Girl in a jacket

Author kendhooli_editor

ಜಿಎಸ್ ಟಿ ಪರಿಹಾರ ಬಿಡುಗಡೆಗೆ ಕೇಂದ್ರಕ್ಕೆ ಸಿಎಂ ಮನವಿ

ನವದೆಹಲಿ, ಜು,31:ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಕಳೆದ ವರ್ಷ ಕೇಂದ್ರ ಸರ್ಕಾರವು 12 ಸಾವಿರ ಕೋಟಿ ರೂ. ಜಿ.ಎಸ್.ಟಿ ಪರಿಹಾರ ನೀಡಿದ್ದು, ಇನ್ನು 11 ಸಾವಿರ ಕೋಟಿ ರೂ. ಗಳಷ್ಟು ಪರಿಹಾರ ಬಿಡುಗಡೆಯಾಗಬೇಕಿದೆ. ಈ ಪರಿಹಾರದ ಬಿಡುಗಡೆ ಕುರಿತು ಚರ್ಚಿಸಿದರು. ಈ ವರ್ಷ ಸುಮಾರು 18 ಸಾವಿರ ಕೋಟಿ ಪರಿಹಾರವನ್ನು ಸಾಲ ರೂಪದಲ್ಲಿ ಬಿಡುಗಡೆ ಮಾಡುವುದಾಗಿ ಕೇಂದ್ರ…

ರಾಜ್ಯದ ಆರೋಗ್ಯ ಮೂಲಸೌಕರ್ಯ ಅಭಿವೃದ್ದಿಗೆ ಕೇಂದ್ರದಿಂದ ನೆರವು : ಸಿಎಂ ಬೊಮ್ಮಾಯಿ

ನವದೆಹಲಿ,ಜು31 : ಕೋವಿಡ್ 3 ನೇ ಅಲೆ ತಡೆಗಟ್ಟಲು ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ, ಐಸಿಯು, ಆಕ್ಸಿಜನ್, ಔಷಧಿ ಖರೀದಿಗೆ ರಾಜ್ಯಕ್ಕೆ 800 ಕೋಟಿ ರೂ. ಮಂಜೂರು ಮಾಡಲು ಳ ಮನ್ ಸುಖ್ ಮಾಂಡವೀಯ, ಕೇಂದ್ರ ಆರೋಗ್ಯ ಸಚಿವರು ಸಮ್ಮತಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ ಸುಖ್ ಮಾಂಡವೀಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.…

ತಂದೆ ಹುಟ್ಟೂರು ಗಾಜನೂರಿಗೆ ಭೇಟಿ ನೀಡಿದ ಶಿವಣ್ಣ,ಪುನೀತ್

ಚಾಮರಾಜನಗರ,ಜು,೩೧: ತಮ್ಮ ತಂದೆ ವರನಟ ಡಾ.ರಾಜ್‌ಕುಮಾರ್ ಹುಟ್ಟೂರಾದ ಗಾಜನೂರಿಗೆ ಭೇಟಿ ನೀಡಿದ ಖ್ಯಾತ ನಟರಾದ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್,ಸೋದರತ್ತೆ ನಾಗಮ್ಮ ಅವರ ಕುಟುಂಬದೊಂದಿಗೆ ಸಮಯ ಕಳೆದರು. ನಾಗಮ್ಮ ಅವರ ಆರೋಗ್ಯ ವಿಚಾರಿಸಲು ತಮ್ಮ ಕುಟುಂಬದೊಂದಿಗೆ ಬಂದಿದ್ದ ಶಿವಣ್ಣ ಹಾಗೂ ಅಪ್ಪು ಅವರು, ಗಾಜನೂರಿನಲ್ಲಿ ಡಾ.ರಾಜ್‌ಕುಮಾರ್ ಅವರು ಧ್ಯಾನ ಮಾಡುತ್ತಿದ್ದ ಸ್ಥಳ, ತೋಟದಲ್ಲಿ ಸುತ್ತಾಡಿದರು. ಎಲ್ಲರೂ ಜೊತೆಯಾಗಿ ಮಧ್ಯಾಹ್ನದ ಭೋಜನ ಸವಿದರು. ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕೆ ಮನೆಯವರಿಗೂ ತಿಳಿಸಿದೆ ಅವರು ನೇರವಾಗಿ ಗಾಜನೂರಿಗೆ ಬಂದಿದ್ದರು.…

