ಕೊಪ್ಪಳವೆಂಬ ಮಹಾಕೊಪಣಾಚಲ
ಕೊಪ್ಪಳವೆಂಬ ಮಹಾಕೊಪಣಾಚಲ ಕೊಪ್ಪಳವು ಮಧ್ಯ ಕರ್ನಾಟಕದ ಪ್ರಸಿದ್ಧ ಪ್ರಾಚೀನ ಎಡೆ. ಇದು ಶಿಲಾಯುಗ ಕಾಲದಿಂದಲೂ ಮಾನವನ ವಸತಿ ತಾಣ. ನೂತನ ಶಿಲಾಯುಗದ ಕೊಡಲಿ, ಮಡಕೆಗಳು, ಬೃಹತ್ ಶಿಲಾಯುಗದ ಕಲ್ಗೋರಿಗಳು(ಮೋರೇರ ಮನೆ) ಇಲ್ಲಿವೆ. ಮೌರ್ಯ ಅಶೋಕನ ಎರಡು ಬಂಡೆಗಲ್ಲು ಶಾಸನಗಳು ಕಂಡುಬಂದಿರುವುದು ಇಲ್ಲಿನ ಗವಿಮಠ ಮತ್ತು ಪಾಲ್ಕಿಗುಂಡುಗಳಲ್ಲಿ. ಶಾತವಾಹನ ಕಾಲದ ೫೫೩೪ ಮುದ್ರಾಂಕಿತ ನಾಣ್ಯಗಳ ರಾಶಿಯೇ ಇಲ್ಲಿನ ಚಿಕ್ಕಸಿಂಧೋಗಿಯಲ್ಲಿ ದೊರೆತಿರುವುದು ಗಮನಾರ್ಹ. ಬ್ರಾಹ್ಮಿ ಲಿಪಿಯಲ್ಲಿರುವ ಸಿರಿಸತಕನಿ ಎಂಬ ನಾಣ್ಯ ದೊರೆತಿದೆ. ಚಂದ್ರವಳ್ಳಿಯ ಕ್ರಿ.ಶ. ೪೫೦ರ ಶಾಸನದಲ್ಲಿ ಕುಪಣ ಉಲ್ಲೇಖವಿದ್ದು,…