Girl in a jacket

Author kendhooli_editor

ರಮೇಶ್ ಕುಮಾರ್ ವಿರುದ್ಧ ಸುಧಾಕರ್ ಹೇಳಿಕೆಗೆ ಸಿದ್ದು ಆಕ್ರೋಶ

ಹಾನಗಲ್,ಅ,21:ರಮೇಶ್ ಕುಮಾರ್ ನ ಜೈಲಿಗೆ ಕಳಿಸುವೆ‌ ಎನ್ನುವ ಸುಧಾಕರ್ ಹೇಳಿಕೆ  ಬಗ್ಗೆ ತೀವ್ರವಾಗಿ ತರಾಟಗೆ ತಗೆದುಕೊಂಡ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ದುಡ್ಡಿನ ಅಧಿಕಾರದ ಮದ ಇಂಥಹ ದುರಹಂಕಾರದ ವ್ಯಕ್ತಿಗಳಿಗೆ ಜನರೇ ಬುದ್ದಿ ಕಲಿಸುತ್ತಾರೆ ಎಂದರು. ಉಪಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಅವರು,ಅಧಿಕಾರ ಶಾಶ್ವತ ಅಂತ ತಿಳಿದುಕೊಂಡಿದ್ದಾರೆ. ೨೦೨೩ ಕ್ಕೆ ಮನೆಗೆ ಹೋಗ್ತಾರೆ. ಆಗ‌ ಯಾರನ್ನ ಯಾರು ಜೈಲಿಗೆ ಕಳಿಸ್ತಾರೆ ಗೊತ್ತಾಗುತ್ತೆ.‌ ಅಪರಾಧ ಮಾಡಿದ್ರೆ ಮಾತ್ರ ಜೈಲಿಗೆ ಹಾಕಬಹುದುಎಂದು ಕಿಡಿಕಾರಿದರು ಯಾವಾಗ ಚರ್ಚಿಸಲು ವಿಷಯಗಳು ಇಲ್ಲವೋ ಆಗ ಅವಹೇಳನಕಾರಿ…

ಪೊಲೀಸ್ ಸಂಸ್ಮರಣಾ ದಿನಾಚರಣೆ: ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿದ ಮುಖ್ಯಮಂತ್ರಿ

ಹುಬ್ಬಳ್ಳಿ, ಅ, 21- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹುಬ್ಬಳ್ಳಿಯಲ್ಲಿ ಪೊಲೀಸ್ ಸಂಸ್ಮರಣ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಹುಬ್ಬಳ್ಳಿಯ ಸಿಎಆರ್ ಮೈದಾನದಲ್ಲಿ ಇಂದು ಮುಂಜಾನೆ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಹುತಾತ್ಮ ಸ್ಮಾರಕಕ್ಕೆ ಗೌರವ ಅರ್ಪಣೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ವಿಧಾನ‌ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಶಾಸಕ ಪ್ರಸಾದ ಅಬ್ಬಯ್ಯ, ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಪ್ರತಾಪ ರೆಡ್ಡಿ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ…

‘ಓ ಮೈ ಲವ್’ ಚಿತ್ರಕ್ಕೆ ಏನಾಯ್ತೋ ಕಾಣೆ ಹಾಡಿನ ಚಿತ್ರೀಕರಣ

ಜಿಸಿಬಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಿ. ರಾಮಾಂಜಿನಿ ಕಥೆ ಬರೆದು ಬಹುಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಓ ಮೈ ಲವ್ ಚಿತ್ರಕ್ಕೆ ಕಳೆದ ವಾರ ವಿ. ನಾಗೇಂದ್ರ ಪ್ರಸಾದ್ ರಚಿಸಿದ “ ಏನಾಯ್ತೋ ಕಾಣೆ.. ಏನಾಯ್ತೋ ಕಾಣೆ ತಂಗಾಳಿ ಸುರಿದಂತೆ ತಂಪಾದೆ ನಾನೆ….” ಹಾಡನ್ನು ವಿ. ಮುರಳಿ ನೃತ್ಯ ನಿರ್ದೇಶನದಲ್ಲಿ ನಾಯಕ ಅಕ್ಷಿತ್ ಶಶಿಕುಮಾರ್, ನಾಯಕಿ ಕೀರ್ತಿ ಕಲ್ಕರೆ, ದೀಪಿಕಾ ಆರಾದ್ಯ ,ಅಕ್ಷತಾ ,ಶೌರ್ಯ. ಸುವೇದ್ ಅಭಿನಯಿಸಿದಈ ಹಾಡನ್ನು ಯಲಹಂಕದ ನಿಟ್ಟಿ ಮೀನಾಕ್ಷಿ ಕಾಲೇಜಿನಲ್ಲಿ ಚಿತ್ರೀಕರಿಸಲಾಯಿತು. ಚಿತ್ರೀಕರಣದೊಂದಿಗೆ ಸುಮಾರ್…