ಆಲಮಟ್ಟಿ ಡ್ಯಾಂಗೆ ಹೆಚ್ಚಿದ ನೀರು ಜಮೀನುಗಳು ಜಲಾವೃತ

ಆಲಮಟ್ಟಿ,ಜು,೩೧: ಆಲಮಟ್ಟಿ ಜಲಾಶಯದ ಹೊರಹರಿವನ್ನು ಗುರುವಾರ ಮಧ್ಯರಾತ್ರಿಯಿಂದ ಹೆಚ್ಚಿಸಲಾಗಿದ್ದು, ೪.೨೦ ಲಕ್ಷ ಕ್ಯುಸೆಕ್ ನೀರನ್ನು ಜಲಾಶಯದ ಮೂಲಕ ಬಿಡಲಾಗುತ್ತಿದೆ. ಇದರಿಂದ ಪ್ರವಾಹದ ಆತಂಕ ಇನ್ನಷ್ಟು ಹೆಚ್ಚಿದ್ದು, ಜಲಾಶಯದ ಒಳಹರಿವು ಕೂಡಾ ೪.೨೦ ಲಕ್ಷ ಕ್ಯುಸೆಕ್ ಇದೆ. ಸದ್ಯ ೫೧೯.೬೦ ಮೀ. ಗರಿಷ್ಠ ಎತ್ತರದ ಜಲಾಶಯದಲ್ಲಿ ೫೧೭.೧೭ ಮೀ.ವರೆಗೆ ನೀರಿದ್ದು, ೮೬.೫೯ ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಆಲಮಟ್ಟಿಯಿಂದ ಹೊರಹರಿವು ಹೆಚ್ಚಿದ್ದರಿಂದ ನಿಡಗುಂದಿ ತಾಲ್ಲೂಕಿನ ಕೃಷ್ಣಾ ತೀರದ ಗ್ರಾಮಗಳಾದ ಅರಳದಿನ್ನಿ, ಕಾಶೀನಕುಂಟಿ, ಯಲ್ಲಮ್ಮನೂದಿಹಾಳ, ಯಲಗೂರ, ಮಸೂತಿ ಗ್ರಾಮzಲ್ಲಿ ಇಲ್ಲಿಯವರೆಗೆ…

ನಿಡಗುಂದಿ: ಪೊಲೀಸರು ಜನಸ್ನೇಹಿಯಾಗಿ ಕೆಲಸ ನಿರ್ವಹಿಸಲು ಸಲಹೆ

ನಿಡಗುಂದಿ,ಜು,೩೧:ಜನಸಾಮಾನ್ಯರ ಕಷ್ಟ ಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಬೇಕು ಮತ್ತದು ನನ್ನ ಪ್ರಥಮ ಆದ್ಯತೆಯೂ ಹೌದು, ಆ ದಿಸೆಯಲ್ಲಿ ಜಿಲ್ಲೆಯ ಎಲ್ಲಾ ಪೊಲೀಸರಿಗೂ ನಿರ್ದೇಶನ ನೀಡಿದ್ದೇನೆ ಎಂದು ವಿಜಯಪುರ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ ಎಚ್.ಡಿ. ಹೇಳಿದರು. ಕೊಲ್ಹಾರ, ನಿಡಗುಂದಿ, ಆಲಮಟ್ಟಿ, ಕೂಡಗಿ, ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿ ಒಳಗೊಂಡ ನಿಡಗುಂದಿ ಆರಕ್ಷಕ ವೃತ್ತ ನಿರೀಕ್ಷಕರ (ಸಿಪಿಐ) ಕಚೇರಿ ಉದ್ಘಾಟಿಸಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಾಮಾನ್ಯ ಜನರು ನೆಮ್ಮದಿಯ ಜೀವನ ನಡೆಸುವುದಕ್ಕೆ…

