ಅಂಕಣ
ಅಹಂಕಾರ-ದುರಹಂಕಾರಗಳ ನಡುವಿನ ತರ್ಕ
ಬಾಲ ಸಿದ್ಧನೊಮ್ಮೆ ತನ್ನ ಮನೆಯ ಎಮ್ಮೆಯ ಮೇಲೆ ಕುಳಿತನು. ಹುಡುಗರನ್ನು ಕೂಗಿ ಕರೆದು “ನಾನು ಆನೆಯ ಮೇಲೆ ಕುಳಿತಿರುವೆನು. ನೀವೆಲ್ಲಾ ಮೆರವಣಿಗೆ ಮಾಡಿರಿ” ಎಂದನು. ಎಮ್ಮೆ ಹೆಜ್ಜೆಯೇ ಇಡಲಿಲ್ಲ. ಸಿದ್ಧ ಶಪಿಸಿದ. ಎಮ್ಮೆ ಸತ್ತಿತ್ತು! ಎಮ್ಮೆ ಸಾಕಿದ್ದ ತನ್ನ ತಾಯಿ ದೇವಮಲ್ಲಮ್ಮ ಅಳಲಾರಂಭಿಸಿದಳು. ಸಿದ್ಧ‘ಓಂ ನಮಃ ಶಿವಾಯ’ ಎನ್ನುತಾ ಎಮ್ಮೆ ಮುಟ್ಟಿದ. ಎಮ್ಮೆಬದುಕಿತು! ಈ ಘಟನೆಯನ್ನು ಸಿದ್ಧ ಹೀಗೆ ವಿವರಿಸಿದ: ಅಹಂಕಾರವೇ ಎಮ್ಮೆ. ನಾನು ನಾನು ಎನ್ನುವುದೇ ಅಹಂಕಾರ. ಇದು ಎಲ್ಲರಲ್ಲೂ ಇರುತ್ತದೆ. ಹಡುಗರಿರಲಿ,ವೃದ್ಧರಿರಲಿ ,ಜ್ಞಾನಿಗಳಿರಲಿ, ಅಜ್ಞಾನಿಗಳಿರಲಿ,ಪ್ರತಿಯೊಬ್ಬರಲ್ಲೂ…