ರಾಜ್ಯೋತ್ಸವ ಮೆರವಣಿಗೆ ಬಗ್ಗೆ ತಜ್ಞರ ಸಮಿತಿಯೊಂದಿಗೆ ಚರ್ಚಿಸಿ ತೀರ್ಮಾನ: ಸಿ.ಎಂ

ಬೆಳಗಾವಿ, ಅ, 20:lರಾಜ್ಯೋತ್ಸವ ಮೆರವಣಿಗೆ ಬಗ್ಗೆ ತಜ್ಞರ ಸಮಿತಿಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಕನ್ನಡ ರಾಜ್ಯೋತ್ಸವಕ್ಕೆ ಅದ್ದೂರಿ ಮೆರವಣಿಗೆಗೆ ಅವಕಾಶ ನೀಡಲು ಕನ್ನಡಪರ ಹೋರಾಟಗಾರರು ಆಗ್ರಹಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಮೆರವಣಿಗೆಗಳ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದರು. ಹಾನಗಲ್ ನಲ್ಲಿ ಮೂರು ದಿನಗಳ ಪ್ರಚಾರ ಕಾರ್ಯಕ್ಕಾಗಿ ಬೆಳಗಾವಿಗೆ ಆಗಮಿಸಿದ್ದು, ಅಕ್ಟೋಬರ್ 23 ರಂದು ಕಿತ್ತೂರು ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪುನಃ…

ಕ್ಷಣಶ: ಕಣಶಶ್ಚೈವ ವಿದ್ಯಾಮರ್ಥಂಚ ಸಾಧಯೇತ್

ಸಿದ್ಧಸೂಕ್ತಿ : ಕ್ಷಣಶ: ಕಣಶಶ್ಚೈವ ವಿದ್ಯಾಮರ್ಥಂಚ ಸಾಧಯೇತ್. ಕ್ಷಣ ಕ್ಷಣವೂ ವಿದ್ಯೆಗಳಿಸಬೇಕು. ಕಣಕಣವಾಗಿ ಸಂಪತ್ತುಗಳಿಸಬೇಕು. ಕ್ಷಣದಿಂದ ನಿಮಿಷ ಘಂಟೆ ದಿನ ಮಾಸ ವರ್ಷದಾಯು:! ಕಣ ಪೈಸೆಯಿಂದ ರೂಪಾಯಿ ನೂರು ಸಾವಿರ ಲಕ್ಷ ಕೋಟಿ! ಕ್ಷಣ ಕ್ಷಣ ಕಳೆದರೆ ಮುಗಿಯಿತು ಕಾಲ! ಕಣ ಕಣ ಕಳೆದರೆ ಖಾಲಿ ಖಜಾನೆ!! ಹನಿ ಹನಿ ಹಳ್ಳ! ತೆನೆ ತೆನೆ ಭಳ್ಳ! ಸಣ್ಣದೇ ದೊಡ್ಡದಾಗುವುದು! ಅದ್ಭುತಸಾಧನೆ ಕ್ಷಣಾರ್ಧದಲ್ಲಿ ಘಟಿಸದು! ಸಣ್ಣ ಸಣ್ಣ ನಿರಂತರ ಸಾಧನೆಗಳಿಂದ ಮಾತ್ರ!! ಕ್ಷಣ ಕ್ಷಣ ಜ್ಞಾನವ ಗಳಿಸೋಣ, ಕಣ…

