Browsing: Uncategorized

ಬಿಎಸ್‌ವೈ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ ಬೊಮ್ಮಾಯಿ

ಬೆಂಗಳೂರು, ಸೆ.೫:ಬರುವ ಏಳರಂದು ಮುಖ್ಯಮಂತ್ರಿ ಬಸವಾರಾಜ್ ಬೊಮ್ಮಾಯಿ ದಹೆಲಿಗೆ ತೆರಳಿ ಮುಖಂಡರನ್ನು ಭೇಟಿ ಮಾಡುವ ಹಿನ್ನೆಲೆಯಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಮಹತ್ವದ ಮಾತುಕತೆ ನಡೆಸಿದರು. ಈ ಬಾರಿ ನವದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಕೆಲವು ಪ್ರಮುಖ ನಾಯಕರನ್ನು ಭೇಟಿಯಾಗಲಿರುವ ಬೊಮ್ಮಾಯಿ ಅವರು ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳ ಭರ್ತಿ, ನಿಗಮ-ಮಂಡಳಿಗಳಿಗೆ ನೇಮಕಾತಿ,ಕೆಲವು ಸಚಿವರ ಖಾತೆ ಬದಲಾವಣೆಯಂತಹ ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ.…

ಸೆ.೬ರಿಂದ ಆರನೇ ತರಗತಿಯಿಂದ ೮ನೇ ತರಗತಿ ಶಾಲೆಗಳು ಆರಂಭ

ಬೆಂಗಳೂರು,ಆ,೩೦:ಕೊವಿಡ್ ದೃಢಪ್ರಮಾಣದರ ಶೇಕಡ ೨ಕ್ಕಿಂತ ಕಡಿಮೆ ಇರುವ ಎಲ್ಲ ತಾಲ್ಲೂಕುಗಳಲ್ಲೂ ಆರರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ೬ರಿಂದ ಭೌತಿಕ ತರಗತಿಗಳನ್ನು ಆರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸೋಮವಾರ ನಡೆದ ಉನ್ನತಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯ ಬಳಿಕ ತೀರ್ಮಾನಗಳನ್ನು ಪ್ರಕಟಿಸಿದ ಕಂದಾಯ ಸಚಿವ ಆರ್. ಅಶೋಕ, ಪ್ರತಿ ತರಗತಿಯ ವಿದ್ಯಾರ್ಥಿಗಳನ್ನು ಎರಡು ಗುಂಪುಗಳಾಗಿ ವಿಭಜಿಸಿ, ದಿನ ಬಿಟ್ಟು ದಿನ ತರಗತಿ ನಡೆಸಲಾಗುವುದು. ಸೋಮವಾರದಿಂದ ಶುಕ್ರವಾರದವರೆಗೆ ತರಗತಿಗಳನ್ನು ನಡೆಸಲಿದ್ದು, ಶನಿವಾರ…

ಕೊನೆಗೂ ಪ್ರವಾಸೋದ್ಯಮ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಆನಂದ್ ಸಿಂಗ್

ಬೆಂಗಳೂರು,ಆ.೨೪: ಖಾತೆ ವಿಚಾರಕ್ಕೆ ಮುನಿಸಿಕೊಂಡಿದ್ದ ಸಚಿವ ಆನಂದ್ ಸಿಂಗ್ ಸದ್ಯಕ್ಕೆ ಶಮನವಾಗಿದ್ದು, ಇಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇಂದು ಸಚಿವ ಆನಂದ್ ಸಿಂಗ್ ಅವರು ತಮ್ಮ ರಾಜೀನಾಮೆ ನಿರ್ಧಾರ ತಿಳಿಸಲು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದರು. ಸಿಂಗ್ ಜೊತೆಗೆ ರಾಜೂಗೌಡ ಕೂಡ ಬಂದಿದ್ದರು. ಸಿಎಂ ಬೊಮ್ಮಾಯಿ ಆನಂದ್ ಸಿಂಗ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ದುಡುಕಿನ ನಿರ್ಧಾರ ಕೈಗೊಳ್ಳಬೇಡಿ, ಇರುವ ಖಾತೆಯಲ್ಲೇ ಮುಂದುವರೆಯಿರಿ. ನಾಳೆ…

