Browsing: ರಾಜಕೀಯ

ರಾಜಕೀಯ

`ಆಟ’ ಆಡಲು ಜೆಡಿಎಸ್ ಮತ್ತೊಂದು ಹೊಸ ತಂತ್ರ ದಾಳ

-ತುರುವನೂರು ಮಂಜುನಾಥ “೭೫ ವರ್ಷದಿಂದ ಕಾಂಗ್ರೆಸ್, ಬಿಜೆಪಿ ಸರ್ಕಾರ ನೋಡಿದ್ದೀರಿ. ನಗೆ ೨೦ ವರ್ಷ ಅಧಿಕಾರ ಬೇಡ, ೫ ವರ್ಷ ಕೊಡಿ ಸಾಕು. ಒಂದು ಚುನಾವಣೆ ಪರೀಕ್ಷೆ ಮಾಡಿ. ನಿಮ್ಮ ಬದುಕನ್ನು ಒಳ್ಳೆಯ ರೀತಿಯಲ್ಲಿ ಮಾಡುವೆ. ಇನ್ನೊಬ್ಬರ ಜೊತೆ ಸರ್ಕಾರ ಮಾಡೋದಕ್ಕೆ ಆಗಲ್ಲ. ಸ್ವತಂತ್ರ ಸರ್ಕಾರ ಕೊಡಿ. ಯಾವ ಸರ್ಕಾರಕ್ಕೂ ಅರ್ಜಿ ಕೊಡದ ರೀತಿಯಲ್ಲಿ ಯೋಜನೆಗಳನ್ನು ಸಿದ್ಧ ಮಾಡಿದ್ದೇನೆ” ಇದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇತ್ತೀಚೆಗೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಸೊರಣಗಿ ಗ್ರಾಮದಲ್ಲಿ ರಾಜ್ಯದ ಜನರಿಗೆ…

ಗೃಹ ಸಚಿವರ ಮೇಲೆ ರೇಪ್ ಮಾಡಿರುವವರನ್ನು ಬಂಧಿಸಲಿ: ಡಿ.ಕೆ ಶಿ

ಬೆಂಗಳೂರು,ಆ,27:ಮೈಸೂರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವಾಗಿದ್ದು, 48 ಗಂಟೆಗಳಾದರೂ ಯಾರ ವಿರುದ್ಧವೂ ಎಫ್ಐಆರ್ ದಾಖಲಾಗದಿರುವುದು ನಾಚಿಕೆಗೇಡಿನ ವಿಚಾರ. ಆದಷ್ಟು ಬೇಗ ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ. ಇನ್ನು, ಗೃಹ ಮಂತ್ರಿಗಳು ತಮ್ಮ ಮೇಲೆ ಕಾಂಗ್ರೆಸ್ ನಾಯಕರು ರೇಪ್ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಅದು ಯಾರೇ ಆಗಿರಲಿ ಅವರ ಮೇಲೆ ಐಪಿಸಿ ಸೆಕ್ಷನ್ 376 ಅಡಿಯಲ್ಲಿ ಪ್ರಕರಣ ದಾಖಲಿಸಿ, ಬಂಧಿಸಲಿ’ ಎಂದು ಶಿವಕುಮಾರ್ ಅವರು ಛೇಡಿಸಿದ್ದಾರೆ.…

ಕೊನೆಗೂ ಪ್ರವಾಸೋದ್ಯಮ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಆನಂದ್ ಸಿಂಗ್

ಬೆಂಗಳೂರು,ಆ.೨೪: ಖಾತೆ ವಿಚಾರಕ್ಕೆ ಮುನಿಸಿಕೊಂಡಿದ್ದ ಸಚಿವ ಆನಂದ್ ಸಿಂಗ್ ಸದ್ಯಕ್ಕೆ ಶಮನವಾಗಿದ್ದು, ಇಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇಂದು ಸಚಿವ ಆನಂದ್ ಸಿಂಗ್ ಅವರು ತಮ್ಮ ರಾಜೀನಾಮೆ ನಿರ್ಧಾರ ತಿಳಿಸಲು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದರು. ಸಿಂಗ್ ಜೊತೆಗೆ ರಾಜೂಗೌಡ ಕೂಡ ಬಂದಿದ್ದರು. ಸಿಎಂ ಬೊಮ್ಮಾಯಿ ಆನಂದ್ ಸಿಂಗ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ದುಡುಕಿನ ನಿರ್ಧಾರ ಕೈಗೊಳ್ಳಬೇಡಿ, ಇರುವ ಖಾತೆಯಲ್ಲೇ ಮುಂದುವರೆಯಿರಿ. ನಾಳೆ…

