Girl in a jacket

Author kendhooli_editor

ಗ್ರಾಮೀಣ ಭಾಷೆ ಬಳಕೆಯಲ್ಲೂ ಸೈ ಎನಿಸಿಕೊಂಡ ರಾಜಕುಮಾರ್

ಗ್ರಾಮೀಣ ಭಾಷೆ ಬಳಕೆಯಲ್ಲೂ ಸೈ ಎನಿಸಿಕೊಂಡ ರಾಜಕುಮಾರ್ ರಾಜಕುಮಾರ್ ಬಿ.ಸರೋಜಾದೇವಿ ಒಟ್ಟಾಗಿ ಅಭಿನಯಿಸಿದ ಮೊದಲ ಚಿತ್ರ ಹಾಗೂ ನಾಯಕ ನಾಯಕಿಯರು ಮೊದಲ ಬಾರಿಗೆ ಗ್ರಾಮ್ಯ ಭಾಷೆಯನ್ನು ಬಳಸಿದ ಕಪ್ಪು-ಬಿಳುಪು, ಸಾಮಾಜಿಕ ಚಿತ್ರ ಅಣ್ಣತಂಗಿ ೧೯೫೮ರಲ್ಲಿ ಗಿರಿಜಾ ಪ್ರೊಡಕ್ಷನ್ಸ್ ಲಾಂಛನದಡಿ ಬಿಡುಗಡೆಗೊಂಡಿತು. ಟಿ.ಎಸ್.ಕರಿಬಸಯ್ಯ ನಿರ್ಮಾಣ ಮಾಡಿದ ಚಿತ್ರವನ್ನು ಕು.ರ.ಸೀತಾರಾಮಶಾಸ್ತ್ರಿ ನಿರ್ದೇಶಿಸಿದರು. ಕಂದಗಲ್ ವೀರಣ್ಣ ಸಹಾಯಕ ನಿರ್ದೇಶಕರಾಗಿದ್ದರು. ರಾಜಕುಮಾರ್, ಈಶ್ವರಪ್ಪ, ಕೆ.ಎಸ್.ಅಶ್ವತ್, ಟಿ.ಎನ್.ಬಾಲಕೃಷ್ಣ, ನರಸಿಂಹರಾಜು, ಗಣಪತಿಭಟ್, ಆರ್.ಎನ್.ಮಾಗಡಿ, ವಾಸುದೇವ ಗಿರಿಮಾಜಿ, ಗುಗ್ಗು, ಬಿ.ಜಯಮ್ಮ, ಬಿ.ಸರೋಜಾದೇವಿ, ವಿದ್ಯಾವತಿ, ಲಕ್ಷ್ಮೀದೇವಿ ಅಭಿನಯಿಸಿದರು. ತಮಿಳಿನ…

ಜೋಡೆತ್ತು ಮಾಡೀತೆ ಕಸರತ್ತು?

ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಕಸರತ್ತನ್ನು ಜಾತ್ಯತೀತ ಜನತಾ ದಳ ಈಗಾಗಲೇ ಆರಂಭಿಸಿದೆ. ಚುನಾವಣೆಗೆ ಎರಡು ವರ್ಷ ಇರುವಾಗಲೇ ತಾನು ಸಾಗಲಿರುವ ದಾರಿಯ ಸೂಚನೆಯನ್ನು ಅದು ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆ ನೆಪದಲ್ಲಿ ಕೊಟ್ಟಿದೆ. ಈ ಎರಡೂ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಅದರ ತೀರ್ಮಾನ ದೂರಗಾಮಿ ಪರಿಣಾಮ ಬೀರುವ ಸಾಧ್ಯತೆ ಇದೆ. ಮುಸ್ಲಿಂ ಮತಗಳನ್ನು ತನ್ನತ್ತ ಸೆಳೆಯುವ ತಂತ್ರವಾಗಿ ಜೆಡಿಎಸ್ ನಾಯಕತ್ವ ಈ ಹೆಜ್ಜೆ ಇಟ್ಟಿದೆ. ಜೋಡೆತ್ತು ಮಾಡೀತೆ ಕಸರತ್ತು? ಕರ್ನಾಟಕ ವಿಧಾನ ಸಭೆಗೆ…