ಕಳ್ಳನ ನಂಬಿದರೂ ಕುಳ್ಳನ ನಂಬಬಾರದು

ಸಿದ್ಧಸೂಕ್ತಿ : ಕಳ್ಳನ ನಂಬಿದರೂ ಕುಳ್ಳನ ನಂಬಬಾರದು. ಕಳ್ಳನ ಮಾತು ಬಹುತೇಕ ಸುಳ್ಳು. ನಿಜದಂತೆ ನಟಿಸಿ ಕದಿಯುವನು, ವಂಚಿಸುವನು. ಆದರೂ ಕಳ್ಳ ಎಂದು ತಿಳಿದಿದ್ದರೆ ನಂಬಬಹುದು. ಕಳ್ಳನ ಕೈಗೇ ಬೀಗ ಇತ್ತರೆ? ಕಳವು ಕಷ್ಟ! ಕುಳ್ಳ ಗಾತ್ರದಲಿ ಕಡಿಮೆ. ಮಹತ್ತ್ವ ಅಳೆಯಲಾಗದು! ಬುದ್ಧಿ ಮಿಕ್ಕವರಿಗಿಂತ ಹಿರಿದು! ನಡೆ ಸಾಧನೆ ಊಹಿಸಲಾಗದು! ಬಹುತೇಕ ಕುಳ್ಳರು ವಿವಾದ ತಪ್ಪಿಗೆ ಸಿಲುಕರು. ಮೂಲೆಗುಂಪಾಗರು. ಸದಾ ಚಟುವಟಿಕೆ! ಬಲು ಜೋರು! ಲಾಲ್ ಬಹದ್ದೂರ್ ಶಾಸ್ತ್ರೀ ಉತ್ತಮ ನಿದರ್ಶನ! ಹುಲ್ಲಿನಂತೆ ಚುಟುಕಾಣಿಯಾಗಿರು, ಹಸಿರಾಗಿರುವುದು…

ಬೆಳ್ಳಂಬೆಳಿಗ್ಗೆ ರೌಡಿಗಳ ಮನೆಮೇಲೆ ದಾಳಿ,18 ರೌಡಿಗಳ ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು, ಜು,31:ಇತ್ತೀಚೆಗೆ ನಗರದಲ್ಲಿ ಮಿತಿಮೀರುತ್ತಿರುವ ಸಮಾಜ ಘಾತಕ ಘಟನೆಗಳಿಂದ ಎಚ್ಚೆತ್ತುಕೊಂಡಿರುವ ಪೊಲೀಸರು ಈ ಘಟನೆಗಳಿಗೆ ಕಾರಣವಾಗುತ್ತಿರುವ ಪುಡಾರಿಗಳ ಮನೆಮೇಲೆ ದಾಳಿ ಮಾಡಿ 18 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಶಿ ನೇತೃತ್ವದಲ್ಲಿ ಇಂದು ಬೆಳ್ಳಂಬೆಳಿಗ್ಗೆ ರೌಡಿಗಳ ಮನೆ ಮೇಲೆ ದಾಳಿ ನಡೆಸಲಾಗಿದ್ದು,ಪುಡಾರಿಗಳಿಗೆ ಪುಂಡಾಟ ನಡೆಸದಂತೆ‌ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ. ಈ ದಾಳಿಯಲ್ಲಿ ಕುಖ್ಯಾತ ರೌಡಿಗಳಾದ ಹಂದಿ ಶಿವ,ಅತಾವುಲ್ಲಾ,ತೇಜಸ್,ಮಣಿಕಾಂತ,ಆನಂದ್ ಅಲಿಯಾಸ್ ಬ್ರಿಡ್ಜ್, ಗೆಜ್ಜೆ ವೆಂಕಟೇಶ ಸೇರಿದಂತೆ 63 ರೌಡಿಗಳ ಮನೆ ಮೇಲೆ…

