇದ್ರ ವಿರುದ್ಧ  ಯುದ್ಧಕ್ಕಿಳಿದ ಸುಧಾಕರ್ by ಕೆಂಧೂಳಿ ಬೆಂಗಳೂರು, ಜ,29-ಬಿಜೆಪಿಯಲ್ಲಿ ಮತ್ತಷ್ಟು ಅಸಮಾಧಾನಿತರ ಸಂಖ್ಯೆ ಹೆಚ್ಚಾಗಿದ್ದು ಆ ಲೀಸ್ಟ್ ಗೆ ಮಾಜಿ ಸಚಿವ,ಹಾಲಿ ಸಂಸದ ಡಾ.ಸುಧಾಕರ್ ಸೇರಿದ್ದಾರೆ. ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರೆ ವಿರುದ್ದ ಬಂಡಾಯ ಹೇಳುತ್ತಿರುವವರಲ್ಲಿ ಸುಧಾಕರ್ ಸೇರ್ಪಡೆಯಾಗಿದ್ದು ವಿಜಯೇಂದ್ರ ನಡೆ ವಿರುದ್ದ ಕಿಡಿಕಾರಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಾ.ಸುಧಾಕರ್ ,ವಿಜಯೇಂದ್ರ ದರ್ಪ,ಅಹಂಕಾರ ಸಹಿಸಿಕೊಂಡು ಸಾಕಾಗಿದೆಇನ್ನೇನಿದ್ದರು ಯುದ್ದಮಾಡುವುದೊಂದೆ ಬಾಕಿ ಎಂದಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ, ಕೇಂದ್ರ ನಾಯಕರ ಗಮನಕ್ಕೆ ತಂದಿರುವೆ. ಚುನಾವಣೆಯಲ್ಲಿ ನನ್ನನ್ನು ಸೋಲಿಸಿದವರಿಗೆ ಮಣೆ. ರಿಯಲ್…

ಮಂಡ್ಯದಲ್ಲಿ ನೂತನ ಕೃಷಿ, ತೋಟಗಾರಿಕೆ ವಿವಿಗೆ ಸಿಕ್ತು ಸರ್ಕಾರದ ಅನುಮೋದನೆ..

ಮಂಡ್ಯದಲ್ಲಿ ನೂತನ ಕೃಷಿ, ತೋಟಗಾರಿಕೆ ವಿವಿಗೆ ಸಿಕ್ತು ಸರ್ಕಾರದ ಅನುಮೋದನೆ.   by ಕೆಂಧೂಳಿ ಬೆಂಗಳೂರು ಜ 29-ಮಂಡ್ಯ ಜಿಲ್ಲೆ, ವಿ.ಸಿ ಫಾರಂನಲ್ಲಿ ನೂತನ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ (ಸಮಗ್ರ) ಸ್ಥಾಪನೆಗೆ ರಾಜ್ಯ ಸರ್ಕಾರ ತಾತ್ವಿಕ ಅನುಮೋದನೆ ನೀಡಿ ಆದೇಶ ಹೊರಡಿಸಿದ್ದು, ಮಂಡ್ಯ ಜಿಲ್ಲೆ ಸೇರಿದಂತೆ ಮೈಸೂರು ವಿಭಾಗದ ಜನರ ಬಹುದಿನಗಳ ಕನಸು ಈಡೇರಿದೆ. 2024-25ನೇ ಸಾಲಿನ ಬಜೆಟ್ ಭಾಷಣದ ಕಂಡಿಕೆ-42ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮಂಡ್ಯ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯ ಸಾಧ್ಯತೆ ಕುರಿತು ಪರಿಶೀಲನೆಗೆ ಸಮಿತಿ…

