ಎರಡನೇ ಲಸಿಕೆ ಸದ್ಯದ ಮಾರ್ಗಸೂಚಿ ಅನುಸರಿಸಲು ಹೈಕೋರ್ಟ್ ಸೂಚನೆ
ಬೆಂಗಳೂರು,ಮೇ, ೨೧: ಕೋವಿಡ್-೧೯ ಎರಡನೇ ಲಸಿಕೆ ಪಡೆಯಲು ಅರ್ಹರಾಗಿರುವ ನಾಗರಿಕರಿಗೆ ಸದ್ಯ ಚಾಲ್ತಿಯಲ್ಲಿರುವ ಮಾರ್ಗಸೂಚಿಯನ್ನು ಅನುಸರಿಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ ಈ ಕುರಿತಂತೆ ತರ್ಕಬದ್ಧ ಮತ್ತು ನ್ಯಾಯಯುತ ನೀತಿಯನ್ನು ರೂಪಿಸುವಂತೆ ಅದು ಸರಕಾರಕ್ಕೆ ಹೇಳಿದ್ದು, ಇಂತಹ ಪರಿಸ್ಥಿತಿಯಲ್ಲಿ ಮೊದಲ ಡೋಸ್ ಲಸಿಕೆ ನೀಡಲು ಖಾಸಗಿ ಏಜನ್ಸಿಯವರಿಗೆ ಅನುಮತಿ ಇದೆಯೇ ಎಂದು ಸೂಚಿಸುವಂತೆ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ನಿರ್ದೇಶನ ನೀಡಿತು. ಸದ್ಯ ರಾಜ್ಯದಲ್ಲಿ ಲಭ್ಯವಿರುವ ೯೭,೪೪೦…