Browsing: ಜಿಲ್ಲೆ

ಜಿಲ್ಲೆ

ಸುರಕ್ಷಿತ, ಸುಂದರ ಬೆಂಗಳೂರು ನಗರ ಮಾಡುವುದು ನಮ್ಮ ಗುರಿ: ಸಿಎಂ

ಬೆಂಗಳೂರ, ಅ, ೦೫: ಸುರಕ್ಷಿತ, ಸುಂದರ, ಹಸಿರುಮಯ ಬೆಂಗಳೂರು ನಗರ ಮಾಡುವುದು ನಮ್ಮ ಗುರಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ರಾಜಾಜಿನಗರ ವಿಧಾನಸಭಾ ಕ್ಷೇತ್ರ, ಶಿವನಗರದ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ೬೫೫ ಮೀಟರ್ ಉದ್ದದ ಮೇಲ್ಸೆತುವೆ ಉದ್ಘಾಟನೆಯನ್ನು ಬೊಮ್ಮಾಯಿ ಅವರು ಮಾಡಿದರು. ಉದ್ಘಾಟನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಾಜಿನಗರ, ಬಸವೇಶ್ವರನಗರ, ಶಿವನಗರ ಪ್ರದೇಶ ಅತಿ ಹೆಚ್ಚು ಜನ ದಟ್ಟಣೆ ಇರುವ ಪ್ರದೇಶ. ಸಿಗ್ನಲ್ ಫ್ರೀ ಕಾರಿಡಾರ್ ನಿಂದ ಮುಕ್ತ ಸಂಚಾರಕ್ಕೆ ಅನುಕೂಲವಾಗಲಿದೆ. ತುಮಕೂರು, ಮೈಸೂರು…

ಬಿಬಿಎಂಪಿ ನಿರ್ಲಕ್ಷ್ಯವೇ ಮಳೆ ಅವಾಂತರಕ್ಕೆ ಕಾರಣ

ಬೆಂಗಳೂರು,ಅ.04:ಬಿಬಿಎಂಪಿ ಅಧಿಕಾರಿಗಳಿಗೆ ಇನ್ನೂ ಬುದ್ದಿ ಬಂದಂತಿಲ್ಲ.ಪ್ರತಿ ಬಾರಿ ಮಳೆ ಬಂದಾಗಲೂ ಹಲವಾರು ಅವಾಂತರಗಳು ಸೃಷ್ಟಿಯಾದಾಗುತ್ತಲೆ ಇವೆ ಆದರೆ ಮುಂದಿನ ಬಾರಿ ಹಾಗೆ ಆಗದಂತೆ ನೋಡಿಕೊಳ್ಳುತ್ತೇವೆ ಎಂಬ ಮಾತು ಈಗ ಬೆಂಗಳೂರನ್ನೆ ಹಾಳು ಮಾಡಿದೆ. ರಾತ್ರಿ ಬಂದ ಮಳೆಗೆ ಹಲವಾರು ಪ್ರದೇಶದಲ್ಲಿ ಮಳೆ ನೀರು ನುಗ್ಗಿ ಅವಾಂತರವಾಗಿದೆ ಈಗಲೂ ಅದೇ ಮಾತು…ಇಂತ ನಾಲಾಯಕ್ ಅಧಿಕಾರಿಗಳಿಂದ ಎಷ್ಟು ಸಂಸಾರಗಳು ಬಲಿಯಾಗಬೇಕು? ನಿನ್ನೆ ರಾತ್ರಿಯಿಡೀ ಸಿಲಿಕಾನ್​ ಸಿಟಿಯಲ್ಲಿ ಸುರಿದ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸುಮಾರು 2 ಗಂಟೆಗಳ ಭೀಕರ…