ಅನ್ಯಮನಸ್ಕರಾಗುತ್ತಿದ್ದಾರೆಯೇ ಯಡಿಯೂರಪ್ಪ?

ಬಿಎಸ್ ವೈ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಡುವಿನ ಸದ್ಯದ ರಾಜಕೀಯ ಪರಿಸ್ಥಿತಿ ಯ ಕುರಿತು ಹಿರಿಯ ಪತ್ರಕರ್ತರಾದ ಸಿ.ರುದ್ರಪ್ಪ ಅವರ ಅವಲೋಕನ ಮಾಡಿದ್ದಾರೆ. ಸಿ.ರುದ್ರಪ್ಪ,ಹಿರಿಯ ಪತ್ರಕರ್ತರು ಅನ್ಯಮನಸ್ಕರಾಗುತ್ತಿದ್ದಾರೆಯೇ ಯಡಿಯೂರಪ್ಪ? ತಮ್ಮ ಪುತ್ರ ಬಿ ವೈ ವಿಜಯೇಂದ್ರ ಅವರ ರಾಜಕೀಯ ಭವಿಷ್ಯದ ಬಗ್ಗೆ ಅಪಾರವಾದ ನಿರೀಕ್ಷೆ ಹೊಂದಿರುವ ಬಿ ಎಸ್ ಯಡಿಯೂರಪ್ಪನವರು ಇತ್ತೀಚಿನ ಕೆಲವು ವಿದ್ಯಮಾನಗಳಿಂದಾಗಿ ಆತಂಕಗೊಂಡಿದ್ದಾರೆ ಎನ್ನಲಾಗಿದೆ. “ಯಡಿಯೂರಪ್ಪನವರು ಉಮ್ಮಳಿಸಿ ಬರುತ್ತಿದ್ದ ದುಃಖದ ನಡುವೆಯೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ್ದರು.ನಂತರ ಪ್ರಧಾನಿ ನರೇಂದ್ರ ಮೋದಿ,ಅಮಿತ್…

ಬೊಮ್ಮಾ ಯಿ ಸರ್ಕಾರ ಹೆಚ್ಚು ದಿನ ಬಾಳುವುದಿಲ್ಲ : ಸಿದ್ದರಾಮಯ್ಯ

ಬೆಂಗಳೂರು ,ಆ,14: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಹೆಚ್ಚು ದಿನ ಬಾಳುವುದಿಲ್ಲ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ತಮ್ಮ ನಿವಾಸದಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸರ್ಕಾರದಲ್ಲಿ ಗೊಂದಲ ಮುಂದುವರಿದಿದೆ. ಈ ಸರ್ಕಾರ ಅವಧಿ ಪೂರ್ಣಗೊಳಿಸುವುದು ಅನುಮಾನ. ಯಾವುದೇ ಸಂದರ್ಭದಲ್ಲಿ ಪತನಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು. ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಸವನಗೌಡ ಪಾಟೀಲ್ ಯತ್ನಾಳ, ಅರವಿಂದ ಬೆಲ್ಲದ್, ರಾಮದಾಸ…