ಆಲಮಟ್ಟಿ ಡ್ಯಾಂ ಅಂತರಜಲಾಶಯದ ನೀರು ಮರುಹಂಚಿಕೆಗೆ ಒತ್ತಾಯ

ಆಲಮಟ್ಟಿ,ಅ,18: ಕೃಷ್ಣಾಮೇಲ್ದಂಡೆ ಯೋಜನೆ ವ್ಯಾಪ್ತಿಯ ಆಲಮಟ್ಟಿ ಜಲಾಶಯವನ್ನು ಎತ್ತರಿಸುವದು, ಅಂತರಜಲಾಶಯದ ನೀರನ್ನು ಮರುಹಂಚಿಕೆ ಹಾಗೂ ಜನ-ಜಾನುವಾರುಗಳಿಗಾಗಿ ಕಾಲುವೆಗಳ ಮೂಲಕ ನೀರು ಹರಿಸಲು ಒತ್ತಾಯಿಸಿ ಅಖಂಡ ಕರ್ನಾಟಕ ರೈತಸಂಘದವತಿಯಿಂದ ಮುಖ್ಯ ಅಭಿಯಂತರರಿಗೆ ಎರಡು ಪ್ರತ್ಯೇಕ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ಪ್ರಧಾನಕಾರ್ಯದರ್ಶಿ ಅರವಿಂದ ಕುಲಕರ್ಣಿ, ಬರಗಾಲ ಪೀಡಿತ ಜಿಲ್ಲೆಯ ನೀರಾವರಿಗಾಗಿ ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಜಲಾಶಯ ನಿರ್ಮಿಸಿದ್ದರೂ ಜಿಲ್ಲೆಯ ಭೂಮಿಗೆ ನೀರುಣಿಸಲು ಸ್ಕೀಂ.ಗಳ ಹೆಸರಿನಲ್ಲಿ ವಂಚನೆ ಮಾಡಲಾಗುತ್ತದೆ. ಅವಳಿ ಜಲಾಶಯ ನಿರ್ಮಾಣಕ್ಕಾಗಿ ಅಖಂಡ ವಿಜಯಪುರ ಜಿಲ್ಲೆಯ…

ಮೈಶುಗರ್ ಸಕ್ಕರೆ ಕಾರ್ಖಾನೆ ಲೀಸ್ ಗೆ ನೀಡುವ ಕ್ರಮಕ್ಕೆ ತಾತ್ಕಾಲಿಕ ತಡೆ;ಸಿಎಂ

ಬೆಂಗಳೂರು, ಅ, 18:ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಲೀಸ್ ಗೆ ನೀಡುವ ಸಚಿವ ಸಂಪುಟದ ನಿರ್ಣಯವನ್ನು ತಾತ್ಕಾಲಿಕವಾಗಿ ತಡೆ ಹಿಡಿದು, ಸರ್ಕಾರವೇ ನಡೆಸುವ ಪ್ರಯತ್ನ ಮಾಡಲಾಗುವುದು. ಕಾರ್ಖಾನೆಯ ಪುನರುಜ್ಜೀವನಕ್ಕಾಗಿ ತಜ್ಞರ ಸಮಿತಿ ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಿಳಿಸಿದರು. ಅವರು ಇಂದು ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಮಂಡ್ಯದ ರೈತ ಪ್ರತಿನಿಧಿಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ ನಂತರ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.…

ಬೆಂಗಳೂರು ಒಳಚರಂಡಿ ವ್ಯವಸ್ಥೆ ಸರಿಪಡಿಸಲು ಮಾಸ್ಟರ್ ಪ್ಲಾನ್ : ಸಿಎಂ

ಬೆಂಗಳೂರು, ಅ, 18:ಬೆಂಗಳೂರು ಒಳಚರಂಡಿ ವ್ಯವಸ್ಥೆ ಸರಿಪಡಿಸಲು ವಿಶೇಷ ಸಭೆ ಕರೆದು ಮಾಸ್ಟರ್ ಪ್ಲಾನ್ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಮಳೆಯಿಂದ ಹಾನಿಗೊಳಗಾದ ಎಚ್.ಎಸ್.ಆರ್ ಬಡಾವಣೆ, ಮಡಿವಾಳ, ಹೊಸೂರು ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಕೆರೆಗಳ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಮುಖ್ಯಮಂತ್ರಿಗಳು ಅಗರ ಪಕ್ಕದಲ್ಲಿರುವ ಬಡಾವಣೆಗಳಿಗೆ ನೀರು ಮನೆಗಳಿಗೆ ನುಗ್ಗಿ ಅನಾಹುತಗಳಾಗಿವೆ. 15-20 ಕೆರೆಗಳ…

