ರಾಜ್ಯ
ಆಧುನಿಕ ಭಾರತದ ಪಿತಾಮಹ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ : ಸಿಎಂ
ಬೆಳಗಾವಿ ಡಿ,17: ಡಾ: ಬಿ.ಆರ್. ಅಂಬೇಡ್ಕರ್ ಆಧುನಿಕ ಭಾರತದ ಪಿತಾಮಹ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಳಗಾವಿಯ ಸುವರ್ಣ ಸೌಧ ಮುಂಭಾಗದಲ್ಲಿರುವ ಬಸ್ತವಾಡ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ .ಆರ್.ಅಂಬೇಡ್ಕರ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದರು. ಅವರಿಂದಾಗಿ ನಾವು ಇಂದು ವಿಧಾನ ಸಭೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸಂವಿಧಾನ ರಚನೆ, ಗಣತಂತ್ರ ತರದೇಹೋಗಿದ್ದರೆ ದೇಶದಲ್ಲಿ ಪ್ರಜಾಪ್ರಭುತ್ವ, ಕಾನೂನು ಸುವ್ಯವಸ್ಥೆ, ಶಾಂತಿ ಸಮೃದ್ಧಿ ಇರುತ್ತಿರಲಿಲ್ಲ ಎಂದರು. ಅವರು ರಚಿಸಿರುವ ಸಂವಿಧಾನ ಬಹಳ ಉತ್ಕೃಷ್ಟವಾಗಿರುವಂಥದ್ದು.…