ರಾಜ್ಯ
ನಮ್ಮ ಕೃಷಿ ನೀತಿಯಲ್ಲಿ ಲೋಪದೋಷಗಳಿವೆ:ಬಸವರಾಜ ಬೊಮ್ಮಾಯಿ
ಹಾವೇರಿ:(ರಾಣೆಬೆನ್ನೂರು),ಜೂ,28-ನಮ್ಮ ದೇಶದ ಎಲ್ಲ ಜನರಿಗೂ ಆಹಾರ ದೊರೆಯುತ್ತಿದೆ. ಆದರೆ, ಆಹಾರ ಬೆಳೆಯುವ ರೈತರ ಪರಿಸ್ಥಿತಿ ಸೋಚನೀಯವಾಗಿದೆ. ಇದು ವಿಪರ್ಯಾಸ. ನಮ್ಮ ಕೃಷಿ ನೀತಿಯಲ್ಲಿ ಎಲ್ಲೋ ಲೋಪದೋಷಗಳಿವೆ. ರೈತರ ಪರವಾಗಿರುವ ಮಾರುಕಟ್ಟೆ ಸೃಷ್ಟಿಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ. ಇಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಹನುಮನಮಟ್ಟಿಯಲ್ಲಿರುವ ಕೃಷಿ ವಿಶ್ವವಿದ್ಯಾಲಯ ಧಾರವಾಡದ ಕೃಷಿ ಮಹಾವಿದ್ಯಾಲಯ ಐ.ಸಿ.ಎ ಆರ್ ಕೃಷಿ ವಿಜ್ಞಾನ ಕೇಂದ್ರಕ್ಕೆ, ಭೇಟಿ ನೀಡಿ, ಮಹಾವಿದ್ಯಾಲಯದ ವತಿಯಿಂದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.…