ಭಗತ್ ಸಿಂಗ್ ಎಂಬ ಬೆಳಕಿಗೆ ಬೆನ್ನು ಮಾಡಿರುವ ಸಮಾಜ
ಭಗತ್ ಸಿಂಗ್ ಎಂಬ ಬೆಳಕಿಗೆ ಬೆನ್ನು ಮಾಡಿರುವ ಸಮಾಜ ಬ್ರಿಟಿಷರ ನೇಣುಗಂಬಕ್ಕೆ ನಗು ನಗುತ್ತಲೇ ಕೊರಳೊಡ್ಡಿದ್ದ ಆ ಸ್ವಾತಂತ್ರ್ಯ ಕ್ರಾಂತಿಯ ಕಿಡಿ ಉಸಿರಾಡಿದ್ದು ಇಪ್ಪತ್ಮೂರೇ ವರ್ಷ. ಉಕ್ಕು ಹರೆಯದ ಈ ಬಿಸಿ ಗುಂಡಿಗೆ ದಾಸ್ಯದ ವಿರುದ್ಧ ಮಾತ್ರವೇ ಅಲ್ಲ, ಸಮ ಸಮಾಜ, ಸಹಬಾಳುವೆಗಾಗಿ ಮಿಡಿದ ಪರಿ ಅಭೂತಪೂರ್ವ. ಭಗತ್ ಸಿಂಗ್ ದೇಹ ಬಹು ಹಿಂದೆಯೇ ಮಣ್ಣು ಸೇರಿರಬಹುದು. ಆದರೆ ಕೋಮುವಾದ, ಅಮಾನವೀಯ ಅಸ್ಪೃಶ್ಯತೆ, ಧರ್ಮ-ಜಾತಿಗಳ, ಮೇಲು- ಕೀಳುಗಳ ನೆವದಲಿ ನಡೆವ ಕ್ರೌರ್ಯ-ಶೋಷಣೆ- ವಿರುದ್ಧ ಆತ ಎತ್ತಿದ…