ನಂದಿನಿ‌ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ ಮಾಡಿ;ಸಿಎಂ ಸಲಹೆ

ಬೆಂಗಳೂರು,ಸೆ,29:ಹಾಲು ಮತ್ತು ಸಕ್ಕರೆಯ ಉಪ ಉತ್ಪನ್ನಗಳು ಬಹಳಷ್ಟಿವೆ. ಕೆಎಂಎಫ್‌ನ ಉತ್ಪನ್ನಗಳು ಕೂಡ ಉತ್ತಮವಾಗಿವೆ. ಹೀಗಾಗಿ ತನ್ನ ಉತ್ಪನ್ನಗಳ ಮಾರುಕಟ್ಟೆಯನ್ನು ವಿಸ್ತರಣೆ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸುವಂತೆ ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇಂದು ಕರ್ನಾಟಕ ಹಾಲು ಮಹಾಮಂಡಲದ ನೂತನ ಯೋಜನೆಗಳಿಗೆ ಚಾಲನೆ ನೀಡಿ ನಂದಿನಿ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಹಾಲಿನ‌ ಉಪ ಉತ್ಪನ್ನಗಳ ಮಾರುಕಟ್ಟೆಯನ್ನು ಪರಿಣಾಮಕಾರಿಯಾಗಿ ವಿಸ್ತರಣೆ ಮಾಡಬೇಕು. ಈ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ದೊರೆತರೆ ಹೆಚ್ಚು ಹಾಲು ಉತ್ಪಾದನೆ ಆಗುತ್ತದೆ. ಮುಂದಿನ…

ನನ್ನ ಮೊದಲ ಕನಸೊಂದು ಸಾಕಾರಗೊಂಡಿದೆ;ರಂಜನಿ ರಾಘವನ್

ಬೆಂಗಳೂರು,ಸೆ,29: ಪುಸ್ತಕ ಬರೆಯುವ ಕನಸೊಂದು ನನ್ನ ಮನಸಿನ ಮೂಲೆಯಲ್ಲಿ ಕುಳಿತಿತ್ತು. ಕತೆ ಡಬ್ಬಿ ಮೂಲಕ ಇದು ಸಾಕಾರಗೊಂಡಿದೆ. ಮೊದಲ ಪುಸ್ತಕವಾಗಿದ್ದರಿಂದ ತುಂಬಾ ಸಂಭ್ರಮದಲ್ಲಿರುವೆ ಎಂದು ʻಕನ್ನಡತಿʼ ಖ್ಯಾತಿಯ ನಟಿ ರಂಜನಿ ರಾಘವನ್‌ ತಿಳಿಸಿದರು. ಬಹುರೂಪಿ ಹಮ್ಮಿಕೊಂಡಿದ್ದ ರಂಜನಿ ರಾಘವನ್ ಅವರ ಕಥಾ ಸಂಕಲನ ʻಕತೆ ಡಬ್ಬಿʼ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ʻಅವಧಿʼ ವೆಬ್‌ ಪತ್ರಿಕೆಯಲ್ಲಿ ವಾರಕ್ಕೊಮ್ಮೆ ಕತೆಗಳನ್ನು ಬರೆದೆ. ಅದಕ್ಕೆ ಬಂದ ಪ್ರತಿಕ್ರಿಯೆಗಳು ನನಗೆ ಉತ್ಸಾಹ ತುಂಬಿತು ಅದೇ ಕಾರಣವಾಗಿ ಕತೆ ಡಬ್ಬಿ ರೂಪುಗೊಂಡಿತು. ಮುಂದೆ ಕಾದಂಬರಿಯನ್ನು…

ಬಿರುಸಿನ ನಡಿಗೆ ಅತ್ತ್ಯುತ್ತಮ ವ್ಯಾಯಾಮ;ಸಿಎಂ ಬೊಮ್ಮಾಯಿ

ಬೆಂಗಳೂರು, ಸೆ, 29:ಶಕ್ತಿಯುತ ದೇಹ ಹಾಗೂ ಮನಸ್ಸು ಆರೋಗ್ಯಕರ ಜೀವನಕ್ಕೆ ಸಹಕಾರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ವಿಶ್ವ ಹೃದಯ ದಿನಾಚರಣೆ ಅಂಗವಾಗಿ ವಿಧಾನಸೌಧದಿಂದ ಕಂಠೀರವ ಕ್ರೀಡಾಂಗಣದವರೆಗೆ ಇಂದು ಆಯೋಜಿಸಿದ್ದ ಹೃದಯದಿಂದ ಬಾಂಧವ್ಯ ಬೆಳೆಸೋಣ ವಾಕಥಾನ್ ಗೆ ಅವರು ಚಾಲನೆ ನೀಡಿ ಮಾತನಾಡಿದರು. ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಹೃದಯ ಸ್ನೇಹಿ ಚಟುವಟಿಕೆಯಾದ ಬಿರುಸಿನ ನಡಿಗೆಗೆ ಚಾಲನೆ ನೀಡಲಾಗಿದೆ. ಆರೋಗ್ಯ ಕಾಪಾಡಿಕೊಳ್ಳಲು ಬಿರುಸಿನ ನಡಿಗೆ ಸಹಾಯಕ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಹೃದಯ…

ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಕುಸಿತ

ಬೆಂಗಳೂರು,ಸೆ,೨೭: ನಗರದಲ್ಲಿ ಮತ್ತೊಂದು ಕಟ್ಟಡ ಕುಸಿದು ಬಿದ್ದಿದೆ ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿಲ್ಸನ್ ಗಾರ್ಡನ್‌ನಲ್ಲಿರುವ ಲಕ್ಕಸಂದ್ರದಲ್ಲಿ ಮೂರು ಅಂತಸ್ತಿನ ಕಟ್ಟಡ ನೋಡು ನೋಡುತ್ತಿದ್ದಂತೆ ಕುಸಿದು ಬಿದ್ದಿದೆ ಆದರೆ ಮುಂಚೆಯೇ ಇದರ ಸೂಚನೆ ಇದ್ದ ಕಾರಣ ಮನೆಯಿಂದ ಎಲ್ಲರೂ ಹೊರ ಬಂದಿದ್ದರು ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಳೆದ ಎರಡು ವರ್ಷಗಳ ಹಿಂದೆಯೇ ಈ ಮನೆ ಕೊಂಚ ವಾಲಿತ್ತು. ಇಂದು ಬೆಳಗ್ಗೆ ಮನೆ ನಿಧಾನವಾಗಿ ಮತ್ತಷ್ಟು ವಾಲಲು ಮುಂದಾಗಿದೆ. ಈ ಘಟನೆ ಅರಿವಿಗೆ ಬರುತ್ತಿದ್ದಂತೆ ತಕ್ಷಣಕ್ಕೆ ಮನೆಯಲ್ಲಿದ್ದವರೆಲ್ಲಾ…

ಈಸೂರು ಇತಿಹಾಸ ಮುಂದಿನ ಯುವ ಪೀಳಿಗೆಗೂ ಪ್ರೇರಣೆಯಾಗಬೇಕು-ಬಿಎಸ್‌ವೈ

ಶಿಕಾರಿಪುರ,ಸೆ,೨೭: ಸ್ವಾತಂತ್ರ್ಯದ ಹೋರಾಟದ ಇತಿಹಾಸದಲ್ಲಿ ರೋಮಾಂಚನ ಉಂಟು ಮಾಡುವ ಘಟನೆ ಈಸೂರಿನಲ್ಲಿ ನಡೆದಿದ್ದು ಅದು ಮುಂದಿನ ಯುವ ಪೀಳಿಗೆಗೂ ಪ್ರೇರಣಾದಾಯಕ ಆಗುವಂತದ್ದು ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ತಾಲೂಕಿನ ಈಸೂರು ಗ್ರಾಮದಲ್ಲಿ ಭಾನುವಾರ ನಡೆದ ಸ್ವಾತಂತ್ರ್ಯ ಹೋರಾಟದ ಅಮೃತ ಮಹೋತ್ಸವ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಹಾತ್ಮಾ ಗಾಂಧೀಜಿ ಅವರು ನೀಡಿದ ಬ್ರಿಟೀಷರೆ ಭಾರತ ಬಿಟ್ಟು ತೊಲಗಿ ಎನ್ನುವ ಘೋಷಣೆಗೆ ಓಗೊಟ್ಟ ಈಸೂರಿನ ಗ್ರಾಮಸ್ಥರು ತಮ್ಮದು ಸ್ವತಂತ್ರ್ಯ ಗ್ರಾಮ ಎಂದು ಘೋಷಣೆ ಮಾಡಿಕೊಂಡರು, ಕಂದಾಯ…

