ಅಂಕಣ
ಸನ್ನತಿ ಎಂಬ ಪ್ರಾಚೀನ ಬೌದ್ಧ ಕೇಂದ್ರವೂ…
ಸನ್ನತಿ ಎಂಬ ಪ್ರಾಚೀನ ಬೌದ್ಧ ಕೇಂದ್ರವೂ ಸನ್ನತಿ ಎಂಬ ಸ್ಥಳವು ಜಗತ್ತಿಗೆ ಮೊಟ್ಟಮೊದಲು ಪರಿಚಿತವಾದದ್ದು ಕಪಟರಾಳ ಕೃಷ್ಣರಾವ್ ಅವರಿಂದ. ಇದು ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿದ್ದು, ಯಾದಗಿರಿಯಿಂದ ೫೦ಕಿ.ಮೀ. ದೂರದಲ್ಲಿದೆ. ಭೌಗೋಳಿಕವಾಗಿ ಸನ್ನತಿ ಪರಿಸರವು ಮನಮೋಹಕ ಮತ್ತು ರಮ್ಯರಮಣೀಯ ಎಡೆ. ಹಾವಿನೋಪಾದಿಯಲ್ಲಿ ಹರಿಯುವ ಭೀಮಾ ನದಿಯು ಇಲ್ಲಿ ಅರ್ಧಚಂದ್ರಾಕಾರವಾದ ಪರಿಸರವನ್ನು ಸೃಷ್ಟಿಸಿದೆ. ನದಿಯ ಎಡದಂಡೆಯ ಈ ಅರ್ಧಚಂದ್ರಾಕೃತಿಯ ಭೂಭಾಗವೇ ಸನ್ನತಿ. ಸ್ವಾಭಾವಿಕವಾಗಿಯೇ ರಕ್ಷಣಾ ಕೋಟೆಯಂತಿರುವ ಭೀಮಾ ನದಿಯು ಪ್ರಾಚೀನ ಕಾಲದಿಂದಲೂ ಇಲ್ಲಿ ಮಾನವ ಸಮಾಜ, ಸಂಸ್ಕೃತಿ ವಿಕಸನಗೊಳ್ಳಲು…