ಸರ್ಕಾರ ಜನರ ಜೀವನದ ಜೊತೆಚಲ್ಲಾಟವಾಡುತ್ತಿದೆ-ಡಿಕೆಶಿ

ಬೆಂಗಳೂರು,ಆ,೧೦: ಕೋವಿಡ್ ೨ನೇ ಅಲೆಯಲ್ಲಿ ಆಗಿರುವ ನಷ್ಟಕ್ಕೆ ರೈತರಿಗೆ ಸರ್ಕಾರದಿಂದ ಈವರೆಗೂ ಪರಿಹಾರ ಸಿಕ್ಕಿಲ್ಲ. ಬೆಳೆಗೆ ಬೆಲೆ ಇಲ್ಲದೆ ರೈತರು ಪರದಾಡುತ್ತಿದ್ದಾರೆ. ಸರ್ಕಾರ ಇದ್ಯಾವುದರ ಬಗ್ಗೆಯೂ ಚಿಂತಿಸದೇ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕಿಡಿಕಾರಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಹೊಸ ಸರ್ಕಾರ ಬಂದಿದೆ, ಜನರ ರಕ್ಷಣೆ ಮಾಡುತ್ತದೆ ಎಂದು ಎಲ್ಲರೂ ಕಾದು ನೋಡುತ್ತಿದ್ದಾರೆ. ಹಾರ-ತುರಾಯಿ ಹಾಕಿಸಿಕೊಳ್ಳುವವರಿಗೆ ನಾನು ಬೇಡ ಎನ್ನುವುದಿಲ್ಲ. ಕೋವಿಡ್ ಸೋಂಕು…

ನನ್ನ ಬಗ್ಗೆ ಮಾತನಾಡಲು ಸೋಮಣ್ಣ ಯಾರು-ಪ್ರೀತಂ ಗೌಡ ಪ್ರಶ್ನೆ

ಹಾಸನ,ಆ,೧೦: ತಮ್ಮ ಬಗ್ಗೆ ಸಚಿವ ಸೋಮಣ್ಣ ಅವರಂತೆ ಇತರೆ ಪಕ್ಷಗಳಿಂದ ಬಂದವನಲ್ಲ ನಾನು ಬಿಜೆಪಿ ಕಟ್ಟಾಳು ಹೊಂದಾಣಿಕೆ ರಾಜಕಾರಣಕ್ಕೆ ಹೊಂದಿಕೊಂಡವರಲ್ಲ ನಾವು ಅಷ್ಟಕ್ಕು ನನ್ನ ಬಗ್ಗೆ ಮಾತನಾಡಲು ಅವರ‍್ಯಾರು ಎಂದು ಶಾಸಕ ಪ್ರೀತಂ ಗೌಡ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿರುವ ಅವರು, ಸೋಮಣ್ಣ ಅವರ ಬಗ್ಗೆ ನಾನು ಮಾತನಾಡಿಲ್ಲ ನಾನು ಮಾತನಾಡಿರುವುದು ಸಿಎಂ ಬಸವರಾಜ್ ಬೊಮ್ಮಾಯಿ ಅವರ ಬಗ್ಗೆ ನಮ್ಮ ಕಾರ್ಯಕರ್ತರ ಧ್ವನಿಯಾಗಿ ಈ ಮಾತನ್ನು ನಾನು ಆಡಿದ್ದೇನೆ ಅದಕ್ಕೆ ಸಿಎಂ ಉತ್ತರ ಕೊಡುತ್ತಾರೆ ಇವತ್ತೋ…

