ರಾಜಕೀಯ
ಕೊರೊನಾ ಬಿರುಗಾಳಿಯಲ್ಲಿ ತೂರಿ ಹೋದ ಬಿಜೆಪಿ ಭಿನ್ನಮತ
ಬೆಂಗಳೂರು,ಮೇ,೧೭:ಬಿಜೆಪಿ ರೆಬೆಲ್ ನಾಯಕ ಬಸವನಗೌಡ ಯತ್ನಾಳರ ಪ್ರಕಾರ ಈಗಾಗಲೇ ಸಿಎಂ ಯಡಿಯೂರಪ್ಪ ತಮ್ಮ ಕುರ್ಚಿ ಕಳೆದುಕೊಳ್ಳಬೇಕಿತ್ತು. ಕರುನಾಡ ಹೊಸ ಸಿಂಹಾಸನಾಧೀಶರಾಗಿ ಉತ್ತರ ಕರ್ನಾಟಕದ ಯಾರದರೂ ವಿಜೃಂಭಿಸಬೇಕಿತ್ತು. ಯತ್ನಾಳ್ ಯಡಿಯೂರಪ್ಪ ವಿರುದ್ದ ಗುಟುರು ಹಾಕಿದಾಗೆಲ್ಲ, ನೋಡಿ ಸಧ್ಯವೇ ಕರುನಾಡಿಗೆ ಹೊಸ ಸಿಎಂ ಬರ್ತಾರೆ. ಅವರು ಉತ್ತರ ಕರ್ನಾಟಕವರೇ ಆಗಿರ್ತಾರೆ ಎಂದು ಒಗಟು ನುಡಿಯುತ್ತಿದ್ದರು. ಹೊಸ ಸಿಎಂ ಹೆಸರನ್ನು ಮಾತ್ರ ಯತ್ನಾಳ್ ಜಪ್ಪಯ್ಯ ಎಂದರೂ ಹೇಳುತ್ತಿರಲಿಲ್ಲ. ಈ ರೀತಿ ಒಗಟನ್ನು ಹೇಳುವ ಮೂಲಕ ಅವರು ತಮ್ಮ ಅಂತರಂಗದ ಕನಸನ್ನು ರಾಜ್ಯದ…