ಕಡು ರಾತ್ರಿಗಳೆಂಬ ನಾಲಿಗೆಯ ಮೇಲೆ…

ಕಡು ರಾತ್ರಿಗಳೆಂಬ ನಾಲಿಗೆಯ ಮೇಲೆ… ಬಾಲ್ಯಕ್ಕೆ ಸಂಭ್ರಮದ ನೂರು ನೆನಪುಗಳಿರುವಂತೆಯೇ ಭಯದ ಹಲವು ಕರಿನೆರಳುಗಳೂ ಇರುತ್ತವೆ.ಮನೆ ಸುತ್ತಲ ದೆವ್ವದ ಮರ.ಓಣಿ ಆಚೆಗಿನ ಹಾಳು ಮನೆ,ಊರ ತುದಿಯ ಸ್ಮಶಾನದ ಗೋರಿಗಳು ಮಕ್ಕಳಿಗೆ ಭಯದ ತಾಣಗಳೂ ಹೌದು.ಇದಕ್ಕೆ ಕಾರಣ ಅಜ್ಜನೋ ಅಜ್ಜಿಯೋ ರಾತ್ರಿಗಳಲ್ಲಿ ಹೇಳುತಿದ್ದ ದೆವ್ವ ಬ್ರಹ್ಮ ರಾಕ್ಷಸರ ಹಲವು ಕಥೆಗಳೇ! ಕಟ್ಟೆಮೇಲೆ ಕುಳಿತ ರಾಟಿ ಮಾವ ಹೇಳುತಿದ್ದ ” ಅಮವಾಸೆ ದಿನ ಚಳ್ಳಿ ಮರದ ದುರ್ಗಮ್ಮನ ಬೇವಿನ ಮರದ ದೆವ್ವ ಜೋಕಾಲಿ ಆಡೋದನ್ನ ನೋಡಿ ಓಡುತ್ತಲೇ ಕಲ್ಲೆಸೆದಾಗ ಅದು…

ಜೈನ ಜಿನಾಲಯಗಳು ದೇವಾಲಯಗಳಾದದ್ದು. . .

ಜೈನ ಜಿನಾಲಯಗಳು ದೇವಾಲಯಗಳಾದದ್ದು. . . ಹಿಂದಿನ ಸಂಚಿಕೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ದೇವಾಲಯಗಳಾಗಿ ಪರಿವರ್ತನೆ ಹೊಂದಿದ ಜಿನಾಲಯಗಳು ಕೊಪ್ಪಳವು ಪ್ರಾಚೀನ ಕಾಲದಲ್ಲಿ ಮಹಾಕೊಪಣಾಚಲವಾಗಿದ್ದು, ಇದು ಜೈನರ ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದಿದ್ದಿತು. ಇಲ್ಲಿ ಅನೇಕ ಬಸದಿಗಳು ನೂರಾರು ಶಾಸನಗಳು ಕಂಡುಬಂದಿವೆ. ಇದಕ್ಕೆ ಪೂರಕವಾಗಿ ಸ್ಥಳೀಯರು ಕೊಪ್ಪಳದಲ್ಲಿ ೭೭೨ ಜೈನ ಬಸದಿಗಳಿದ್ದವೆಂಬುದನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಹಾಗೆಯೇ ಶಾಸನಗಳಲ್ಲಿ ಜಿನಬಸದಿಗಳ ಉಲ್ಲೇಖವಿದ್ದು ಅವುಗಳಲ್ಲಿ ಜಯಧೀರ ಜಿನಾಲಯ, ಪುಷ್ಪದಂತ ತೀರ್ಥಂಕರ ಸೌಧ, ಕುಶ ಜಿನಾಲಯ, ಸಾಂತಲದೇವಿ, ಚಂದ್ರನಾಥ, ನೇಮಿನಾಥ, ಶಾಂತಿನಾಥ, ಕಲ್ಯಾಣಕೀರ್ತಿ,…