ಪ್ರೀತಂಗೌಡ ಇತಿಮಿತಿಯಲ್ಲಿರಬೇಕು-ಸೋಮಣ್ಣ

ಮಂಡ್ಯ,ಆ,೧೦: ಶಾಸಕ ಪ್ರೀತಂಗೌಡ ಇನ್ನೂ ಹುಡುಗ. ಇನ್ನೂ ಬೆಳೆಯಬೇಕಾದವನು. ಹೀಗಾಗಿ ಅವನು ಇತಿಮಿತಿಯಲ್ಲಿ ಇರಬೇಕು ಎಂದು ಸಚಿವ ವಿ.ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಕುಟುಂಬಕ್ಕೆ ೫೦ ವರ್ಷದ ರಾಜಕೀಯ ಇತಿಹಾಸವಿದೆ. ನಾನು ಸಚಿವ ಆಗಿದ್ದಾಗ ಪ್ರೀತಂಗೌಡ ಇನ್ನೂ ಹುಟ್ಟಿಯೇ ಇರಲಿಲ್ಲ. ದೇವೇಗೌಡರ ಮನೆಗೆ ಹೋಗುವುದರಲ್ಲಿ ಏನು ತಪ್ಪಿದೆ. ದೇವೇಗೌಡರು ರಾಷ್ಟದ ಪ್ರಧಾನಿಗಳಾಗಿದ್ದಂತವರು, ನಾನು ಕೂಡ ಅವರ ಮನೆಗೆ ಹೋಗಿದ್ದೇನೆ. ಪ್ರೀತಂಗೌಡ ಇನ್ನೂ ಬೆಳೆಯಬೇಕಾದ ಹುಡುಗ, ಸುಮ್ಮನೆ ಹಾಗೆಲ್ಲಾ ಮಾತನಾಡುವುದು…

ಸರ್ಕಾರದ ಕಾರ್ಯಕ್ರಮ ಅನುಷ್ಠಾನ ನಮ್ಮ ಸಂಕಲ್ಪ ಆಗಲಿ;ಸಿಎಂ ಬೊಮ್ಮಾಯಿ

ಮೈಸೂರು,ಆ,09:ವಿಶ್ವದಲ್ಲಿಯೇ ಅತಿಹೆಚ್ಚು ಸದಸ್ಯರಿರುವ ಪಕ್ಷ ಬಿಜೆಪಿ. ಧೀಮಂತ ನಾಯಕರಾದ ಪ್ರಧಾನಿ  ನರೇಂದ್ರ ಮೋದಿ, ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅನೇಕ ಪ್ರಮುಖರ ನಾಯಕತ್ವದಲ್ಲಿ 40 ವರ್ಷಗಳಿಂದ ಈ ಪಕ್ಷ ಕಟ್ಟಲ್ಪಟ್ಟಿದೆ. ಪಕ್ಷ, ಪಕ್ಷ ನಿಷ್ಠೆ, ಪಕ್ಷದ ಕಾರ್ಯ ಕ್ರಮಗಳ ಅನುಷ್ಠಾನ ಪಕ್ಷದ ಕಾರ್ಯಕರ್ತರಾದ ನಮ್ಮೆಲ್ಲರ ಸಂಕಲ್ಪ ಆಗಬೇಕು. ಈ ಕೆಲಸವನ್ನು ಮುಂದಿನ 2 ವರ್ಷಗಳಲ್ಲಿ ನಾವು ಪ್ರಾಮಾಣಿಕವಾಗಿ ವಿಶ್ವಾಸಪೂರ್ವಕವಾಗಿ ನಾಡಿನ ಸೇವೆ ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇಂದು ಮೈಸೂರು ನಗರದಲ್ಲಿ ಭಾರತೀಯ…

ತಮಗಿಷ್ಟದ ಖಾತೆ ಸಿಗದ ಸಚಿವರ ಅಕ್ರೋಶ

ಬೆಂಗಳೂರು,ಆ,08: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಚಿವರಿಗೆ ಖಾತೆ ಹಂಚಿದ ಬೆನ್ನಲ್ಲೇ ತಮ್ಮ ಇಷ್ಟದ ಖಾತೆ ಸಿಕ್ಕಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆನಂದ್ ಸಿಂಗ್,ಎಂ.ಟಿ.ಬಿ ನಾಗರಾಜ್ ಖಾತೆಗೆ ಖ್ಯಾತೆ ತಗೆದಿದ್ದರೆ.ಸತೀಶ್ ರೆಡ್ಡಿ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ತಮ್ಮ ಅಕ್ರೋಶ ಹೊರಹಾಕಿದ್ದಾರೆ. ಇಂದು ಬೆಳಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಶಾಸಕ ಸತೀಶ್ ರೆಡ್ಡಿ ಹೊರಗೆ ಬಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನಾನು 1993ರಿಂದ ಭಾರತೀಯ ಜನತಾ ಪಾರ್ಟಿಯಲ್ಲಿದ್ದೇನೆ, ಮೂರು ಬಾರಿ ಶಾಸಕ, ನಂತರ ಜಿಲ್ಲಾ ಪಂಚಾಯತ್…

