ಪ್ರಾಮಾಣಿಕತೆ ಮತ್ತು ಬದುಕಿನ ಹಾದಿ…
ಪ್ರಾಮಾಣಿಕತೆ ಮತ್ತು ಬದುಕಿನ ಹಾದಿ… ಅದು 1996ರ ಏಪ್ರಿಲ್ ಮಾಸ. ಜೆ. ಸಿ. ರಸ್ತೆಯಲ್ಲಿರುವ ಕೆನರಾಬ್ಯಾಂಕ್ ಪ್ರಧಾನಕಚೇರಿಯವರು ಗ್ರಾಮೀಣ ಭಾಗಗಳಲ್ಲಿ ತಾಂತ್ರಿಕ ಅಭಿವೃದ್ದಿಯನ್ನ ಹೇಗೆ ಕಾರ್ಯಗತಗೊಳಿಸಬಹುದು ಎನ್ನುವುದರ ಕುರಿತು ಮೂರು ದಿನಗಳ ಒಂದು ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದರು. ಬೆಂಗಳೂರು ಮೂಲದ ಎಲ್ಲಾ ದೊಡ್ಡ ಕಂಪನಿಗಳ ಪ್ರತಿನಿಧಿಗಳನ್ನೂ ಕಾರ್ಯಾಗಾರಕ್ಕೆ ಆಹ್ವಾನಿಸಿದ್ದರು. ನಾನು ಮತ್ತು ನನ್ನ ಹಿರಿಯ ಸಹೋದ್ಯೋಗಿ ಜೈನ್ ಈ ಕಾರ್ಯಾಗಾರದಲ್ಲಿ ನಮ್ಮ ಕಂಪನಿಯ ಪ್ರತಿನಿಧಿಗಳು ಎಂದು ನಾಮಕರಣ ಮಾಡಲ್ಪಟ್ಟಿದ್ದೆವು. ಕಂಪನಿಯವತಿಯಿಂದ ಕಾರ್ಯಾಗಾರಕ್ಕೆ ಬಂದ ಎಲ್ಲಾ ಪ್ರತಿನಿಧಿಗಳಿಗೆ ಸಣ್ಣ…
                                        



