ಕೌಶಲ್ಯ ಅಭಿವೃದ್ಧಿಗೆ ಹೂಡಿಕೆ ಮಾಡಿ: ಉದ್ಯಮಿಗಳಿಗೆ ಸಚಿವ ಎಂಟಿಬಿ ನಾಗರಾಜ್ ಕರೆ

ಬೆಂಗಳೂರು,ಅ,18: ಕೌಶಲ್ಯ ಅಭಿವೃದ್ಧಿ ಗಾಗಿ ಹೂಡಿಕೆ ಮಾಡುವುದು ಉದ್ಯಮಗಳಿಗೆ ಎಷ್ಟು ಲಾಭದಾಯಕವೋ ಹಾಗೆಯೇ ಅದು ಉದ್ಯೋಗಿಗಳಿಗೂ ಪ್ರಯೋಜನಕಾರಿ.ಹಾಗಾಗಿ,ಉದ್ಯಮಿಗಳು ಕೌಶಲ್ಯಾಭಿವೃದ್ಧಿ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆಗೆ ಆದ್ಯತೆ ನೀಡಬೇಕು ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು ಕರೆ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದಾಬಸ್ ಪೇಟೆಯ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ-ಎಫ್ ಕೆಸಿಸಿಐ ನಿರ್ಮಿಸಲು ಉದ್ದೇಶಿಸಿರುವ ‘ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಸ್ಕಿಲ್ ಡೆವಲಪ್‌ಮೆಂಟ್’…

ವಿದ್ಯಾ ದದಾತಿ ವಿನಯಮ್

ಸಿದ್ಧಸೂಕ್ತಿ :               ವಿದ್ಯಾ ದದಾತಿ ವಿನಯಮ್ ವಿದ್ಯೆಯು ವಿನಯವನ್ನು ನೀಡುತ್ತದೆ. ವಿದ್ಯೆ ಹೆಚ್ಚಿದಂತೆ ವಿನಯ ಹೆಚ್ಚಬೇಕು. ಅಹಂಕಾರ ಹೆಚ್ಚಿದರೆ ಅದು ವಿದ್ಯಾಗರ್ವ! ವಿದ್ಯೆ ಸಂಗ್ರಹವಾಗಿದೆ, ಆಹಾರಪದಾರ್ಥಗಳಂತೆ! ಇನ್ನೂ ಪರಿಮಳ ರಸಪಾಕವಾಗಬೇಕಿದೆ! ಕಾಯಿ ಹುಳಿಯಾಗಿರುವಂತೆ ಅಪಕ್ವವಿದ್ಯೆ. ನಾಯಿಯ ಹಾಲು ಪೂಜೆಗೆ ಯೋಗ್ಯವಲ್ಲ, ಮರಿಗಂತೂ ಉಪಯೋಗ! ಅಪಕ್ವವಿದ್ಯೆ ನಿರರ್ಥಕವಲ್ಲ, ಕಣ್ಣಿಗೆ ಮಣ್ಣೆರಚಿ ಬದುಕಲನುಕೂಲ! ಸ್ವಪರಹಿತನೀಡುವಂತೆ ಸಫಲ ಸಾರ್ಥಕವಾಗುವಂತೆ ಅದರ ದಿಕ್ಕನ್ನು ಬದಲಿಸಬೇಕಷ್ಟೇ! ವಿದ್ಯಾವಿನಯಶೀಲನು ಗೌರವಗಳಿಸುತ್ತಾನೆ. ಜನಮನ್ನಣೆಯಿಂದ ಶ್ರೀಮಂತಿಕೆ ಹರಿದು…

