ಒಲಿದರೆ ನಾರಿ,ಮುನಿದರೆ ಮಾರಿ
ಸಿದ್ಧಸೂಕ್ತಿ : ಒಲಿದರೆ ನಾರಿ, ಮುನಿದರೆ ಮಾರಿ. ಒಲಿದರೆ ಸ್ತ್ರೀ ತಾಯಿ ಸಹೋದರಿ ಹೆಂಡತಿ ಮಗಳು ಸೊಸೆ ಅತ್ತೆ! ತಿರುಗಿಬಿದ್ದರೆ ಸರ್ವನಾಶಕಿ! ದೇಹ ದುರ್ಬಲೆ, ಮನೋಹೃದಯ ಸುಕೋಮಲೆ! ಪ್ರೀತಿ ದಯೆ ಕರುಣೆ ತಾಳ್ಮೆ ತ್ಯಾಗ ಗುಣಮಹಾಸಾಗರೆ! ಆದರ್ಶ ಹೆಣ್ಣು ಎಲ್ಲರ ಕಣ್ಣು ಬೆಳಕು ಬೇಕು! ಯತ್ರ ನಾರ್ಯಸ್ತು ಪೂಜ್ಯಂತೇ, ರಮಂತೇ ತತ್ರ ದೇವತಾಃ=ಪೂಜ್ಯ ನಾರಿಯರಿರುವಲ್ಲಿ ದೇವತೆಗಳಿರುವರು. ಗೃಹಿಣೀ ಗೃಹಮುಚ್ಯತೇ=ಮಡದಿಯೇ ಮನೆ.ಸ್ತ್ರೀ ಇಲ್ಲದ ಮನೆ ಕಳೆಗಟ್ಟದು.…