ಸೂರ್ಯ ಎಲಿಗೆನ್ಸ್ ಬಹು ಮಹಡಿ ಕಟ್ಟಡ ಲೋಕಾರ್ಪಣೆ

ಬೆಂಗಳೂರು ಸೆ. 26: ಪ್ರಧಾನಮಂತ್ರಿಗಳ ಅವಾಸ್ ಯೋಜನೆಯಡಿ ಎಲ್ಲರಿಗೂ ಸೂರು ಕಲ್ಪಿಸುವಲ್ಲಿ ಬೆಂಗಳೂರು ನಗರ ಜಿಲ್ಲೆ ಮೊದಲು ಸ್ಥಾನದಲ್ಲಿದೆ ಎಂದು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ವಿ . ಸೋಮಣ್ಣ ಹೇಳಿದರು. ಕರ್ನಾಟಕ ಗೃಹ ಮಂಡಳಿಯಿಂದ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಚಂದಪುರ ಸೂರ್ಯನಗರದಲ್ಲಿ 1ನೇ ಹಂತದ ನೂತನವಾಗಿ ನಿರ್ಮಿಸಿಲಾಗಿರುವ ಸೂರ್ಯ ಎಲಿಗೆನ್ಸ್ ಬಹುಮಹಡಿ ವಸತಿ ಸಮುಚ್ಚಯವನ್ನು ಲೋಕಾರ್ಪಣೆ ಮಾಡಿ ಹತ್ತು ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು‌.…

ತಮ್ಮ ಹಕ್ಕುಗಳುಗೆ ಜಾತಿ ಸಮಾವೇಶ ನಡೆಸುವುದು ತಪ್ಪಲ್ಲ;ಸಿದ್ದು

ಬೆಂಗಳೂರು,ಸೆ,25 : ತಮ್ಮ ಹಕ್ಕುಗಳಿಗಾಗಿ ಹಿಂದುಳಿದ ವರ್ಗದವರು ಜಾತಿ ಸಮಾವೇಶಗಳನ್ನು ನಡೆಸುವುದು ಅಪರಾಧವಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಕರ್ನಾಟಕ ರಾಜ್ಯ ಮಡಿವಾಳರ ಸಂಘ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಿ ಕರೋನದಿಂದ ಮೃತರಾದವರ ಕುಟುಂಬದವರಿಗೆ ಪರಿಹಾರ ಹಾಗೂ ದಿನಸಿ ಕಿಟ್ ಗಳನ್ನು ವಿತರಿಸಿ ಮಾತನಾಡಿದರು. ಮಡಿವಾಳ ಸಮುದಾಯ ಅತ್ಯಂತ ಹಿಂದುಳಿದಿದೆ. ನಾನು ಸಿಎಂ ಆಗಿದ್ದಾಗ ಈ ಸಮುದಾಯಕ್ಕೆ ಪ್ರತ್ಯೇಕ ಅನುದಾನ ನೀಡಿದ್ದೆ. ಹಿಂದುಳಿದವರು ಜಾತಿ ಹೆಸರಿನಲ್ಲಿ ಸಮ್ಮೇಳನ ಮಾಡಿದರೆ…

ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಆನ್ ಲೈನ್ ಮೂಲಕ ನಾಗರಿಕ ಸೇವೆಗಳು ಲಭ್ಯ;ಸಿಎಂ

ಬೆಂಗಳೂರು,ಸೆ, 23:ನಾಗರಿಕ ಸೇವೆಗಳನ್ನು ಗ್ರಾಮ ಪಂಚಾಯಿತಿ ಹಂತದಲ್ಲಿಯೇ ಆನ್ ಲೈನ್ ಮೂಲಕ ಒದಗಿಸುವ ವಿನೂತನ “ಗ್ರಾಮ ಸೇವಾ” ಯೋಜನೆಯನ್ನು ಪ್ರಾಯೋಗಿಕವಾಗಿ ರಾಜ್ಯದ 5 ಜಿಲ್ಲೆಗಳಲ್ಲಿ ಮುಂಬರುವ ಗಣರಾಜ್ಯೋತ್ಸವ ಜನವರಿ 26 ರಿಂದ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಘೋಷಿಸಿದರು. ಅವರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಲಾಗಿದ್ದ ಅಮೃತ ಗ್ರಾಮ ಪಂಚಾಯತ್ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಅಭಿವೃದ್ಧಿ ಜನರ ಸುತ್ತ ಆಗಬೇಕು; ಜನರು ಅಭಿವೃದ್ಧಿ ಸುತ್ತ ಸುತ್ತುವಂತಾಗಬಾರದು. ಈ…

