ಲಖಿಂಪುರ್ ಹಿಂಸಾಚಾರ: ಸಾಕ್ಷ್ಯಗಳಿಲ್ಲದೆ ಬಂಧನ ಸಾಧ್ಯವಿಲ್ಲ- ಯೋಗಿ
ಲಕ್ನೋ, ಅ, ೦೯: ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕಷ್ಟಿಗಳಿಲ್ಲದೆ ಬಂಧನ ಸಾಧ್ಯವಿಲ್ಲ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಭಾನುವಾರ ನಡೆದ ಹಿಂಸಾಚಾರದಲ್ಲಿ ೪ ಮಂದಿ ರೈತರು ಸೇರಿ ಒಟ್ಟು ೮ ಮಂದಿ ಮೃತಪಟ್ಟಿದ್ದರು. ಕಾನೂನಿನ ಮುಂದೆ ಎಲ್ಲರೂ ಸಮಾನರು, ಸುಪ್ರೀಂಕೋರ್ಟ್ ಪ್ರಕಾರ ಸಾಕ್ಷ್ಯವಿಲ್ಲದೆ ಯಾರನ್ನೂ ಬಂಧಿಸಲು ಸಾಧ್ಯವಿಲ್ಲ ಹಾಗೂ ತನಿಖೆ ನಡೆಯುತ್ತಿದೆ. ದೂರು ದಾಖಲಾಗಿದೆ. ತಪ್ಪು ಯಾರದ್ದೇ ಇದ್ದರೂ ಶಿಕ್ಷೆ ನಿಶ್ಚಿತ ಎಂದು ಯೋಗಿ ಹೇಳಿದರು. ಯಾರಿಗೂ…



