ಕಲಿತ ಶಾಲೆಯನ್ನು ಗೌರವಿಸಿದರೆ ಬದುಕಲ್ಲಿಯಶಸ್ಸು ಸಾಧ್ಯ

ಆಲಮಟ್ಟಿ,ಅ,08;ವಿದ್ಯಾರ್ಥಿಗಳು ತಂದೆ, ತಾಯಿ, ಕಲಿಸಿದ ಗುರು ಹಾಗೂ ಕಲಿತ ಸಂಸ್ಥೆಯನ್ನು ಮರೆಯದೇ ಗೌರವಿಸುವ ವಿದ್ಯಾರ್ಥಿ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದರು. ಶುಕ್ರವಾರ, ಸ್ಥಳೀಯ ಮಂಜಪ್ಪ ಹರ್ಡೇಕರ ಸ್ಮಾರಕ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬದುಕಿನ ಓದಿನ,ಬುನಾದಿ ಪ್ರೌಢ ಹಂತ, ಈ ಹಂತದಲ್ಲಿ ಜವಾಬ್ದಾರಿಯುತ ಓದಿನ ಜತೆ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು, ಹುಡುಗಾಟದ ಜತೆಗೂ ಗಂಭೀರ…

ವಿಶ್ವವಿಖ್ಯಾತ ಮೈಸೂರು ದಸರಾಗೆ ವಿದ್ಯುಕ್ತ ಚಾಲನೆ

ಮೈಸೂರು,ಅ,07: ವಿಶ್ವವಿಖ್ಯಾತ ‘ಮೈಸೂರು ದಸರಾ -2021’ರ ಮಹೋತ್ಸವಕ್ಕೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು 411ನೇ ನಾಡಹಬ್ಬ ದಸರಾ ಹಬ್ಬಕ್ಕೆ ಗುರುವಾರ ಚಾಲನೆ ನೀಡುವ ಮೂಲಕ ಅಧಿಕೃತ ಚಾಲನೆ ನೀಡಿದರು. ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆಯೊಂದಿಗೆ ಬೆಳಗ್ಗೆ 8.15ರಿಂದ 8.45ರ ಸಲ್ಲುವ ಶುಭ ಮುಹೂರ್ತದಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ದಸರಾಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವರಾದ ಎಸ್.ಟಿ.ಸೋಮಶೇಖರ್, ಆರ್.ಅಶೋಕ್, ಬಿ.ಸಿ.ಪಾಟೀಲ್, ಶಿವರಾಂ ಹೆಬ್ಬಾರ್, ಸುನೀಲ್ ಕುಮಾರ್, ನಾರಾಯಣ ಗೌಡ,…

ಬಿಎಸ್ ವೈ ಆಪ್ತ ಸೇರಿದಂತೆ ಐವತ್ತು ಕಡೆ ತೆರಿಗೆ ಅಧಿಕಾರಿಗಳ ದಾಳಿ

ಬೆಂಗಳೂರು,ಅ,07: ಮಹತ್ವದ ಬೆಳವಣಿಗೆಯೊಂದರಲ್ಲಿ ಬಿ.ಎಸ್.ವೈ ಆಪ್ತ ಸೇರಿದಂತೆ  50ಕ್ಕೂ ಹೆಚ್ಚು ಕಡೆ ಆದಾಯ ತೆರಿಗೆ ಅಧಿಕಾರಿಗಳ ದಾಳಿನಡೆಸಿದ್ದಾರೆ. ಗೋವಾ ಘಟಕದ ಆದಾಯ ತೆರಿಗೆ ಅಧಿಕಾರಿಗಳು  ಈ ದಾಳಿ ನಡೆಸಿದ್ದು  ಕೆಲ ಮಹತ್ದದ ದಾಖಲೆಗಳನ್ನು ಬಶಪಡಿಸಿಕೊಂಡಿದ್ದಾರೆ. ಸುಮಾರು 300 ಅಧಿಕಾರಿಗಳ ತಂಡ ಏಕಕಾಲದಲ್ಲಿ 50ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಉದ್ಯಮಿಗಳು ಮತ್ತು ಗುತ್ತಿಗೆದಾರರ ಮನೆಗಳು ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ತಂಡೋಪಾದಿಯಲ್ಲಿ ದಾಳಿಗಳನ್ನು ನಡೆಸಿದ್ದಾರೆ. ದಾಳಿಗಾಗಿ 120 ಕಾರುಗಳು, 300 ಅಧಿಕಾರಿಗಳು…

