ಎರಡು ವರ್ಷ ಸಾಧನೆ;ಸಚಿವರ ಜೊತೆ ಮೋದಿ ವೈಯಕ್ತಿಕ ಸಭೆ?
ನವದೆಹಲಿ,ಜೂ,೧೧:ಕೇಂದ್ರ ಸರ್ಕಾರದ ಎರಡು ವರ್ಷದಲ್ಲಿ ಆಗಿರುವ ಕೆಲಸ ಕುರಿತಂತೆ ಪ್ರಗತಿ ಪರಿಶೀಲನೆ ಮಾಡುತ್ತಿರುವ ಪ್ರಧಾನಿ ಮೋದಿ ಅವರು ಕೇಂದ್ರ ಸಚಿವರ ಜೊತೆ ವೈಯಕ್ತಿಕವಾಗಿ ಸಭೆ ನಡೆಸಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ ಈ ವೇಳೆ ತಮ್ಮ ವೈಯಕ್ತಿಕ ವರ್ಚಸ್ಸು ಮತ್ತು ಮುಂದಿನ ದಿನಗಳ ಸರ್ಕಾರದ ಯೋಜನೆಗಳ ಕುರಿತಂತೆಯೂ ಈ ಸಭೆಯಲ್ಲಿ ಚರ್ಚಿಸಲಾಗುತ್ತಿದೆ ಎನ್ನಲಾಗಿದೆ. ದೆಹಲಿಯ ೭ ಲೋಕ ಕಲ್ಯಾಣ ಮಾರ್ಗ್ನಲ್ಲಿರುವ ಪ್ರಧಾನಮಂತ್ರಿಗಳ ಅಧಿಕೃತ ನಿವಾಸದಲ್ಲಿ ಈ ಸಭೆ ನಡೆಯುತ್ತಿದ್ದು, ಈಗಾಗಲೇ ಇಂತಹ ಅಂತಹ ಮೂರು…