ಮೆಟ್ರೋ 3ನೇ ಹಂತಕ್ಕೆ ಶೀಘ್ರ ಚಾಲನೆ:ಸಿಎಂ ಸೂಚನೆ

ಬೆಂಗಳೂರು, ಸೆ. 22:ನಮ್ಮ ಮೆಟ್ರೋ ಯೋಜನೆಯ ಎರಡನೇ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಲು ನೀಡಲಾಗಿದ್ದ 2025ರ ಗಡುವನ್ನು ಮಾರ್ಪಡಿಸಿ, 2024 ಕ್ಕೆ ನಿಗದಿ ಪಡಿಸುವಂತೆ ಹಾಗೂ ಇದಕ್ಕೆ ತಕ್ಕ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದು ಪೂರ್ಣಗೊಳ್ಳುತ್ತಿದ್ದಂತೆಯೇ ಮೂರನೇ ಹಂತದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಅವರು ಇಂದು ಮೆಟ್ರೋ 2ನೇ ಹಂತದ ಯೋಜನೆಯಡಿ ಕಂಟೋನ್ಮೆಂಟ್ ನಿಂದ ಶಿವಾಜಿನಗರ ನಿಲ್ದಾಣದ ವರೆಗೆ ಸುರಂಗ ಮಾರ್ಗ ಕೊರೆದ ಟಿಬಿಎಂ ಊರ್ಜಾ ಯಂತ್ರವು ಹೊರಗೆ ಬರುವುದನ್ನು ವೀಕ್ಷಿಸಿದ…

ವೇತನ ನೀಡುವಂತೆ ಆಗ್ರಹಿಸಿ ದಿನಗೂಲಿ ನೌಕರರ ಪ್ರತಿಭಟನೆ

ಆಲಮಟ್ಟಿ,ಸೆ,17: ವಿವಿಧ ಉದ್ಯಾನಗಳಲ್ಲಿ ದಿನಗೂಲಿಗಳಾಗಿ ಕರ್ತವ್ಯನಿರ್ವಹಿಸುತ್ತಿರುವವರಿಗೆ ಕಳೆದ ೫ತಿಂಗಳಿನಿಂದ ಸಂಬಳ ನೀಡದೇ ಇರುವದರಿಂದ ಕೂಡಲೇ ವೇತನ ನೀಡುವಂತೆ ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ಸಂಯುಕ್ತ ಕೆಬಿಜೆನ್ನೆಲ್ ಆಲಮಟ್ಟಿ ಡಿ ಗ್ರುಪ್ ನೌಕರರ ಸಂಘದವತಿಯಿಂದ ಮುಖ್ಯ ಅಭಿಯಂತರರ ಕಚೇರಿಯ ಮುಂದೆ ಧರಣಿ ನಡೆಸಿದರು. ಈ ವೇಳೆ ಮಾತನಾಡಿದ ಅಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ, ಮಾರುಕಟ್ಟೆಯಲ್ಲಿ ನಿತ್ಯ ಬಳಸುವ ಸಾಮಗ್ರಿಗಳ ದರ ಏರಿಕೆಯಾಗುತ್ತಿದೆ ಆದ್ದರಿಂದ ದಿನಗೂಲಿ ಕಾರ್ಮಿಕರಿಗೆ ಪ್ರತಿ ತಿಂಗಳೂ ವೇತನ ನೀಡಬೇಕು ಎಂದು ಆಗ್ರಹಿಸಿದರು. ಧರಣಿ ಸ್ಥಳಕ್ಕೆ ಆಗಮಿಸಿದ ಕೆಬಿಜೆನ್ನೆಲ್ ಅರಣ್ಯ…

