ಆರೋಗ್ಯವೇ ಭಾಗ್ಯ
ಸಿದ್ಧಸೂಕ್ತಿ : ಆರೋಗ್ಯವೇ ಭಾಗ್ಯ. ಆರೋಗ್ಯ ಬದುಕ ಬುನಾದಿ. ದೀರ್ಘ ಬಾಳು. ಅದಿರೆ ಸಾಧ್ಯ ಸಾಧನೆ ಸಿದ್ಧಿ! ಇಲ್ಲದಿರೆ ಪರಪೀಡೆ, ಭುವಿಗೆ ಭಾರ! ಹಣ ಆಸ್ತಿ ಹೆಣ್ಣು ಗಂಡು ಮಕ್ಕಳು ಮಿತ್ರ ಭಾಂಧವರಿಗಾಗಿ ಎಲ್ಲ ಎನ್ನುವೆವು. ಆರೋಗ್ಯ ತಪ್ಪಿದಾಗ ಕೈಬಿಟ್ಟು ಎಲ್ಲವನು ಮಾರಿ, ಸಾಲ ಮಾಡಿ, ವಿದೇಶದಲಿ ಚಿಕಿತ್ಸೆ! ಬೆಲೆ ಕಟ್ಟದ ಕಣ್ಣು ಕಿವಿ ನಾಲಿಗೆ ಮೆದುಳು ರಕ್ತ ಹೃದಯ ಕಿಡ್ನಿ ಶ್ವಾಸನಾಳ ನಿರ್ಮಿಸಿದ ಅಗೋಚರ ಶಕ್ತಿ ಭಗವಂತ ಇಲ್ಲೆನ್ನುವೆವು! ತಿನ್ನಬಾರದ್ದನ್ನು ತಿಂದು, ಕುಡಿಯಬಾರದ್ದನ್ನು ಕುಡಿದು, ಆಡಬಾರದ್ದನ್ನು…




