ತಸ್ಮಾನ್ಮೂಲಂ ಯತ್ನತೋ ರಕ್ಷಣೀಯಂ

ಸಿದ್ಧಸೂಕ್ತಿ :         ತಸ್ಮಾನ್ಮೂಲಂ ಯತ್ನತೋ ರಕ್ಷಣೀಯಂ. ಮೂಲವನ್ನು ಕಷ್ಟಪಟ್ಟು ರಕ್ಷಿಸಬೇಕು. ಟೊಂಗೆ ಒಣಗಿದರೆ, ಎಲೆ ಹಣ್ಣು ಹೂವು ಕಾಯಿ ಉದುರಿದರೆ ನಡೆದೀತು. ಬೇರೇ ಕೊಳೆತರೆ? ಇಡೀ ಮರವೇ ಸತ್ತಿತು! ಕಟ್ಟಡದಲ್ಲಿ ಕೆಲವು ಮಾರ್ಪಾಡು ಆಗಬಹುದು. ಅಡಿಪಾಯವೇ ಕುಸಿದರೆ? ಭೂಮಿಗೊರಗುವುದು ಭವ್ಯ ಭವನ!ನಾವಿಂದು ಹೆಮ್ಮರದಂತೆ ಬೆಳೆದಿರಬಹುದು. ಇದಕ್ಕೆಲ್ಲ ಕಾರಣ ನಮ್ಮ ಹಿರಿಯರು, ತಂದೆ ತಾಯಿ ಅಜ್ಜ ಅಜ್ಜಿಯರು! ಅವರು ಏನೆಲ್ಲ ಕಷ್ಟ ಸಹಿಸಿ ನಮಗೆ ಉಸಿರನ್ನು ನೀಡಿ ಬೆಳೆಸಿದರೆಂಬುದನ್ನು ಮರೆಯಲಾಗದು. ಹಿರಿಯರನ್ನು ಕಡೆಗಣಿಸಿದರೆ…

ಜ್ಞಾನಪೀಠ ಪ್ರಶಸ್ತಿ ಯಾರಿಗೆ ಸಿಕ್ಕರೂ ಸಂತೋಷ;ಕಣವಿ

ಧಾರವಾಡ,ಅ,06: ಜ್ಞಾನಪೀಠ ಪ್ರಶಸ್ತಿ ಯಾರಿಗೆ ಸಿಕ್ಕರೂ ನನಗೆ ಸಂತೋಷ ಎಂದು ಹಿರಿಯ ಕವಿ ಚನ್ನವೀರ ಕಣವಿ ಹೇಳಿದ್ದಾರೆ. ಜ್ಞಾನಪೀಠ ಪ್ರಶಸ್ತಿಗೆ ಹೆಸರು ಶಿಫಾರಸ್ಸು ಮಾಡಿರುವ ವಿಚಾರವಾಗಿ ಧಾರವಾಡದಲ್ಲಿ ಹಿರಿಯ ಕವಿ ಚನ್ನವೀರ ಕಣವಿ ಮಾತನಾಡಿದ್ದು, ನನ್ನ ಹೆಸರು ಶಿಫಾರಸ್ಸು ಮಾಡಿದ್ದಕ್ಕೆ ನನಗೆ ಪ್ರಶಸ್ತಿ ಸಿಗುತ್ತೆ ಅಂತಾ ಅಲ್ಲ ಎಂದಿದ್ದಾರೆ. ಹೆಸರು ಶಿಫಾರಸ್ಸು ಮಾಡಿರುತ್ತಾರೆ. ಯಾರಿಗಾದರೂ ಒಬ್ಬರಿಗೆ ಪ್ರಶಸ್ತಿ ಕೊಡುತ್ತಾರೆ. ಶಿಫಾರಸ್ಸು ಮಾಡಿದ್ದಕ್ಕೆ ಪ್ರಶಸ್ತಿ ಬರುತ್ತದೆ ಅಂತಾ ಅಲ್ಲಾ. ಇನ್ನು ಪ್ರಶಸ್ತಿ ನನಗೆ ಬಂದರೂ ಸಂತೋಷ ಹೇಳಬಹುದು, ವೀರಪ್ಪ…