ನೂತನ ಸಚಿವರಿಗೆ ಖಾತೆ ಹಂಚಿಕೆ ಅರಗ ಜ್ಙಾನೇಂದ್ರರಿಗೆ ಗೃಹ,ಸುನೀಲ್ ಕುಮಾರ್ ಗೆ ಇಂಧನ ಖಾತೆ

ಬೆಂಗಳೂರುಆ,07: ಭಾರೀ ಕುತೂಹಲ ಮೂಡಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಂಪುಟದ ಸಚಿವರಿಗೆ ಖಾತೆಗಳ ಹಂಚಿಕೆಯಸಗಿದೆ. 29 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಗ್ರೀನ್‌ ಸಿಗ್ನಲ್ ಕೊಟ್ಟಿದ್ದಾರೆ. ಇನ್ನು ಸಂಪುಟದಲ್ಲಿ ಮೊದಲ ಬಾರಿ ಸಚಿವರಾದವರಿಗೆ ಪ್ರಭಾವಿ ಖಾತೆ ನೀಡಿದ್ದರೆ, ಸಚಿವೆ ಶಶಿಕಲಾ ಜೊಲ್ಲೆಗೆ ಮುಜರಾಯಿ, ಹಜ್ ಇಲಾಖೆ ಜವಾಬ್ದಾರಿ ವಹಿಸಿರುವುದು ಮತ್ತೊಂದು ಪ್ರಮುಖ ಬದಲಾವಣೆಯಾಗಿದೆ. ಯಾರಿಗೆ ಯಾವ ಖಾತೆ? * ಗೋವಿಂದ ಕಾರಜೋಳ: ಜಲಸಂಪನ್ಮೂಲ ಖಾತೆ * ಕೆ.ಎಸ್.ಈಶ್ವರಪ್ಪ: ಗ್ರಾಮೀಣ ಅಭಿವೃದ್ಧಿ…

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂಪುಟದ ಸಚವರಿಂದ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು,ಆ,04: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಂಪುಟ ರಚನೆಯಾಗಿದ್ದು ಮೊದಲಿಗೆ 29 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆದಿದ್ದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರತಿಜ್ಞಾವಿಧಿ ಬೋಧಿಸಿದರು. ಕೆ.ಎಸ್.ಈಶ್ವರಪ್ಪ-ಶಿವಮೊಗ್ಗ, ಆರ್. ಅಶೋಕ್- ಪದ್ಮನಾಭ ನಗರ, ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ, ಉಮೇಶ್ ಕತ್ತಿ- ಹುಕ್ಕೇರಿ, ಎಸ್.ಟಿ.ಸೋಮಶೇಖರ್- ಯಶವಂತಪುರ, ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ, ಬೈರತಿ‌ ಬಸವರಾಜ – ಕೆ ಆರ್ ಪುರಂ, ಮುರುಗೇಶ್ ನಿರಾಣಿ – ಬಿಳಿಗಿ, ಶಿವರಾಂ…

ಡಸಿಎಂಗಳ ಸೃಷ್ಟಿ ಇಲ್ಲ ವಿಜಯೇಂದ್ರಗೆ ಅವಕಾಶ ಇಲ್ಲ; ಸಿಎಂ

ಬೆಂಗಳೂರು,ಆ,04: ಈ ಬಾರಿ ಸಚಿವ ಸಂಪುಟ ರಚನೆಯಲ್ಲಿ ಡಿಸಿಎಂ ಸ್ಥಾನ ಇರುವುದಿಲ್ಲಮತ್ತು ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಈಗಾಗಲೇ ಸಚಿವರ ಪಟ್ಟಿ ಅಂತಿಮವಾಗಿದೆ.ಈ ಬಾರಿ ಡಿಸಿಎಂ ಸ್ಥಾನ ಇರುವುದಿಲ್ಲ. 3 ದಲಿತ 1 ಎಸ್.ಟಿ , ಮಹಿಳೆಗೆ ಸ್ಥಾನ ನೀಡಲಾಗಿದೆ. ಲಿಂಗಾಯಿತ 8, ಒಬಿಸಿಗೆ 7, ಒಕ್ಕಲಿಗೆ ಸಮುದಾಯಕ್ಕೆ 7 ಸ್ಥಾನ ನೀಡಲಾಗಿದೆ. ಒಟ್ಟು…