ಬಣ್ಣಿಸುವರಾರದನು? ಮಂಕುತಿಮ್ಮ

ಸಿದ್ಧಸೂಕ್ತಿ :       ಬಣ್ಣಿಸುವರಾರದನು? ಮಂಕುತಿಮ್ಮ. ಜಗದ ಉಗಮ ನೆಲೆ ಗತಿ ನಿಗೂಢ. ಬಗೆ ಬಗೆಯ  ರಚನೆಯನಾರು ಬಲ್ಲರು? ಕುಂಬಾರ ಗಡಿಗೆ ಮಾಡಿದ ತೆರದಿ ತಾಯಿ ಮಗುವ ರಚಿಪಳೇ? ಸಾವೇನು ಏಕೆ ರಹಸ್ಯ ಬಲ್ಲವರಾರು? ಉಂಡು ಮಿಕ್ಕಿದ ಎಂಜಲದ ಅಗುಳು ಯಾವ ಕಾಲುವೆಯಲಿ ಹರಿದು ಎಲ್ಲಿ ಸೇರುವುದೋ? ಯಾವುದಕ್ಕೆ ಆಹಾರವಾಗುವುದೋ? ಎಲ್ಲಿ ಮಣ್ಣಾಗುವುದೋ? ಅದರ ಸತ್ತ್ವ ಹೀರಿ ಯಾವುದು ಬೆಳೆಯುವುದೋ? ಆ ಬೆಳೆ ಯಾರಿಗೆ ಆಹಾರವಾಗುವುದೋ? ಅದರಿಂದ ಅವರಿಂದ ಯಾರ್ಯಾರಿಗೆ ಏನೇನಾಗುವುದೋ? ತಿಳಿದವರಾರು? ಹೇಳುವವರಾರು?…

ಕ್ರಿಕೆಟ್ ಕಾಶಿ ಲಾರ್ಡ್ಸ್ ಭಾರತಕ್ಕೆ ರೋಚಕ ಗೆಲುವು..!

Reported By : H.D Savita ಲಾರ್ಡ್ಸ್: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತವು1 51ರನ್ ಗಳ ಅಂತರದಲ್ಲಿ ರೋಚಕ ಗೆಲುವು ದಾಖಲಿಸಿದೆ. ಅಂತಿಮ ದಿನದಾಟದಲ್ಲಿ ಅಮೋಘ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಗೆಲುವನ್ನು ಮತ್ತಷ್ಟು ಸ್ಮರಣಿಯವಾಗಿಸಿ ಕೊಂಡಿತು. ಈ ಮೂಲಕ 5ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತವು 1-0 ದಿಂದ ಮುನ್ನಡೆ ಪಡೆದಿದೆ. ಮೊದಲ ಟೆಸ್ಟ್ ಪಂದ್ಯವು ಡ್ರಾದಲ್ಲಿ ಅಂತ್ಯವಾಗಿತ್ತು.

ಸ್ವಾತಂತ್ರ್ಯೋತ್ಸವದಲ್ಲಿ ನಾಡಿನ ಜನತೆಗೆ ಬಂಬರ್ ಕೊಡುಗೆ ಘೋಷಿಸಿದ ಸಿಎಂ

ಬೆಂಗಳೂರು, ಆ. ೧೫: ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ನಿರೀಕ್ಷೆಗೂ ಮೀರಿ ಹೊಸ ಯೋಜನೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೊಷಣೆ ಮಾಡಿದ್ದಾರೆ. ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಭಾನುವಾರ ದೇಶದ ೭೫ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ನೆರವೇರಿಸಿದರು. ನಂತರ ನಾಡಿನ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮೊದಲ ಬಾರಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ಮಾಡಿದರು. ಈ ವೇಳೆ ಹನ್ನೊಂದು ಹೊಸ ಯೋಜನೆಗಳನ್ನು ಸಿಎಂ…

ರಶ್ಮಿಕ ಮಂದಣ್ಣರ ಬಣ್ಣದ ಬದುಕಿನ ಮಾತು…!

