ರಾಷ್ಟ್ರೀಯ
ಆಯಾ ಪ್ರದೇಶದ ಕಾನೂನು ಪಾಲನೆ-ಗೂಗಲ್
ನವದೆಹಲಿ,ಮೇ,೨೭:ಆಯಾ ಪ್ರದೇಶದ ಕಾನೂನುಗಳನ್ನು ಪಾಲಿಸಲು ನಾವು ಸಿದ್ದರಿದ್ದೇವೆ ಅಲ್ಲದೆ ಸರ್ಕಾರಗಳು ಜನತೆ ಉತ್ತಮ ಸಂಬಂಧದೊಂದಿಗೆ ಕಾರ್ಯನಿರ್ವಹಿಸುತ್ತೇವೆ ಎಂದು ಗೂಗಲ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಂದರ್ ಪಿಚೈ ತಿಳಿಸಿದ್ದಾರೆ ಕಂಪನಿ ಯಾವಾಗಲೂ ಸರ್ಕಾರದ ಕೋರಿಕೆಗಳನ್ನು ಪರಿಗಣಿಸುತ್ತದೆ ಅಲ್ಲದೆ ಸ್ಪಷ್ಟವಾದ ಪಾರದರ್ಶಕ ವರದಿಗಳನ್ನು ಹೊಂದಿದೆ ಎಂದು ಏಷ್ಯಾ ಪೆಸಿಫಿಕ್ನ ಆಯ್ದ ವರದಿಗಾರರ ಜತೆ ನಡೆದ ವರ್ಚುವಲ್ ಕಾನ್ಫೆರೆನ್ಸ್ನಲ್ಲಿ ಅವರು ತಿಳಿಸಿದ್ದಾರೆ.ಉಚಿತ ಮತ್ತು ಮುಕ್ತ ಇಂಟರ್ನೆಟ್ ಮೌಲ್ಯವನ್ನು ನಾವು ಅರಿತಿದ್ದೇವೆ. ಜತೆಗೆ, ಇದರ ಪ್ರಯೋಜನಗಳ ಅರಿವು ಇದೆ. ಇದೇ ನೀತಿ ಅನುಸರಿಸಬೇಕು ಎಂದು…