ಜಿಲ್ಲೆ
ಸುರಕ್ಷಿತ, ಸುಂದರ ಬೆಂಗಳೂರು ನಗರ ಮಾಡುವುದು ನಮ್ಮ ಗುರಿ: ಸಿಎಂ
ಬೆಂಗಳೂರ, ಅ, ೦೫: ಸುರಕ್ಷಿತ, ಸುಂದರ, ಹಸಿರುಮಯ ಬೆಂಗಳೂರು ನಗರ ಮಾಡುವುದು ನಮ್ಮ ಗುರಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ರಾಜಾಜಿನಗರ ವಿಧಾನಸಭಾ ಕ್ಷೇತ್ರ, ಶಿವನಗರದ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ೬೫೫ ಮೀಟರ್ ಉದ್ದದ ಮೇಲ್ಸೆತುವೆ ಉದ್ಘಾಟನೆಯನ್ನು ಬೊಮ್ಮಾಯಿ ಅವರು ಮಾಡಿದರು. ಉದ್ಘಾಟನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಾಜಿನಗರ, ಬಸವೇಶ್ವರನಗರ, ಶಿವನಗರ ಪ್ರದೇಶ ಅತಿ ಹೆಚ್ಚು ಜನ ದಟ್ಟಣೆ ಇರುವ ಪ್ರದೇಶ. ಸಿಗ್ನಲ್ ಫ್ರೀ ಕಾರಿಡಾರ್ ನಿಂದ ಮುಕ್ತ ಸಂಚಾರಕ್ಕೆ ಅನುಕೂಲವಾಗಲಿದೆ. ತುಮಕೂರು, ಮೈಸೂರು…