ಮನೆ ಗೆದ್ದು ಮಾರು ಗೆಲ್ಲು
ಡಾ ಆರೂಢಭಾರತೀ ಸ್ವಾಮೀಜಿ.ಅಧ್ಯಕ್ಷರು, ಶ್ರೀ ಸಿದ್ಧಾರೂಢ ಮಿಷನ್ ಆಶ್ರಮ, ರಾಮೋಹಳ್ಳಿ. ಸಿದ್ಧಸೂಕ್ತಿ : ಮನೆ ಗೆದ್ದು ಮಾರು ಗೆಲ್ಲು. ಮನೆ ಕುಟುಂಬದ ನೆಲೆ,ಮಾರು ಸಮಾಜ. ನೆಲೆ ಇಲ್ಲದಿರೆ ಬೆಲೆ ಇಲ್ಲ. ಮನುಷ್ಯ ಸಂಬಂಧ-ಸಂಸ್ಕಾರ-ಶಿಕ್ಷಣ ಶುರುವಾಗುವುದು ಮನೆಯಿಂದ. ತಾಯಿಯ ಹಾಲು-ಅನ್ನವನುಂಡು, ನುಡಿ ನಡೆ ಕಲಿಯುವುದು ಇಲ್ಲಿ. ಹಿರಿ ಕಿರಿಯರ ಅನುಭವದ ಪಾಠ ರಸಪಾಕ ಲಬಿಸುವುದು ಇಲ್ಲಿ.ಬೆಚ್ಚನೆಯ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು, ಇಚ್ಛೆಯನರಿವ ಸತಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಮನೆ ಮಾರ ತೊರೆದು ವನವಾಸ ಬೇಡ ಎಂದರು…