ಜಿಲ್ಲೆ
ಅ.ನಾ.ಪ್ರಹ್ಲಾದರಾವ್ ರಚನೆಯ ‘ಹೆಜ್ಜೆಗುರುತು’ ಕೃತಿ ಲೋಕಾರ್ಪಣೆ
ಬೆಂಗಳೂರು, ಡಿ, 30: ಲೇಖಕ ಅ.ನಾ.ಪ್ರಹಾದರಾವ್ ಕನ್ನಡ ಚಲನಚಿತ್ರ ಚರಿತ್ರೆ ಕುರಿತು ದಾಖಲಿಸಿರುವ ‘ಹೆಜ್ಜೆಗುರುತು’ ಕೃತಿಯನ್ನು ಪ್ರಸಿದ್ಧ ಕವಿ, ಸಾಹಿತಿ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ಅವರು ತಮ್ಮ ನಿವಾದಲ್ಲಿ ಇಂದು (2021, ಡಿಸೆಂಬರ್ 30) ಬಿಡುಗಡೆ ಮಾಡಿದರು. ಹಂಸಜ್ಯೋತಿ ಸಾಂಸ್ಕೃತಿಕ ಸಂಸ್ಥೆಯ ಮು.ಮುರಳೀಧರ ಹಾಗೂ ಶ್ರೀಮತಿ ಮಲ್ಲಿಕಾ ಪ್ರಹ್ಲಾದ್ ಈ ಸಂದರ್ಭದಲ್ಲಿ ಹಾಜರಿದ್ದರು. ಚಿತ್ರರಂಗ ಮೂಕಿ ಕಾಲದಿಂದ ಆರಂಭಗೊಂಡು ಬೆಳವಣಿಗೆಯ ವಿವಿಧ ಮಜಲುಗಳಿಗೆ ಸಂಬಂಧಿಸಿದ ಚಲನಚಿತ್ರಗಳು, ವ್ಯಕ್ತಿಗಳು ಹಾಗೂ ಘಟನಾವಳಿಗಳನ್ನು ಹೆಣೆಯುತ್ತಾ ಕನ್ನಡ ಚಿತ್ರರಂಗದ ಔನತ್ಯವನ್ನು ದಾಖಲಿಸುವ ಪ್ರಯತ್ನವನ್ನು ಈ…