ಬೃಹತ್ ಮಕ್ಕಳ ಮಾರಾಟ ಜಾಲ ಪತ್ತೆ

ಬೆಂಗಳೂರು,ಅ.06:  ಮುಂಬೈನಿಂದ ಕಡಿಮೆ ಹಣಕ್ಕೆ ಮಕ್ಕಳನ್ನು ಖರೀದಿಸಿ ತಂದು ಬೆಂಗಳೂರಿನಲ್ಲಿ ಮಕ್ಕಳಿಲ್ಲದ ಪೋಷಕರಿಗೆ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುತ್ತಿದ್ದ ಮಕ್ಕಳ ಮಾರಾಟ ಜಾಲವನ್ನ ಪೋಲಸರು  ಭೇದಿಸಿದ್ದಾರೆ. ಮಕ್ಕಳ ಮಾರಾಟ ದಂಧೆಗೆ ಗರ್ಭಿಣಿ ಮಹಿಳೆಯರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊಡುವ ತಾಯಿ ಕಾರ್ಡ್ ನ್ನೇ ನಕಲು ಮಾಡಿ ದುರ್ಬಳಕೆ ಮಾಡಿಕೊಂಡಿರುವ ಆಘಾತಕಾರಿ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಚಾಮರಾಜಪೇಟೆಯ ಸಿರ್ಸಿ ವೃತ್ತದಲ್ಲಿರುವ ಹೆರಿಗೆ ಆಸ್ಪತ್ರೆಯಲ್ಲಿ ಕಳ್ಳತನವಾಗಿದ್ದ ಮಗುವಿನ ಜಾಡು ಹಿಡಿದು ತನಿಖೆ ನಡೆಸಿದ ಪೊಲಿಸ್ ಸಬ್‌ಇನ್‌ಸ್ಪೆಕ್ಟರ್ ಶ್ರೀನಿವಾಸ್ ಬಾಂಬೆಯಿಂದ…

ಕೇಂದ್ರ ಸರ್ವಾಧಿಕಾರಿ ಧೋರಣೆ ವಿರುದ್ಧ ಖರ್ಗೆ ಆಕ್ರೋಶ

ಬೆಂಗಳೂರು, ಅ.6- ಉತ್ತರ ಪ್ರದೇಶದ ಲಖಿಂಪುರ ಖೇರಿ ದುರ್ಘಟನೆಯಲ್ಲಿ ಆರು ಮಂದಿ ರೈತರು ಮೃತಪಟ್ಟಿದ್ದು, ಸಾಂತ್ವಾನ ಹೇಳಲು ಹೋದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರನ್ನು ಬಿಜೆಪಿ ಸರ್ಕಾರ ಅಕ್ರಮವಾಗಿ ಬಂಧನದಲ್ಲಿಟ್ಟಿದ್ದು ಅವರನ್ನು ಕೀಡಲೇ ಬಿಡುಗಡೆ ಮಾಡುವಂಯೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನ ವಿರೋಧಿಯಾದ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ರೈತರು ಪ್ರತಿಭಟನೆ ನಡೆಸುತ್ತಿದ್ದರು. ಅವರಿಗೆ ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರ ಆಶಿಶ್…

ಸರಕಾರಿ ಹುದ್ದೆ, ಶಿಕ್ಷಣ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಕೇಸರೀಕರಣ; ಡಿ.ಕೆ. ಶಿ ಆರೋಪ

