ಪ್ರಾಥಮಿಕ ಶಾಲಾ ಗುರುಗಳ ತಾಳ್ಮೆ ಮತ್ತು ಅವರ ನೀತಿ ಪಾಠ
ಪ್ರಾಥಮಿಕ ಶಾಲಾ ಗುರುಗಳ ತಾಳ್ಮೆ ಮತ್ತು ಅವರ ನೀತಿ ಪಾಠ ಈ ಹೊತ್ತು ನನ್ನ ಮನಸ್ಸು ಬಾಲ್ಯದ ದಿನಗಳತ್ತ ಮುಖ ಮಾಡಿದೆ. ಬಾಲ್ಯದ ದಿನಗಳು ಎಂದಾಕ್ಷಣ ನನ್ನ ಮನಸ್ಸಿನಲ್ಲಿ ಮೂಡುವುದು ಪ್ರೈಮರಿ ಸ್ಕೂಲಿನ ದಿನಗಳು. ಆ ಹೊತ್ತಿನ ಗೆಳೆಯರ, ಗುರುಗಳ ನೆನಪುಗಳು ದಶಕಗಳ ನಂತರವೂ ಹಸಿರಾಗಿರುವುದು ಬಾಲ್ಯವನ್ನು ಪ್ರತಿಯೊಬ್ಬರೂ ಹೇಗೆ ತಮ್ಮ ಮನದ ಮೂಲೆಯಲ್ಲಿ ಜತನದಿಂದ ಜೋಪಾನವಾಗಿ ಕಾಪಾಡಿಕೊಂಡು ಬಂದಿರುತ್ತಾರೆ ಎನ್ನುವುದರ ಸೂಚಕವಾಗಿದೆ. ಶಾಲೆಗೆ ಸೇರುವ ಪೂರ್ವದಲ್ಲಿ ನನಗೆ ಗೆಳೆಯರು ಅಂತಹ ಯಾರೂ ಇರಲಿಲ್ಲ. ನನಗಿಂತ ಸುಮಾರು…