ಭಾರತೀಯ ಚಿತ್ರರಂಗದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಲವು ವರ್ಷಗಳ ನಂತರ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಮ್ಮ ಮುಂದಿನ ಸಿನಿಮಾ ಪ್ರಾಜೆಕ್ಟ್‌ಗಳ ಬಗ್ಗೆ ಹಂಚಿಕೊಂಡ ರಶ್ಮಿಕಾ ಟ್ರೋಲ್ ಪೇಜ್‌ಗಳನ್ನು ಎದುರಿಸಿದ್ದು ಹೇಗೆ ಎಂದು ರಿವೀಲ್ ಮಾಡಿದ್ದಾರೆ. ರಶ್ಮಿಕಾ ವೃತ್ತಿ ಜೀವನದ ಗ್ರಾಫ್ ಎತ್ತರಕ್ಕೆ ಏರುತ್ತಿದೆ ಆದರೆ ಒಮ್ಮ ವೈಯಕ್ತಿಕ ಜೀವನದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಟ್ರೋಲ್‌ಗೆ ಗುರಿಯಾದರು. ಈ ಪರಿಸ್ಥಿತಿಯನ್ನು ಪೋಷಕರ ಜೊತೆ ಎದುರಿಸಿದ್ದ ರಶ್ಮಿಕಾ ಮಂದಣ್ಣ ಹೇಗೆ ನಿಭಾಯಿಸಿದ್ದರು ಎಂದು ಹೇಳಿಕೊಂಡಿದ್ದಾರೆ. ’ಪ್ರಾರಂಭದಲ್ಲಿ ಇದು ತುಂಬಾನೇ ಕಷ್ಟವಾಗಿತ್ತು.…

ಒಲಂಪಿಕ್ಸ್: ‘ಹಾಕಿ’ ವೀರರಿಗೆ ಕಂಚಿನ ಹಾರ..!

Reported By: H.D.Savita ಟೋಕಿಯೋ : ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ಭಾರತ ಪುರುಷರ ಹಾಕಿ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಕಂಚಿನ ಪದಕಕ್ಕಾಗಿ ಜರ್ಮನಿ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಮನ್​ಪ್ರೀತ್ ಪಡೆ 4-5 ಗೋಲುಗಳ ಅಂತರದಲ್ಲಿ ಗೆದ್ದು ಬೀಗಿದ್ದು, ಭಾರತಕ್ಕೆ ನಾಲ್ಕನೇ ಪದಕ ಸಿಕ್ಕಿದೆ. ಈ ಮೂಲಕ ಬರೋಬ್ಬರಿ 41 ವರ್ಷಗಳ ಬಳಿಕ ಒಲಿಂಪಿಕ್ ಹಾಕಿಯಲ್ಲಿ ಭಾರತ ಚೊಚ್ಚಲ ಪದಕಕ್ಕೆ ಕೊರಳೊಡ್ಡಿದೆ. ಸಾಕಷ್ಟು ಕುತೂಹಲದಿಂದ ಕೂಡಿದ್ದ ಕಾದಾಟದಲ್ಲಿ,  ಪಂದ್ಯ ಶುರುವಾದ ಕೆಲವೇ ಕ್ಷಣಗಳಲ್ಲಿ ಜರ್ಮನಿ…