ಅಂತೂ ಸಚಿವ ಸಂಪುಟಕ್ಕೆ ಸಿಕ್ತು ಗ್ರೀನ್ ಸಿಗ್ನಲ್-ಹಿರಿಯರಿಗೆ ಕೊಕ್

ಬೆಂಗಳೂರು,ಆ. ೦೪:ಅಂತೂ ಇಂತೂ ಮೂರುದಿನಗಳ ಕಸರತ್ತಿನ ನಡುವೆ ಇಂದು ಹಿರಿಯ ನಾಯಕರಿಗೆ ಕೊಕ್ ಕೊಟ್ಟು ಒಂದಿಷ್ಟು ಹೊಸ ಮುಖಗಳಿಗೆ ಮಣೆ ಹಾಕಿ ಬಿಎಸ್‌ವೈ ಒತ್ತಡಕ್ಕೆ ಮಣಿದು ಪುತ್ರ ಬಿ.ಎಸ್.ವಿಜಯೇಂದ್ರ ಅವರಿಗೂ ಅವಕಾಶ ನೀಡಿದ ಸಚಿವ ಸಂಪುಟ ಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಅತ್ತ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಬೆಂಗಳೂರಿಗೆ ಮುಖಮಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ಮಧ್ಯಾಹ್ನ ನೂತನ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ಸಚಿವರ ಪ್ರಮಾಣವಚನ ಸಮಾರಂಭ ನಡೆಯಲಿದೆ ಇದೇ ವೇಳೆ, ಕೆಲ ಸಚಿವರಿಗೆ…

ಪೈನಲ್ ಹಂತಕ್ಕೆ ತಲುಪಿದ ಸಚಿವ ಸಂಪುಟ ವಿಸ್ತರಣೆ

ನವದೆಹಲಿ,ಆ,೦೩: ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಸೋಮವಾರ ನಡೆದ ಇಡೀ ದಿನದ ಚರ್ಚೆ ಬಳಿಕ ತಡ ರಾತ್ರಿ ಒಂದು ಹಂತಕ್ಕೆ ಬಂದು ನಿಂತಿದ್ದು ಬಹುತೇಕ ಸಚಿವರ ಪಟ್ಟಿ ಫೈನಲ್ ಆಗಿದೆ. ಇಂದೂ ಕೂಡ ಮತ್ತೊಂದು ಸುತ್ತಿನ ಚರ್ಚೆ ನಡೆಸಿದ ಬಳಿಕ ಸಂಜೆ ಹೊತ್ತಿಗೆ ಸಚಿವರ ಹೆಸರುಗಳನ್ನು ಅಂತಿಮಗೊಳಿಸಿ ನಾಳೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಸಲು ನಿರ್ಧರಿಸಲಾಗಿದೆ. ಸೋಮವಾರ ಬೆಳಿಗ್ಗೆಯಿಂದ ಕೆಲವು ಮುಖಂಡರನ್ನು ಭೇಟಿ ಮಾಡಿ ಈ ಸಂಬಂಧ ಮಾತುಕತೆ ನಡೆಸಿದ ಬಳಿಕ ರಾತ್ರಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.…

ಸಂಜೆ ಸಚಿವ ಸಂಪುಟ ರಚನೆ ಬಗ್ಗೆ ಅಂತಿಮ ಚಿತ್ರಣ- ಸಿಎಂ ಬೊಮ್ಮಾಯಿ.