ಎಚ್ ಡಿಕೆ ಹಿಟ್ ಅಂಡ್ ಗಿರಾಕಿ: ಸಿದ್ದು ಲೇವಡಿ

ಹುಬ್ಬಳ್ಳಿ, ಅ,17:ಕುಮಾರಸ್ವಾಮಿ ಹಿಟ್ ಎಂಡ್ ರನ್ ಕೇಸ್ ಗಿರಾಕಿ. ಅವರು ಯಾವಾಗಲೂ ಬರೀ ಸುಳ್ಳೇ ಹೇಳೋದು ಹಾಗಾಗಿ ಅವರ ಮಾತುಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ನಿರ್ಧಾರ ಮಾಡಿದ್ದೇನೆ. ನಾನು ಅಲ್ಪಸಂಖ್ಯಾತರಿಗೆ ಮೋಸ ಮಾಡಿದ್ದೀನಾ ಬಿಟ್ಟಿದೀನಾ ಎಂದು ನಮ್ಮ ಪಕ್ಷದ ಅಲ್ಪಸಂಖ್ಯಾತ ನಾಯಕರು ಹೇಳ್ತಾರೆ, ನಾನು ಈ ಬಗ್ಗೆ ಮಾತನಾಡಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು. ಕಾಂಗ್ರೆಸ್ ಕಚೇರಿಯಿಂದ ಎಲ್ಲರಿಗೂ ಪ್ರಚಾರಕ್ಕೆ ಬರುವಂತೆ ಪತ್ರ ಕಳಿಸಿದ್ದಾರೆ, ಸಿ.ಎಂ ಇಬ್ರಾಹಿಂ ಅವರಿಗೆ ಚುನಾವಣಾ ಪ್ರಚಾರಕ್ಕೆ ಬರಬೇಡಿ ಎಂದು ಯಾರೂ…

8 ಸಾಧಕರಿಗೆ ಡಾಕ್ ಸೇವಾ ಪ್ರಶಸ್ತಿ ಪ್ರದಾನ

ಬೆಂಗಳೂರು, ಅ, 17,   ರಾಜಭವನದಲ್ಲಿ ನಡೆದ  ಸರಳ ಸಮಾರಂಭದಲ್ಲಿ ಎಂಟು ಸಾಧಕರಿಗೆ  ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರು 8 ಮಂದಿ ಸಾಧಕರಿಗೆ ಡಾಕ್ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. 2020-21ನೇ ಸಾಲಿನ ರಾಜ್ಯಮಟ್ಟದ ಡಾಕ್ ಸೇವಾ ಪ್ರಶಸ್ತಿಯನ್ನು ಅಂಚೆ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 8 ಸಾಧಕರಿಗೆ ಘನತೆವೆತ್ತ ರಾಜ್ಯಪಾಲರು ಪ್ರಧಾನ ಮಾಡಿದರು. ಬ್ಯ್ರಾಂಚ್ ಪೋಸ್ಟ್ ಮಾಸ್ಟರ್ ಶಂಕರ್ ವೈ ಹರಿಜನ್, ಪೋಸ್ಟ್ ಮಾನ್ ಹೆಚ್.ಅಶ್ವತ್. ಪೋಸ್ಟಲ್ ಅಸಿಸ್ಟೆಂಟ್ ಸೋಮಶೇಖರ ಎನ್, ಅಂಚೆ ಕಚೇರಿಯ…

ಪೆಟ್ರೋಲ್ ಮೇಲಿನ ತೆರಿಗೆ ಇಳಿಕೆ: ಆರ್ಥಿಕ ಪರಿಸ್ಥಿತಿ ಪರಿಶೀಲಿಸಿ ಕ್ರಮ: ಸಿ.ಎಂ

ಹುಬ್ಬಳ್ಳಿ ,ಅ,17: ರಾಜ್ಯದಲ್ಲಿ ಪೆಟ್ರೋಲ್ ಮೇಲಿನ ತೆರಿಗೆ ಇಳಿಕೆ ಆರ್ಥಿಕತೆಯನ್ನು ಅವಲಂಬಿಸಿದ್ದು, ಉಪ ಚುನಾವಣೆ ನಂತರ ಆರ್ಥಿಕ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮದವರಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಿದ್ದರೆ, ಪೆಟ್ರೋಲ್ ಮೇಲಿನ ತೆರಿಗೆ ಇಳಿಕೆಗೆ ಅವಕಾಶಗಳಿವೆ ಎಂದರು.

ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ: ಸಿಎಂ

ಹುಬ್ಬಳ್ಳಿ 17: ಹಾನಗಲ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಇಂದು ಪ್ರಚಾರ ಕೈಗೊಳ್ಳುತ್ತಿದ್ದೇನೆ. ಸಿಂದಗಿ ಕ್ಷೇತ್ರದಲ್ಲಿಯೂ ಪ್ರಚಾರ ಮಾಡುತ್ತೇನೆ. ಈ ಎರಡೂ ಕ್ಷೇತ್ರಗಳಲ್ಲಿ ಹೆಚ್ವಿನ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವ ಸಂಪೂರ್ಣ ವಿಶ್ವಾಸ ತಮಗಿದೆ ಎಂದು ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಹೇಳಿದರು. ಹುಬ್ಬಳ್ಳಿಯ ವಿಮಾನ‌ ನಿಲ್ದಾಣದಲ್ಲಿ ಅವರು ಸುದ್ದಿಗಾರರ ಜತೆ ಮಾತನಾಡಿ ಈ ವಿಷಯ ತಿಳಿಸಿದರು. ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಸಂಗೂರು ಸಕ್ಕರೆ…

ಕಾಯಕಯೋಗಿಯ ಬದುಕಿನ ತುಡಿತಗಳು

ಕಾಯಕ ಯೋಗಿಯ ಬದುಕಿನ ತುಡಿತಗಳು “ಏನಪ್ಪಾ, ಕುರುಗೋಡಪ್ಪ, ಇನ್ನೂ ಎಷ್ಟು ದಿನ ಅಂತ ನನ್ನ ಮೊಮ್ಮಗನನ್ನು ಅಲೆಸಬೇಕು ಎಂದಿದ್ದೀಯ? ಇವತ್ತು, ನಾಳೆ ಅನ್ನುತ್ತಲೇ ಎರಡು ವಾರಗಳಿಂದ ಬಟ್ಟೆಕೊಡದೆ ಏಕೆ ಸತಾಯಿಸುತ್ತಿದ್ದೀಯ?” ಎಂದು ಏರಿದ ಧ್ವನಿಯಲ್ಲಿ ನನ್ನ ಅವ್ವ ದರ್ಜಿ ಕುಂಬಾರರ ಕುರುಗೋಡಪ್ಪನನ್ನು ಬಸ್ ಸ್ಟ್ಯಾಂಡ್ ನಲ್ಲಿ ದುರ್ಗಕ್ಕೆ ಹೋಗುವ ಮಹಾದೇವಿ ಬಸ್ಸಿಗಾಗಿ ಕಾಯುತ್ತಿದ್ದ ಹತ್ತಾರು ಪ್ರಯಾಣಿಕರು ಜಮಾಯಿಸುವ ರೀತಿಯಲ್ಲಿ ಬಸ್ ಸ್ಟ್ಯಾಂಡ್ ಬದಿಯಲ್ಲೇ ಇದ್ದ ಆತನ ಅಂಗಡಿ ಕಮ್ ಮನೆಯ ಹಜಾರದಲ್ಲಿ ವಿಚಾರಣೆ ನಡೆಸುವುದಕ್ಕೆ ಮೊದಲಿಟ್ಟ ಹೊತ್ತು…

ಆಚಾರ್ಯಾತ್ ಪಾದಮಾದತ್ತೇ

ಸಿದ್ಧಸೂಕ್ತಿ:             ಆಚಾರ್ಯಾತ್ ಪಾದಮಾದತ್ತೇ ಗುರುವಿನಿಂದ ಕಾಲುಭಾಗವನ್ನು ಗ್ರಹಿಸುತ್ತಾನೆ |ಳೆ. ಗುರುಗಳ ಪಾಠಪ್ರವಚನ ವೇಳೆಯಲ್ಲಿ ಶಿಷ್ಯ ಕಾಲುಭಾಗ ತಿಳುವಳಿಕೆ ಹೊಂದುತ್ತಾನೆ. ಬಳಿಕ ಸಹಪಾಠಿಗಳ ಜೊತೆ ಚರ್ಚಿಸುತ್ತಾ ಅಭ್ಯಾಸ ಮಾಡುವುದರಿಂದ ಮತ್ತೆ ಕಾಲುಭಾಗ ಹೆಚ್ಚಿನ ಜ್ಞಾನ ಹೊಳೆಯುತ್ತದೆ. ಬಳಿಕ ಈ ವಿಷಯವನ್ನು ಪ್ರಯೋಗಕ್ಕಿಳಿಸಿದಾಗ, ನಾವೇ ಭೋದಿಸಿದಾಗ ಮತ್ತೆ ಕಾಲುಭಾಗದಷ್ಟು ಜ್ಞಾನ ಹೊಸತು ಹೊಳೆಯುತ್ತದೆ! ಕಾಲ ಕಳೆದಂತೆ ಆ ವಿಷಯದ ಹೊಸ ತಿಳುವಳಿಕೆ ಚಿಗುರುತ್ತಲೇ ಸಾಗುತ್ತದೆ! “ಪೂರ್ಣ ತಿಳಿದೆ” ಎನ್ನುವಂತಿಲ್ಲ! ಜ್ಞಾನಕ್ಕೆ…