ಜಾವೆಲಿನ್ ಥ್ರೋನಲ್ಲಿ ಭಾರತದ ನೀರಜ್ ಚೋಪ್ರಾ ಫೈನಲ್ ಗೆ ಪ್ರವೇಶ

Reported By: H.D.Savita ಟೋಕಿಯೋ: ಭಾರತದ ಜಾವಲಿನ್‌ ಪಟು ನೀರಜ್ ಚೋಪ್ರಾ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲೇ 86.55 ಮೀಟರ್‌ ಎಸೆಯುವ ಮೂಲಕ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್‌ನ ಜಾವಲಿನ್‌ನಲ್ಲಿ ಪದಕ ಗೆಲ್ಲಬಲ್ಲ ನೆಚ್ಚಿನ ಭಾರತೀಯ ಅಥ್ಲೀಟ್‌ಗಳಲ್ಲಿ ನೀರಜ್ ಚೋಪ್ರಾ ಕೂಡಾ ಒಬ್ಬರು ಎನಿಸಿದ್ದಾರೆ. ಫೈನಲ್ ಪಂದ್ಯ ಅಗಸ್ಟ್ 7ರಂದು ನಡೆಯಲಿದೆ. ಫೈನಲ್‌ಗೆ ಪ್ರವೇಶ ಪಡೆಯಲು 83.5 ಮೀಟರ್ ನಿಗದಿ ಮಾಡಲಾಗಿತ್ತು. ಎ ಹಾಗೂ ಬಿ ಗುಂಪಿನಲ್ಲಿ ಅಗ್ರ 12 ಜಾವಲಿನ್‌ ಪಟುಗಳು ಫೈನಲ್‌ಗೆ…

ಟೋಕಿಯೋ ಒಲಂಪಿಕ್ಸ್ : ಭಾರತದ ಯುವ ಬಾಕ್ಸರ್ ಗೆ ಕಂಚಿನ ಹಾರ

Reported By: H.D. Savita ಟೋಕಿಯೋ: ಟೊಕಿಯೊ ಒಲಂಪಿಕ್ಸ್ ನಲ್ಲಿ ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದು ಭಾರತಕ್ಕೆ ಲಭಿಸುತ್ತಿರುವ ಮೂರನೇ ಪದಕವಾಗಿದೆ. ಮಹಿಳಾ ಬಾಕ್ಸಿಂಗ್‌ನ 69 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ ಲವ್ಲಿನಾ, ಎದುರಾಳಿ ಅಗ್ರ ಶ್ರೇಯಾಂಕಿತೆ ಟರ್ಕಿಯ ಬುಸೆನಾಜ್ ಸುರ್ಮೆನೆಲಿ ವಿರುದ್ಧ 0-5ರಿಂದ ಸೋಲು ಅನುಭವಿಸಿದರು. ಆಗಲೇ ಸೆಮಿಫೈನಲ್‌ಗೆ ಪ್ರವೇಶಿಸುವ ಮೂಲಕ ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸಿರುವ ಲವ್ಲಿನಾ, ಚಿನ್ನದ ಪದಕ ಗುರಿಯನ್ನಿರಿಸಿದ್ದರು. ಆದರೆ ಅಂತಿಮ ನಾಲ್ಕರ ಘಟ್ಟದಲ್ಲಿ ಎಡವಿದ್ದರು.…

ಸಾದಕರಿಗೆ ಗೊರೂಚ ದತ್ತಿ ನಿದಿ ಪ್ರಶಸ್ತಿ ಪ್ರದಾನ

ಮೈಸೂರು,ಆ,04: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಕೊಡ ಮಾಡುವ ‘ಗೊರುಚ ದತ್ತಿನಿಧಿ’ ಪ್ರಶಸ್ತಿಯನ್ನು ಎಂಟು ಸಾಧಕರಿಗೆ, ನಗರದ ಸರಸ್ವತಿಪುರಂನ ಜೆಎಸ್‌ಎಸ್‌ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. 2019 ಹಾಗೂ 2020ನೇ ಸಾಲಿನ ‘ಗೊರುಚ ಶರಣ ಪ್ರಶಸ್ತಿ’ಯನ್ನು ಕ್ರಮವಾಗಿ ಡಾ.ಸಿ.ವೀರಣ್ಣ, ಡಾ.ಬಸವರಾಜ ಸಾದರ, ‘ಗೊರುಚ ಜಾನಪದ ಪ್ರಶಸ್ತಿ’ಯನ್ನು ಡಾ.ಬಿ.ಎಸ್‌.ಸ್ವಾಮಿ, ಡಾ.ಎಚ್‌.ಟಿ.ಪೋತೆ, ‘ಗೊರುಚ ಶರಣ ಸಾಹಿತ್ಯ ಗ್ರಂಥ ಪ್ರಶಸ್ತಿ’ಯನ್ನು ಪ್ರೊ.ಬಿ.ಆರ್‌.ಪೊಲೀಸ ಪಾಟೀಲ, ಡಾ.ಬಸವರಾಜ ಸಬರದ, ‘ಗೊರುಚ ಜಾನಪದ ಸಾಹಿತ್ಯ ಗ್ರಂಥ ಪ್ರಶಸ್ತಿ’ಯನ್ನು…