ವೈಜ್ಞಾನಿಕ ಚಿಂತನೆ ಅಳವಡಿಸಿಕೊಳ್ಳಲು ಕರೆ

ವೈಜ್ಞಾನಿಕ ಚಿಂತನೆ ಅಳವಡಿಸಿಕೊಳ್ಳಲು ಕರೆ by ಕೆಂಧೂಳಿ ಚಿತ್ರದುರ್ಗ,ಜ,29-ನಮ್ಮ ಜನಗಳಿಗೆ ವಿಜ್ಞಾನದ ಆವಿಷ್ಕಾರಗಳು ಬೇಕು ಆದರಿಂದ ಕಂಡು ಹಿಡಿದ ಮೊಬೈಲ್ .ಟಿ.ವಿ. ವಾಟ್ಸಾಪ್, ಕಾರುಗಳು ಬೇಕು, ಆದರೆ ವೈಜ್ಞಾನಿಕವಾದ ಚಿಂತನೆ ಬೇಡವಾಗಿದೆ ಎಂದು ರಾಷ್ಟ್ರೀಯ ವಿಚಾರವಾದಿಗಳ ಸಂಘ, ಕರ್ನಾಟಕದ ಅಧ್ಯಕ್ಷರಾದ ಪ್ರೊ. ನರೇಂದ್ರ ನಾಯಕ್ ತಿಳಿಸಿದರು. ಚಿತ್ರದುರ್ಗ ನಗರದ ಹೊರವಲಯದ ಭೋವಿಗುರುಪೀಠದಲ್ಲಿ ಎಸ್.ಜೆ.ಎಸ್. ಸಮೂಹ ಸಂಸ್ಥೆವತಿಯಿಂದ ಎಸ್‍ಜೆಎಸ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ವೈಜ್ಞಾನಿಕತೆಗಿರುವ ಸವಾಲು ಹಾಗೂ ಪರಿಹಾರೋಪಾಯಗಳು” ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಮಾನವರಾದವರು ಯಾವುದೇ ವಿಷಯವನ್ನು ಪ್ರಶ್ನಿಸದೇ…

ಸಂಚಾರಿ ನಿಯಮಗಳನ್ನು ಪಾಲಿಸಲು ಸಲಹೆ

ಸಂಚಾರಿ ನಿಯಮಗಳನ್ನು ಪಾಲಿಸಲು ಸಲಹೆ by ಕೆಂಧೂಳಿ ಚಿತ್ರದುರ್ಗ, ಜ,29- ಸಂಚಾರ ನಿಯಮಗಳನ್ನು ತಪ್ಪದೇ ವಾಹನ ಸವಾರರೆಲ್ಲರೂ ಸಾಮಾನ್ಯವಾಗಿ ಎಲ್ಲರೂ ಪಾಲಿಸಿದರೆ ಅನೇಕ ಅಪಘಾತ ಹಾಗೂ ಆಘಾತಗಳು ಆಗುವುದಿಲ್ಲ ಎಂದು ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಭರತ್.ಎಂ. ಕಾಳಿಸಿಂಗೆ ಅವರು ಸಲಹೆ ಮಾಡಿದರು. ಅವರು ನೆಹರು ಯುವ ಕೇಂದ್ರ,ಭಾರತೀಯ ರೆಡ್ ಕ್ರಾಸ್ ಸಂಸ್ಥೆ,ಪ್ರಾದೇಶಿಕ ಸಾರಿಗೆ ಕಛೇರಿ ಚಿತ್ರದುರ್ಗ,ಎಸ್. ಜೆ.ಎಂ ಪಾಲಿಟೆಚ್ನಿಕ್ ಮತ್ತು ಶ್ರೀ ನೀಲಕಂಠ ಮೆಮೋರಿಯಲ್ ಪ್ಯಾರಾಮೆಡಿಕಲ್ ಕಾಲೇಜು ಚಿತ್ರದುರ್ಗ,ಇವರುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟೀಯ ರಸ್ತೆ ಸುರಕ್ಷತಾ…

1 11 12 13 14 15 96
Girl in a jacket