ಬೆಂಗಳೂರಿನಲ್ಲಿ ಭೀಮಾ ತೀರದ ಬಂದೂಕುಗಳ ಸದ್ದು..!!
writing-ಪರಶಿವ ಧನಗೂರು ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ಸಾಫ್ಟವೇರ್ ಸಿಟಿ, ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಬೆಂಗಳೂರು ನಗರ ಈಗ ಕ್ರೈಂಸಿಟಿ..! ಮಾಫಿಯಾಗಳ ಮಹಾಗರ..! ಗ್ಯಾಂಗ್ ಸ್ಟರ್ ಗಳ-ಗ್ಯಾಂಗ್ ವಾರ್ ಗಳ ಗಾರ್ಡನ್ ಸಿಟಿ..!ಕೊಲೆಗಳ ನಗರವೆಂಬ ಕುಖ್ಯಾತಿಗೆ ತುತ್ತಾಗಿದೆ. ಕೋರೋನ ಲಾಕ್ ಡೌನ್ ನಲ್ಲಿ ಯಾವುದೇ ಕ್ರೈಂ ರೇಟ್ ಇಲ್ಲದೆ ತಣ್ಣಗಿದ್ದ ಬೆಂಗಳೂರು ಮಹಾನಗರದಲ್ಲಿ, ಈಗ ಲಾಕ್ ಡೌನ್ ಸಡಿಲಾಗುತ್ತಿದ್ದಂತೆ ಮತ್ತೆ ಎಂದಿನಂತೆ ರೌಡಿಗಳು ತಮ್ಮ ಹಳೇ ಚಾಳಿ ಮುಂದುವರಿಸುತ್ತಿದ್ದು, ಜನಸಾಮಾನ್ಯರು ಬೆಚ್ಚಿ ಬೀಳುವಂತೆ, ಹಾಡುಹಗಲೇ ನಡುಬೀದಿಯಲ್ಲಿ ಕೊಲೆಗಳನ್ನು ಮಾಡೀ…



