ಕಸ-ರಸ

                    –  ಶ್ರೀ ಡಾ. ಆರೂಢಭಾರತೀ ಸ್ವಾಮೀಜಿ                                      ಸಿದ್ಧಸೂಕ್ತಿ :                                       ಕಸ-ರಸ.…

ಪ್ರೇಮಂ ಚಿರಂ ಚಿತ್ರ ಬಿಡುಗಡೆಗೆ ಸಿದ್ದ

ಧೃತಿ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಸ್ನೇಹಿತರು ಜೊತೆಗೂಡಿ ನಿರ್ಮಿಸಿರುವ ಪ್ರೇಮಂ ಚಿರಂ ಚಿತ್ರಕ್ಕೆ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿತು. ಛಾಯಾಗ್ರಹಣ-ಸಂಗೀತ ರೋಹನ್ ದೇಸಾಯಿ, ಪೋಸ್ಟ್ ಪ್ರೊಡಕ್ಷನ್ಸ್ – ಆರ್.ಡಿ.ಸ್ಟುಡಿಯೋ, ಸಾಹಿತ್ಯ – ಹರ್ಷವರ್ಧನ ಹೆಗಡೆ, ರಜತ್ ಸೂರ್ಯ, ಪಾರ್ವತಿ ಸ್ವಪ್ನ, ಸಿರಿ ಶ್ರೀನಿವಾಸ್, ಸಹನಿರ್ದೇಶನ – ದೇವರಾಜ್ ಎಸ್. ಅಣ್ಣಯ್ಯ, ಸಹನಿರ್ಮಾಪಕರು – ತುಳಜಾರಾಂ ಸಿಂಗ್ ಠಾಕೂರ್, ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ಶ್ರೀನಿವಾಸ್, ೫ ವಿಭಿನ್ನ ಪ್ರೇಮಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ – ನೀನಾಸಂ ಠಾಕೂರ್, ಪ್ರೀತಿ ಚೇಷ್ಠ (ಮುಂಬೈ),…

ದೇಶದಲ್ಲೆ ಮೊದಲಬಾರಿಗೆ ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ ಹುದ್ದೆ ಸೃಷ್ಟಿ

ಬೆಂಗಳೂರು,ಜು,12:ಅಪರಾಧ ಕೃತ್ಯ ನಡೆದ ಸ್ಥಳವನ್ನು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ, ಸೂಕ್ಷ್ಮಾತಿಸೂಕ್ಷ್ಮ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಅಪರಾಧವನ್ನು ಪತ್ತೆ ಮಾಡಲು ದೇಶದಲ್ಲಿಯೇ ಮೊಟ್ಟ ಮೊದಲ ನುರಿತ ಹಾಗೂ ಪರಿಣಿತರ ‘ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ’ ಹುದ್ದೆಯನ್ನು ಸೃಷ್ಟಿ ಮಾಡಲಾಗಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನಾಳೆ ದಿನಾಂಕ 13 ಜುಲೈ 2021 ರಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ scene of crime officer ಹುದ್ದೆಗಳ ಆದೇಶ ಪ್ರತಿಯನ್ನು ಕೊಡಲಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ದೇಶದಲ್ಲಿಯೇ…