ಸಿಎಸ್ ಕೆಗೆ ಚಾಂಪಿಯನ್ ಪಟ್ಟ: 4ನೇ‌ ಬಾರಿ ಟ್ರೋಫಿಗೆ ಮುತ್ತಿಟ್ಟ ಕೂಲ್ ಬಾಯ್ಸ್..

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2021 ಸೀಸನ್​ 14ರಲ್ಲಿ ಎಂ. ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ದ 27 ರನ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸಿಎಸ್​ಕೆ 4ನೇ ಬಾರಿ ಟ್ರೋಫಿಗೆ ಮುತ್ತಿಕ್ಕಿತು. ಇದಕ್ಕೂ ಮುನ್ನ ಟಾಸ್ ಗೆದ್ದ ಕೆಕೆಆರ್ ನಾಯಕ ಇಯಾನ್ ಮೊರ್ಗನ್​  ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ ತಂಡವು ಡುಪ್ಲೆಸಿಸ್ (86) ಅವರ ಆಕರ್ಷಕ ಅರ್ಧಶತಕದ…

ಕೋವಿಡ್ ನಿಂದ ರಕ್ಷಣೆಗೆ: ದೇವಾಲಯಗಳಲ್ಲಿ ವಿಶೇಷ ಪೂಜೆಗಳಿಗೆ ಚಾಲನೆ

ಬೆಂಗಳೂರು,ಅ,15: ದುಷ್ಟ ಶಕ್ತಿಗಳ ಸಂಹಾರದ ಪ್ರತೀಕವಾಗಿ ಆಚರಿಸುವ ವಿಜಯದಶಮಿಯ ಸುಸಂಧರ್ಭದಲ್ಲಿ , ಕೋವಿಡ್ ಸೋಂಕಿನಿಂದ ನಮ್ಮ ನಾಡಿನ ಜನತೆಗೆ ಯಾವುದೇ ತೊಂದರೆಯಾಗದಂತೆ ಪ್ರಾರ್ಥಿಸಲು ರಾಜ್ಯದ ದೇವಾಲಯಗಳಲ್ಲಿ ವಿಜಯದಶಮಿಯ ಶುಭದಿನಂದು ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ರಾಜ್ಯದ ಪ್ರಮುಖ ಶ್ರದ್ಧಾಕೇಂದ್ರವಾದ ಬೆಳಗಾವಿ ಜಿಲ್ಲೆಯ ಶ್ರೀಕ್ಷೇತ್ರ ಸವದತ್ತಿ ಶ್ರೀ ಯಲ್ಲಮ್ಮದೇವಿ ದೇವಾಲಯದಲ್ಲಿ ಶುಕ್ರವಾರ ಬೆಳಗ್ಗೆ ರಾಜ್ಯದ ಮುಜರಾಯಿ, ವಕ್ಫ್ ಹಾಗೂ ಹಜ್ ಸಚಿವರಾದ ಶ್ರೀಮತಿ ಶಶಿಕಲಾ ಅ. ಜೊಲ್ಲೆಯವರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ನಾಡಿನಾದ್ಯಂತ ನಡೆಯುವ ವಿಶೇಷ ಪೂಜಾ ಕೈಂಕರ್ಯಗಳಿಗೆ…

ಗಗನಕ್ಕೆರುತ್ತಿರುವ ಬಿಟ್ ಕಾಯಿನ್ ಗೆ ಭಾರತದಲ್ಲೇಕೆ ಭಾರೀ ಬೇಡಿಕೆ?