ವೀಳೆಯದ ಬೇಡಿಕೆ, ವ್ಯಾಪಾರ ಮತ್ತು ವ್ಯಾಪಾರಿ ಸಂಘ

ವೀಳೆಯದ ಬೇಡಿಕೆ, ವ್ಯಾಪಾರ ಮತ್ತು ವ್ಯಾಪಾರಿ ಸಂಘ ವೀಳೆಯವು ದೇಹ ಮತ್ತು ಮನಸ್ಸಿಗೆ ಆರೋಗ್ಯ ಮತ್ತು ಆಹ್ಲಾದಕರ ಪರಸ್ಪರ ಸ್ನೇಹ, ಪ್ರೀತಿ, ಗೌರವ, ವಿಶ್ವಾಸ, ವಿನಿಮಯ ಮತ್ತು ಒಪ್ಪಂದದ ಸಾಮಗ್ರಿಯೂ, ಬಾಂಧವ್ಯದ ಬೆಸುಗೆಯೂ ಆಗಿದೆ. ವೀಳೆಯದೆಲೆಗೆ ಫಣಿಲಾ, ತಾಂಬೂಲ(ಸಂಸ್ಕೃತ), ಪಾನ್ (ಹಿಂದಿ), ನಾಗವಲ್ಲಿ(ಗುಜರಾತಿ), ವೆಟ್ಟಲೆ(ತಮಿಳು), ತಮಲಾಕು(ತೆಲುಗು), ವೆಟ್ಟಿಲ ಮಲಯಾಳಂ) ಎಂದೂ ಕರೆಯುವರು. ವೀಳೆಯದೆಲೆಯಲ್ಲಿ ಜಗತ್ತಿನಾದ್ಯಂತ 90 ವಿಧದ ತಳಿಗಳಿದ್ದು ಅವುಗಳಲ್ಲಿ 40 ತಳಿಗಳನ್ನು ಭಾರತದಲ್ಲಿ ಬೆಳೆಯಲಾಗುವುದೆಂದು ಅಧ್ಯಯನಗಳಿಂದ ತಿಳಿಯುವುದು, ಅವುಗಳಲ್ಲಿ ಇಂದು ಕಲ್ಕತ್ತಾ ಪಾನ್, ಬನಾರಸ್ ಪಾನ್,…

ಪ್ರಧಾನಿ ಭೇಟಿ ಮಾಡಿ ಚರ್ಚಿಸಿದ ಸಿಎಂ ಬೊಮ್ಮಾಯಿ

ನವದೆಹಲಿ,ಜು,೩೦: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ದೆಹಲಿ ಪ್ರಯಾಣ ಬೆಳಸಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಬಿಜೆಪಿ ವರಿಷ್ಠರ ಜೊತೆಗೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಜಲಸಂಪನ್ಮೂಲ ಸಚಿವರಾದ ಗಜೇಂದ್ರ ಸಂಗ್ ಶೇಖಾವತ್ ಅವರನ್ನೂ ಭೇಟಿ ಮಾಡಿದ್ದು ರಾಜ್ಯದ ಸಂಸದರಿಗೆ ಔತಣ ಕೂಟ ಆಯೋಜಿಸಿದ್ದರು. ಹುಬ್ಬಳ್ಳಿ-ಧಾರವಾಡಕ್ಕೆ…

ಸಿನಿಮಾ ರಂಗದಲ್ಲಿ ಕಾಸ್ಟ್ ಕೌಚಿಂಗ್ ತಲೆಹಿಡುಕರ ಹಾವಳಿ!!

Writing- ಪರಶಿವ ಧನಗೂರು ಈಗ ಸದ್ಯಕ್ಕೆ ಭಾರತೀಯ ಸಿನಿಮಾ ರಂಗದಲ್ಲಿ ನಟಿ ಶಿಲ್ಪಾ ಶೆಟ್ಟಿಯ ಗಂಡ ರಾಜ್ ಕುಂದ್ರಾನ ನೀಲಿಚಿತ್ರಗಳರ್ಯಾಕೆಟ್ ನಿಂದ ಕಲಾ ಮಾಧ್ಯಮಕ್ಕೆ ಕಳಂಕ ಮೆತ್ತುಕೊಂಡು ಭಾರತೀಯ ಚಿತ್ರರಂಗವೇ ಜಗತ್ತಿನೆದುರು ತಲೆತಗ್ಗಿಸುವಂತಾಗಿದೆ. “ಯಂತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ..!” ಎಲ್ಲಿ ಮಹಿಳೆಯರನ್ನು ಗೌರವಾದರಗಳಿಂದ ಕಾಣಲಾಗುತ್ತದೋ ಅಲ್ಲಿ ದೇವಾನೂ ದೇವತೆಗಳಿರುತ್ತಾರೆ. ಎಂದು ಶತಮಾನಗಳಿಂದಲೂ ಪಠಿಸುತ್ತಲೇ ಬರುತ್ತಿರುವ, ದೇಶದ ಉದ್ದಗಲಕ್ಕೂ ಸಾವಿರಾರು ಹೆಣ್ಣು ದೇವತೆಗಳ ದೇವಾಲಯಗಳನ್ನು ಕಟ್ಟಿಸಿ, ದಿನನಿತ್ಯ ಪೂಜೇ ಪುರಸ್ಕಾರ ಗಳಲ್ಲಿ ತೊಡಗಿರುವ, ಭಾರತೀಯರಾದ…