ಆಲಮಟ್ಟಿ: ಎಲ್ಲಾ ೨೬ ಗೇಟ್ ಗಳ ಮೂಲಕ ನೀರು ಹೊರಕ್ಕೆ

ಆಲಮಟ್ಟಿ,ಸೆ,15:ಆಲಮಟ್ಟಿ ಜಲಾಶಯದ ಹರಿದು ಬರುವ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಮುಂಜಾಗ್ರತೆಯ ಕ್ರಮವಾಗಿ ಜಲಾಶಯದ ಎಲ್ಲಾ ೨೬ ಗೇಟ್ ಗಳ ಮೂಲಕ ನೀರನ್ನು ನದಿ ತಳಪಾತ್ರಕ್ಕೆ ಹರಿಸಲಾಗುತ್ತಿದೆ. ಗೇಟ್ ಗಳ ಮೂಲಕ ೮೦,೦೦೦ ಕ್ಯುಸೆಕ್ ಹಾಗೂ ಕೆಪಿಸಿಎಲ್ ಮೂಲಕ ೪೦,೦೦೦ ಕ್ಯುಸೆಕ್ ಸೇರಿ ಒಟ್ಟಾರೇ ೧,೨೦,೦೦೦ ಕ್ಯುಸೆಕ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. ಏಕಾಏಕಿ ಈ ಪ್ರವಾಹ ಉಂಟಾಗಿದ್ದು, ತಾತ್ಕಾಲಿಕವಾಗಿ ಒಂದೆರಡು ದಿನಗಳಲ್ಲಿ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿವೆ. ಸದ್ಯ ಜಲಾಶಯದ ಒಳಹರಿವು ೮೯,೦೦೦ ಕ್ಯುಸೆಕ್ ಇದ್ದು, ಜಲಾಶಯದ ಮಟ್ಟ…

ಅಡುಗೆ ಅನಿಲ ಸ್ಪೋಟ; ಸುಟ್ಟು ಕರಕಲಾದ ಸಾಮಗ್ರಿಗಳು

ಆಲಮಟ್ಟಿ,ಸೆ,15: ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕ್ ಬೇನಾಳ NH ಗ್ರಾಮದಲ್ಲಿ ಅಡುಗೆ ಅನಿಲ ಸ್ಪೋಟಗೊಂಡು ಎರಡು ಲಕ್ಷ ರೂ ಮೌಲ್ಯದ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಇಂದು ಬೆಳಗ್ಗೆ ಬುಡ್ಡಸಾಬ್ ಮಲ್ಲಿಕಸಾಬ್ ಗಂಜಿಹಾಳ್ ಅವರ ಮನೆಯಲ್ಲಿ ಈ ಅವಘಡ ಸಂಭವಿಸಿದ್ದು  ಸ್ಪೋಟಕ್ಕೆ ಮನೆಗೆ ಬೆಂಕಿ ತಗುಲಿದ್ದು ಮನೆ ಹತ್ತಿಉರಿದಿದೆ. ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿ ನಂದಿಸಿ ಆಗುವ ಮತ್ತಷ್ಟು ಅನಾಹುತವನ್ನು ತಡೆದಿದೆ.15 ಚೀಲ ಜೋಳ ಗೋಧಿ ಮತ್ತಿತರ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ತಸಿಲ್ದಾರ್ ಸತೀಶ್…

ಮೈಸೂರು ದಸರಾ ಉತ್ಸವ; ಗಜ ಪಯಣಕ್ಕೆ ಚಾಲನೆ

ಮೈಸೂರು ಪ್ರತಿನಿಧಿ: ಬಾಲು .ಡಿ. ಮೈಸೂರು, ಸೆ, ೧೩:ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಮೊದಲ ಕಾರ್ಯಕ್ರಮವಾದ ಗಜಪಯಣಕ್ಕೆ ಇಂದು ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನ ಹೊಸಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಸರೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಕಾಡಿನಿಂದ ನಾಡಿಗೆ ಹೊರಟ ಗಜಪಡೆ ಸಾರಥಿ ಅಭಿಮನ್ಯು ನೇತೃತ್ವದ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು. ನಾಗರಹೊಳೆ ವ್ಯಾಪ್ತಿಯ ಹುಣಸೂರಿನ ವೀರನಹೊಸಹಳ್ಳಿ ಅರಣ್ಯ ಪ್ರದೇಶದಲ್ಲಿ ದಸರಾ ಆನೆಗಳಿಗೆ ಸ್ವಾಗತ ನೀಡಿದ ಅರಣ್ಯಾಧಿಕಾರಿಗಳು, ದಸರಾಗೆ…