ಬೆಂಗಳೂರು,ಅ,07:ಆರ್ ಎಸ್ಎಸ್ ನವರು ಶಿಕ್ಷಣ ಸಂಸ್ಥೆ, ವಿದ್ಯಾಲಯಗಳನ್ನು ಆರಂಭಿಸುತ್ತಾ ಸರ್ಕಾರಿ ಹುದ್ದೆ ಸೇರಿದಂತೆ ಎಲ್ಲ ಕ್ಷೇತ್ರಗಳ ಉನ್ನತ ಹುದ್ದೆಗಳಲ್ಲಿ ತಮ್ಮ ಕಾರ್ಯಕರ್ತರನ್ನು ಕೂರಿಸಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಶಾಲೆ ಕಾಲೇಜುಗಳಲ್ಲಿ ಎಬಿವಿಪಿಗೆ ಸಂಬಂಧಿಸಿದವರನ್ನೇ ಪ್ರಾಧ್ಯಾಪಕರು, ಪ್ರಾಂಶುಪಾಲರುಗಳನ್ನು ನೇಮಕಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಇದು ಆರೆಸ್ಸಸ್ ನವರ ಕಾರ್ಯಾಚರಣೆ ಶೈಲಿ. ಇದನ್ನೇ ನಾವು ಕೇಸರಿಕರಣ ಎಂದು ಹೇಳುತ್ತಿದ್ದೇವೆ. ಇದು ದೇಶದ ಸಾಮರಸ್ಯಕ್ಕೆ ಮಾರಕವಾಗಿದೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಬುಧವಾರ ನೀಡಿದ ಪ್ರತಿಕ್ರಿಯೆಯಲ್ಲಿ ಆಪಾದಿಸಿದರು. ಈ…

ಆರ್ ಎಸ್ ಎಸ್ ಗೆ ಬಂದು ಸಂಶೋಧನೆ ಮಾಡಿ ಎಂದ ಸಿ.ಟಿ.ರವಿಗೆ ತಿರುಗೇಟು ನೀಡಿದ ಹೆಚ್ಡಿಕೆ

ಬೆಂಗಳೂರು,ಅ,06: ಆರ್ ಎಸ್ ಎಸ್ ಬಗ್ಗೆ ತಾವು ನೀಡಿದ ಹೇಳಿಕೆಗೆ ಪ್ರತ್ಯುತ್ತರ ನೀಡುವ ಭರದಲ್ಲಿ ಸಂಘದ ಶಾಖೆಗೆ ಬಂದು ಅಧ್ಯಯನ ಮಾಡಿ ಎಂದು ಹೇಳಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಇಂದು ಬೆಳಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಸಿ.ಟಿ.ರವಿ ಅವರು ನೀಡಿರುವ ಪ್ರತಿ ಹೇಳಿಕೆಗೂ ಟಾಂಗ್ ಕೊಟ್ಟಿದ್ದು, ಅವರ ಟ್ವೀಟ್ʼನ ವಿವರ ಹೀಗಿದೆ; ಸಿ.ಟಿ ರವಿ ಅವರೇ, ಮನೆಯಲ್ಲಿ ಕೂತು ಪುಸ್ತಕ ಓದಿದರೆ…

ಮತ್ತೆ ಅಡುಗೆ ಅನಿಲ ಬೆಲೆ‌ಏರಿಕೆ

ನವದೆಹಲಿ,ಅ,06: ದೇಶದಲ್ಲಿ ಮತ್ತೆ ಎಲ್ಪಿಜಿ ಸಿಲಿಂಡರ್ ದರ ಹೆಚ್ಚಳ ಮಾಡಲಾಗಿದೆ. ಎಲ್ಪಿಜಿ ಅಡುಗೆ ಸಿಲಿಂಡರ್ ಬೆಲೆಯನ್ನು ಮತ್ತೆ 15 ರೂಪಾಯಿ ಹೆಚ್ಚಳ ಮಾಡಲಾಗಿದೆ. ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ. ದೇಶಾದ್ಯಂತ ಇಂದಿನಿಂದಲೇ ಹೊಸ ದರಗಳು ಜಾರಿಯಾಗಲಿವೆ ಎಂದು ಹೇಳಲಾಗಿದೆ.ಪೆಟ್ರೋಲಿಯಂ ಕಂಪನಿಗಳು ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 15 ರೂ. ಹೆಚ್ಚಳ ಮಾಡಿದ್ದು, ದೆಹಲಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಸಿಲಿಂಡರ್ ಬೆಲೆ ಈಗ…