ಕೊರೊನಾ ಹೆಚ್ಚಳ; ಗಡಿಗಳಲ್ಲಿ ಕಟ್ಟೆಚ್ಚರಕ್ಕೆ ಸಿಎಂ ಸೂಚನೆ

ನವದೆಹಲಿ, ಜು, ೩೦:ಪಕ್ಕದ ಕೇರಳ ಸೇರಿದಂತೆ ಪಕ್ಕದ ರಾಜ್ಯಗಳಲ್ಲಿ ಕೊರೊನಾ ಹೆಚ್ಳವಾಗುತ್ತಿದ್ದು ಗಡಿ ಭಾಗಗಳಲ್ಲಿ ಹೆಚ್ಚರ ವಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮುಖ್ಯಮಂತ್ರಿಯಾಗಿ ಶುಕ್ರವಾರ ಮೊದಲ ಬಾರಿ ದೆಹಲಿಗೆ ಭೇಟಿ ನೀಡಿದ ಅವರು, ರಾಜ್ಯದ ಕೊರೊನಾ ಸ್ಥಿತಿಗತಿ ಕುರಿತು ಮಾತನಾಡಿದ್ದಾರೆ. ಕೊರೊನಾ ಮುಂದಿನ ಅಲೆಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ರಾಜ್ಯದಲ್ಲಿ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸುವ ಕುರಿತು ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಏಕಾಏಕಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಗಡಿ…

ಶತ್ರುಗಳ ಆಶೀರ್ವಾದ!

‌‌‌‌                         ಸಿದ್ಧಸೂಕ್ತಿ : ಶತ್ರುಗಳ ಆಶೀರ್ವಾದ! ವಾಹನದಲ್ಲಿ ಬರೆದಿತ್ತು:ಶತ್ರುಗಳ ಆಶೀರ್ವಾದ. ಆಶ್ಚರ್ಯ! ಗುರು- ಹಿರಿ-ಕಿರಿ – ಹಿತೈಷಿಗಳು ಆಶೀರ್ವದಿಸಬಲ್ಲರು. ಅದು ನೀಡುವುದು ಉತ್ತಮ ಫಲ ಅಭಿವೃದ್ಧಿ! ಯಡಿಯೂರಪ್ಪರ ಆಶೀರ್ವಾದ ಬೊಮ್ಮಾಯಿಯ ಮುಖ್ಯಮಂತ್ರಿಯಾಗಿಸಿದಂತೆ! ಆದರೆ ಶತ್ರುಗಳು ಶಪಿಸುವರು, ಆಶೀರ್ವದಿಸರು! ಶಾಪ ಕಂಟಕ, ವರವಲ್ಲ! ನಿಜ. ಆದರೂ ಶತ್ರುಗಳ ಶಾಪ ಕಾಟವೂ ವರವಾಗಬಲ್ಲುದು! ಶ್ರೀಗಂಧವನ್ನು ತೇಯ್ದಂತೆ ಹೆಚ್ಚು ಸುವಾಸನೆ ಬೀರುವಂತೆ, ಚಿನ್ನಕ್ಕೆ ಪುಟ…