ಸೋಮವಾರದಿಂದ ಮತ್ತಷ್ಟು ಜಿಲ್ಲೆಗಳಲ್ಲಿ ಅನ್ ಲಾಕ್

ಬೆಂಗಳೂರು, ಜೂನ್ 19: ಶೇ. 5ಕ್ಕಿಂತ ಕಡಿಮೆ ಪಾಸಿಟಿವಿಟಿ ದರವಿರುವ ಜಿಲ್ಲೆಗಳಲ್ಲಿ ಅನ್‌ಲಾಕ್ ಮಾಡಲು ತೀರ್ಮಾನಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿದ್ದಾರೆ. ಲಾಕ್‌ಡೌನ್‌ ಸಡಿಲಿಕೆ ಮಾಡುವ ಸಂಬಂಧ ಶನಿವಾರ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕೋವಿಡ್ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಸಿದ ನಂತರ  ಈ ವಿಷಯ ತಿಳಿದ್ದಾರೆ. ಶೇ.5% ಕ್ಕಿಂತ ಕಡಿಮೆ ಪಾಸಿಟಿವಿಟಿ ದರವಿರುವ ಹದಿನಾರು ಜಿಲ್ಲೆಗಳಲ್ಲಿ ಅನ್‌ಲಾಕ್ ಮಾಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ಬಸ್‌ಗಳ ಓಡಾಟಕ್ಕೂ ಸೋಮವಾರದಿಂದ ಅವಕಾಶ…

ಬಲವಾಯಿತು ಬಿಎಸ್‌ವೈ ಬದಲಾವಣೆಯ ಕೂಗು

ಬೆಂಗಳೂರು,ಜೂ,೧೭:ಬಿಜೆಪಿಯಲ್ಲಿ ಆಂತರಿಕ ಭಿನ್ನಮತಗಳು ಇವೆ ಎನ್ನುವುದರಲ್ಲಿ ಎರಡು ಮಾತಿಲ್ಲ ಬಿಎಸ್‌ವೈ ಬದಲಾವಣೆ ಮಾಡಬೇಕು ಎಂದು ಒಂದು ತಂಡ ನಿರಂತರ ಪ್ರಯತ್ನದಲ್ಲಿ ಇದೇ ಹೊತ್ತಿನಲ್ಲಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಶಾಸಕರು ಸಚಿವರ ಜೊತೆ ಸಭೆ ನಡೆಸಿದ್ದಾರೆ ಅಂದರೆ ಅಲ್ಲಿಗೆ ಬಿಎಸ್‌ವೈ ಬದಲಾವಣೆಯ ಕೂಗೂ ಮತ್ತಷ್ಟು ಪ್ರಭಲವಾಗಿದೆ ಎಂದು ಅರ್ಥ ಇದಕ್ಕೆ ಪೂರಕ ಎನ್ನುವಂತೆ ಅರುಣ್ ಸಿಂಗ್ ಅವರನ್ನು ಭೇಟಿಯಾದ ಬಳಿಕ ಸುದ್ದಾಗರರ ಜೊತೆ ಮಾತನಾಡಿರುವ ವಿಶ್ವನಾಥ್ ಬಿಎಸ್‌ವೈ ಅವರಿಗೆ ವಯಸ್ಸಾಗಿದೆ ಮೊದಲಿನಷ್ಟು ಸ್ಪಿರಿಟ್ ಅವರಿಗೆ…

ರಾಜ್ಯದಲ್ಲಿ 1,784 ಕಪ್ಪು ಶಿಲೀಂಧ್ರ ಪ್ರಕರಣ ಪತ್ತೆ

ಬೆಂಗಳೂರು,ಜೂ,05: ರಾಜ್ಯದಲ್ಲಿ ಈವರೆಗೆ 1,784 ಕಪ್ಪು ಶಿಲೀಂಧ್ರ ಪ್ರಕರಣ ಕಂಡುಬಂದಿದ್ದು, 62 ಮಂದಿ ಗುಣಮುಖರಾಗಿದ್ದಾರೆ. ಇದಕ್ಕೆ ಬೇಕಾದ ಔಷಧಿಯನ್ನೂ ಪಡೆಯಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಪ್ಪು ಶಿಲೀಂಧ್ರ ಸೋಂಕಿನ ಎಲ್ಲಾ ಜಿಲ್ಲಾವಾರು ಮಾಹಿತಿ ತರಿಸಿಕೊಳ್ಳಲಾಗಿದೆ. ರಾಜ್ಯಾದ್ಯಂತ ಈವರೆಗೆ 1,784 ಪ್ರಕರಣ ಕಂಡುಬಂದಿದೆ. ಇದರಲ್ಲಿ 1,564 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬ ಸೋಂಕಿತನಿಗೆ ಕನಿಷ್ಠ 2-3 ವಾರ ಚಿಕಿತ್ಸೆ ಬೇಕಾಗುತ್ತದೆ. ಸಂಪೂರ್ಣ ಗುಣಮುಖರಾಗಲು 5-6 ವಾರಗಳ ಕಾಲ…