ಮಂತ್ರ

‌                  ಸಿದ್ಧಸೂಕ್ತಿ :               ‌‌                   ಮಂತ್ರ. ಮತ್ತೆ ಮತ್ತೆ ಮನನದಿಂದ ಕಾಪಾಡುವುದು ಮಂತ್ರ. ಲಿಂಗಾಯತರ ಅಷ್ಟಾವರಣಗಳಲ್ಲಿ ಒಂದು. ತಪೋನಿಷ್ಠ ಮುನಿಗಳ ಹೃದಯಾಂತರಾಳ ಮುಖಕಮಲದಿಂದ ಹೊರಹೊಮ್ಮಿದ್ದು. ಶ್ಲೋಕ, ಬೋಧಪ್ರದ ಗುರೂಪದೇಶವೂ ಮಂತ್ರ. ಋಗ್ ಯಜುಃ ಸಾಮ ಅಥರ್ವ ವೇದವೆಲ್ಲ ಮಂತ್ರರೂಪ! ಗಾಯತ್ರಿ ಪಂಚಾಕ್ಷರಿ ಷಡಕ್ಷರಿ ತ್ರಯೋದಶಾಕ್ಷರಿ…

ಅಖೀಂಪುರ್ ಘಟನೆ;ಅಶೀಶ್ ಮಿಶ್ರ ರೈತರನ್ನು ಕೆಣಕಿ ಗುಂಡು ಹಾರಿಸಿದ್ದಾರೆ,ಎಫ್ ಐಆರ್ ನಲ್ಲಿ ಉಲ್ಲೇಖ

ಲಖೀಂಪುರ್ ಖೇರ್,ಅ,06: ಲಖೀಂಪುರ್ ಖೇರ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಎಫ್ ಐಆರ್ ನಲ್ಲಿ ಕಾರಿನಲ್ಲಿ ಕುಳಿತಿದ್ದ ಕೇಂದ್ರ ಸಚಿವರ ಪುತ್ರ ಅಶಿಶ್ ಮಿಶ್ರಾ ಅಲಿಯಾಸ್ ಮೋನು ಪ್ರತಿಭಟನಾನಿರತ ರೈತರನ್ನು ಕೆಣಕಿರುವುದಲ್ಲದೇ, ಅವರ ಮೇಲೆ ಗುಂಡು ಹಾರಿಸಿರುವುದಾಗಿ ಹೇಳಲಾಗಿದೆ. ಬಹ್ರೈಚ್ ಜಿಲ್ಲೆಯವರಾದ ಜಗಜಿತ್ ಸಿಂಗ್ ಅವರ ದೂರಿನ ಮೇಲೆ ದಾಖಲಾದ ಮೊದಲ ಮಾಹಿತಿ ವರದಿ (ಎಫ್ಐಆರ್) ಪ್ರಕಾರ, ಈ ಎಪಿಸೋಡ್ ಪೂರ್ವ ಯೋಜಿತವಾಗಿದ್ದು, ಮಂತ್ರಿ ಹಾಗೂ ಆತನ ಪುತ್ರನಿಂದ ಪಿತೂರಿ ನಡೆದಿದೆ ಎಂದು ಹೇಳಲಾಗಿದೆ.…

ದಸರಾ;ಮಾರ್ಗಸೂಚಿ ಬಿಡುಗಡೆ,ಮೈಸೂರಿಗೆ ಪ್ರತ್ಯೇಕ ಮಾರ್ಗಸೂಚಿ

ಬೆಂಗಳೂರು,ಅ,06; ವಿಶ್ವವಿಖ್ಯಾತ ದಸರಾ ಆಚರಣೆಗೆ ರಾಜ್ಯ ಸರ್ಕಾರ ಗೈಡ್​ಲೈನ್ಸ್​​ ಬಿಡುಗಡೆ ಮಾಡಿದೆ. ಸರಳವಾಗಿ ದಸರಾ ಆಚರಣೆ ಮಾಡಲು ಸರ್ಕಾರ ಅನುಮತಿ ನೀಡಿದೆ. ಮೈಸೂರು ದಸರಾ ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ದಸರಾ ಹಬ್ಬ ಆಚರಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಜನರು ಸೇರುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ದೈಹಿಕ ಅಂತರ ಇಲ್ಲದ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗುವುದು. ಈ ಮಾರ್ಗಸೂಚಿಗಳನ್ನು ಮಹಾನಗರ ಪಾಲಿಕೆಗಳ ಆಯುಕ್ತರು, ಪೊಲೀಸ್ ಆಯುಕ್ತರು, ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಇತರೆ ಇಲಾಖೆ…

ಮುಂಬೈ ಪ್ಲೇಆಫ್ ಕನಸು ಜೀವಂತ… ಅಲ್ಪ‌ ಮೊತ್ತಕ್ಕೆ ಕುಸಿದ ರಾಜಸ್ತಾನ ರಾಯಲ್ಸ್..