ಆಪರೇಷನ್ ಕಮಲದ ಮೂಲಕ ದುರಾಡಳಿತ ನಡೆಸಿದ ಬಿಜೆಪಿ; ಸಿದ್ದು ಟೀಕೆ

ಬೆಂಗಳೂರು,ಜು29 : ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರ, ದುರಾಡಳಿತಗಳಿಂದಲೇ ಎರಡು ವರ್ಷ ಪೂರೈಸಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಟೀಕಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿ ಸರ್ಕಾರ ಇದ್ದರೆ ಸ್ವರ್ಗವನ್ನೇ ಸೃಷ್ಟಿಸುತ್ತೀವಿ ಎಂದು ಜನರನ್ನು ನಂಬಿಸಿ ರಾಜ್ಯವನ್ನು ಲೂಟಿ ಹೊಡೆದರು. ಕೊರೋನ ಸಂದರ್ಭದಲ್ಲೂ ವಿಪರೀತ ಭ್ರಷ್ಟಾಚಾರ ನಡೆಸಿದ್ದು ಮಾತ್ರವಲ್ಲದೆ ಮಕ್ಕಳ ಪೌಷ್ಠಿಕಾಂಶ ಹೆಚ್ಚಿಸಲಿಕ್ಕಾಗಿ ಮೀಸಲಿಟ್ಟ ಮೊಟ್ಟೆಯ ಹಣವನ್ನೂ ಸರ್ಕಾರ ನುಂಗಿ ನೀರು ಕುಡಿಯಿತು ಎಂದು ಅವರು…

ಅತಿವೃಷ್ಠಿ ಪೀಡಿತ ಸ್ಥಳಗಳಿಗೆ ಮುಖ್ಯಮಂತ್ರಿ ಭೇಟಿ

ಯಲ್ಲಾಪುರ ಜು. 29 : ಧಾರಾಕಾರವಾಗಿ ಸುರಿದ ಮಳೆ ಹಾಗೂ ಅತಿವೃಷ್ಟಿಯಿಂದ ಬಾಧಿತಗೊಳಗಾದ ಯಲ್ಲಾಪುರ ತಾಲೂಕಿನ ವಿವಿಧ ಪ್ರದೇಶಗಳಿಗೆ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಯಲ್ಲಾಪುರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಯ ವಿವಿಧ ವಿಭಾಗಗಳ ಜೊತೆಗೆ ಕೋವಿಡ್ -19 ಲಸಿಕೆ ನೀಡುವ ಕೇಂದ್ರನ್ನೂ ಪರಿಶೀಲನೆ ಮಾಡಿದರು. ನಂತರ ಒಳ ಹಾಗೂ ಹೊರ ರೋಗಿಗಳ ಆರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ಕ್ರಮವಹಿಸಲು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.…

ಒಲಿಂಪಿಕ್ಸ್ ;ಆತನುದಾಸ್‍ಗೆ ಜಯ, ಪ್ರೀ ಕ್ವಾರ್ಟರ್ ಫೈನಲ್ ಗೆ

ಟೋಕಿಯೋ, ಜು. 29; ಭಾರತದ ಹಾಕಿ ತಂಡ, ಪಿ.ವಿ.ಸಿಂಧು, ಬಾಕ್ಸರ್ ವಿಕಾಸ್ ಕುಮಾರ್, ಶೂಟರ್ ಮನು ಬಾಕರ್ ಅವರು ಗೆಲುವಿನ ಮಿಂಚು ಹರಿಸಿದ್ದರೆ, ಪುರುಷರ ಆರ್ಚರಿಯಲ್ಲಿ ಆತನು ದಾಸ್ ಕೂಡ ಪ್ರೀ ಕ್ವಾರ್ಟರ್ ಫೈನಲ್‍ಗೇರುವ ಮೂಲಕ ಪದಕ ಆಸೆಯನ್ನು ಮೂಡಿಸಿದ್ದಾರೆ. ಇಂದು ನಡೆದ ಪುರುಷರ ಸಿಂಗಲ್ಸ್ ಅರ್ಚರಿ 32ರಲ್ಲಿ ಭಾರತದ ಬಿಲ್ಲುಗಾರ ಆತನುದಾಸ್ ಅವರು ದಕ್ಷಿಣ ಕೊರಿಯಾದ ಎರಡು ಬಾರಿ ಒಲಿಂಪಿಕ್ಸ್ ವಿಜೇತರಾದ ಜಿನ್ ಹ್ಯೇಕ್ರ ಸವಾಲನ್ನು ಎದುರಿಸಿದರೂ ಕೂಡ 6-4 ರಿಂದ ಗೆಲ್ಲುವ ಮೂಲಕ ಪ್ರಿ…

