ರಾಜಕೀಯ
ವಿಜಯೇಂದ್ರ ದೆಹಲಿ ಪ್ರಯಾಣ ಸಿಎಂ ಬದಲಾವಣೆ ಸೂಚನೆಯೇ?
ಬೆಂಗಳೂರು,ಜೂ,೦೧:ರಾಜ್ಯ ಬಿಜೆಪಿಯ ಆಂತರ್ಯದಲ್ಲಿ ನಾಯಕತ್ವ ಬದಲಾವಣೆಯ ಧ್ವನಿ ಜೋರಾಗಿಯೇ ಕೇಳಬರುತ್ತಿದೆ. ಬಿಜೆಪಿ ಹಿರಿಯ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಅವರು ಲಾಕ್‌ಡೌನ್ ಮುಂದುವರೆಸುವ ಮೂಲಕ ನಿಮ್ಮ ಸ್ಥಾನ ಉಳಿಸಿಕೊಳ್ಳಲು ಯತ್ನಿಸಬೇಡಿ ಎಂದಿರುವುದು ಮತ್ತು ಲಿಂಗಾಯತ ಮಠಗಳ ಸ್ವಾಮೀಗಳ ಮೂಲಕ ತಮ್ಮನ್ನು ಉಳಿಸಿಕೊಳ್ಳುವ ಯತ್ನ ಮಾಡುತ್ತಿದ್ದೀರಿ ಎನ್ನುವ ಹೇಳಿಕೆ ನಿಜಕ್ಕೂ ಆ ಪಕ್ಷದಲ್ಲಿನ ಆಂತರಿಕ ಭಿನ್ನಮತ ಈಗ ಮತ್ತಷ್ಟು ಬುಗಿಲೆದ್ದಿದೆ ಎಂದು ಹೇಳ ಬಹುದು . ಈ ಹೇಳಿಕೆಗಳನ್ನು ಗಮನಿಸಿದರೆ ಬಹುತೇಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆ ಖಚಿತವೇ ಎನ್ನುವ…