ರಾಜ್ಯ
ಆಸ್ತಿಗಾಗಿ ಸಹೋದರರ ನಡುವೆ ಜಗಳ-ಅಣ್ಣನನ್ನೇ ಕೊಂದ ಪಾಪಿ
ಮಂಡ್ಯ,ಜೂ,೦೧: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ನಡೆದ ಜಗಳ ಅಣ್ಣನನ್ನು ಬಲಿತಗೆದುಕೊಂಡ ಘಟನೆ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ನಡೆದಿದೆ ಅರಳಕುಪ್ಪೆ ಗ್ರಾಮದ ಬಾಲಕೃಷ್ಣ (೫೪) ಮೃತ ದುರ್ದೈವಿ ಅಣ್ಣನಾಗಿದ್ದು, ಸುರೇಶ್ ಕೊಲೆ ಮಾಡಿದ ತಮ್ಮನಾಗಿದ್ದಾನೆ. ಕೊಲೆಯಾದ ಬಾಲಕೃಷ್ಣ ಮೈಸೂರಿನಲ್ಲಿ ವಾಸ ಮಾಡುತ್ತಿದ್ದು, ಲಾಕ್ಡೌನ್ ಆಗಿರುವ ಕಾರಣ ಅರಳಕುಪ್ಪೆ ಗ್ರಾಮಕ್ಕೆ ಬಂದಿದ್ದರು. ಜಮೀನು ವಿಚಾರದಲ್ಲಿ ಬಾಲಕೃಷ್ಣ ಹಾಗೂ ಸುರೇಶ್ ನಡುವೆ ಈ ಹಿಂದೆ ಜಗಳವಾಗಿತ್ತು. ಹೀಗಾಗಿ ಒಂದೇ ಮನೆಯ ಮಧ್ಯೆ ಗೋಡೆ ಹಾಕಿಕೊಂಡು ಬೇರೆ ಬೇರೆ…