ಪಿಸ್ತೂಲು ಮಾರಾಟದಡಿ ರೌಡಿ ಬಂಧನ
ಬೆಂಗಳೂರು,ಜೂ,೧೩:ಜಪ್ತಿ ಮಾಡಲಾದ ಪಿಸ್ತೂಲ್‌ಕಾಡುಬೀಸನಹಳ್ಳಿ ಸೋಮ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ರೌಡಿ ರೋಹಿತ್ ಹಾಗೂ ಸಹಚರರನ್ನು ಇತ್ತೀಚೆಗಷ್ಟೇ ಸಿಸಿಬಿ ಪೊಲೀಸರು ಬಂಧಿಸಿದ್ದರು. ಕೃತ್ಯ ಎಸಗಲು ರೌಡಿ ಲೋಹಿತ್‌ಗೆ ಪಿಸ್ತೂಲ್ ಮಾರಿದ್ದ ಆರೋಪದಡಿ ಕಲಬುರ್ಗಿ ರೌಡಿ ಸುಂಕರಿ ಅಲಿಯಾಸ್ ಮಾರ್ಕೇಟ್ ಸತೀಶ್‌ನನ್ನೂ ಸೆರೆ ಹಿಡಿದಿದ್ದಾರೆ. ‘ಹತ್ಯೆ ಸಂಚು ಪ್ರಕರಣದ ತನಿಖೆಯಲ್ಲಿ ಮಹತ್ವದ ಮಾಹಿತಿಗಳು ಸಿಕ್ಕಿವೆ. ರೌಡಿ ಸತೀಶ್, ಅಕ್ರಮವಾಗಿ ರಾಜ್ಯದಲ್ಲಿ ನಾಡ ಪಿಸ್ತೂಲ್ ಮಾರುತ್ತಿದ್ದ ಸಂಗತಿಯೂ ಬಯಲಾಗಿದೆ. ಆತನ ಜೊತೆಯಲ್ಲಿ ಇಬ್ಬರು ಸಹಚರರನ್ನು ಬಂಧಿಸಲಾಗಿದೆ. ಅವರಿಂದ ೩ ನಾಡ…