ರಾಜ್ಯ
ಫುಡ್ ಪಾರ್ಕ್ ಯಶಸ್ವಿಗೊಳಿಸಲು ಪರಿಣಾಮ ಮೌಲ್ಯಮಾಪನ : ಸಿಎಂ ಸೂಚನೆ
ಬೆಂಗಳೂರು, ಜ, 29 : ರಾಜ್ಯ ಸರ್ಕಾರ ಪ್ರಾಯೋಜಿತ ನಾಲ್ಕು ಆಹಾರ ಪಾರ್ಕ್ ಗಳನ್ನು ಯಶಸ್ವಿಗೊಳಿಸಲು ‘ಪರಿಣಾಮ ಮೌಲ್ಯಮಾಪನ’ ( impact assessment) ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು. ಆಹಾರ ಕರ್ನಾಟಕ ನಿಯಮಿತದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಇಂದು ಮಾತನಾಡುತ್ತಿದ್ದರು.ಬಾಗಲಕೋಟೆ, ಹಿರಿಯೂರು, ಮಾಲೂರು ಮತ್ತು ಜೇವರ್ಗಿಯಲ್ಲಿರುವ ಫುಡ್ ಪಾರ್ಕ್ ಗಳಿಗೆ ಸಂಬಂಧಿಸಿದಂತೆ ಭೂಮಿ, ಈಕ್ವಿಟಿ, ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಬೇಕು. ಆಹಾರ ಕರ್ನಾಟಕ ನಿಯಮಿತ ಫುಡ್ ಪಾರ್ಕ್ ಗಳನ್ನು ಆರಂಭಿಸಲು ಕೋರಿರುವ 26 ಕೋಟಿ…