ರಾಜ್ಯ
ಶಾಸಕರಲ್ಲಿ ಸಭ್ಯತೆ ಕಡಿಮಯಾಗುತ್ತಿದೆ-ಓ ಬಿರ್ಲಾ ಆತಂಕ
ಬೆಂಗಳೂರು,sಸೆ,೨೫: ಪ್ರಜಾಪ್ರಭುತ್ವ ಬಲ ಪಡಿಸಲು ಜನಪ್ರತಿನಿಧಿಗಳ ಪಾತ್ರ ಬಹಳ ಮುಖ್ಯವಾಗಿದೆ ಆದರೆ ಇತ್ತೀಚೆಗೆ ಅವರಲ್ಲಿ ಶಿಸ್ತು ಸಭ್ಯತೆ ಕಡಿಮೆಯಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ ಎಂದು ಲೋಕಸಭಾಧ್ಯಕ್ಷ ಓ ಬಿರ್ಲಾ ಅಭಿಪ್ರಾಯ ಪಟ್ಟರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಕೋವಿಡ್ ಕಾರಣ ಅಧಿವೇಶನ ನಡೆಸುವುದು ಕಷ್ಟಕರವಾಗಿತ್ತು. ಆದರೂ, ನಾವು ಸಂಸತ್ ಕಲಾಪವನ್ನು ಸಮರ್ಪಕವಾಗಿ ನಡೆಸಿದ್ದೇವೆ. ಸದನದಲ್ಲಿ ಚರ್ಚೆ, ಜೋರು ಧ್ವನಿ ಎಲ್ಲವೂ ಇರಬೇಕು. ಅದು ಇದ್ದಾಗಲೇ ಉತ್ತಮ ನಿರ್ಣಯ ಸಾಧ್ಯ. ಆದರೆ, ಸದಸ್ಯರು ಶಿಸ್ತು ಮೀರಬಾರದು…



















