ಮುಗ್ಗಲಗೇಡಿಗೆ ಶಾಸ್ತ್ರ ಹೇಳಿದರೆ,.. ತೊಳಕೊಳ್ಳುದ ಬಿಟ್ಟಿತಂತೆ
ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಮುಗ್ಗಲಗೇಡಿಗೆ ಶಾಸ್ತ್ರ ಹೇಳಿದರೆ,.. ತೊಳಕೊಳ್ಳುದ ಬಿಟ್ಟಿತಂತೆ. ಮುಗ್ಗಲಗೇಡಿ=ಸೋಮಾರಿ. ಶಾಸ್ತ್ರ =ವೈರಾಗ್ಯ ಬೋಧಕ ವೇದಾಂತ. ಗುರುಗಳು ಪ್ರವಚನ ಮಾಡುತ್ತಿದ್ದರು:ಹುಟ್ಟು ಸಾವು, ಹಸಿವು ಬಾಯಾರಿಕೆ, ಸುಖ ದುಃಖ, ಇವೆಲ್ಲ ದೇಹಕ್ಕೆ. ಆತ್ಮನಿಗಲ್ಲ. ನಾನು ಆತ್ಮಾ, ದೇಹವಲ್ಲ. ಆತ್ಮಾ ನಿತ್ಯ, ಪರಿಪೂರ್ಣ, ನಿತ್ಯತೃಪ್ತ,ಸದಾ ಪರಿಶುದ್ಧ! ಹತ್ತಿರದ ಹುಟ್ಟು ಸೋಮಾರಿಯ ಕಿವಿಗೆ ಈ ಮಾತು ಬಿತ್ತು! ಪುಳಕಿತಗೊಂಡ, ಸಂತಸಪಟ್ಟ! ಶೌಚದ ನಂತರ ಒತ್ತಾಯಕ್ಕೆ… ತೊಳೆದುಕೊಳ್ಳುತ್ತಿದ್ದ ಆತ ಅಂದಿನಿಂದ ಅದನ್ನು ಬಿಟ್ಟ! “ನಾನು ಆತ್ಮಾ, ಪರಿಶುದ್ಧ” ಎಂದ…




