ನವದೆಹಲಿ,ಆ,2:ಸಂಜೆ ಸಚಿವ ಸಂಪುಟ ರಚನೆ ಬಗ್ಗೆ ಅಂತಿಮ ನಡೆಯುವ ಸಭೆಯಲ್ಲಿ ಸಚಿವ ಸಂಪುಟದ ಚಿತ್ರಣ ಸಿಗಲಿದೆಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸಚಿವ ಸಂಪುಟ ರಚನೆ ಬಗ್ಗೆ ಚರ್ಚಿಸಲು ದೆಹಲಿಗೆ ಬಂದಿರುವ ಸಿಎಂ ಬಸವರಾಜ ಬೊಮ್ಮಾಯಿ ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದರು. ಇಂದು ಸಂಜೆ ದೆಹಲಿಯಲ್ಲಿ ಪಕ್ಷದ ಸಭೆ ನಡೆಯಲಿದೆ. ಸಭೆಯಲ್ಲಿ ಸಚಿವ ಸಂಪುಟ ರಚನೆ ಬಗ್ಗೆ ಚರ್ಚಿಸುತ್ತಾರೆ. ಅದಾದ ಬಳಿಕ ರಾಜ್ಯ ಸಚಿವ ಸಂಪುಟದ ಬಗ್ಗೆ ಮಾಹಿತಿ ಸಿಗಲಿದೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು…

ದೇವೇಗೌಡರನ್ನು ಭೇಟಿಮಾಡಿ ಆರ್ಶೀವಾದ ಪಡೆದ ಸಿಎಂ ಬೊಮ್ಮಾಯಿ

ಬೆಂಗಳೂರು,ಆ,01:ಮಾಜಿ ಪ್ರಧಾನಿ ರಾಜ್ಯದ ಹಿರಿಯ ರಾಜಕಾರಣಿ ಎಚ್.ಡಿ.ದೇವೇಗೌಡ ಅವರನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು. ಅವರ ನಿವಾಸಕ್ಕೆ ತೆರಳಿ ದೇವೇಗೌಡರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಮಾಜಿ ಸಚಿವರುಗಳಾದ ಸೋವಣ್ಣ, ರೇವಣ್ಣ ಅವರು ಮುಖ್ಯಮಂತ್ರಿ ಜೊತೆಗಿದ್ದರು.ಭೇಟಿ ಬಳಿಕ ಮಾತನಾಡಿದ ಸಿಎಂ, ನನ್ನ ತಂದೆ ಎಸ್.ಆರ್.ಬೊಮ್ಮಾಯಿ ಜೊತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಒಡನಾಟ ಹೊಂದಿದ್ದರು. ನಾನು ಅವರಿಂದ ಇಂದು ಆಶೀರ್ವಾದ, ಮಾರ್ಗದರ್ಶನ ಪಡೆದಿದ್ದೇನೆ. ದೇವೇಗೌಡರು ಅನೇಕ ಸಂಗತಿಗಳನ್ನು ಮೆಲುಕು ಹಾಕಿದ್ದಾರೆ ಎಂದು ತಿಳಿಸಿದರು. ದೇವೇಗೌಡರು ಸಾಕಷ್ಟು…

ಮಠಾಧೀಶರ ಬೆದರಿಕೆಗೆ ಬಿಜೆಪಿ ಬಗ್ಗೊಲ್ಲ; ಈಶ್ವರಪ್ಪ

ಬೆಂಗಳೂರು, ಆ,01: ಬಿಜೆಪಿ ಪಕ್ಷ ಯಾವುದೇ ಕಾರಣಕ್ಕೂ ಮಠಾಧೀಶರ ಬೆದರಿಕೆಗೆ ಬೆದರುವುದಿಲ್ಲ ಎಂದು ಮಾಜಿ ಸಚಿವ ಈಶ್ವರಪ್ಪ ಎಚ್ಚರಿಸಿದ್ದಾರೆ. ವಿಜಯಪುರದಲ್ಲಿ ಭಾನುವಾರ ಮಾತನಾಡಿದ‌ ಅವರು, ತಮ್ಮ‌ ತಮ್ಮ ಸಮಾಜದ ಶಾಸಕರನ್ನು ಮಂತ್ರಿ ಮಾಡಿ ಎಂದು ಮಠಾಧೀಶರು ಹೇಳುವುದು ತಪ್ಪಲ್ಲ. ಆದರೆ ಶಾಸಕರು ಹೇಳುವುದು ತಪ್ಪು. ಇನ್ನೊಂದೆಡೆ ನಮ್ಮ‌ ಸಮಾಜದ ವ್ಯಕ್ತಿಗೆ‌ ಮಂತ್ರಿ‌ ಮಾಡದಿದ್ದರೆ ಬಿಜೆಪಿ ಸರ್ವನಾಶ ಅಂತಾ ಹೇಳುವುದು‌ ತಪ್ಪು ಎಂದು ಮಠಾಧೀಶರಿಗೆ ಸಲಹೆ ಮಾಡಿದರು. ಧರ್ಮ ವಿಚಾರದಲ್ಲಿ ನಾವೂ ಇದ್ದೇವೆ. ಆದರೆ ಮಠಾಧೀಶರು ಶಾಪ ಹಾಕುವ…