Reported By : H.D. Savita ಯುಎಇ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು ಕೇವಲ 90 ರನ್ ಕಲೆಹಾಕಿತು. ಈ ಸುಲಭ ಗುರಿ ಬೆನ್ನತ್ತಿದ ಮುಂಬೈ ಪರ…

ಸೋನಿಯಾ ಗಾಂಧಿ ನನ್ನನ್ನು ರಾಷ್ಟ್ರ ರಾಜಕೀಯಕ್ಕೆ ಕರೆದಿಲ್ಲ: ಸಿದ್ದರಾಮಯ್ಯ

ಬೆಂಗಳೂರು,ಅ,೦೫: ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ನನ್ನ ಬಳಿ ರಾಷ್ಟ್ರ ರಾಜಕೀಯದ ಬಗ್ಗೆ ಚರ್ಚೆ ಮಾಡಿಲ್ಲ. ಅವರ ಬಳಿ ಕೇವಲ ಕರ್ನಾಟಕ ರಾಜಕೀಯದ ಬಗ್ಗೆ ಚರ್ಚೆ ಮಾಡಿದ್ದೇನೆ. ರಾಷ್ಟ್ರ ರಾಜಕಾರಣಕ್ಕೆ ಸೋನಿಯಾಗಾಂಧಿ ನನ್ನ ಕರೆದಿಲ್ಲ. ಈ ಹಿಂದೆ ರಾಹುಲ್‌ಗಾಂಧಿ ಅವರು ಪ್ರಧಾನ ಕಾರ್ಯದರ್ಶಿ ಆಗು ಎಂದಿದ್ದರು, ನಾನೇ ನಿರಾಕರಿಸಿದ್ದೆ. ನಾನು ರಾಜ್ಯ ರಾಜಕಾರಣದಲ್ಲಿ ಕಂಪರ್ಟ್ ಆಗಿದ್ದೇನೆ. ಹಿಂದೆ ಕಾರ್ಯಕಾರಿ ಸಮಿತಿಗೂ ರಾಜೀನಾಮೆ ನೀಡಿದ್ದೆ ಎಂದು ಸಿಎಲ್?ಪಿ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ರೈತರ ಮೇಲೆ ಕಾರ್…

ಸುರಕ್ಷಿತ, ಸುಂದರ ಬೆಂಗಳೂರು ನಗರ ಮಾಡುವುದು ನಮ್ಮ ಗುರಿ: ಸಿಎಂ

ಬೆಂಗಳೂರ, ಅ, ೦೫: ಸುರಕ್ಷಿತ, ಸುಂದರ, ಹಸಿರುಮಯ ಬೆಂಗಳೂರು ನಗರ ಮಾಡುವುದು ನಮ್ಮ ಗುರಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ರಾಜಾಜಿನಗರ ವಿಧಾನಸಭಾ ಕ್ಷೇತ್ರ, ಶಿವನಗರದ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ೬೫೫ ಮೀಟರ್ ಉದ್ದದ ಮೇಲ್ಸೆತುವೆ ಉದ್ಘಾಟನೆಯನ್ನು ಬೊಮ್ಮಾಯಿ ಅವರು ಮಾಡಿದರು. ಉದ್ಘಾಟನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಾಜಿನಗರ, ಬಸವೇಶ್ವರನಗರ, ಶಿವನಗರ ಪ್ರದೇಶ ಅತಿ ಹೆಚ್ಚು ಜನ ದಟ್ಟಣೆ ಇರುವ ಪ್ರದೇಶ. ಸಿಗ್ನಲ್ ಫ್ರೀ ಕಾರಿಡಾರ್ ನಿಂದ ಮುಕ್ತ ಸಂಚಾರಕ್ಕೆ ಅನುಕೂಲವಾಗಲಿದೆ. ತುಮಕೂರು, ಮೈಸೂರು…

1 45 46 47 48 49 102
Girl in a jacket