ತಂದೆ -ತಾಯಿ ಸಮಾಧಿಗೆ ಗೌರವ ಸಲ್ಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ ,ಜು, 29:ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿಸ ಬಸವರಾಜ ಬೊಮ್ಮಾಯಿ ಅವರು , ಹುಬ್ಬಳ್ಳಿ ಧಾರವಾಡ ಅವಳಿನಗರಗಳ ಮಧ್ಯೆ ಅಮರಗೋಳದಲ್ಲಿರುವ ಮಾತೋಶ್ರೀ ಗಂಗಮ್ಮ ಎಸ್ ಬೊಮ್ಮಾಯಿ ಹಾಗೂ ತಂದೆ,ಮಾಜಿಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಸಮಾಧಿಗಳಿಗೆ ಪೂಜೆ ಸಲ್ಲಿಸಿ ,ಗೌರವ ಸಮರ್ಪಿಸಿದರು. ತಂದೆ -ತಾಯಿಯ ಸಮಾಧಿಗೆ ಪ್ರದಕ್ಷಿಣೆ ಹಾಕಿ ಕೆಲನಿಮಿಷ ಮೌನವಾಗಿ ಸ್ಮರಣೆ ಮಾಡಿದರು.ಉಭಯ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು. ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿ ತಂದೆ ,ತಾಯಿಯವರ ಆಶೀರ್ವಾದ ಎಲ್ಲಕ್ಕೂ ಮಿಗಿಲು ಅಧಿಕಾರ…

ಹುಬ್ಬಳ್ಳಿ -ಧಾರವಾಡ ನಗರ ಅಭಿವೃದ್ಧಿಗೆ ಪ್ರಾಶಸ್ತ್ಯ- ಸಿ ಎಂ

ಹುಬ್ಬಳ್ಳಿ.29:ಹುಬ್ಬಳ್ಳಿ-ಧಾರವಾಡ ರಾಜ್ಯದ ಎರಡನೇ ಅತಿದೊಡ್ಡ ನಗರವಾಗಿದೆ. ಅವಳಿ ನಗರದ ಸಮಸ್ಯೆಗಳನ್ನು ಬಗೆಹರಿಸಿ, ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಾಗಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ವಿಷೇಶ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿರುವ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ತೆರಳುವ ಮುನ್ನ ವಿಮಾನ ನಿಲ್ದಾಣದ‌ ಬಳಿ ಮಾಧ್ಯಮ‌ದವರೊಂದಿಗೆ ಮಾತನಾಡಿದರು. ಹುಬ್ಬಳ್ಳಿ ನನಗೆ ಅತ್ಯಂತ ಪ್ರೀತಿಯ ಊರು. ನನ್ನ ಶೈಕ್ಷಣಿಕ ಜೀವನದ ಅಪಾರ ಪ್ರಮಾಣದ ಸ್ನೇಹಿತರ ಬಳಗ ಇಲ್ಲಿದೆ. ಮುಖ್ಯಮಂತ್ರಿಯಾಗಿ ಹುಬ್ಬಳ್ಳಿಗೆ ಆಗಮಿಸುತ್ತೇನೆ…

ಈ ಬಾರಿ ದೆಹಲಿ ಬೇಟೆ ವೇಳೆ ಸಚಿವ ಸಂಪುಟ ಕುರಿತು ಚರ್ಚಿಸೊಲ್ಲ; ಸಿಎಂ

ಬೆಂಗಳೂರು,ಜುಲೈ,29: ನಾಳೆ ದೆಹಲಿಗೆ ಹೋಗಿ ವರಿಷ್ಠರ ಭೇಟಿ ಮಾಡುವ ಯೋಚನೆ ಇದೆ. ಈ ಭೇಟಿಯ ವೇಳೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ದೆಹಲಿಯಲ್ಲಿ ವರಿಷ್ಠರ ಭೇಟಿಗೆ ಸಮಯ ಕೇಳಿದ್ದೇನೆ. ಸಮಯ ನೀಡಿದರೇ ದೆಹಲಿಗೆ ಹೋಗುತ್ತೇನೆ. ಈ ಬಾರಿ ದೆಹಲಿಯ ಭೇಟಿ ವೇಳೆಯಲ್ಲಿ ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸುವುದಿಲ್ಲ, ಬದಲಿಗೆ ಇನ್ನೊಂದು ಬಾರಿ ದೆಹಲಿಗೆ ಭೇಟಿ…

