ಕ್ರೈಮ್
ಬೆಡ್‌ಬ್ಲಾಕಿಂಗ್ ದಂಧೆ; ಶಾಸಕ ಸತೀಶ್ ರೆಡ್ಡಿ ಆಪ್ತನ ಬಂಧನ
ಬೆಂಗಳೂರು, ಮೇ. ೨೫: ಬೆಡ್ ಬ್ಲಾಕಿಂಗ್ ದಂಧೆಗೆ ಸಂಬಂಧಿಸಿದಂತೆ ಶಾಸಕ ಸತೀಶ್ ರೆಡ್ಡಿ ಆಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಈಗ ಬೆಡ್‌ಬ್ಲಾಕ್ ದಂಧೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಜೊತೆಯಲ್ಲೆ ಸುದ್ದಿಗೋಷ್ಠಿ ನಡೆಸಿದ್‌ದ ಶಾಸಕ ಸತೀಶ್ ರೆಡ್ಡಿಗೆ ಈಗ ತೀವ್ರ ಮುಖಭಂಗವಾದಂತಾಗಿದೆ. ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಆಪ್ತ ಬಾಬು ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು ವಿಚಾರಣೆಗೊಳಪಿಡಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ ನಡೆಸಿ ಬೆಡ್ ಬ್ಲಾಕಿಂಗ್ ದಂಧೆಯನ್ನು ಬಹಿರಂಗ ಪಡಿಸಿದ್ದರು. ಈ ಪ್ರಕರಣ ರಾಜಕೀಯ…