ಹಾಸಿಗೆ ಇದ್ದಷ್ಟು ಕಾಲು ಚಾಚು
ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಹಾಸಿಗೆ ಇದ್ದಷ್ಟು ಕಾಲು ಚಾಚು. ಹಾಸಿಗೆ =ಆದಾಯ, ಸಂಪತ್ತು, ಶಕ್ತಿ, ಸಾಮರ್ಥ್ಯ. ಚಿಕ್ಕ ಹಾಸಿಗೆಯಲ್ಲಿ ಎತ್ತೆಂದರತ್ತ ಕಾಲು ಚಾಚಿದರೆ ಹಾಸಿಗೆ ಸಾಲದು. ಹಾಸಿಗೆ ದೊಡ್ಡದಿರಬಾರದೆಂದಿಲ್ಲ! ಆದರೆ ಮನ ಬಂದಂತೆ ಕಾಲು ಚಾಚಿದೆಡೆಯಲ್ಲೆಲ್ಲ ಹಾಸಿಗೆ ಇರಲಾದೀತೇ? ಎಲ್ಲೆಂದರಲ್ಲಿ, ನಮ್ಮದಲ್ಲದರಲ್ಲೂ, ಕಾಲು ಚಾಚುವ, ಮೂಗು ತೂರಿಸುವ, ಕಣ್ಣು ಇಣುಕಿಸುವ, ನಾಲಿಗೆ ಹರಿಬಿಡುವ, ಕಿವಿ ಕೊಡುವ, ಕೈ ತೂರಿಸುವ, ಚಪಲ! ಚಪಲ ಚನ್ನಿಗರಾಯರಿಗೆ ಎಂದಿಗೂ ಇಲ್ಲ ತೃಪ್ತಿ!…