ತಿಂದು ನಿನ್ನನ್ನ ಋಣ ತೀರುತಲೆ ಪಯಣ!

ಸಿದ್ಧಸೂಕ್ತಿ : ತಿಂದು ನಿನ್ನನ್ನ ಋಣ ತೀರುತಲೆ ಪಯಣ! ಹುಟ್ಟಿದ ಸ್ಥಳ ದಿನ ಗೊತ್ತು. ಸಾವಿನ ಸ್ಥಳ ದಿನ ಹೇಗೆ ತಿಳಿದಿಲ್ಲ! ಎಲ್ಲೋ ಹುಟ್ಟು, ಎಲ್ಲೋ ಅಭಿವೃದ್ಧಿ, ಎಲ್ಲೋ ಹೇಗೋ ಸಾವು! ಯತ್ನ ದುಡಿಮೆ ಪರಿಶ್ರಮಗಳು ಬದಲಿಸಬಲ್ಲವಾದರೂ, ವಿಧಿ ಲಿಖಿತ ಬಲ್ಲವರಾರು? ಬದಲಿಸುವವರಾರು? ಯತ್ನಿಸದೇ ಮುಖ್ಯಮಂತ್ರಿ ಆದವರುಂಟು, ಜಗದ್ಗುರುವಾದವರುಂಟು, ಯತ್ನಿಸಿಯೂ ವಿಫಲರಾದವರುಂಟು! ಅಲ್ಪಮತದವರು – ಗೆಲ್ಲದವರು, ಪ್ರಧಾನಿಯಾದವರುಂಟು, ಏಕ ಮತದಿಂದ ಪತನರಾದವರುಂಟು! ಬಹುಮತವಿದ್ದರೂ ಅಧಿಕಾರದಿಂದ ಇಳಿದವರುಂಟು! ತಿನ್ನಲಿಲ್ಲದವ ನೂರು ದಾಟಿದ್ದುಂಟು, ಸಾವಿರ ಕೋಟಿಯವ ಬೇಗ ನರಳಿ…

ರೈತರ ಮಕ್ಕಳು, ಹಿರಿಯ ನಾಗರೀಕರು ಮತ್ತು ವಿಶೇಷ ಚೇತನರಿಗೆ ಭರ್ಜರಿ ಗಿಫ್ಟ್ ಕೊಟ್ಟ ನೂತನ ಸಿಎಂ

ರೈತರ ಮಕ್ಕಳು, ಹಿರಿಯ ನಾಗರೀಕರು ಮತ್ತು ವಿಶೇಷ ಚೇತನರಿಗೆ ಭರ್ಜರಿ ಗಿಫ್ಟ್ ಕೊಟ್ಟ ಬಸವರಾಜ ಬೊಮ್ಮಾಯಿ ಬೆಂಗಳೂರು,ಜು,28:  ಮಕ್ಕಳು, ಹಿರಿಯ ನಾಗರೀಕರು, ವಿಧವೆಯರು ಮತ್ತು ವಿಶೇಷ ಚೇತನರಿಗೆ ಶಿಷ್ಯವೇತನನ್ನು ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ  ಘೋಷಿಸಿದ್ದಾರೆ‌. ಹೌದು ಅಧಿಕಾರಿಗಳ ಜತೆ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ ಮಕ್ಕಳಿಗೆ ಹೊಸ ಶಿಷ್ಯವೇತನ ಜಾರಿ ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ. ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಅನುದಾನ ನೀಡಲಾಗುತ್ತದೆ. ರೈತರ ಮಕ್ಕಳು…

1 88 89 90 91 92 126
Girl in a jacket