ಅಂಕಣ
ವ್ಯಂಗ್ಯ ವಿಡಂಬನೆ ವಿನೋದ ಕುರಿತು ಈ ಪರಿಯ ಭಯವೇಕೆ?
ವ್ಯಂಗ್ಯ ವಿಡಂಬನೆ ವಿನೋದ ಕುರಿತು ಈ ಪರಿಯ ಭಯವೇಕೆ? ಪ್ರಧಾನಿಯವರನ್ನು ಟೀಕಿಸಿ ವ್ಯಂಗ್ಯಚಿತ್ರ ರಚಿಸಿದರೆಂದು ಪ್ರಖರ ವ್ಯಂಗ್ಯಚಿತ್ರಕಾರ ಮಂಜುಲ್ ಅವರನ್ನು ಸರ್ಕಾರ ಬೇಟೆಯಾಡಿದೆ. ಮಂಜುಲ್ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಉದ್ಯಮ ಸಮೂಹಕ್ಕೆ ಸೇರಿದ ನೆಟ್ವರ್ಕ್-18 ಮಂಜುಲ್ ಅವರನ್ನು ಕೆಲಸದಿಂದ ತೆಗೆದು ಹಾಕಿದೆ. ಈ ವ್ಯಂಗ್ಯಚಿತ್ರವನ್ನು ಮಂಜುಲ್ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ಇದೊಂದೇ ಅಲ್ಲ, ಮೋದಿ ಸರ್ಕಾರವನ್ನು ಕಟು ಟೀಕೆಗೆ ಗುರಿಪಡಿಸಿರುವ ನೂರಾರು ವ್ಯಂಗ್ಯಚಿತ್ರಗಳನ್ನು ಅವರು ಬರೆದಿದ್ದಾರೆ ಮತ್ತು ಹಂಚಿಕೊಂಡಿದ್ದಾರೆ.…