ಬುಧವಾರ ಸಚಿವ ಸಂಪುಟ ವಿಸ್ತರಣೆ; ನಾಳೆ ಸಿಎಂ ದೆಹಲಿಗೆ?

ಬೆಂಗಳೂರು, ಆ. 01: ಸಚಿವ ಸಂಪುಟ ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್‌ ಕೊಟ್ಟಿರುವ ಕಾರಣ ನಾಳೆ ಪಟ್ಟಿಯೊಂದಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದೆಹಲಿಗೆ ತೆರಳಲಿದ್ದಾರೆ . ಈ ಹಿನ್ನೆಲೆಯಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸಕ್ಕೆ ತೆರಳಿ ಸಚಿವ ಸಂಪುಟ ಕುರಿತಂತೆ ಚರ್ಚಿಸಿದ್ದು ಯಾರೆಲ್ಲ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎನ್ನುವ ಬಗ್ಗೆ ಸಮಾಲೋಚನೆ ನಡೆಸಿದರು. ಒಂದೆಡೆ ರಾಜ್ಯದಲ್ಲಿ ಪ್ರವಾಹ ಪರಿಹಾರ ಕಾರ್ಯಗಳು ಆಗಬೇಕಾಗಿದೆ. ಮತ್ತೊಂದೆಡೆ ಕೊರೊನಾ ಮೂರನೇ ಅಲೆ ಅಪ್ಪಳಿಸುವ ಆತಂಕ ಕೂಡ ಎದುರಾಗಿದೆ. ಹೀಗಾಗಿ…

ಆಪರೇಷನ್ ಕಮಲದ ಮೂಲಕ ದುರಾಡಳಿತ ನಡೆಸಿದ ಬಿಜೆಪಿ; ಸಿದ್ದು ಟೀಕೆ

ಬೆಂಗಳೂರು,ಜು29 : ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರ, ದುರಾಡಳಿತಗಳಿಂದಲೇ ಎರಡು ವರ್ಷ ಪೂರೈಸಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಟೀಕಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿ ಸರ್ಕಾರ ಇದ್ದರೆ ಸ್ವರ್ಗವನ್ನೇ ಸೃಷ್ಟಿಸುತ್ತೀವಿ ಎಂದು ಜನರನ್ನು ನಂಬಿಸಿ ರಾಜ್ಯವನ್ನು ಲೂಟಿ ಹೊಡೆದರು. ಕೊರೋನ ಸಂದರ್ಭದಲ್ಲೂ ವಿಪರೀತ ಭ್ರಷ್ಟಾಚಾರ ನಡೆಸಿದ್ದು ಮಾತ್ರವಲ್ಲದೆ ಮಕ್ಕಳ ಪೌಷ್ಠಿಕಾಂಶ ಹೆಚ್ಚಿಸಲಿಕ್ಕಾಗಿ ಮೀಸಲಿಟ್ಟ ಮೊಟ್ಟೆಯ ಹಣವನ್ನೂ ಸರ್ಕಾರ ನುಂಗಿ ನೀರು ಕುಡಿಯಿತು ಎಂದು ಅವರು…

1 8 9 10 11 12 15
error: Content is protected !!