ಬೆಂಗಳೂರು ಆರೋಗ್ಯ ಸೇವೆಗಳಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ :ಸಿ.ಎಂ. ಬೊಮ್ಮಾಯಿ

ಬೆಂಗಳೂರು, ಸೆ, 12:ಆರೋಗ್ಯ ಸೇವೆಗಳಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ವಿಧಾನಸೌಧದಲ್ಲಿ108 ಆರೋಗ್ಯ ಕವಚ ತುರ್ತು ವೈದ್ಯಕೀಯ ಸೇವೆಗೆ ನೂತನವಾಗಿ 120 ನೂತನ ಆಂಬ್ಯುಲೆನ್ಸ್ ಗಳ ನ್ನು ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು. ಬೆಂಗಳೂರು ಆರೋಗ್ಯ ಸೇವೆಗಳು ಸಂಪೂರ್ಣವಾಗಿ ಒಂದು ಪ್ರಾಧಿಕಾರದಡಿಗೆ ಬರಬೇಕು. ಬರುವ ದಿನಗಳಲ್ಲಿ ಇದನ್ನು ಕಾರ್ಯಗತಗೊಳಿಸುವುದಾಗಿ ಮುಖ್ಯಮಂತ್ರಿ ಗಳು ತಿಳಿಸಿದರು. ಆರೋಗ್ಯಕ್ಕೆ ಜೀವನಾಡಿ ಆಂಬ್ಯುಲೆನ್ಸ್ , ಆರೋಗ್ಯ ಯಾವಾಗ ಕೆಡುತ್ತದೆ ಎಂದು ತಿಳಿಯೋದು ಕಷ್ಟ. ಆರೋಗ್ಯ ಕೈಕೊಟ್ಟ…

ಗಣಪತಿಯ ಆರಾಧನೆ ಭಾರತೀಯ ಸಮೃದ್ಧ ಸಂಸ್ಕೃತಿ :ಡಾ ಆರೂಢಭಾರತೀ ಸ್ವಾಮೀಜಿ

ಬೆಂಗಳೂರು, ಸೆ,11:”ಗಣಪತಿಯನ್ನು ಆರಾಧಿಸುವುದು ಸನಾತನ ಭಾರತದ ಸಮೃದ್ಧ ಸಂಸ್ಕೃತಿ” ಎಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಹೇಳಿದರು. ಅವರು ಗುರುವಾರ ಗಣೇಶ ಚೌತಿಯ ನಿಮಿತ್ತ ತಮ್ಮ ಆಶ್ರಮದಲ್ಲಿ ಮಕ್ಕಳು ಮಾಡಿದ ಗಣಪತಿಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದರು. ” ಪೆರಿಯಾರ್ ರಾಮಸ್ವಾಮಿಯಂಥವರು ಗಣೇಶನ ಕುರಿತು, ಆನೆಯ ತಲೆ ಜೋಡಿಸಿ ಜೀವ ಕೊಡಬಲ್ಲ ಶಿವನಿಗೆ, ತಾನೇ ಕತ್ತರಿಸಿದ ಗಣೇಶನ ತಲೆ ಜೋಡಿಸಿ ಜೀವ ಕೊಡಲಾಗಲಿಲ್ಲವೇ? ಎಂಬಿತ್ಯಾದಿ ಆಕ್ಷೇಪಿಸಿ, ವೇದ ಪುರಾಣಗಳೆಲ್ಲಾ ಮೋಸ, ಕಟ್ಟು…

