ತೌತೆ ಚಂಡಮಾರುತಕ್ಕೆ ಮಹಾರಾಷ್ಟ್ರ,ಗುಜರಾತ್ನಲ್ಲಿ ೩೩ ಸಾವು
ನವದೆಹಲಿ,ಮೇ,೧೯: ಕಳೆದ ಎರಡು ದಿನಗಳಿಂದ ತೌತೆ ಚಂಡ ಮಾರುತದ ಅಬ್ಬರ ಹೆಚ್ಚಾಗಿದ್ದು ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಭಾರಿ ಅನಾಹುತ ಸೃಷ್ಟಿಸಿದ್ದು ಎರಡು ರಾಜ್ಯಗಳಲ್ಲಿ ಒಟು ೩೩ ಮಂದಿ ಸಾವನ್ನಪ್ಪಿದ್ದಾರೆ ೧೦೦ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ, ಸೋಮವಾರ ಬೆಳಗಿನಿಂದಲೂ ಆರಂಭವಾಗಿದ್ದು ಈ ಚಂಡಮಾರುತದ ತೀವ್ರತೆ ಈ ಎರಡು ರಾಜ್ಯಗಳ ಕಡಲ ತೀರದಲ್ಲಿ ದೈತ್ಯ ಅಲೆಗಳಿಗೆ ಕೆಲವು ಐತಿಹಾಸಿಕ ಸ್ಮಾರಕಗಳು ಹಾನಿಗೊಳಗಾಗಿವೆ. ಮಂಗಳವಾರ, ಮಹಾರಾಷ್ಟ್ರ ಕರಾವಳಿಯಲ್ಲಿ ಚಂಡಮಾರುತದ ಪರಿಣಾಮ ಗಾಳಿಗೆ ಎದ್ದ ಸಮುದ್ರದ ದೈತ್ಯ ಅಲೆಗಳು ಗೇಟ್ವೇ ಆಫ್ ಇಂಡಿಯಾ,…




