ಗಗನಕ್ಕೆರುತ್ತಿರುವ ಬಿಟ್ ಕಾಯಿನ್ ಗೆ ಭಾರತದಲ್ಲೇಕೆ ಭಾರೀ ಬೇಡಿಕೆ? Writing-ಪರಶಿವ ಧನಗೂರು ಈಗ ಜಗತ್ತಿನ ಎಲ್ಲೆಡೆ ಕ್ರಿಪ್ಟೋಕರೆನ್ಸಿ ಯದೇ ಟ್ರೆಂಡ್! ವಿಶ್ವ ದ ಅತ್ಯಂತ ದುಬಾರಿ ಡಿಜಿಟಲ್ ಮನಿ ಬಿಟ್ ಕಾಯಿನ್ ಮತ್ತು ಇಥೇರಿಯಂ ಮೇಲೆ ದಿನದಿಂದ ದಿನಕ್ಕೆ ಜನರ ಹೂಡಿಕೆ ತಾರಕ್ಕಕ್ಕೇರುತ್ತಿದೆ! ಕಳೆದ ಏಳು ದಿನಗಳಲ್ಲಿ ಶೇಕಡಾ 32% ಬೆಲೆ ಹೆಚ್ಚಳ ಕಂಡಿರುವ ಬಿಟ್ ಕಾಯಿನ್ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟ್ರೆಂಡಿಂಗ್ ನಲ್ಲಿದೆ. ಚುನಾಯಿತ ಸರ್ಕಾರಗಳಿಗೇ ಚುರುಕು ಮುಟ್ಟಿಸಿ ಸವಾಲು ಒಡ್ಡುತ್ತಿರುವ ಈ ಖಾಸಗಿ ಕಾಸು…

ಪ್ರಾಚೀನ ಶಿಲ್ಪಾವಶೇಷಗಳೂ, ನಂಬಿಕೆ-ಆಚರಣೆಗಳೂ. . .     

ಪ್ರಾಚೀನ ಶಿಲ್ಪಾವಶೇಷಗಳೂ, ನಂಬಿಕೆ-ಆಚರಣೆಗಳೂ. . .      ಪ್ರಾಚೀನ ಮಾನವನ ಜೀವನ ವಿಧಾನಗಳನ್ನು ತಿಳಿಸುವ ಮಹತ್ವದ ಕುರುಹುಗಳೆಂದರೆ ಅವಶೇಷಗಳು. ಅವುಗಳಲ್ಲಿ ಶಿಲಾಯುಧ, ಮಡಕೆ-ಕುಡಿಕೆ, ಶಿಲಾ ಸಮಾಧಿಗಳು; ಇತಿಹಾಸ ಕಾಲದ ಶಿಲಾಶಾಸನ, ಮೂರ್ತಿಶಿಲ್ಪ, ಉಬ್ಬುಶಿಲ್ಪ, ವೀರಗಲ್ಲು, ಮಾಸ್ತಿಗಲ್ಲು, ದೇವಾಲಯ, ಕೋಟೆ-ಕೊತ್ತಲ ಇತ್ಯಾದಿ ಸೇರಿವೆ. ಇವೆಲ್ಲವೂ ಪ್ರಾಚೀನರ ಚರಿತ್ರೆಯನ್ನು ಅರಿಯುವ ಮಹತ್ವದ ದಾಖಲೆಗಳೇ ಆಗಿವೆ. ಈ ಬಗೆಯ ಪ್ರಾಚೀನ ಅವಶೇಷಗಳ ಮೇಲೆ ಜನರು ಇಂದಿಗೂ ಇಟ್ಟುಕೊಂಡು ಆಚರಿಸುತ್ತಿರುವ ನಂಬಿಕೆ-ಆಚರಣೆಗಳು ವಿಶಿಷ್ಟವಾಗಿವೆ. ಈ ಬಗೆಯ ನಂಬಿಕೆಗಳಲ್ಲಿ ಅವಶೇಷಗಳ ರಕ್ಷಣೆಯ…

1 43 44 45 46 47 102
Girl in a jacket