ಪರಿಸರ ರಕ್ಷಣೆ ಮೂಲಕ ತೇಜಸ್ವಿ ನೆನಪಿಸಿಕೊಳ್ಳಬೇಕು; ಸಿದ್ದರಾಮಯ್ಯ

ಬೆಂಗಳೂರು, ಸೆ,08:ಪೂರ್ಣ ಚಂದ್ರ ತೇಜಸ್ವಿ ಒಬ್ಬ ಮಾನವತಾವಾದಿ ಅಲ್ಲದೆ ಪರಿಸರವಾದಿಯೂ ಕೂಡ ಆದರೆ ರಾಜಕಾರಣಿಗಳ ಬಗ್ಗೆ ಅವರಿಗೆ ವಿಶ್ವಾಸವಿರಲಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದ ಅಂಗವಾಗಿ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ತೇಜಸ್ವಿ ಜೀವಲೋಕ ಹಾಗೂ ಕುರಿಂಜಿ ಲೋಕ ಸಾಕ್ಷ್ಯಚಿತ್ರ, ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಾನು ವಿದ್ಯಾರ್ಥಿಯಾಗಿದ್ದಾಗ ತೇಜಸ್ವಿಯವರ ಪರಿಚಯ ನನಗಿರಲಿಲ್ಲ. ವಾರಕ್ಕೊಮ್ಮೆ ಮೈಸೂರಿಗೆ ಬರುತ್ತಿದ್ದರು, ಮೈಸೂರಿನಲ್ಲಿ ಕೆ. ರಾಮದಾಸ್ ಎನ್ನುವವರು ತೇಜಸ್ವಿಯವರ ಆಪ್ತ ಸ್ನೇಹಿತರಾಗಿದ್ದರು. ಇವರು…

ಸಂಪುಟ ಸಹೋದ್ಯೋಗಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ

ತಡಸ,ಸೆ,01:ತಮ್ಮ ಸಚಿವ ಸಂಪುಟದಲ್ಲಿನ ಸಹೋದ್ಯೋಗಿಗಳ ಕಾರ್ಯಕ್ಷಮತೆ ದಕ್ಷತೆ, ಪ್ರತಿಭೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ಮೆಚ್ಚುಗೆಯ ಮಾತುಗಳನ್ನಾಡಿದರು. .. ಬುಧವಾರ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ತಡಸ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗಳಿಗೆ ಶಂಕುಸ್ಥಾಪನೆ ನೆರವೇರಿಸುವುದಕ್ಕೂ ಮುನ್ನ ಅವರು ತಡಸ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು. ನನ್ನ ಸಚಿವ ಸಂಪುಟದಲ್ಲಿರು ಸಚಿವರು ಪ್ರತಿಭಾವಂತರಿದ್ದಾರೆ. ಕಾರ್ಯಕ್ಷಮತೆಯಿಂದ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೀಗಾಗಿ ರಾಜ್ಯದ ಜನತೆಗೆ ಉತ್ತಮ ಕಾರ್ಯಕ್ರಮಗಳನ್ನು ಕೊಡಲು ಸಾಧ್ಯವಾಗುತ್ತಿದೆ ಎಂದು…

ವಿಕಲಾಂಗ ಭಾಗ್ಯ ಯೋಜನೆಗೆ ಆಗ್ರಹ

meet ಬೆಂಗಳೂರು,ಆ,30:ಸಂಕಷ್ಟದಲ್ಲಿರುವ ಕಿವಿ ಕಣ್ಣು ಕಾಲು ಇಲ್ಲದ ವಿಕಲಾಂಗರಿಗೆ ಶ್ರವಣ ಸಾಧನ, ವ್ಹೀಲ್ ಚೇರ್ ಮೊದಲಾದವುಗಳನ್ನು ಉಚಿತವಾಗಿ ವಿತರಿಸುವ ವಿಕಲಾಂಗ ಭಾಗ್ಯ ಯೋಜನೆಯನ್ನು ಸರ್ಕಾರವು ಜಾರಿಗೆ ತರಬೇಕೆಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಆಗ್ರಹಿಸಿದರು. ಅವರು ಭಾನುವಾರ ಕೆಂಗೇರಿಯಲ್ಲಿ, ವಂಡರಿಂಗ್ ಟು ದಿ ಲೈಟ್ ಫೌಂಡೇಶನ್ ನೀಡಿದ ಶ್ರವಣ ಸಾಧನಗಳನ್ನು ವಿಕಲಾಂಗ ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು.” ಪಂಚ ಜ್ಞಾನೇಂದ್ರಿಯಗಳಲ್ಲಿ ಕಿವಿಯು ಒಂದಾಗಿದ್ದು, ಅದು ಕೇಳದಿದ್ದಲ್ಲಿ ಬಾಳು ಶೂನ್ಯ ಎನಿಸುತ್ತದೆ. ಶ್ರವಣ…

1 6 7 8 9 10 15
error: Content is protected !!