ವಕೀಲರಿಗೆ ಫುಡ್ ಕಿಟ್ ವಿತರಣೆ

ಬೆಂಗಳೂರು,ಜೂ,04:ಲಾಕ್ ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ವಕೀಲರಿಗೆ ಅಹಾರ ಸಾಮಾಗ್ರಿಗಳನ್ನು ರಾಜ್ಯ ಹೈಕೋರ್ಟ್ ಮುಂಭಾಗದಲ್ಲಿ ಹಂಚಲಸಯಿತು. ಹಿರಿಯ ವಕೀಲರೂ ಸಮಾಜ ಸೇವಕರೂ ಆದ ಎಚ್.ಆರ್ .ದುರ್ಗಪ್ರಸಾದ್ ಅವರು 250 ಜನಕ್ಕೂ ಹೆಚ್ಚು ವಕೀಲರಿಗೆ ಪುಡ್ ಕಿಟ್ ವಿತರಿಸಿದರು.ಈ ವೇಳೆ ಹಿರಿಯ ವಕೀಲರಾದ ಭಕ್ತವತ್ಸಲಂ ಮೊದಲಾದವರು ಹಾಜರಿದ್ದರು.

ರಾಜ್ಯದಲ್ಲಿ16387 ಹೊಸ ಕೇಸ್ ಪತ್ತೆ, 21199 ಜನರು ಗುಣಮುಖ

ಬೆಂಗಳೂರು,ಜೂ,02 : ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 16387 ಹೊಸ ಕೇಸ್ ಪತ್ತೆಯಾಗಿವೆ. ಇಂದು ಸಂಜೆ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ 16387 ಜನರಲ್ಲಿ ಕೋವಿಡ್ ಪಾಸಿಟಿವ್ ಸೋಂಕು ದೃಢಪಟ್ಟಿದೆ. ಹಾಗೂ 463 ಜನರು ಸಾವನ್ನಪ್ಪಿದ್ದಾರೆ. ಇನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ 21199 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ…

ಮತ್ತೇ ಪೆಟ್ರೋಲ್ ಬೆಲೆ ಏರಿಕೆ!

ಮುಂಬೈ,ಮೇ,೨೯: ತೈಲ ಬೆಲೆ ಏರಿಕೆ ನಿತ್ಯ ಏರಿಕೆಯಾಗುತ್ತಲೇ ಇದೆ ಈಗಾಗಲೇ ೧೦೦ಗಡಿಯತ್ತ ಬಂದು ನಿಂತಿದ್ದು ದೇಶದ ಮಹಾನಗರ ಮುಂಬೈನಲ್ಲಿ ೧೦೦ ಗಡಿದಾಟಿದೆ. ಈ ತಿಂಗಳಲ್ಲಿ ೧೫ನೇ ಬಾರಿಗೆ ತೈಲ ಬೆಲೆ ಏರಿಕೆಯಾಗಿದ್ದು, ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ ೧೦೦ ಗಡಿಯನ್ನು ದಾಟಿದೆ ಮತ್ತು ಡೀಸೆಲ್ ದರ ಲೀಟರ್‌ಗೆ ೯೨.೧೭ಕ್ಕೆ ಏರಿಕೆಯಾಗಿದೆ. ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ದರವು ಲೀಟರ್‌ಗೆ ೨೬ ಪೈಸೆ ಮತ್ತು ಡೀಸೆಲ್ ದರವು ಲೀಟರ್‌ಗೆ ೩೦ ಪೈಸೆ ಹೆಚ್ಚಾಗಿದೆ ಎಂದು ಭಾರತೀಯ…